For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಆಫ್ರಿಕಾದ ಈ ದೈತ್ಯ ನಟ ಆಂಜನೇಯನಿಗೆ ಭಕ್ತ

  |

  ದಕ್ಷಿಣ ಆಫ್ರಿಕಾದ ನಟ, ವಿಶ್ವ ವಿಖ್ಯಾತ ದೇಹದಾರ್ಢ್ಯ ಪಟು ಜಾನ್ ಲುಕಸ್‌ ಗೆ ಬಾಡಿ ಬಿಲ್ಡಿಂಗ್‌ಗೆ ಹಿಂದು ದೇವರು ಆಂಜನೇಯನೇ ಸ್ಪೂರ್ತಿಯಂತೆ.

  ಹೌದು, ಜಾನ್ ಲುಕಸ್, ಆಂಜನೇಯ ದೇವರ ಚಿತ್ರದ ಮುಂದೆ ನಿಂತು ಬಾಡಿ ಶೋ ಕೊಟ್ಟಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಚಿತ್ರ ಸಖತ್ ವೈರಲ್ ಆಗಿದೆ.

  ವಿಶೇಷವೆಂದರೆ ಜಾನ್ ಲುಕಸ್ ಕನ್ನಡದ 'ಪೊಗರು' ಸಿನಿಮಾದಲ್ಲಿ ನಟಿಸಿದ್ದಾರೆ. ಪೊಗರು ಸಿನಿಮಾದಲ್ಲಿ ಕೆಲವು ವಿಶ್ವದ ಖ್ಯಾತನಾಮ ದೇಹದಾರ್ಢ್ಯ ಪಟುಗಳು ಅಭಿನಯಿಸಿದ್ದು, ಅವರಲ್ಲಿ ಜಾನ್ ಲೂಕಸ್ ಸಹ ಒಬ್ಬರು.

  ಜಾನ್ ಲೂಕಸ್ ಗೆ ಭಾರತ ಹೊಸದೇನು ಅಲ್ಲ, ಈ ಹಿಂದೆಯೂ ಕೆಲವು ಬಾರಿ ಅವರು ಭಾರತಕ್ಕೆ ಬಂದಿದ್ದಾರೆ. ಅವರೊಮ್ಮೆ ಬಂದಿದ್ದಾಗ ನೀಡಿದ್ದ ಸಂದರ್ಶನದಲ್ಲಿ ತಾವು ಮಲಯಾಳಂ ನ ಸ್ಟಾರ್ ನಟ ಮೋಹನ್‌ಲಾಲ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದರು.

  ಪೊಗರು ಸಿನಿಮಾದಲ್ಲಿ ಕಾಯ್ ಗ್ರೀನ್ ಹಾಗೂ ಇನ್ನಿತರ ವಿಶ್ವದರ್ಜೆಯ ಬಾಡಿ ಬಿಲ್ಡರ್‌ಗಳು ವಿಲನ್‌ಗಳಾಗಿ ನಟಿಸಿದ್ದಾರೆ. ಪೊಗರು ಸಿನಿಮಾದಲ್ಲಿ ತಾವು ನಟಿಸಿರುವ ದೃಶ್ಯದ ಒಂದು ಚಿತ್ರವನ್ನು ಸಹ ಜಾನ್ ಲುಕಸ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ತಾವು ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲು ರೆಡಿ ಎಂದಿದ್ದರು.

  Ganesh ಕನ್ನಡ ಚಿತ್ರರಂಗದ ಸ್ಟಾರ್ ಆಗಿ 14 ವರ್ಷ ಆಯ್ತು | Filmibeat Kannada

  ಹಾಲಿವುಡ್ ನಟಿ ಸಲ್ಮಾ ಹಯೇಕ್, ತಾವು ಹಿಂದು ದೇವತೆ ಲಕ್ಷ್ಮಿಯ ಭಕ್ತೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಅಲ್ಲದೆ ದೇವತೆ ಲಕ್ಷ್ಮಿಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು ಆಕೆ.

  English summary
  South African actor Jhon Lucas is devotee of lord Anjaneeya. His pic in front of Anjaneeya getting viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X