ಖ್ಯಾತ ಹಾಲಿವುಡ್ ನಟ ಕೊರೊನಾ ವೈರಸ್ ಗೆ ಬಲಿ
ಖ್ಯಾತ ಹಾಲಿವುಡ್ ನಟ ಆಂಡ್ರ್ಯು ಜಾಕ್ಸ್ ಕೊರೊನಾ ವೈರಸ್ ಗೆ ತುತ್ತಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
Recommended Video
ಪೂಜಾ ಹೆಗ್ಡೆ ತುಳು ಭಾಷೆಯಲ್ಲಿ ಕೊರೊನ ಬಗ್ಗೆ ಹೇಳಿದ್ದೇನು | Pooja Hegde | Filmibeat Kannada
ವಿಶ್ವದಾದ್ಯಂತ ಖ್ಯಾತವಾಗಿರುವ ಸ್ಟಾರ್ ವಾರ್ಸ್ ಸಿನಿಮಾದಲ್ಲಿನ ನಟನೆಯಿಂದ ಖ್ಯಾತರಾಗಿದ್ದ ಆಂಡ್ರ್ಯು ಜಾಕ್ಸ್ ಇಂಗ್ಲೆಂಡ್ ನ ಚೆರ್ಟ್ಸಿ ಎಂಬಲ್ಲಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಆಂಡ್ರ್ಯು ಜಾಕ್ಸ್ ಅವರು ಕೊರೊನಾ ವೈರಸ್ ಗೆ ತುತ್ತಾಗಿದ್ದಿದ್ದು ಹಾಗೂ ಕೊರೊನಾ ದಿಂದಲೇ ಮೃತಪಟ್ಟಿರುವುದನ್ನು ಅವರ ಮ್ಯಾನೇಜರ್ ಜಿಲ್ ಮ್ಯಾಕ್‌ಲಾಫ್ ಅಧಿಕೃತಗೊಳಿಸಿದ್ದಾರೆ.

ಸ್ಟಾರ್ ವಾರ್ಸ್; ಎಪಿಸೋಡ್ 7 ಮತ್ತು ಸ್ಟಾರ್ ವಾರ್ಸ್; ಎಪಿಸೋಡ್ 8 ಗಳಲ್ಲಿ ನಟಿಸಿದ್ದ ಇವರು, 1982 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ದಿ ಬ್ಯಾಟ್ ಮನ್ ಸಿನಿಮಾದಲ್ಲಿಯೂ ಸಹ ಅವರು ನಟಿಸಿದ್ದರು.
ಆಂಡ್ರ್ಯು ಜಾಕ್ಸ್ ಅಗಲಿಕೆಯ ಬಗ್ಗೆ ಹಲವು ಖ್ಯಾತನಾಮರು ಟ್ವಿಟ್ಟರ್, ಇನ್‌ಸ್ಟಾಗ್ರಾಂ ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಹಲವರು ಕಂಬನಿ ಮಿಡಿದಿದ್ದಾರೆ.
More from Filmibeat
English summary
Star wars actor Andrew Jack died on Tuesday due to coronavirus in England's Chertsey hospital.


Click it and Unblock the Notifications











