For Quick Alerts
  ALLOW NOTIFICATIONS  
  For Daily Alerts

  ಲಕ್ಷಾಂತರ ಡಾಲರ್ ಗೆ ಮರ್ಲಿನ್ ಮನ್ರೋ ಬ್ರಾ ಹರಾಜು

  By Rajendra
  |

  ತನ್ನ ಮರಣಾನಂತರವೂ ಅಭಿಮಾನಿಗಳ ಹೃದಯದಲ್ಲಿ ಭದ್ರ ಸ್ಥಾನ ಸಂಪಾದಿಸಿದ ವಿಶ್ವವಿಖ್ಯಾತ ಸೆಕ್ಸಿ ತಾರೆ ಮರ್ಲಿನ್ ಮನ್ರೋ. ಹಾಲಿವುಡ್ ನಲ್ಲಿ ಮರ್ಲಿನ್ ಅವರು ಸೃಷ್ಟಿಸಿದಷ್ಟು ಸಂಚಲನ ಇನ್ಯಾವ ತಾರಾಮಣಿ ಕೈಯಲ್ಲೂ ಸಾಧ್ಯವಾಗಲಿಲ್ಲ. ಕೇವಲ ಅಮೆರಿಕಾದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಆಕೆಯ ಹೆಸರು ಕೇಳಿದರೆ ಹುಚ್ಚೆದ್ದು ಕುಣಿಯವ ಅಭಿಮಾನಿಗಳಿದ್ದಾರೆ.

  ಹತ್ತು ವರ್ಷಗಳಲ್ಲಿ ಅಭಿನಯಿಸಿದ್ದು ಕೇವಲ ಹನ್ನೊಂದು ಸಿನಿಮಾಗಳಲ್ಲಿ ಮಾತ್ರ. ಆದರೆ ಬೆಳ್ಳಿತೆರೆಯ ಮೇಲೆ ಅಳಿಸಲಾಗದ ಮುದ್ರೆ ಒತ್ತಿದರು. ನ್ಯೂಯಾರ್ಕ್ ಪತ್ರಿಕೆಗಳಲ್ಲಿ ಆ ದಿನಗಳಲ್ಲಿ ಆಕೆಯ ಫೋಟೋ, ಗಾಸಿಪ್, ಲೇಖನ, ವರದಿ ಇಲ್ಲದ ದಿನಗಲೇ ಇರುತ್ತಿರಲಿಲ್ಲ.

  ತನ್ನ 36ನೇ ವರ್ಷದಲ್ಲಿ ಮರ್ಲಿನ್ ಮನ್ರೋ ಹೆಚ್ಚಿನ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಚಿರನಿದ್ರೆಗೆ ಜಾರಿದರು (ಆಗಸ್ಟ್ 6, 1962). ಅದು ಹತ್ಯೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಈಗಲೂ ಗೊಂದಲ ಇದೆ.

  ಮರ್ಲಿನ್ ಮನ್ರೋ ಸಾವಿನ ವಾರ್ತೆ ಕೇಳಿ ಜಗತ್ತಿನಾದ್ಯಂತ ಆಕೆಯ 24 ಮಂದಿ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾದರು. ಈಗಲೂ ಅವರು ಬಳಸಿದ ವಸ್ತ್ರಗಳು, ವಸ್ತುಗಳನ್ನು ಹರಾಜು ಹಾಕಿದರೆ ಲಕ್ಷಾಂತರ ಡಾಲರ್ ಕೊಟ್ಟು ಶ್ರೀಮಂತರು ಖರೀದಿಸುತ್ತಿದ್ದಾರೆ.

  The Memorabilia of Marilyn Monroe fetched big money2

  ಮರ್ಲಿನ್ ಮನ್ರೋಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಇತ್ತೀಚೆಗೆ ಹರಾಜು ಹಾಕಲಾಯಿತು. ಅವರಿಗೆ ಸಂಬಂಧಿಸಿದ ಲವ್ ಲೆಟರ್, ಅವರು ಬಳಸಿದ್ದ ಬ್ರಾ, ಕೋಟು ಇನ್ನಷ್ಟು ವಸ್ತುಗಳನ್ನು ಹರಾಜು ಹಾಕಲಾಯಿತು. ಮರ್ಲಿನ್ ಧರಿಸಿದ್ದ ಸಿಲ್ಕ್ ಓವರ್ ಕೋಟ್ 1,75,00 ಡಾಲರ್ ಗೆ ಮಾರಾಟವಾಗಿದೆ.

  ಅವರು ಧರಿಸಿದ್ದ ಬ್ಲ್ಯಾಕ್ ಕಾಕ್ ಟೈಯಿಲ್ ಡ್ರೆಸ್, ಒಪೆರಾ ಕೋಟ್ 93,750 ಡಾಲರ್ ಗೆ ಮಾರಾಟವಾಗಿದೆ. ಅದರಲ್ಲೂ ಶ್ವೇತ ವರ್ಣದ ಬ್ರಾ 20,000 ಡಾಲರ್ ಗೆ ಹರಾಜಾಗಿದೆ. ಸಣ್ಣ ಲಿಪ್ ಬ್ರಷ್ 10,000 ಡಾಲರ್, ಮೇಕಪ್ ಕಾಂಪಾಕ್ಟ್ 46,875 ಡಾಲರ್ ಗೆ ಹರಾಜಾದ ಇತರೆ ವಸ್ತುಗಳು. (ಏಜೆನ್ಸೀಸ್)

  English summary
  The memorabilia of Marilyn Monroe fetched big money at an auction held by Julien's Auctions in Beverly Hills. The Hollywood's icon's personal belongings were auctioned over the weekend in thousands.
  Monday, December 8, 2014, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X