For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ನಿಯಮ ಉಲ್ಲಂಘನೆ; 'ಮಿಷನ್:ಇಂಪಾಸಿಬಲ್7' ಸಿನಿಮಾ ಸಿಬ್ಬಂದಿ ವಿರುದ್ಧ ಟಾಮ್ ಕ್ರೂಸ್ ಗರಂ

  |

  ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಚಿತ್ರರಂಗ ಸಹ ಸಂಕಷ್ಟದಲ್ಲಿದೆ. ಅನೇಕ ತಿಂಗಳಿಂದ ಬಂದ್ ಆಗಿದ್ದ ಸಿನಿಮಾರಂಗ ಓಪನ್ ಆಗಿ ಕೆಲವು ದಿನಗಳಾಗಿದೆ ಅಷ್ಟೆ. ನಿಧಾನವಾಗಿ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾ ಕೆಲಸಗಳು ಪ್ರಾರಂಭವಾಗಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

  ಆದರೆ ಚಿತ್ರೀಕರಣ ಸಮಯದಲ್ಲಿ ಕೊರೊನಾ ನಿಯಮ ಅನುಸರಿಸ ಸಿಬ್ಬಂದಿ ವಿರುದ್ಧ ಹಾಲಿವುಡ್ ನ ಖ್ಯಾತ ನಟ ಟಾಮ್ ಕ್ರೂಸ್ ಗರಂ ಆಗಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಸಿಬ್ಬಂದಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಹಿನ್ನಲ್ಲೇ ಟಾಮ್ ಕ್ರೂಸ್ ಸೆಟ್ ನಲ್ಲೇ ಕೂಗಾಡಿದ್ದಾರೆ. ಟಾಮ್ ಕ್ರೂಸ್ ಸಿಬ್ಬಂದಿಗೆ ಬೈಯುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಗ್ಲೋಬಲ್ ಸ್ಟಾರ್ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್

  ಟಾಮ್ ಕ್ರೂಸ್ ಸದ್ಯ ಮಿಷನ್ ಇಂಪಾಸಿಬಲ್ 7 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ವೇಳೆ ಇಬ್ಬರು ಸಿಬ್ಬಂದಿ ಅಂತರ ಕಾಯ್ದುಕೊಳ್ಳದೆ ಸಮೀಪ ನಿಂತಿದ್ದನ್ನು ನೋಡಿದ ಕ್ರೂಸ್, ಸಿಬ್ಬಂದಿಗಳ ವಿರುದ್ಧ ಗರಂ ಆಗಿದ್ದಾರೆ. ಇಬ್ಬರನ್ನು ಮತ್ತೆ ಹೀಗೆ ನೋಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

  ಟಾಮ್ ಕ್ರೂಸ್ ಕೋಪಗೊಂಡು ಕೂಗಾಡಿದನ್ನು ನೋಡಿ ಸಿನಿಮಾ ಸಿಬ್ಬಂದಿ ಅಚ್ಚರಿ ಪಟ್ಟಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲೂ ಎಲ್ಲಾ ಕ್ರಮಗಳನ್ನು ಕೈಗೊಂಡು, ಚಿತ್ರೀಕರಣ ಪ್ರಾರಂಭ ಮಾಡಿದ ಪ್ರಯತ್ನ ವಿಫಲವಾಗುತ್ತಿದೆ ಎಂದು ಹೇಳಿದ್ದಾರೆ. ಮುನ್ನೆಚ್ಚರಿಕೆಯಿಂದ ಚಿತ್ರೀಕರಣ ಮಾಡುತ್ತೇವೆ ಎಂದು ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ, ನಮ್ಮಿಂದ ಸಾವಿರಾರು ಉದ್ಯೋಗಿಗಳಿಗೆ ಸಹಾಯವಾಗಿದೆ. ಆದರೆ ನೀವು ಅದನ್ನು ಹಾಳುಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

  ಮಿಷನ್: ಇಂಪಾಸಿಬಲ್ 7 ಸಿನಿಮಾ ಕೊರೊನಾ ಕಾರಣದಿಂದ ಚಿತ್ರೀಕರಣ ವಿಳಂಬವಾಗಿದೆ. ಮುನ್ನೆಚ್ಚರಿಕೆಯ ಕ್ರಮಗಳ ನಡುವೆಯೂ ಇತ್ತೀಚಿಗೆ ಚಿತ್ರದ12 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಮತ್ತೆ ಚಿತ್ರೀಕರಣ ನಿಲ್ಲಿಸಿದ್ದ ತಂಡ ಇದೀಗ ಮತ್ತೆ ಪ್ರಾರಂಭ ಮಾಡಿದೆ. ಬಹು ನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ನವೆಂಬರ್ 19ರಂದು ರಿಲೀಸ್ ಆಗುತ್ತಿದೆ.

  English summary
  Hollywood Actor Tom Cruise outrage against Mission Impossible 7 crew for not following covid 19 safety protocols.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X