»   » ಆಸ್ಕರ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ 'ಕಾಮಸೂತ್ರ 3D'

ಆಸ್ಕರ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ 'ಕಾಮಸೂತ್ರ 3D'

By: ರವಿಕಿಶೋರ್
Subscribe to Filmibeat Kannada

ಶೆರ್ಲಿನ್ ಚೋಪ್ರಾ ಅಭಿನಯದ ಬಹು ಚರ್ಚಿತ 'ಕಾಮಸೂತ್ರ 3D' ಚಿತ್ರ ಆಸ್ಕರ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದೆ. ರುಪೇಶ್ ಪೌಲ್ ನಿರ್ದೇಶನ ಈ ಬಹುಭಾಷಾ ಚಿತ್ರ 86ನೇ ಅಕಾಡೆಮಿ ಪ್ರಶಸ್ತಿಯ ಮೂರು ವಿಭಾಗಗಳಲ್ಲಿ ಈ ಚಿತ್ರ ಸ್ಪರ್ಧಿಸಿರುವುದು ವಿಶೇಷ.

ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಂಗೀತ ಹಾಗೂ ಅತ್ಯುತ್ತಮ ಹಾಡುಗಳ ವಿಭಾಗದಲ್ಲಿ ಸ್ಪರ್ಧಿಸಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಅಕಾಡೆಮಿ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

'ಕಾಮಸೂತ್ರ 3D' ಚಿತ್ರಕ್ಕೆ ಟಾಮ್ ಹಾಂಕ್ಸ್ ಅಭಿನಯದ 'Captain Phillips' ಸೇರಿದಂತೆ The Conjuring, Diana, The Fifth Estate, Gravity, The Great Gatsby, The Hobbit: The Desolation Of Smaug, The Hunger Games: Catching Fire, Jobs, Rush, Saving Mr. Banks ಹಾಗೂ The Wolf Of Wall Street ಚಿತ್ರಗಳು ಪ್ರಬಲ ಸ್ಪರ್ಧೆ ಒಡ್ಡಿವೆ.

ಕಾಮಸೂತ್ರ ಚಿತ್ರದಲ್ಲಿನ ಅಯಿಗಿರಿ ನಂದಿನಿ, ಹರ್ ಹರ್ ಮಹದೇವ್ ಹಾಡುಗಳು ಅತ್ಯುತ್ತಮ ಹಾಡುಗಳ ವಿಭಾಗದಲ್ಲಿವೆ. ಚಿತ್ರಕ್ಕೆ ಚೆನ್ನೈ ಮೂಲದ ಸಚಿನ್ ಹಾಗೂ ಶ್ರೀಜಿತ್ ಸಂಗೀತ ಸಂಯೋಜಿಸಿದ್ದಾರೆ. ರುಪೇಶ್ ಪೌಲ್ ಅವರ ಸಾಹಿತ್ಯ ಚಿತ್ರಕ್ಕಿದೆ. ಸ್ಲೈಡ್ ನಲ್ಲಿ ಚಿತ್ರದ ಒಳನೋಟಗಳು.

ಆಕರ್ಷಕ ಯುವರಾಣಿಯೊಬ್ಬಳ ರೋಚಕ ಕಥೆ

ಆಕರ್ಷಕ ಯುವರಾಣಿಯೊಬ್ಬಳ ರೋಚಕ ಕಥೆಯನ್ನು ಕಾಮಸೂತ್ರ 3D ಚಿತ್ರ ಒಳಗೊಂಡಿದೆ. ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ರೂಪೇಶ್ ಪಾಲ್ ತೆರೆಗೆ ತರುತ್ತಿರುವ ಶೃಂಗಾರ ದೃಶ್ಯ ಕಾವ್ಯ 'ಕಾಮಸೂತ್ರ 3D'. ಮನುಕುಲದ ಜೀವನದಲ್ಲಿ ಸಾಕಷ್ಟು ಪ್ರಾಧ್ಯಾನ್ಯತೆ ಇರುವ ಶೃಂಗಾರವೇ ಈ ಚಿತ್ರದ ಕಥಾವಸ್ತು.

ಇದು ಕೇವಲ ಸೆಕ್ಸ್ ಚಿತ್ರ ಎಂದುಕೊಂಡರೆ ತಪ್ಪಾಗುತ್ತದೆ

ಕಾಮಸೂತ್ರದಲ್ಲಿನ ವಿವಿಧ ಭಂಗಿಗಳನ್ನು 3D ಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಿರ್ದೇಶಕರು. ಆದರೆ ಇದು ಕೇವಲ ಸೆಕ್ಸ್ ಚಿತ್ರ ಎಂದುಕೊಂಡರೆ ತಪ್ಪಾಗುತ್ತದೆ. ಒಂದು ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

ಕೆಲವು ಸನ್ನಿವೇಶಗಳಲ್ಲಿ ನಗ್ನ ಅಭಿನಯ

ಈ ಚಿತ್ರದಲಲ್ಲಿ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಕಥೆಗೆ ಅನುಗುಣವಾಗಿ ಕೆಲವು ಸನ್ನಿವೇಶಗಳಲ್ಲಿ ನಗ್ನವಾಗಿ ಅಭಿನಯಿಸಿದ್ದಾರೆ. ಈಗಾಗಲೆ ಚಿತ್ರದ ಫೋಟೋಗಳು ಬಿಡುಗಡೆಯಾಗಿದ್ದು ಅತೀವ ಕುತೂಹಲಕ್ಕೆ ಕಾರಣವಾಗಿವೆ.

ಈ ಚಿತ್ರ ವಯಸ್ಕರಿಗೆ ಮಾತ್ರ

ಈ ಚಿತ್ರ ವಯಸ್ಕರಿಗೆ ಮಾತ್ರ. ಇದರಲ್ಲಿ ಶೆರ್ಲಿನ್ ಚೋಪ್ರಾ ನಗ್ನವಾಗಿ ಅಭಿನಯಿಸಿದ್ದಾರೆ. ಮೇಲುಡುಪು ತೊಡದೆ ಕಾಮಸೂತ್ರದ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ರೂಪೇಶ್ ಪಾಲ್ ಏನು ಹೇಳುತ್ತಾರೆ

ಈ ಚಿತ್ರದ ಬಗ್ಗೆ ರೂಪೇಶ್ ಪಾಲ್ ಮಾತನಾಡುತ್ತಾ, "ನಾನು ಅಂದುಕೊಂಡ ರೀತಿಯಲ್ಲಿ ಪಾತ್ರವನ್ನು ಪೋಷಣೆ ಮಾಡಲು ಶೆರ್ಲಿನ್ ಚೋಪ್ರಾ ಸೂಕ್ತ ಎಂದು ಆಕೆಯನ್ನು ಆಯ್ಕೆ ಮಾಡಿದೆ. ಭಾರತೀಯ ಮನೋಭಾವಕ್ಕೆ ತಕ್ಕಂತಹ ರೂಪ ಅವರದು. ನಿರ್ದೇಶನಕನಾಗಿ ನನಗೆ ನಿಜಕ್ಕೂ ಸವಾಲಿನ ಕೆಲಸ. 3D ತಂತ್ರಜ್ಞಾನ ಮೂಲಕ ಶೃಂಗಾರ ಭಂಗಿಗಳನ್ನು ಅದ್ಭುತವಾಗಿ ತೋರಿಸಲಿದ್ದೇವೆ" ಎಂದಿದ್ದಾರೆ.

ನಗ್ನವಾಗಿ ಅಭಿನಯಿಸುವುದು ಒಂದು ಕಲೆ

ಶೆರ್ಲಿನ್ ಚೋಪ್ರಾ ಮಾತನಾಡುತ್ತಾ...ನಗ್ನವಾಗಿ ಅಭಿನಯಿಸುವುದು ಒಂದು ಕಲೆ. ಈ ಹಿಂದೆ ಪ್ಲೇಬಾಯ್ ನಿಯತಕಾಲಿಗೆಗಾಗಿ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿದ್ದರು.

ಐತಿಹಾಸಿಕ ಹಿನ್ನೆಲೆಯಲ್ಲಿ ಸಾಗುವ ಕಥೆ

ಕಾಮಸೂತ್ರಿ 3D ಚಿತ್ರದಲ್ಲಿ ಭಾರತೀಯ ಯುವರಾಣಿಯೊಬ್ಬಳ ಕಥೆ ಬಿಚ್ಚಿಕೊಳ್ಳುತ್ತದೆ. ಐತಿಹಾಸಿಕ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

English summary
Rupesh Paul's 'Kamasutra 3D', with Sheryln Chopra in the lead, is in contention for the Best Feature Film, Original Score and Original songs in the 86th Academy Awards; Marathi movie 'Touring Talkies' is also in contention for The Best Feature Film category.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada