Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಿಯಾಂಕಾ ಚೋಪ್ರಾ ನಟನೆಯ ಮತ್ತೊಂದು ಹಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆ
ಬಾಲಿವುಡ್‌ನಿಂದ ಬಹುತೇಕ ದೂರವಾಗಿ ಹಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಸ್ಪಷ್ಟ ಸೂಚನೆ ತೋರಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು, ಅದರ ಟ್ರೇಲರ್ ಇಂದು ಬಿಡುಗಡೆ ಆಗಿದೆ.
ಈಗಾಗಲೇ ಕ್ವಾಂಟಿಕೋ ಶೋ, ಬೇ ವಾಚ್‌ನಂಥಹಾ ಸಿನಿಮಾಗಳಲ್ಲಿ ನಟಿಸಿ ಹಾಲಿವುಡ್ ಸಿನಿಪ್ರಿಯರ ಮನ ಗೆದ್ದಿರುವ ಪ್ರಿಯಾಂಕಾ ಚೋಪ್ರಾ ಮತ್ತೊಂದು ಹಾಲಿವುಡ್ ಸೂಪರ್ ಹೀರೋ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.
ಸ್ಪೈ ಕಿಡ್ಸ್‌ನಂಥಹಾ ಸೂಪರ್ ಹಿಟ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸಿರುವ ರಾಬರ್ಟ್ ರಾಡ್ರಿಜೇಗ್ ನಿರ್ದೇಶಿಸಿರುವ ಹೊಸ ಸಿನಿಮಾ 'ವಿ ಕ್ಯಾನ್ ಬಿ ಹೋರೋಸ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು, ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.
ವಿಶ್ವವನ್ನು ಕಾಪಾಡುವ ಸೂಪರ್ ಹೀರೋಗಳು ಸಂಕಷ್ಟಕ್ಕೆ ಸಿಲುಕಿದಾಗ, ಸೂಪರ್ ಹೀರೋ ಗಳ ಮಕ್ಕಳು ಹೇಗೆ ತಮ್ಮ ಪೋಷಕರನ್ನು ಹಾಗೂ ವಿಶ್ವವನ್ನು ದುಷ್ಟರಿಂದ ಕಾಪಾಡುತ್ತಾರೆ ಎಂಬ ಕತೆಯನ್ನು 'ವಿ ಕ್ಯಾನ್ ಬಿ ಹೀರೋಸ್' ಸಿನಿಮಾ ಒಳಗೊಂಡಿದೆ.
ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ವಿಲನ್ ಗ್ಯಾಂಗಿನ ಸದಸ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಸಹ ಎರಡು ಬಾರಿ ಅವರು ಕಾಣಿಸಿಕೊಳ್ಳುತ್ತಾರೆ. ಇದೇ ಸಿನಿಮಾದಲ್ಲಿ ಪೆಡ್ರೊ ಪಾಸ್ಕಲ್ ಮತ್ತು ಟೇಲರ್ ಡೂಲಿ ಸಹ ಇದ್ದಾರೆ. ಸಿನಿಮಾವು ಇದೇ ಕ್ರಿಸ್‌ಮಸ್‌ಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.
ಪ್ರಿಯಾಂಕಾ ಚೋಪ್ರಾ 'ಮ್ಯಾಟ್ರಿಕ್ಸ್ 4' ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇದರ ಜೊತೆಗೆ ಅಮೆಜಾನ್ ಪ್ರೈಂಗಾಗಿ ಹಾಲಿವುಡ್‌ನ ಕಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಟುಲಿಯಾ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ವಕೀಲೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿಟಿ ಆಫ್ ದಿ ಸೇಮ್ ನೇಮ್ ಹೆಸರಿನ ಥ್ರಿಲ್ಲರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಪ್ರಿಯಾಂಕಾ.