Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನಸಾಗಲೇ ಇಲ್ಲ ಶೇನ್ ವಾರ್ನ್ ಸಿನಿಮಾ ಕನಸು
ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ನಿನ್ನೆ ಹಠಾತ್ತನೆ ನಿಧನ ಹೊಂದಿದ್ದಾರೆ. ಶೇನ್ ವಾರ್ನ್ ಆಸ್ಟ್ರೇಲಿಯಾದ ಕ್ರಿಕೆಟರ್ ಆದರೂ ಭಾರತ ಕ್ರಿಕೆಟ್ ಪ್ರೇಮಿಗಳಿಗೂ ಬಹಳ ಹತ್ತಿರದ ಆಟಗಾರ. ನಿವೃತ್ತಿಯ ನಂತರ ಕಮೆಂಟೇಟರ್ ಆಗಿ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದ ಶೇನ್ ವಾರ್ನ್ ಮೇಲೆ ಭಾರತೀಯರಿಗೆ ಪ್ರೀತಿ ಹೆಚ್ಚು, ಶೇನ್ ವಾರ್ನ್‌ಗೂ ಸಹ.
ಶೇನ್ ವಾರ್ನ್‌ಗೆ ಬಾಲಿವುಡ್ ಸಿನಿಮಾದ ಅವಕಾಶವನ್ನು ನೀಡಲಾಗಿತ್ತು. ಈ ಬಗ್ಗೆ ಸ್ವತಃ ಶೇನ್ ವಾರ್ನ್ ಹೇಳಿಕೊಂಡಿದ್ದರು. ಆದರೆ ಆ ಯೋಜನೆ ಸೆಟ್ಟೇರಲಿಲ್ಲವಾದ್ದರಿಂದ ಶೇನ್ ವಾರ್ನ್ ಭಾರತದ ಸಿನಿಮಾದಲ್ಲಿ ನಟಿಸಲಾಗಲಿಲ್ಲ.
ಸಚಿನ್
ತೆಂಡೂಲ್ಕರ್
ವೃತ್ತಿ
ಕ್ರಿಕೆಟ್
ಅಲ್ಲ
ನಟನೆ:
ಇದು
ಸತ್ಯ!
ಶೇನ್ ವಾರ್ನ್‌ರ ಜೀವನ ಕತೆಯನ್ನು ಸಿನಿಮಾ ಮಾಡುವ ಬಗ್ಗೆಯೂ ಯೋಜನೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಶೇನ್ ವಾರ್ನ್, ''ಇದೊಂದು ಹಾಲಿವುಡ್ ಸಿನಿಮಾ ಆದರೆ ಭಾರತೀಯರಿಗಾಗಿ ಮಾಡಲಾಗುತ್ತಿರುವ ಹಾಲಿವುಡ್ ಸಿನಿಮಾ'' ಎಂದಿದ್ದರು.
ತಮ್ಮ ಜೀವನ ಆಧರಿಸಿದ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಬ್ರಾಡ್ ಫಿಟ್ ಅಥವಾ ಲಿಯೋನಾರ್ಡೊ ಡಿಕಾಪ್ರಿಯೊ ನಟಿಸಬೇಕು ಎಂಬ ಆಸೆಯನ್ನು ಶೇನ್ ವಾರ್ನ್ ವ್ಯಕ್ತಪಡಿಸಿದ್ದರು.
ಸಿನಿಮಾ
ಸೇರಿಬಿಟ್ಟರೆ
ಕ್ರಿಕೆಟಿಗ
ದಿನೇಶ್
ಕಾರ್ತಿಕ್?
ಜಾನ್ಹವಿ
ಜೊತೆ
ಏನು
ಮಾಡುತ್ತಿದ್ದಾರೆ?
ಶೇನ್ ವಾರ್ನ್ ಜೀವನವು ಸಹ ಸಾಕಷ್ಟು ಏರಿಳಿತಗಳಿಂದ ಕೂಡಿದ್ದಾಗಿತ್ತು. ಕ್ರಿಕೆಟ್, ಜೂಜು, ಮಾದಕ ವ್ಯಸನ, ಪರಸ್ತ್ರೀಯರ ಸಹವಾಸ, ಮತ್ತೆ ಕ್ರಿಕೆಟ್, ಸಾಧನೆ, ವಿಶ್ವ ದಾಖಲೆ ಹೀಗೆ ಹಲವು ಏರಿಳಿತಗಳನ್ನು ಶೇನ್ ವಾರ್ನ್ ನೋಡಿದ್ದರು. ಹೀಗಾಗಿ ಅವರ ಜೀವನ ಕತೆ ಸಿನಿಮಾ ಮಾಡಲು ಯೋಗ್ಯವಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಈ ಯೋಜನೆ ತುಸು ತಡವಾಯಿತು. ಆದರೆ ಈಗ ಸ್ವತಃ ಶೇನ್ ವಾರ್ನ್ ಅವರೇ ಇಲ್ಲವಾಗಿಬಿಟ್ಟಿದ್ದಾರೆ.
ಅಥರ್ವನ
ಅವತಾರದಲ್ಲಿ
ಎಂ.ಎಸ್.ಧೋನಿ:
ಇದ್ಯಾಯ
ಸಿನಿಮಾ?
52 ವರ್ಷದವರಾಗಿದ್ದ ಶೇನ್ ವಾರ್ನ್ ನಿನ್ನೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಭಾರತದ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಇನ್ನೂ ಹಲವರು ಶೇನ್ ವಾರ್ನ್ ಅಗಲಿಕೆಗೆ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ಕ್ರಿಕೆಟಿಗರು ಮಾತ್ರವೇ ಅಲ್ಲದೆ ನಟರಾದ ಅಕ್ಷಯ್ ಕುಮಾರ್, ಸನ್ನಿ ಡಿಯೋನ್, ಅಜಯ್ ದೇವಗನ್, ರಣ್ವೀರ್ ಸಿಂಗ್, ತೆಲುಗಿನ ನಟ ಮಹೇಶ್ ಬಾಬು, ನಟಿಯರಾದ ಮಾಧುರಿ ದೀಕ್ಷಿತ್, ಶೇನ್ ವಾರ್ನ್ ನಾಯಕತ್ವ ವಹಿಸಿದ್ದ ರಾಜಸ್ಥಾನ ರಾಯಲ್ಸ್ ತಂಡದ ಸಹ ಒಡತಿ ಶಿಲ್ಪಾ ಶೆಟ್ಟಿ, ಹುಮಾ ಖುರೇಷಿ ಇನ್ನೂ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.