For Quick Alerts
  ALLOW NOTIFICATIONS  
  For Daily Alerts

  'ಸ್ಪೈಡರ್‌ಮ್ಯಾನ್: ನೋ ವೇ ಹೋಮ್': ಅಭಿಮಾನಿಗಳಿಗೆ ನಿರಾಸೆ ಮಾಡಿದ ಚಿತ್ರತಂಡ!

  |

  ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

  ಭಾರತ ಒಂದರಲ್ಲಿಯೇ 250 ಕೋಟಿಗೂ ಹೆಚ್ಚು ಹಣ ಗಳಿಸಿದ ಸಿನಿಮಾ ಉತ್ತರ ಅಮೆರಿಕದಲ್ಲಿ 4000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಹಲವು ರಾಷ್ಟ್ರಗಳಲ್ಲಿ ಸಿನಿಮಾ ಈಗಲೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

  ಆದರೆ ಕೋವಿಡ್ ಕಾರಣದಿಂದ ಹಲವು ರಾಷ್ಟ್ರಗಳಲ್ಲಿ ಈ ಸಿನಿಮಾ ಬಿಡುಗಡೆಯೇ ಆಗಿಲ್ಲ. ಭಾರತದಲ್ಲಿ ಸಹ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾ ಬಿಡುಗಡೆ ಆಗುವ ವೇಳೆಗೆ ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರ ಬಂದ್ ಆಗಿದ್ದರೆ ಕೆಲವು ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿತ್ತು ಹಾಗಾಗಿ ಕೋಟ್ಯಂತರ 'ಸ್ಪೈಡರ್‌ಮ್ಯಾನ್' ಸಿನಿಮಾ ಅಭಿಮಾನಿಗಳಿಗೆ ಈ ಸಿನಿಮಾ ನೋಡಲಾಗಿಲ್ಲ. ಸಿನಿಮಾವು ಒಟಿಟಿಗೆ ಯಾವಾಗ ಬರುತ್ತದೆಂಬ ನಿರೀಕ್ಷೆಯಲ್ಲಿಯೇ ಇದ್ದಾರೆ. ಆದರೆ ಮಾರ್ವೆಲ್‌ನವರು ಈ ವಿಷಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

  ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುತ್ತಿಲ್ಲ ಮಾರ್ವೆಲ್. ಸಿನಿಮಾವು ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಎಕ್ಸ್‌ಕ್ಲ್ಯೂಸಿವ್ ಆಗಿ ಚಿತ್ರಮಂದಿರಗಳಲ್ಲಿಯೇ ಸಿನಿಮಾ ಪ್ರದರ್ಶನ ಕಾಣಲಿ ಎಂಬ ಆಲೋಚನೆಯಲ್ಲಿ ಮಾರ್ವೆಲ್ ಇದೆ. ಕನಿಷ್ಟ ಇನ್ನೂ ಎರಡು ತಿಂಗಳ ಕಾಲ 'ಸ್ಪೈಡರ್‌ಮ್ಯಾನ್' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಓಡಿಸಲು ಮಾರ್ವೆಲ್ ಯೋಜನೆ ಹಾಕಿದೆ.

  ವಿಶ್ವದ ಕೆಲವು ರಾಷ್ಟ್ರಗಳಲ್ಲಿ, ಕೆಲವು ಪ್ರಮುಖ ನಗರಗಳಲ್ಲಿ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾ ಇನ್ನೂ ಬಿಡುಗಡೆಯೇ ಆಗಿಲ್ಲ. ಹಾಗಾಗಿ ಈ ಸಿನಿಮಾವನ್ನು ಎಲ್ಲ ರಾಷ್ಟ್ರಗಳಿಗೂ, ಮಾರ್ವೆಲ್ ಅಭಿಮಾನಿಗಳು, ಸ್ಪೈಡರ್‌ಮ್ಯಾನ್ ಅಭಿಮಾನಿಗಳಿರುವ ಎಲ್ಲ ನಗರಗಳಿಗೂ ಚಿತ್ರಮಂದಿರಗಳ ಮೂಲಕವೇ ತಲುಪಿಸಬೇಕೆಂದು ಮಾರ್ವೆಲ್ ನಿರ್ಧರಿಸಿದಂತಿದೆ.

  ಮಾರ್ವೆಲ್‌ನ 'ಅವೇಂಜರ್ಸ್' ಸಿನಿಮಾ ಸರಣಿ, ಇತ್ತೀಚಿಗೆ ಬಿಡುಗಡೆ ಆದ 'ಶಾಂಗ್ ಚೀ', 'ಲೋಕಿ', 'ಕ್ಯಾಪ್ಟನ್ ಅಮೆರಿಕ', 'ವಾಂಡಾ ವಿಷನ್' ವೆಬ್ ಸರಣಿಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆ ಆಗಿದ್ದವು. ಹಾಗಾಗಿ 'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾ ಸಹ ಇದೇ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ನಿರೀಕ್ಷೆ ಹುಸಿಯಾಗಿದೆ. ಸಿನಿಮಾವು ಕನಿಷ್ಟ ಇನ್ನೆರಡು ತಿಂಗಳು ಒಟಿಟಿಗೆ ಬರುವುದಿಲ್ಲ.

  'ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ಸಿನಿಮಾವನ್ನು ಜಾನ್ ವ್ಯಾಟ್ಸ್ ನಿರ್ದೇಶನ ಮಾಡಿದ್ದಾರೆ. ಈ ವರೆಗೆ ಬಿಡುಗಡೆ ಆಗಿರುವ ಎಲ್ಲ ಸ್ಪೈಡರ್‌ಮ್ಯಾನ್ ಸಿನಿಮಾಗಳ ವಿಲನ್‌ಗಳು, ಹೀರೋಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬುದು ವಿಶೇಷ. ಸಿನಿಮಾದಲ್ಲಿ ಡಾಕ್ಟರ್ ಸ್ಟ್ರೇಂಜ್ ಪಾತ್ರ ಸಹ ಇದೆ.

  English summary
  Spider Man No way home movie will not releasing in OTT at least for next two months. Movie is running successfully in theater world wide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X