For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಅಭಿನಯದ 'ಕ್ವಾಂಟಿಕೋ 3' ಶೀಘ್ರದಲ್ಲಿ ಶುರು

  By Suneel
  |

  ಬಾಲಿವುಡ್ ನ ಜಿಂಕೆ ಪ್ರಿಯಾಂಕ ಚೋಪ್ರಾ ಹಾಲಿವುಡ್ ಗೆ ಹಾರಿ ಈಗಾಗಲೇ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಅಮೆರಿಕದ 'ಕ್ವಾಂಟಿಕೋ' ಡ್ರಾಮ ಥ್ರಿಲ್ಲರ್ ಟಿವಿ ಸೀರಿಯಲ್ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನ 'ಬೇವಾಚ್' ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಹೀಗಿರುವಾಗಲೇ ಪ್ರಿಯಾಂಕ ಚೋಪ್ರಾ ಇನ್ನೊಂದು ಸಿಹಿ ಸುದ್ದಿ ನೀಡಿದ್ದಾರೆ.

  ಪ್ರಿಯಾಂಕ ಚೋಪ್ರಾ ಅಭಿನಯದ 'ಕ್ವಾಂಟಿಕೋ' ಟಿವಿ ಸೀರಿಯಲ್ ಎರಡು ಸೀಸನ್ ಗಳನ್ನು ಮುಗಿಸಿತ್ತು. ಈ ಟಿವಿ ಸೀರಿಯಲ್ ನಿರ್ಮಾಣ ಮಾಡುವ ಎಬಿಸಿ ಸ್ಟುಡಿಯೋಸ್ ಪ್ರೊಡಕ್ಷನ್ ಕಂಪನಿ 'ಕ್ವಾಂಟಿಕೋ' ಸೀರಿಯಲ್ ನ ಮೂರನೇ ಸೀಸನ್ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈ ಸೀಸನ್ ನಲ್ಲಿ 13 ಎಪಿಸೋಡ್ ಗಳನ್ನು ತರಲು ನಿರ್ಧರಿಸಿದೆ.[ಚಿತ್ರಗಳು: 'ಕ್ವಾಂಟಿಕೋ 2'ನಲ್ಲಿ ಪ್ರಿಯಾಂಕ ಬಿಕಿನಿ ಅವತಾರ]

  'ಕ್ವಾಂಟಿಕೋ' ಸೀರಿಯಲ್ ನಲ್ಲಿ 'ಅಲೆಕ್ಸ್ ಪ್ಯಾರಿಶ್' ಪಾತ್ರದಲ್ಲಿ ಅಭಿನಯಿಸಿರುವ ಪ್ರಿಯಾಂಕ ಚೋಪ್ರಾ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, "ಕ್ವಾಂಟಿಕೋ ಸೀಸನ್ 3 ರ ಬಗ್ಗೆ ಹೆಚ್ಚು ಕುತೂಹಲವಿದೆ. ಇದರ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಅಲೆಕ್ಸ್ ಪ್ಯಾರಿಶ್ ಶೀಘ್ರದಲ್ಲಿ ಹಿಂದಿರುಗಲಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ. ಪಿಗ್ಗಿ ಇದೇ ರೀತಿ ಹಾಲಿವುಡ್ ಅಂಗಳದಲ್ಲಿ ಬಿಜಿಯಾದ್ರೆ ಬಾಲಿವುಡ್ ಸಿನಿಮಾಗಳಲ್ಲಿ ಅವರನ್ನು ನೋಡಬಯಸುವ ಅಭಿಮಾನಿಗಳಿಗೆ ನಿರಾಸೆ ಉಂಟಾಗುವುದು ಖಂಡಿತ.

  English summary
  Priyanka Chopra's Quantico Renewed For Short Third Season. On May 15, 2017, ABC renewed the series for a third season, which is set to consist of 13 episodes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X