»   » ಕ್ರೇಗ್ ಮತ್ತೆ ಸೂಪರ್ ಏಜೆಂಟ್ ಜೇಮ್ಸ್ ಬಾಂಡ್

ಕ್ರೇಗ್ ಮತ್ತೆ ಸೂಪರ್ ಏಜೆಂಟ್ ಜೇಮ್ಸ್ ಬಾಂಡ್

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೋಲಾಸ್ ಹಾಗೂ ಸ್ಕೈ ಫಾಲ್ ಚಿತ್ರದಲ್ಲಿ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟ ಡೇನಿಯಲ್ ಕ್ರೇಗ್ ಬಾಂಡ್ ಈಗ ಮತ್ತೊಮ್ಮೆ ಸೂಪರ್ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೇಮ್ಸ್ ಬಾಂಡ್ ಸರಣಿಯ 24ನೇ ಚಿತ್ರಕ್ಕೂ ಕ್ರೇಗ್ ನಾಯಕರಾಗಿದ್ದಾರೆ.

ಬಾಂಡ್ ಪಾತ್ರಗಳ ಮೂಲಕ ಸುಮಾರು 31 ಮಿಲಿಯನ್ ಪೌಂಡ್ ದುಡ್ಡು ಸಲೀಸಾಗಿ ಜೇಬಿಗಿಳಿಸಿಕೊಂಡಿದ್ದ ಕ್ರೇಗ್ ಇನ್ಮುಂದೆ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಅದರೆ, ಅತ್ಯಂತ ಶ್ರೀಮಂತ ಸೂಪರ್ ಸ್ಪೈ ಮತ್ತೊಮ್ಮೆ ಲೈಸನ್ ಟು ಕಿಲ್ ಆದೇಶ ಪಡೆದುಕೊಂಡಿದ್ದಾರೆ. 2012ರಲ್ಲಿ ಕ್ರೇಗ್ ನಾಯಕತ್ವದಲ್ಲಿ ಸ್ಕೈಫಾಲ್ ಚಿತ್ರ ನಿರ್ದೇಶಿಸಿದ್ದ ಸ್ಯಾಮ್ ಮೆಂಡಸ್ ಮತ್ತೊಮ್ಮೆ 24ನೇ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

46 ವರ್ಷದ ಕ್ರೇಗ್ ಇತ್ತೀಚಿನ ಸ್ಕೈ ಫಾಲ್ ನಂತರ ಇನ್ನೆರಡು ಮುಂದುವರೆದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. 2014ರ ಡಿಸೆಂಬರ್ 6ಕ್ಕೆ 24ನೇ ಚಿತ್ರದ ಶೂಟಿಂಗ್ ಲಂಡನ್ನಿನ ಪೈನ್ ವುಡ್ ಸ್ಟುಡಿಯೋಸ್ ನಲ್ಲಿ ಆರಂಭವಾಗಲಿದೆ. 2015ರಲ್ಲಿ ಚಿತ್ರ ತೆರೆ ಕಾಣಲಿದೆಯಂತೆ ಆ ನಂತರ ಬಾಂಡ್ ಚಿತ್ರಗಳಲ್ಲಿ ಕ್ರೇಗ್ ನಟಿಸುವುದಿಲ್ಲ ಎಂಬ ಮಾತುಗಳಿವೆ.

Daniel Craig

24ನೇ ಚಿತ್ರದ ಹೆಸರು ಇನ್ನೂ ಫಿಕ್ಸ್ ಆಗಿಲ್ಲವಾದರೂ ತಾರಾಗಣದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿದೆ ರಾಲ್ಫ್ ಫಿನ್ನೆಸ್ 'M' ಪಾತ್ರದಲ್ಲಿ ನಯೋಮಿ ಹ್ಯಾರಿಸ್ 'eve moneypenny' ಪಾತ್ರದಲ್ಲಿ ಬೆನ್ ವಿಶ್ ಶಾ 'Q' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಕೈಫಾಲ್ ಗೆ ಚಿತ್ರಕಥೆ ಒದಗಿಸಿದ ಜಾನ್ ಲೊಗಾನ್, ನೀಯಲ್ ಪುರ್ವಿಸ್ ಹಾಗೂ ರಾಬರ್ಟ್ ವೇಡ್ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ.

ವಿಶ್ವಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಂಜಿಎಂನ ಆರ್ಥಿಕ ಪರಿಸ್ಥಿತಿ ಇದೀಗ ಸುಧಾರಿಸಿದ್ದು, ಸೋನಿ ಎಂಟರ್ ಟೈನ್ಮೆಂಟ್ ಜೊತೆ ಸೇರಿ 24ನೇ ಚಿತ್ರ ನಿರ್ಮಿಸುತ್ತಿದೆ. ನಿರ್ಮಾಪಕ ಮೈಕಲ್ ಜಿ ವಿಲ್ಸನ್ ಹಾಗೂ ಬರ್ಬರಾ ಬ್ರೊಕೊಲೊ ಅವರು ನೀಡಿದ ಮಾಹಿತಿ ಪ್ರಕಾರ ಬ್ರಿಟಿನ್ನಿನಲ್ಲಿ ಅಕ್ಟೋಬರ್ 23,2015ರಂದು ಚಿತ್ರ ತೆರೆ ಕಾಣಲಿದೆ, ಯುಎಸ್ ನಲ್ಲಿ ನವೆಂಬರ್ 6ರಂದು ಚಿತ್ರ ತೆರೆಗೆ ಬರಲಿದ್ ಎಂದಿದ್ದಾರೆ.

ಸ್ಕೈಫಾಲ್ ಚಿತ್ರ ಜೇಮ್ಸ್ ಬಾಂಡ್ ಸರಣಿಯ ಅತ್ಯಂತ ಯಶಸ್ವಿ ಚಿತ್ರವಾಗಿದ್ದು 1 ಬಿಲಿಯನ್ ಡಾಲರ್ ಬಾಚಿಕೊಂಡಿತ್ತು. ಕ್ರೇಗ್ ನಟನೆ, ಸಾಹಸದ ಜೊತೆಗೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಪಾನಿಷ್ ನಟ ಜೇವಿಯರ್ ಬರ್ಡೆಮ್ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು.

English summary
The shooting of next James Bond film, the 24th instalment of the popular spy series, will begin Dec 6 at Pinewood Studios near London, Variety reported.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada