For Quick Alerts
  ALLOW NOTIFICATIONS  
  For Daily Alerts

  ದೇವರನ್ನು ಭೇಟಿಯಾದ ರಾಜಮೌಳಿ, ಫೋಟೊ ಕೂಡ ತೆಗೆಸಿಕೊಂಡಿದ್ದಾರೆ!

  By ಫಿಲ್ಮಿಬೀಟ್ ಡೆಸ್ಕ್
  |

  'RRR' ಸಿನಿಮಾ ಮೂಲಕ ವಿಶ್ವಖ್ಯಾತಿಯಲ್ಲಿ ಗಳಿಸಿರುವ ರಾಜಮೌಳಿ, ಸಿನಿಮಾ ಬಿಡುಗಡೆ ಬಳಿಕ ಭಾರತಕ್ಕಿಂತಲೂ ವಿದೇಶಗಳಲ್ಲಿಯೇ ಹೆಚ್ಚು ಓಡಾಡುತ್ತಿದ್ದಾರೆ. ಹೀಗೆ ಓಡಾಡುತ್ತಾ-ಓಡಾಡುತ್ತಾ ದೇವರನ್ನೇ ಭೇಟಿಯಾಗಿ ಬಿಟ್ಟಿದ್ದಾರೆ ರಾಜಮೌಳಿ!

  ತಾವು ದೇವರನ್ನು ಭೇಟಿಯಾಗಿದ್ದಾಗಿ ಬಗ್ಗೆ ಸ್ವತಃ ರಾಜಮೌಳಿಯೇ ಹೇಳಿಕೊಂಡಿದ್ದಾರೆ. ತಮ್ಮ ದೇವರನ್ನು ಭೇಟಿಯಾದಾಗ ತೆಗೆಸಿಕೊಂಡು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸಹ.

  ಅಂದಹಾಗೆ ರಾಜಮೌಳಿ ಭೇಟಿಯಾಗಿರುವ 'ದೇವರು' ವಿಶ್ವವಿಖ್ಯಾತ ನಿರ್ದೇಶಕ ಸ್ಟಿವನ್ ಸ್ಪೀಲ್‌ಬರ್ಗ್. ತಾವು ಸ್ಪೀಲ್ ಬರ್ಗ್ ಅವರನ್ನು ಭೇಟಿಯಾಗಿರುವ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಜಮೌಳಿ, 'ನಾನು ದೇವರನ್ನು ಭೇಟಿಯಾದೆ' ಎಂದು ಬರೆದುಕೊಂಡಿದ್ದಾರೆ. ಸ್ಪೀಲ್‌ಬರ್ಗ್ ಅನ್ನು ಕಂಡೊಡನೆ ಆಶ್ಚರ್ಯಚಕಿತರಾಗಿಬಿಟ್ಟಿದ್ದಾರೆ ರಾಜಮೌಳಿ. ಆ ನಂತರ ತಾವು ಹಾಗೂ ಕೀರವಾಣಿ ಒಟ್ಟಿಗೆ ಸ್ಪೀಲ್‌ಬರ್ಗ್‌ ಜೊತೆಗೆ ಅಭಿಮಾನಿಯಂತೆ ಫೋಟೊ ತೆಗೆಸಿಕೊಂಡಿದ್ದಾರೆ.

  ಸ್ಟಿವನ್ ಸ್ಪೀಲ್‌ಬರ್ಗ್‌ ಜಗತ್ತಿನ ಅತ್ಯುತ್ತಮ ಸಿನಿಮಾ ನಿರ್ದೇಶಕರ ಪಟ್ಟಿಯಲ್ಲಿ ಮೊದಲಿಗರು. 'ಜಾಸ್', 'ಇಟಿ', 'ಶಿಂಡರ್ಸ್ ಲಿಸ್ಟ್', 'ಕ್ಯಾಚ್‌ ಮಿ ಇಫ್‌ ಯು ಕ್ಯಾನ್', 'ಸೇವಿಂಗ್ ಪ್ರೈವೇಟ್ ರಿಯಾನ್', 'ಜುರಾಸಿಕ್ ಪಾರ್ಕ್', 'ದಿ ಟರ್ಮಿನಲ್', 'ಲಿಂಕನ್', 'ವೆಸ್ಟ್ ಸೈಡ್ ಸ್ಟೋರಿ' ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಸ್ಪೀಲ್‌ಬರ್ಗ್ ನಿರ್ದೇಶನ ಮಾಡಿದ್ದಾರೆ.

  ಮೂರು ಆಸ್ಕರ್ ಗೆದ್ದಿರುವ ಸ್ಟಿವನ್ ಸ್ಪೀಲ್‌ಬರ್ಗ್‌ ಬಾಫ್ತಾ, ಗೋಲ್ಡನ್ ಗ್ಲೋಬ್ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಕಮಲ್ ಹಾಸನ್ ಸಹ ಸ್ಟಿವನ್ ಅನ್ನು ಭೇಟಿಯಾಗಿದ್ದರು. ಕಮಲ್ ಹಾಸನ್‌ರ 'ವಿರುಮಾಂಡಿ' ಸಿನಿಮಾವನ್ನು ಸ್ಪೀಲ್‌ಬರ್ಗ್ ಹೊಗಳಿದ್ದರು.

  'RRR' ಸಿನಿಮಾದ ಬಳಿಕ ರಾಜಮೌಳಿ ಹಾಲಿವುಡ್‌ ಮಾತ್ರವೇ ಅಲ್ಲದೆ ಇನ್ನೂ ಹಲವು ವಿದೇಶಿ ಚಿತ್ರರಂಗಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಹಾಲಿವುಡ್‌ನ ಹಲವು ಖ್ಯಾತ ಸಿನಿಮಾ ನಿರ್ದೇಶಕರು ರಾಜಮೌಳಿಯನ್ನು ಹಾಡಿ ಹೊಗಳುತ್ತಿದ್ದಾರೆ. ವಿಶ್ವವಿಖ್ಯಾತ ನಿರ್ಮಾಣ ಸಂಸ್ಥೆಯಾದ ಮಾರ್ವೆಲ್ ಸಹ ರಾಜಮೌಳಿ ಜೊತೆ ಕೆಲಸ ಮಾಡಲು ಉತ್ಸುಕವಾಗಿದೆ ಎನ್ನಲಾಗುತ್ತಿದೆ.

  'RRR' ಸಿನಿಮಾದ 'ನಾಟು-ನಾಟು' ಹಾಡಿಗೆ ಇತ್ತೀಚೆಗಷ್ಟೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ದೊರಕಿದೆ. ಆಸ್ಕರ್‌ಗೂ ನಾಮಿನೇಟ್ ಆಗುವ ಹಂತದಲ್ಲಿ RRR ಇದ್ದು, ಒಂದೆರಡಾದರೂ ಆಸ್ಕರ್ ಗೆಲ್ಲುವ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.

  English summary
  SS Rajamouli met great Hollywood director Steven Spielberg and said I met god. He admires Steven Spielberg.
  Saturday, January 14, 2023, 19:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X