»   » ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀದೇವಿಗೆ ಶ್ರದ್ಧಾಂಜಲಿ

ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀದೇವಿಗೆ ಶ್ರದ್ಧಾಂಜಲಿ

Posted By:
Subscribe to Filmibeat Kannada

ಕೆಲ ದಿನಗಳ ಹಿಂದೆಯಷ್ಟೆ ನಿಧನರಾದ ಬಾಲಿವುಡ್ ಚಿತ್ರರಂಗದ ಧ್ರುವತಾರೆ ಶ್ರೀದೇವಿ ಅವರಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅಮೇರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ 2018 ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ.

ಆಸ್ಕರ್ ಕಾರ್ಯಕ್ರಮದಲ್ಲಿ ವಿಶ್ವ ಸಿನಿಮಾರಂಗಕ್ಕೆ ವಿಶೇಷ ಕೊಡುಗೆ ನೀಡಿ ಮರೆಯಾದ ತಾರೆಯರನ್ನು ನೆನೆಯಲಾಯಿತು. ಈ ಪೈಕಿ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಷ್ಟು ವರ್ಷ ಭಾರತೀಯ ಸಿನಿಮಾಗಳ ಮೂಲಕ ವಿಶ್ವದೆಲ್ಲೆಡೆ ಹೆಸರು ಮಾಡಿದ್ದ ಈ ಇಬ್ಬರ ಸಾಧನೆಗೆ ಗೌರವ ಸೂಚಿಸಲಾಯಿತು. 'ಜೇಮ್ಸ್ ಬಾಂಡ್' ಖ್ಯಾತಿಯ ನಟ ರೋಜರ್ ಮೂರ್ ಸೇರಿದಂತೆ ಹಾಲಿವುಡ್ ಚಿತ್ರರಂಗ ತಾರೆಯರ ಕೆಲಸವನ್ನು ಸಹ ಈ ವೇಳೆ ನೆನೆಯಲಾಯಿತು.

Sridevi and Shashi Kapoor honoured at the 90th Oscar award ceremony

ಆಸ್ಕರ್ ಪ್ರಶಸ್ತಿ ಗೆದ್ದು ತಮ್ಮ ತಾಯಿಗೆ ಧನ್ಯವಾದ ಹೇಳಿದ ನಟ ಗ್ಯಾರಿ ಓಲ್ಡ್ ಮ್ಯಾನ್

ಅಂದಹಾಗೆ, 90ನೇ ಆಸ್ಕರ್ ಪ್ರಶಸ್ತಿ ಈಗ ಪ್ರಕಟವಾಗಿದ್ದು, 13 ಸಿನಿಮಾಗಳು ನಾಮಿನೇಟ್ ಆಗಿತ್ತು. ಈ ಪೈಕಿ 'ಶೇಪ್ ಆಫ್ ವಾಟರ್' ಸಿನಿಮಾ ಈ ಬಾರಿಯ ಅತ್ಯುತ್ತಮ ಸಿನಿಮಾವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಗ್ಯಾರಿ ಓಲ್ಡ್ ಮ್ಯಾನ್, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಫ್ರಾನ್ಸಿಸ್ ಎಂಸಿದೋರ್ಮ್ಯಾಂಡ್ ಪಡೆದಿದ್ದಾರೆ. ಉಳಿದಂತೆ ಆಲಿಸನ್ ಜನ್ನಿ ಮತ್ತು ಸ್ಯಾಮ್ ರಾಕ್ವೆಲ್ ಪೋಷಕ ನಟ, ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

English summary
Bollywood actress Sridevi and Actor Shashi Kapoor honoured at the 90th Oscar award ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada