Don't Miss!
- News
ಹೆಂಡತಿಗೆ ವಿಚ್ಛೇದನ ನೀಡಿ ಮಗನತ್ತ ಕಣ್ಣೆತ್ತಿಯೂ ನೋಡದ ಪತಿ!
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ರಿಲೀಸ್ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರಗಳ ಟಾಪ್ 10 ಪಟ್ಟಿ
ನಿನ್ನೆಯಷ್ಟೇ ( ಡಿಸೆಂಬರ್ 16 ) ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ಬಹು ನಿರೀಕ್ಷಿತ ಅವತಾರ್ ದ ವೇ ಆಫ್ ವಾಟರ್ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ಮೇಕಿಂಗ್ ಹಾಗೂ ವಿಷುಯಲ್ಸ್‌ಗೆ ಮನಸೋತಿರುವ ಸಿನಿ ರಸಿಕರು ಅವತಾರ್ ದ ವೇ ಆಫ್ ವಾಟರ್ ಒಂದು ಮಾಸ್ಟರ್‌ಪೀಸ್ ಎಂದು ಹಾಡಿ ಹೊಗಳುತ್ತಿದ್ದಾರೆ.
ಇನ್ನು ವಿಶ್ವದೆಲ್ಲೆಡೆ ತನ್ನ ಮಾರುಕಟ್ಟೆಯನ್ನು ಹೊಂದಿರುವ ಹಾಲಿವುಡ್ ಚಿತ್ರಗಳನ್ನು ಭಾರತದಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ವೀಕ್ಷಿಸುತ್ತಾರೆ. ಹಾಗೆಯೇ ಅವತಾರ್ ದ ವೇ ಆಫ್ ವಾಟರ್ ಚಿತ್ರವನ್ನು ವೀಕ್ಷಿಸಲು ಭಾರತದ ಸಿನಿ ರಸಿಕರು ಹಲವು ದಿನಗಳಿಂದ ಟಿಕೆಟ್‌ಗಳನ್ನು ಖರೀದಿಸಿ ಕಾಯುತ್ತಾ ಕುಳಿತಿದ್ದರು. ಇನ್ನು ತ್ರೀಡಿ, ಐಮ್ಯಾಕ್ಸ್ 4 D ವರ್ಷನ್‌ಗಳಲ್ಲಿಯೂ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಯಾಗಿದ್ದರಿಂದ ಚಿತ್ರದ ಕ್ರೇಜ್ ಮತ್ತೊಂದು ಹಂತ ತಲುಪಿತ್ತು.
ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಮೂಲಕ ದಾಖಲೆ ಬರೆದಿದ್ದ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಯಾದ ನಂತರವೂ ದಾಖಲೆಯ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಮೊದಲ ದಿನ 52.55 ಕೋಟಿ ರೂಪಾಯಿಗಳನ್ನು ಗಳಿಸಿರುವ ಅವತಾರ್ ದ ವೇ ಆಫ್ ವಾಟರ್ ಹಲವಾರು ದಾಖಲೆಗಳನ್ನು ಧೂಳೀಪಟ ಮಾಡಿದೆ. ಈ ಮೂಲಕ ಭಾರತದಲ್ಲಿ ಬಿಡುಗಡೆಯ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರಗಳ ಪಟ್ಟಿಯ್ಲಲಿ ಅವತಾರ್ ದ ವೇ ಆಫ್ ವಾಟರ್ ಎರಡನೇ ಸ್ಥಾನಕ್ಕೆ ಏರಿದೆ.

ಬಿಡುಗಡೆ ದಿನ ಭಾರತದಲ್ಲಿ ಅತಿಹೆಚ್ಚು ಗಳಿಸಿದ 10 ಹಾಲಿವುಡ್ ಚಿತ್ರಗಳು
1. ಅವೆಂಜರ್ಸ್ ಎಂಡ್ ಗೇಮ್: 62.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
2. ಅವತಾರ್ ದ ವೇ ಆಫ್ ವಾಟರ್: 52.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
3. ಸ್ಪೈಡರ್ ಮ್ಯಾನ್ ನೋ ವೇ ಹೋಮ್: 41.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
4. ಅವೆಂಜರ್ಸ್ ಇನ್ಫಿನಿಟಿ ವಾರ್: 40.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
5. ಡಾಕ್ಟರ್ ಸ್ಟ್ರೇಂಜ್ 2: 36.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
6. ಥೋರ್ ಲವ್ ಅಂಡ್ ಥಂಡರ್: 18.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
7. ಫಾಸ್ಟ್ ಅಂಡ್ ಫ್ಯೂರಿಯಸ್: ಹಾಬ್ಸ್ ಅಂಡ್ ಶಾ: 13.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
8. ಕ್ಯಾಪ್ಟನ್ ಮಾರ್ವೆಲ್: 12.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
9. ಬ್ಲಾಕ್ ಪ್ಯಾಂಥರ್: ವಾಖೆಂಡಾ ಫಾರ್ ಎವರ್: 12.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
10. ಫ್ಯೂರಿಯಸ್ 7: 12.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ಅವೆಂಜರ್ಸ್ ಎಂಡ್‌ಗೇಮ್ ದಾಖಲೆ ಮುರಿಯುವಲ್ಲಿ ವಿಫಲ
ಇನ್ನು ಭಾರತದಲ್ಲಿ ಬಿಡುಗಡೆಯ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರ ಎಂಬ ದಾಖಲೆಯನ್ನು ಹೊಂದಿದ್ದ ಅವೆಂಜರ್ಸ್ ಎಂಡ್ ಗೇಮ್ ಅನ್ನು ಅವತಾರ್ ದ ವೇ ಆಫ್ ವಾಟರ್ ಮುರಿಯಬಹುದಾ ಎಂಬ ಕುತೂಹಲ ಇತ್ತು. ಆದರೆ ಅವತಾರ್ ದ ವೇ ಆಫ್ ವಾಟರ್ ವಿಫಲ ಹೊಂದಿದ್ದು ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳುವಲ್ಲಿ ಎಡವಿದೆ.

ವಿಶ್ವ ಬಾಕ್ಸ್ ಆಫೀಸ್‌ನಲ್ಲೂ ವಿಫಲ
ಇನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟದ ಬಾಕ್ಸ್ ಆಫೀಸ್ ವಿಚಾರದಲ್ಲಿಯೂ ಸಹ ಅವತಾರ್ ದ ವೇ ಆಫ್ ವಾಟರ್ ಅವೆಂಜರ್ಸ್ ಎಂಡ್ ಗೇಮ್ ದಾಖಲೆಯನ್ನು ಮುರಿಯುವಲ್ಲಿ ವಿಫಲವಾಗಿದೆ. ಬಿಡುಗಡೆಯ ದಿನ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಪ್ರಪಂಚದಾದ್ಯಂತ 157 ಮಿಲಿಯನ್ ಡಾಲರ್ ಗಳಿಕೆ ಮಾಡಿತ್ತು. ಇತ್ತ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಯ ದಿನ 136 ಮಿಲಿಯನ್ ಡಾಲರ್ ಗಳಿಸಿದೆ