For Quick Alerts
  ALLOW NOTIFICATIONS  
  For Daily Alerts

  44ನೇ ವರ್ಷಕ್ಕೆ ಕಾಲಿಟ್ಟ ಡ್ವೈನ್: ಶುಭಾಶಯ ಕೋರಿದ ಪ್ರಿಯಾಂಕ

  By ಸೋನು ಗೌಡ
  |

  ಹಾಲಿವುಡ್ ನಟ ಡ್ವೈನ್ ದ ರಾಕ್ ಜಾನ್ಸನ್ ಅವರು ನಿನ್ನೆ ತಾನೆ ತಮ್ಮ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದು, ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಜನುಮ ದಿನದ ಶುಭಾಶಯ ಕೋರಿದ್ದಾರೆ.

  ಹೌದು ಹಾಲಿವುಡ್ ಸಿನಿಮಾ 'ಬೇವಾಚ್' ನಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ನಟ ಡ್ವೈನ್ ದ ರಾಕ್ ಜಾನ್ಸನ್ ಅವರ ಜೊತೆ ಜೋಡಿಯಾಗಿ ನಟಿಸುತ್ತಿದ್ದು, ಸದ್ಯಕ್ಕೆ ನಟಿ ಪಿಗ್ಗಿ ಅವರು 'ಬೇವಾಚ್' ಚಿತ್ರದ ಶೂಟಿಂಗ್ ನಿಮಿತ್ತ ವಿದೇಶದಲ್ಲಿ ಸೆಟ್ಲ್ ಆಗಿದ್ದಾರೆ.[ಭೋಜನ ಸವಿದ ನಂತರ ಒಬಾಮಾ ಬಗ್ಗೆ ಪ್ರಿಯಾಂಕ ಮಾಡಿದ ಕಾಮೆಂಟ್ ಏನು?]

  ನಟ ಡ್ವೈನ್ ಜಾನ್ಸನ್ ಅವರು ಮೇ 2 ರಂದು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ತಮ್ಮ ಗೆಳೆಯರು ಹಾಗೂ ಕುಟುಂಬದವರ ಜೊತೆ ಆಚರಿಸಿಕೊಂಡಿದ್ದಾರೆ. 'ಬೇವಾಚ್' ಸಿನಿಮಾದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಸಖತ್ ಸೆಕ್ಸಿ ವಿಲನ್ ಆಗಿ ಮಿಂಚಿದ್ದಾರೆ.['ಬೇವಾಚ್' ನಲ್ಲಿ ಪಿಗ್ಗಿ ಜೊತೆ ಪಮೇಲಾ ಕಮಾಲ್]

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು 'ಹ್ಯಾಪಿ ಬರ್ತ್ ಡೇ ಡಿ.ಜೆ, ನಿಮಗೆ ಈ ವರ್ಷ ಸುಖ-ಸಂತೋಷಗಳಿಂದ ಕೂಡಿರಲಿ, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ' ಎಂದು ಟ್ವೀಟ್ ಮಾಡಿದ್ದಾರೆ.['ವೈಟ್ ಹೌಸ್' ಡಿನ್ನರ್ ಗೆ ಪ್ರಿಯಾಂಕಗೆ ಒಬಾಮಾರಿಂದ ಆಹ್ವಾನ]

  ನಿರ್ದೇಶಕ ಸೇಥ್ ಗಾರ್ಡನ್ ಆಕ್ಷನ್-ಕಟ್ ಹೇಳುತ್ತಿರುವ ಹಾಲಿವುಡ್ ಚಿತ್ರ 'ಬೇವಾಚ್' ನಲ್ಲಿ 'ವಿಕ್ಟೋರಿಯಾ ಲೀಡ್ಸ್' ಎಂಬ ಹೆಸರಿನಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಮಿಂಚುತ್ತಿದ್ದು, ಮುಂದಿನ ವರ್ಷ 2017ರ ಮಧ್ಯದಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

  English summary
  Priyanka Chopra, who is currently in the United States for the shoot of her upcoming Hollywood debut 'Baywatch', has wished The Rock aka Dwayne Johnson, a very happy birthday. The Rock aka Dwayne Johnson, celebrated his 44th birthday on May 2, 2016, and spent some quality time with his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X