»   » 24ನೇ ಜೇಮ್ಸ್ ಬಾಂಡ್ ಚಿತ್ರದ ಹೆಸರು SPECTRE

24ನೇ ಜೇಮ್ಸ್ ಬಾಂಡ್ ಚಿತ್ರದ ಹೆಸರು SPECTRE

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜೇಮ್ಸ್ ಬಾಂಡ್ ಸರಣಿಯ 24ನೇ ಚಿತ್ರದ ಹೆಸರು, ಪಾತ್ರವರ್ಗ, ಏಜೆಂಟ್ 007 ಬಳಸುವ ಕಾರು ಲಂಡನ್ನಿನಲ್ಲಿ ಗುರುವಾರ ಸಂಜೆ ಅನಾವರಣಗೊಳಿಸಲಾಯಿತು. ಲಂಡನ್ನಿನ ಪೈನ್ ವುಡ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಬಾಂಡ್ ಚಿತ್ರದ ಪರಿಚಯ ಮಾಡಿಕೊಡಲಾಯಿತು.

ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೋಲಾಸ್ ಹಾಗೂ ಸ್ಕೈ ಫಾಲ್ ಚಿತ್ರದಲ್ಲಿ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟ ಡೇನಿಯಲ್ ಕ್ರೇಗ್ ಬಾಂಡ್ ಈಗ ಮತ್ತೊಮ್ಮೆ ಸೂಪರ್ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅತ್ಯಂತ ಶ್ರೀಮಂತ ಸೂಪರ್ ಸ್ಪೈ ಮತ್ತೊಮ್ಮೆ ಲೈಸನ್ ಟು ಕಿಲ್ ಆದೇಶ ಪಡೆದುಕೊಂಡಿದ್ದಾರೆ. 2012ರಲ್ಲಿ ಕ್ರೇಗ್ ನಾಯಕತ್ವದಲ್ಲಿ ಸ್ಕೈಫಾಲ್ ಚಿತ್ರ ನಿರ್ದೇಶಿಸಿದ್ದ ಸ್ಯಾಮ್ ಮೆಂಡಸ್ ಮತ್ತೊಮ್ಮೆ 24ನೇ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಮತ್ತೆ ಸೂಪರ್ ಏಜೆಂಟ್ ಜೇಮ್ಸ್ ಬಾಂಡ್]

24ನೇ ಚಿತ್ರ ಪೈನ್ ವುಡ್ ಸ್ಟುಡಿಯೋ ಲಂಡನ್, ಮೆಕ್ಸಿಕೋ, ರೋಮ್, ಮೊರಾಕ್ಕೋ, ಸೊಲ್ಡನ್, ಒಬೆರ್ಟಿಲಿಯಾಕ್, ಲೇಕ್ ಅಲ್ಟಾಸಿ, ಆಸ್ಟ್ರೀಯಾ ಮುಂತಾದೆಡೆ ಚಿತ್ರೀಕರಣವಾಗಲಿದೆ. 2014ರ ಡಿಸೆಂಬರ್ 6ಕ್ಕೆ 24ನೇ ಚಿತ್ರದ ಶೂಟಿಂಗ್ ಲಂಡನ್ನಿನ ಪೈನ್ ವುಡ್ ಸ್ಟುಡಿಯೋಸ್ ನಲ್ಲಿ ಆರಂಭವಾಗಲಿದೆ. 2015ರ ನವೆಂಬರ್ 6ಕ್ಕೆ ಚಿತ್ರ ತೆರೆ ಕಾಣಲಿದೆ. [ಬಿಕಿನಿಯಲ್ಲಿ ಮಾಜಿ ಬಾಂಡ್ ಗರ್ಲ್ ]

ಸ್ಕೈಫಾಲ್ ಗೆ ಚಿತ್ರಕಥೆ ಒದಗಿಸಿದ ಜಾನ್ ಲೊಗಾನ್, ನೀಯಲ್ ಪುರ್ವಿಸ್ ಹಾಗೂ ರಾಬರ್ಟ್ ವೇಡ್ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ರಾಲ್ಫ್ ಫಿನ್ನೆಸ್ 'M' ಪಾತ್ರದಲ್ಲಿ ನಯೋಮಿ ಹ್ಯಾರಿಸ್ 'eve moneypenny' ಪಾತ್ರದಲ್ಲಿ ಬೆನ್ ವಿಶ್ ಶಾ 'Q' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಕ್ಕ ವಿವರಗಳಿಗೆ ಮುಂದೆ ನೋಡಿ

ಕ್ರೇಗ್ ಗೆ ಮತ್ತೆ  ಲೈಸನ್ ಟು ಕಿಲ್ ಆದೇಶ
  

ಕ್ರೇಗ್ ಗೆ ಮತ್ತೆ ಲೈಸನ್ ಟು ಕಿಲ್ ಆದೇಶ

ಬಾಂಡ್ ಪಾತ್ರಗಳ ಮೂಲಕ ಸುಮಾರು 31 ಮಿಲಿಯನ್ ಪೌಂಡ್ ದುಡ್ಡು ಸಲೀಸಾಗಿ ಜೇಬಿಗಿಳಿಸಿಕೊಂಡಿದ್ದ ಕ್ರೇಗ್ ಇನ್ಮುಂದೆ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಅದರೆ, ಅತ್ಯಂತ ಶ್ರೀಮಂತ ಸೂಪರ್ ಸ್ಪೈ ಮತ್ತೊಮ್ಮೆ ಲೈಸನ್ ಟು ಕಿಲ್ ಆದೇಶ ಪಡೆದುಕೊಂಡಿದ್ದಾರೆ.

ಇಟಾಲಿಯನ್ ತಾರೆ ಮೋನಿಕಾ

ಮ್ಯಾಟ್ರಿಕ್ಸ್ ಸರಣಿಯಲ್ಲಿ ನಟಿಸಿದ್ದ ಇಟಾಲಿಯನ್ ತಾರೆ ಮೋನಿಕಾ ಅವರು ಲೂಸಿಯಾ ಸ್ಕಿಯಾರಾ ಪಾತ್ರ ನಿರ್ವಹಿಸುತ್ತಿದ್ದಾರೆ.

ಬಾಂಡ್ ಚಿತ್ರದಲ್ಲಿ ರಸ್ಲಿಂಗ್ ಹೀರೋ

ಬಾಂಡ್ ಚಿತ್ರದಲ್ಲಿ WWE ರೆಸ್ಲಿಂಗ್ ಹೀರೋ ಡೇವಿಡ್ ಬಟಿಸ್ಟಾ ಮಿ. ಹಿಂಕ್ಸ್ ಪಾತ್ರದಲ್ಲಿ

ಬಾಂಡ್ ಚಿತ್ರದಲ್ಲಿ ಕ್ರಿಸ್ಟೋಫ್ ವಾಲ್ಟ್ಜ್

Oberhauser ಪಾತ್ರ ಬಾಂಡ್ ಚಿತ್ರದಲ್ಲಿ ಕ್ರಿಸ್ಟೋಫ್ ವಾಲ್ಟ್ಜ್

ಮೆಡಲಿನ್ ಸ್ವಾನ್ ಪಾತ್ರಧಾರಿ ಯಾರು?

ಲಿಯಾ ಸಿಡಾಕ್ಸ್ ಅವರು ಮೆಡಲಿನ್ ಸ್ವಾನ್ ಪಾತ್ರಧಾರಿಯಾಗಿದ್ದಾರೆ.

ಬಾಂಡ್ 24 ಘೋಷಣೆ ಲೈವ್

ಲಂಡನ್ನಿನ ಪೈನ್ ವುಡ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಬಾಂಡ್ ಚಿತ್ರದ ಪರಿಚಯ ಮಾಡಿಕೊಡಲಾಯಿತು.

English summary
The title and cast of the 24th "James Bond" movie announced today(Dec.4) at Pinewood Studios in London. Movie is titled as SPECTRE and returning as 007 is Daniel Craig.The release date is November 6th next year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada