»   » ಕೊನೆಗೂ XXX ಟ್ರೈಲರ್ ಹಂಚಿಕೊಂಡ ದೀಪಿಕಾ ಪಡುಕೋಣೆ

ಕೊನೆಗೂ XXX ಟ್ರೈಲರ್ ಹಂಚಿಕೊಂಡ ದೀಪಿಕಾ ಪಡುಕೋಣೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ಅಂಗಳಕ್ಕೆ ಮೊದಲ ಬಾರಿಗೆ ಎಂಟ್ರಿಕೊಟ್ಟಿರುವ ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಕೊನೆಗೂ ತಮ್ಮ '‍X‍X‍X' ಚಿತ್ರದ ಟ್ರೈಲರ್ ಅನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

XXX ಸರಣಿಯ The Return of Xander Cage ಚಿತ್ರದ ಬಿಡುಗಡೆ ಜನವರಿ 20, 2017 ರಂದು ಎಂದು ಘೋಷಣೆಯಾಗಿದೆ. ಅಲ್ಲಿ ತನಕ ಚಿತ್ರದ ಪೋಸ್ಟರ್, ಟ್ರೈಲರ್, ಟೀಸರ್, ವರ್ಕಿಂಗ್ ಸ್ಟಿಲ್ಸ್ ಗಳನ್ನು ನೋಡುತ್ತಾ ಕಣ್ತಣಿಸಿಕೊಳ್ಳಿ.[ರಿಲೀಸ್ ಆಯ್ತು ಡಿಪ್ಪಿಯ ಹಾಲಿವುಡ್ 'XXX' ಲೋಗೋ]

ದೀಪಿಕಾಗೇನು ಕೆಲಸ: ಈ ಟೀಸರ್ ನಲ್ಲಿ ಕಣ್ರೆಪ್ಪೆ ಆಡಿಸುವಷ್ಟರಲ್ಲಿ ಬಂದು ಹೋಗುವ ಕೆಂದುಟಿ ಚೆಲುವೆ ದೀಪಿಕಾ ಅವರು ಸೆರೆನಾ ಅಂಗರ್ ಪಾತ್ರದಲ್ಲಿ ಗನ್, ಚಾಕು ಹಿಡಿದು ಹೋರಾಟ ಮಾಡಲಿದ್ದಾರೆ. ದೀಪಿಕಾ ಅವರ ಪಾತ್ರದ ಬಗ್ಗೆ ಹೆಚ್ಚಿನ ವಿಷಯ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸದ್ಯಕ್ಕೆ ಟ್ರೈಲರ್ ರಿಲೀಸ್ ಆದ ಎರಡು ದಿನ ಬಳಿಕ ದೀಪಿಕಾ ಟ್ರೈಲರ್ ಹಂಚಿಕೊಂಡಿದ್ದಾರೆ. ಟ್ರೈಲರ್ ನೋಡಿ ಸೂಪರ್ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ]

ಚಿತ್ರದ ಟ್ರೈಲರ್ ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿದೆ. ಅರೇಬಿಕ್, ಫ್ರೆಂಚ್, ಐಸ್ ಲ್ಯಾಂಡ್, ಸ್ಲೋವೇನಿಯಾ,ಸೆರ್ಬಿಯಾ, ಉಕ್ರೇನ್, ಕ್ರೋವೇಶಿಯಾ, ನೆದರ್ಲೆಂಡ್ಸ್, ಇಸ್ರೇಲ್, ಬಲ್ಗೇರಿಯಾ, ಡೆನ್ಮಾರ್ಕ್ ಹೀಗೆ ಬೇರೆ ಬೇರೆ ದೇಶಗಳಿಗೆ ತಕ್ಕಂತೆ ಸಬ್ ಟೈಟಲ್ ನೊಂದಿಗೆ ಟೀಸರ್ ಬಿಡುಗಡೆ ಮಾಡಲಾಗಿದೆ.['xXx' ಚಿತ್ರಕ್ಕಾಗಿ ರಿಯಲ್ ಗನ್ ಶೂಟ್ ಕಲಿತ ದೀಪಿಕಾ ಪಡುಕೋಣೆ]

ಕ್ಸಾಂಡರ್ ಕೇಜ್ ಆಗಿ ವಿನ್ ಡೀಸೆಲ್

ಕ್ಸಾಂಡರ್ ಕೇಜ್ ಆಗಿ ವಿನ್ ಡೀಸೆಲ್ ನಟಿಸಿದರೆ, ಸ್ಯಾಮುಯಲ್ ಎಲ್ ಜಾಕ್ಸನ್ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ಐಪಿ ಮ್ಯಾನ್ ಖ್ಯಾತಿಯ ಚೀನಿ ನಟ ಡೊನ್ನಿ ಯೆನ್, ಆಕ್ಷನ್ ಸ್ಟಾರ್ ಟೋನಿ ಜಾ, ಬ್ರೆಜಿಲ್ಲಿನ ಸ್ಟಾರ್ ಫುಟ್ಬಾಲರ್ ನೇಮಾರ್ ಕೂಡಾ ಚಿತ್ರದಲ್ಲಿದ್ದಾರೆ.

ಸಾಹಸಭರಿತ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ

ದೀಪಿಕಾ ಪಡುಕೋಣೆ, ಅರಿಯಾಡ್ನಾ ಘುಟಿರೇಜ್, ನೀನಾ ಡೊಬ್ರೆವ್, ರೂಬಿ ರೋಸ್, ಡೊನಿ ಯೆನ್ , ಟೋನಿ ಕೊಲೆಟ್ ಮುಂತಾದವರು ಇತರೆ ಪಾತ್ರವರ್ಗದಲ್ಲಿದ್ದಾರೆ. ಡಿಎಜೆ ಕರುಸೋ ನಿರ್ದೇಶನದ ಈ ಸಾಹಸಭರಿತ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದು ಹೀಗೆ

ದೀಪಿಕಾ ಪಡುಕೋಣೆ ಅವರು ಟ್ರೈಲರ್ ಹಂಚಿಕೊಂಡಿದ್ದು, ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ದೀಪಿಕಾ ಪಡುಕೋಣೆ ಬಗ್ಗೆ ಟೀಸರ್

ಪ್ರತಿಯೊಂದು ಪಾತ್ರಕ್ಕೆ ಪ್ರತ್ಯೇಕ ಟೀಸರ್ ಬಿಡುಗಡೆ ಮಾಡಲಾಗಿದೆ. ದೀಪಿಕಾ ಪಡುಕೋಣೆ ಬಗ್ಗೆ ಟೀಸರ್ ಇಲ್ಲಿದೆ

ಚಿತ್ರದ ಟ್ರೈಲರ್

ಪ್ಯಾರಮೌಂಟ್ ಪಿಕ್ಚರ್ಸ್ ಇಂಟರ್ ನ್ಯಾಷನಲ್ ಹೊರತಂದಿರುವ XXX ಚಿತ್ರದ ಟ್ರೈಲರ್ ಇಲ್ಲಿದೆ 2,52,878 ಬಾರಿ ವೀಕ್ಷಣೆಯಾಗಿದೆ.

English summary
Deepika Padukone shares 'XXX: The Return of Xander Cage' Trailer The much-awaited trailer features Xander Cage (Vin Diesel) essaying the role of a soldier. Samuel L Jackson, who plays Xander’s handler NSA Agent Augustus Gibbons. Movie Directed by DJ Caruso. This movie makes Hollywood debut of Deepika.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada