For Quick Alerts
  ALLOW NOTIFICATIONS  
  For Daily Alerts

  ಬಾಹ್ಯಾಕಾಶದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ "ದಿ ಚಾಲೆಂಜ್"

  |

  ದಿ ಚಾಲೆಂಜ್ ಎಂಬ ರಷ್ಯನ್ ಸಿನಿಮಾ ಇತಿಹಾಸ ಸೃಷ್ಟಿಸಿದೆ. 12 ದಿನಗಳ ವರೆಗೆ ಬಾಹ್ಯಾಕಾಶದಲ್ಲಿ ಶೂಟಿಂಗ್ ಮುಗಿಸಿ ಇದೀಗ ಭೂಮಿಗೆ ಬಂದು ತಲುಪಿದ್ದಾರೆ. ಚಿತ್ರ ನಿರ್ದೇಶಕ ಮತ್ತು ನಟಿ ಸೇಫ್ ಆಗಿ ಭೂಮಿಗೆ ಬಂದಿದ್ದು, ಯಾವ ಚಿತ್ರರಂಗದವರು ಮಾಡಿರದ ಸಾಧನೆ ಮಾಡಿದ್ದಾರೆ. ಇದೊಂದು ಹೆಮ್ಮೆಯ ವಿಚಾರವಾಗಿದ್ದು, ಚಿತ್ರತಂಡ ಈ ಕುರಿತು ಅನುಭವ ಹಂಚಿಕೊಂಡಿದೆ.

  ಸಿನಿಮಾ ಮಾಡೋದು ಅಂದ್ರೆ ಅದು ಸಾಮಾನ್ಯ ವಿಷಯವಲ್ಲ. ಎಲ್ಲಾ ರೀತಿಯ ಸಿದ್ಧತೆ ಬೇಕಾಗುತ್ತೆ. ಅದರಲ್ಲು ಸಿನಿಮಾವನ್ನು ಚಾಲೆಂಜಿಂಗ್ ಆಗಿ ತೆಗಿಬೇಕು, ಸಿನಿಮಾದ ಮೂಲಕ ದಾಖಲೆ ಮಾಡಿ ತೋರಿಸಬೇಕು ಎಂದು ಈಗಾಗಲೇ ಹಲವು ಪ್ರಯೋಗಗಳು ಆಗಿರೋದನ್ನು ನಾವು ಗಮನಿಸಿದ್ದೇವೆ. ಸದ್ಯ ಈಗ ಅಂತಹದ್ದೇ ಒಂದು ಹುಬ್ಬೇರಿಸುವಂತಹ ದಾಖಲೆ ಮಾಡಿದೆ ರಷ್ಯನ್ ಸಿನಿಮಾ ದಿ ಚಾಲೆಂಜ್.

  ಸಾಕಷ್ಟು ಸಿನಿಮಾಗಳು ಈಗಾಗಲೇ ಬಾಹ್ಯಾಕಾಶಕ್ಕೆ ಸಂಬಂಧ ಪಟ್ಟಂತೆ ತೆರೆಕಂಡಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಅಲ್ಲದೇ ಜನರಿಗೆ ಬಾಹ್ಯಾಕಾಶದ ಅನುಭವ ಹೇಗಿರುತ್ತೆ ಅನ್ನೋದನ್ನು ಸಿನಿಮಾಗಳು ಸೆರೆಹಿಡಿದಿವೆ. ಆದರೆ ಅವೆಲ್ಲ ಸಿನಿಮಾಗಳನ್ನ ಗ್ರೀನ್ ಮ್ಯಾಟ್ ಅಥವಾ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇದೀಗ ಬಾಹ್ಯಾಕಾಶದಲ್ಲೇ ನೈಜವಾಗಿ ಚಿತ್ರೀಕರಣ ಮುಗಿಸಿ ವಾಪಾಸ್ ಆಗಿದೆ ದಿ ಚಾಲೆಂಜ್ ಚಿತ್ರತಂಡ.

  ಇಂಥ ಸಾಧನೆಯನ್ನು ಈ ಹಿಂದೆ ಹಾಲಿವುಡ್‌ನ ಟಾಮ್ ಕ್ರೂಸ್ ಅಭಿನಯದ ಚಿತ್ರತಂಡ ಮಾಡುತ್ತೇವೆ ಎಂದು ಘೋಷಣೆ ಮಾಡಿತ್ತಾದರು, ಅದು ಸಾಧ್ಯವಾಗಿರಲಿಲ್ಲ. ಈಗ ಅಂತರಿಕ್ಷದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಿ ರಷ್ಯಾ ಐತಿಹಾಸಿಕ ದಾಖಲೆ ಬರೆದಿದೆ. 12 ದಿನ ಅಂತರಿಕ್ಷದಲ್ಲಿ ಚಿತ್ರೀಕರಿಸಿ, ಚಿತ್ರತಂಡ ಭಾನುವಾರ ಭೂಮಿಗೆ ವಾಪಾಸ್ ಬಂದಿದ್ದಾರೆ. ಅಲ್ಲದೇ ದಿ ಚಾಲೆಂಜ್ ಚಿತ್ರತಂಡ ಬಾಹ್ಯಾಕಾಶದಲ್ಲಿ ಶೂಟಿಂಗ್ ಮಾಡಿರೊ ಮೊದಲ ಸಿನಿಮಾ ಎನಿಸಿಕೊಂಡಿದೆ.

  ಇನ್ನು ದಿ ಚಾಲೆಂಜ್ ಚಿತ್ರತಂಡ ಅಕ್ಟೋಬರ್ 5ರಂದು ಬಾಹ್ಯಾಕಾಶಕ್ಕೆ ತೆರಳಿತ್ತು. ಅಲ್ಲಿ ಒಟ್ಟು 12ದಿನಗಳ ವರೆಗೂ ಶೂಟಿಂಗ್ ಪ್ಲಾನ್ ಮಾಡಿ ತೆರಳಿತ್ತು. ಹೀಗೆ ಅಂದುಕೊಂಡಿದ್ದ ಚಿತ್ರತಂಡ ಅದರಂತೆ 12 ದಿನಗಳು ಇದ್ದು ಯಶಸ್ವಿಯಾಗಿ ಶೂಟಿಂಗ್ ಮುಗಿಸಿದೆ. ಅಲ್ಲದೇ ಭಾನುವಾರ ಕಜಕಿಸ್ತಾನಕ್ಕೆ ಬಂದಿಳಿದಿದೆ. ಮೂರುವರೆ ಗಂಟೆಗಳ ಪ್ರಯಾಣದ ಬಳಿಕ ತಂಡ ಲ್ಯಾಂಡ್ ಆಗಿದ್ದು, ಚಿತ್ರತಂಡ ಸುರಕ್ಷಿತವಾಗಿ ಭೂಮಿಗೆ ಬಂದು ಇಳಿದಿದ್ದಾರೆ.

  ಈ ಸಿನಿಮಾದಲ್ಲಿ ಬರೋ ಒಂದು ಸನ್ನಿವೇಶ ಇದೆ. ಬಾಹ್ಯಾಕಾಶಕ್ಕೆ ತೆರಳಿರೋ ಗಗನಯಾನಿಯೊಬ್ಬರು ತುರ್ತು ಅನಾರೋಗ್ಯಕ್ಕೆ ತುತ್ತಾಗುವ ಸಂದರ್ಭ, ವೈದ್ಯರೊಬ್ಬರು ಬಾಹ್ಯಾಕಾಶಕ್ಕೆ ತೆರಳಿ ಚಿಕಿತ್ಸೆ ನೀಡಿ ವಾಪಾಸ್ಸಾಗಬೇಕು.ಇದೇ ದೃಶ್ಯ ನಿಜವಾದ ಬಾಹ್ಯಾಕಾಶದಲ್ಲಿ ಚಿತ್ರೀಕರಣ ಆಗಿದ್ದು, ಚಿತ್ರದ ನಿರ್ದೇಶಕ ಶಿಪೆನ್ಕೋ ಹಾಗೂ ನಟಿ ಯೂಲಿಯಾ ಬಾಹ್ಯಾಕಾಶಕ್ಕೆ ತೆರಳಿದ್ದರು. ಅಲ್ಲಿಗೆ ಹೊಗುವ ಮುನ್ನ ಚಿತ್ರತಂಡ ಎಲ್ಲಾ ರೀತಿಯ ಸಿದ್ಧತೆ ಹಾಗೂ ನುರಿತರಿಂದ ಟ್ರೈನಿಂಗ್ ಪಡೆದು ತೆರಳಿತ್ತು. ಈಗ ಯಶಸ್ವಿಯಾಗಿ ಚಿತ್ರತಂಡ ಶೂಟಿಂಗ್ ಮುಗಿಸಿದ್ದು, ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆಯಂತೆ. ನೈಜ ದೃಶ್ಯ ಚಿತ್ರೀಕರಣ ಆಗಿರೋದ್ರಿಂದ ಪ್ರೇಕ್ಷಕರು ಕೂಡ ಸಿನಿಮಾ ನೋಡಲು ಕಾತುರರಾಗಿದ್ದಾರೆ.

  English summary
  A Russian actor and a film director have returned to Earth after spending 12 days on the International Space Station shooting scenes for the first movie in orbit.
  Monday, October 18, 2021, 19:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X