»   » ಲಿಯೋನಾರ್ಡೋ ಜೊತೆ ನಟನೆ; ಒಪ್ಪಿದ ಶಾರುಖ್

ಲಿಯೋನಾರ್ಡೋ ಜೊತೆ ನಟನೆ; ಒಪ್ಪಿದ ಶಾರುಖ್

Posted By:
Subscribe to Filmibeat Kannada
ಕಳೆದ ವರ್ಷ ಸಾಕಷ್ಟು ಸುದ್ದಿಯಾಗಿದ್ದ ಸುದ್ದಿಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ಹಾಲಿವುಡ್ ನಟ ಲಿಯೋನಾರ್ಡೋ ಡಿ ಕಾಪ್ರಿಯೋ ಜೊತೆ ನಟಿಸಲಿರು ಸುದ್ದಿಯೂ ಒಂದು. ಆದರೆ ಆಗ ಶಾರುಖ್ ಅದನ್ನು ದೃಢಪಡಿಸಿರಲಿಲ್ಲ. ಈ ಕಾರಣದಿಂದ ಹುಟ್ಟಿದ ಸುದ್ದಿ ಕೆಲಕಾಲದಲ್ಲಿಯೇ ಸತ್ತುಹೋಗಿತ್ತು. ಈಗ ಮತ್ತೆ ಮರುಜನ್ಮ ಪಡೆದಿದೆ. ಕಾರಣ ಸ್ವತಃ ಶಾರುಖ್ ನಿರ್ದೇಶಕ ಮಾರ್ಟಿನ್ ಸ್ಕೋರ್ಸಸ್ ಅವರನ್ನು ಭೇಟಿಯಾಗಲಿರುವುದಾಗಿ ಬಹಿರಂಗಪಡಿಸಿದ್ದಾರೆ.

ಪ್ರಸಿದ್ದ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಶಾರುಖ್ "ನಾನು ಇಷ್ಟು ದಿನ ನನ್ನ ರಾ ಒನ್, ಡಾನ್ 2, ಮತ್ತು ಯಶ್ ರಾಜ್ ಚಿತ್ರಗಳಲ್ಲಿ ಬಿಜಿಯಾಗಿದ್ದೆ. ಹಾಗಾಗಿ ಎಕ್ಸ್ ಟ್ರೀಮ್ ಚಿತ್ರಕ್ಕೆ ಬಂದಿದ್ದ ಆಫರ್ ಹಾಗೂ ಬೆಳವಣಿಗೆಯನ್ನು ಗಮನಿಸಲು ಹಾಗೂ ದೃಢಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ. ಅತ್ತಕಡೆಯಿಂದ ಮತ್ತೆ ದೃಢಪಡಿಸಲು ಮಾಹಿತಿ ಬಂದಿದೆ. ಹೀಗಾಗಿ ಸದ್ಯದಲ್ಲೇ ಚಿತ್ರತಂಡಕ್ಕೆ ಈಮೇಲ್ ಕಳಿಸಲಿದ್ದೇನೆ.

ಬಹುಶಃ ಸದ್ಯದಲ್ಲೇ ನಾನು ಅಮೆರಿಕ ಹೋಗಲಿರುವುದರಿಂದ ಅಲ್ಲಿ ನಿರ್ದೇಶಕ ಸ್ಕೋರ್ಸಸ್ ಅವರನ್ನು ಭೇಟಿ ಮಾಡಿ ಅದರ ಬಗ್ಗೆ ಚರ್ಚಿಸಲಿದ್ದೇನೆ. ಅದು ತಕ್ಷಣ ಒಪ್ಪಿಕೊಂಡು ಮಾಡಬಹುದಾದ ಚಿತ್ರವಲ್ಲ. ಬಹಳಷ್ಟು ಪೂರ್ವತಯಾರಿ ಬೇಕು. ಹಾಗಾಗಿ ಚರ್ಚಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇನೆ. ಯಾವಾಗ ಅದು ಪ್ರಾರಂಭವಾಗುತ್ತೋ ಗೊತ್ತಿಲ್ಲ, ಆದರೆ ಅದೊಂದು ತುಂಬಾ ಆಸಕ್ತಿಕರವಾದ ಪ್ರಾಜೆಕ್ಟ್" ಎಂದಿದ್ದಾರೆ. ಈ ಮೂಲಕ ಶಾರುಖ್ ಹೊಸದೊಂದು ಕುತೂಹಲ ಹುಟ್ಟುಹಾಕಿದ್ದಾರೆ. (ಏಜೆನ್ಸೀಸ್)

English summary
Last year there was a huge buzz that Shahrukh Khan is doing Hollywood filmmaker Martin Scorsese’s movie with Leonardo DiCaprio

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada