twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶಿ ವೇದಿಕೆಯಲ್ಲಿ 'ಜೈ ಹಿಂದ್' ಎಂದ ರಾಜಮೌಳಿ: ಭಾಷಣ ಸಖತ್ ವೈರಲ್

    By ಫಿಲ್ಮಿಬೀಟ್ ಡೆಸ್ಕ್
    |

    RRR ಸಿನಿಮಾ ಹೊಸ ಎತ್ತರಗಳನ್ನು ಏರುತ್ತಲೇ ಸಾಗುತ್ತಿದೆ. ಭಾರತದಲ್ಲಿ ಸೂಪರ್ ಡೂಪರ್ ಹಿಟ್ ಆದ ಈ ಸಿನಿಮಾ ಇದೀಗ ವಿದೇಶಗಳಲ್ಲಿಯೂ ಸಿನಿಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.

    ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿರುವುದು ಮಾತ್ರವೇ ಅಲ್ಲದೆ ಸಿನಿಮಾ ವಿಮರ್ಶಕರ, ಪಂಡಿತರ ಮೆಚ್ಚುಗೆಗೂ ಸಿನಿಮಾ ಪಾತ್ರವಾಗಿದೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಿನಿಮಾ ಗೆಲ್ಲುತ್ತಿದೆ.

    ಕೆಲವು ದಿನಗಳ ಹಿಂದಷ್ಟೆ, RRR ಸಿನಿಮಾದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದ್ದು, ಅದರ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಕ್ರಿಟಿಕ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಹಾಡು ಹಾಗೂ ಅತ್ಯುತ್ತಮ ವಿದೇಶಿ ಸಿನಿಮಾ ಎರಡೂ ವಿಭಾಗದಲ್ಲಿಯೂ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ವಿದೇಶಿ ಸಿನಿಮಾ ಪ್ರಶಸ್ತಿ ಸ್ವೀಕರಿಸಿದ ರಾಜಮೌಳಿ, ವೇದಿಕೆ ಮೇಲೆ ಆಡಿರುವ ಮಾತುಗಳು ಇದೀಗ ಬಹಳ ವೈರಲ್ ಆಗುತ್ತಿವೆ. ಸ್ಪೂರ್ತಿದಾಯಕ ಮಾತುಗಳನ್ನು ರಾಜಮೌಳಿ ವೇದಿಕೆ ಮೇಲೆ ಆಡಿದ್ದಾರೆ.

    ತಾಯಿ ರಾಜನಂದಿನಿಯ ನೆನೆದ ರಾಜಮೌಳಿ

    ತಾಯಿ ರಾಜನಂದಿನಿಯ ನೆನೆದ ರಾಜಮೌಳಿ

    ಪ್ರಶಸ್ತಿ ಸ್ವೀಕರಿಸಿದ ಬಳಿಕ 'ಅಂದರಿಕಿ ನಮಸ್ಕಾರಂ' ಎಂದು ತೆಲುಗಿನಲ್ಲಿ ಮಾತು ಆರಂಭಿಸಿದ ರಾಜಮೌಳಿ, ಈ ಪ್ರಶಸ್ತಿಯನ್ನು ನನ್ನ ಜೀವನದಲ್ಲಿ ಮಹತ್ವದ ಪಾತ್ರವಹಿಸಿದ ಎಲ್ಲ ಮಹಿಳೆಯರಿಗೂ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ. ಶಾಲಾ ಶಿಕ್ಷಣ ಹೆಚ್ಚು ಪ್ರಮುಖವೇನಲ್ಲ ಎಂದು ಮೊದಲೇ ಅರ್ಥ ಮಾಡಿಕೊಂಡ ನನ್ನ ತಾಯಿ ರಾಜನಂದಿನಿ ನನಗೆ ಹೆಚ್ಚು ಹೆಚ್ಚು ಕಾಮಿಕ್ಸ್ ಗಳನ್ನು, ಪೌರಾಣಿಕ ಕತೆಗಳನ್ನು ಓದಲು ಪ್ರೇರೇಪಿಸಿದರು'' ಎಂದಿದ್ದಾರೆ ರಾಜಮೌಳಿ.

    ಪತ್ನಿ ರಮಾ, ಸಹೋದರಿ ಶ್ರೀವಲ್ಲಿ ಬಗ್ಗೆ ರಾಜಮೌಳಿ

    ಪತ್ನಿ ರಮಾ, ಸಹೋದರಿ ಶ್ರೀವಲ್ಲಿ ಬಗ್ಗೆ ರಾಜಮೌಳಿ

    ''ನನ್ನ ಸಹೋದರಿ ಶ್ರೀವಲ್ಲಿ, ಆಕೆ ನನಗೆ ತಾಯಿಯಂತೆ. ನಾನು ಅತ್ಯುತ್ತಮವಾದುದ್ದನ್ನು ಮಾಡಲು ಆಕೆ ನನಗೆ ಸದಾ ಸ್ಪೂರ್ತಿ ತುಂಬುತ್ತಾಳೆ. ನನ್ನ ಪತ್ನಿ ರಮಾ, ಆಕೆ ನನ್ನ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿ, ಜೊತೆಗೆ ನನ್ನ ಜೀವನ ವಿನ್ಯಾಸ ಮಾಡಿದ್ದು ಸಹ ಆಕೆಯೇ. ಆಕೆಯ ಕಾರಣದಿಂದಲೇ ನಾನು ಇಲ್ಲಿ ನಿಂತಿದ್ದೇನೆ. ಹಾಗೂ ನನ್ನ ಹೆಣ್ಣು ಮಕ್ಕಳು, ಅವರ ನಗುವೇ ಸಾಕು ನನ್ನ ಜೀವನ ಬೆಳಗಿಸಲು'' ಎಂದು ತಮ್ಮ ಜೀವನದಲ್ಲಿನ ಮುಖ್ಯವಾದ ಮಹಿಳೆಯರನ್ನು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.

    ಮೇರಾ ಭಾರತ್ ಮಹಾನ್ ಎಂದ ರಾಜಮೌಳಿ

    ಮೇರಾ ಭಾರತ್ ಮಹಾನ್ ಎಂದ ರಾಜಮೌಳಿ

    ಕೊನೆಯದಾಗಿ, ನನ್ನ ತಾಯ್ನಾಡು ಇಂಡಿಯಾ, ಭಾರತ. ಮೇರಾ ಭಾರತ್ ಮಹಾನ್. ಜೈ ಹಿಂದಿ ಎಂದು ಹೇಳಿ ಭಾಷಣ ಮುಗಿಸಿದ್ದಾರೆ. ನಿರ್ದೇಶಕ ರಾಜಮೌಳಿಯವರ ಈ ಭಾಷಣ ಇದೀಗ ಬಹಳ ವೈರಲ್ ಆಗಿದೆ. ಅತ್ಯುನ್ನತ ಪ್ರಶಸ್ತಿಯನ್ನು ಮಹಿಳೆಯರಿಗೆ ಅರ್ಪಿಸಿರುವುದು ಹಾಗೂ ವಿದೇಶಿ ವೇದಿಕೆಯೊಂದರ ಮೇಲೆ ಮೇರಾ ಭಾರತ್ ಮಹಾನ್ ಎಂದಿರುವುದನ್ನು ಹಲವರು ಶ್ಲಾಘಿಸಿದ್ದಾರೆ. ನಟಿ ಕಂಗನಾ ಸಹ ರಾಜಮೌಳಿಗೆ ಭೇಷ್ ಎಂದಿದ್ದಾರೆ.

    ಹಲವು ಪ್ರಶಸ್ತಿಗಳ ಬಾಚಿಕೊಂಡಿರುವ RRR

    ಹಲವು ಪ್ರಶಸ್ತಿಗಳ ಬಾಚಿಕೊಂಡಿರುವ RRR

    RRR ಸಿನಿಮಾವು ಈಗಾಗಲೇ ಕೆಲವು ವಿದೇಶಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಲಿಯನ್ಸ್ ಆಫ್ ವಿಮೆನ್ ಜರ್ನಲಿಸ್ಟ್ಸ್ ನ ಅತ್ಯುತ್ತಮ ವಿದೇಶಿ ಸಿನಿಮಾ ಪ್ರಶಸ್ತಿ. ಅಟ್ಲಾಂಟಾ ಫಿಲಂ ಕ್ರಿಟಿಕ್ ಪ್ರಶಸ್ತಿ, ಬೋಸ್ಟನ್ ಸೊಸೈಟಿ ಫಿಲಂ ಕ್ರಿಟಿಕ್ ಪ್ರಶಸ್ತಿ, ಗಾರ್ಜಿಯಾ ಫಿಲಂ ಕ್ರಿಟಿಕ್ ಅಸೋಸಿಯೇಷನ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಪ್ರಶಸ್ತಿ, ನ್ಯೂಯಾರ್ಕ್ ಫಿಲಂ ಕ್ರಿಟಿಕ್ ಪ್ರಶಸ್ತಿ, ಸ್ಟಾಟರ್ನ್ ಅವಾರ್ಡ್, ಸೌಥರ್ನ್ ಫಿಲಂ ಕ್ರಿಟಿಕ್ ಅವಾರ್ಡ್ ಇನ್ನು ಕೆಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದೀಗ ಆಸ್ಕರ್‌ನತ್ತ ಮುಖ ಮಾಡಿದೆ.

    English summary
    RRR director Rajamouli's Critic choice award acceptance speech getting viral. Rajamouli's RRR became super hit movie in the western countries also.
    Tuesday, January 17, 2023, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X