»   » 2014ರಲ್ಲಿ I Do, I Do ಎಂದ ಹಾಲಿವುಡ್ ತಾರೆಗಳು

2014ರಲ್ಲಿ I Do, I Do ಎಂದ ಹಾಲಿವುಡ್ ತಾರೆಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ತಾರೆಯರ ಮದುವೆಗಳಿಗೆ ಹೋಲಿಸಿದರೆ 2014ರಲ್ಲಿ ಹಾಲಿವುಡ್ ನಲ್ಲಿ ಅನೇಕ ತಾರೆಯರು ಧೈರ್ಯ ಮಾಡಿ I Do I Do ಎಂದಿದ್ದಾರೆ. ಮದುವೆ ಎಂದರೆ ಮೂಗು ಮುರಿಯುವ ಇಂಗ್ಲೀಷ್ ಬ್ಯೂಟಿಗಳು ಹೆಚ್ಚಾಗಿ ತಮ್ಮ ಆಯ್ಕೆಯ ಸಂಗಾತಿಯನ್ನು ಹುಡುಕಿಕೊಂಡು ಎಷ್ಟು ಕಾಲ ಸಾಧ್ಯವೋ ಅಷ್ಟು ಕಾಲ ಜೊತೆಯಾಗಿ ಬಾಳ್ವೆ ನಡೆಸುವುದು ಮಾಮೂಲಿ.

ಆದರೆ, 2014ರಲ್ಲಿ ಸ್ಕಾರ್ಲೆಟ್ ಜಾನ್ಸನ್, ಕಿಮ್ ಕದರ್ಶಿಯಾನ್ ಅಲ್ಲದೆ ಜನಪ್ರಿಯ ಜೋಡಿ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಅಧಿಕೃತ ಮದುವೆ ಬಂಧನಕ್ಕೆ ಒಳಪಟ್ಟಿದ್ದು ವಿಶೇಷ.[ಸದ್ದು ಮಾಡಿದ ಚಿತ್ರದ ಟ್ರೈಲರ್ ಗಳು]

ಫ್ರಾನ್ಸಿನ ಪತ್ರಕರ್ತ ರೋಮೈನ್ ಡಾರಿಯಾಕ್ ರನ್ನು ಮದುವೆಯಾಗುರುವುದಕ್ಕೂ ಮುನ್ನ ರೋಸ್ ಎಂಬ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ನಂತರ ದಂಪತಿ ಸರಳ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರು. ಈ ಹಿಂದೆ ಬ್ರಿಟಿಷ್ ಕೊಲಂಬಿಯಾದಲ್ಲಿ ರಿಯಾನ್ ರೆನಾಲ್ಡ್ಸ್ ಕೈ ಹಿಡಿದಾಗಲೂ ಇದೇ ರೀತಿ ಸರಳ ವಿವಾಹಕ್ಕೆ 'ಲೂಸಿ' ತಾರೆ ಮೊರೆ ಹೋಗಿದ್ದರು. [ಮಿಸ್ ಮಾಡದೇ ನೋಡಬೇಕಾದ 2014ರ ಚಿತ್ರಗಳು]

ಉಳಿದಂತೆ ಅನೇಕ ವರ್ಷಗಳ ನಂತರ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಜೋಡಿ ಆಗಸ್ಟ್ 23,2014ರಂದು I Do I Do ಎಂದು ಹೇಳುವ ಮೂಲಕ ಇತಿಹಾಸ ನಿರ್ಮಿಸಿದರು. ಐದಾರು ಮಕ್ಕಳ ತಾಯಿಯಾಗಿ ಇತರೆ ಸೆಲೆಬ್ರಿಟಿಗಳಿಗೆ ಮಾದರಿಯಾಗಿರುವ ಜೋಲಿ ಮದುವೆಯಾದ ಸುದ್ದಿ ಮಾಧ್ಯಮಗಳಿಗೆ ಐದು ದಿನಗಳ ಬಳಿಕ ತಿಳಿದಿದ್ದು ವಿಶೇಷ. 2014ರಲ್ಲಿ ವಿವಾಹವಾದ ಸೆಲಿಬ್ರಿಟಿಗಳ ವಿವರ ಮುಂದಿದೆ ನೋಡಿ...

ಸ್ಕಾರ್ಲೆಟ್ ಜಾನ್ಸನ್ ಹಾಗೂ ರೋಮೈನ್ ಡಾರಿಯಾಕ್
  

ಸ್ಕಾರ್ಲೆಟ್ ಜಾನ್ಸನ್ ಹಾಗೂ ರೋಮೈನ್ ಡಾರಿಯಾಕ್

ಸೆಪ್ಟೆಂಬರ್ ನಲ್ಲಿ ಪುತ್ರಿ ರೋಸಾ ಜನನವಾದ ಮೇಲೆ ಸ್ಕಾರ್ಲೆಟ್ ಜಾನ್ಸನ್ ನವ ವಧುವಿನ ಡ್ರೆಸ್ ಧರಿಸಿ ಫ್ರೆಂಚ್ ಪತ್ರಕರ್ತ ರೋಮೈನ್ ಡಾರಿಯಾಕ್ ಅವರನ್ನು ಫಿಲ್ಸ್ ಬರ್ಗ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು.

ಎಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್
  

ಎಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್

ಆಗಸ್ಟ್ 23, 2014ರಂದು ಇಬ್ಬರು ಸರಳವಾಗಿ ಮದುವೆಯಾದರು. ಐದಾರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ಈ ದಂಪತಿ ಮದುವೆ ಸಮಾಚಾರ ಐದು ದಿನಗಳ ಬಳಿಕ ಎಲ್ಲರಿಗೂ ತಿಳಿಯಿತು.

ಜಾರ್ಜ್ ಕ್ಲೂನಿ ಹಾಗೂ ಅಮಲ್ ಅಲಾಮುದ್ದೀನ್
  

ಜಾರ್ಜ್ ಕ್ಲೂನಿ ಹಾಗೂ ಅಮಲ್ ಅಲಾಮುದ್ದೀನ್

ಹಲವರು ಯುವತಿಯರ ಹೃದಯ ಗೆದ್ದ ಚೋರ ಕ್ಲೂನಿ ಸೆ.27ರಂದು ಇಟಲಿಯ ವೆನ್ನಿಸ್ ನಲ್ಲಿ ಅಮಲ್ ಕೈ ಹಿಡಿದರು ನಂತರ ಮದುವೆಯ ನೋಂದಣಿ ಮಾಡಿಸಿಕೊಂಡರು.

ನೀಲ್ ಪ್ಯಾಟ್ರಿಕ್ ಹ್ಯಾರೀಸ್ ಹಾಗೂ ಡೇವಿಡ್ ಬುರ್ಕಾ
  

ನೀಲ್ ಪ್ಯಾಟ್ರಿಕ್ ಹ್ಯಾರೀಸ್ ಹಾಗೂ ಡೇವಿಡ್ ಬುರ್ಕಾ

ಆಸ್ಕರ್ 2015ರ ನಿರೂಪಕರಾಗಿ ಆಯ್ಕೆಯಾಗಿರುವ ನೀಲ್ ಪ್ಯಾಟ್ರಿಕ್ ಅವರು ಸೆ.8ರಂದು ಬಹುಕಾಲದ ಗೆಳೆಯ ಡೇವಿಡ್ ಬುರ್ಕಾ ಅವರನ್ನು ಇಟಲಿಯಲ್ಲಿ ವರಿಸಿರುವುದಾಗಿ ಟ್ವಿಟ್ಟರ್ ನಲ್ಲಿ ಘೋಷಿಸಿದರು.

ಕಿಮ್ ಕದರ್ಶಿಯನ್ ಹಾಗೂ ಕಾಯ್ನೆ ವೆಸ್ಟ್
  

ಕಿಮ್ ಕದರ್ಶಿಯನ್ ಹಾಗೂ ಕಾಯ್ನೆ ವೆಸ್ಟ್

ಮೇ.24ರಂದು ಕಿಮ್ ಹಾಗೂ ಕಾಯ್ನೆ ವೆಸ್ಟ್ ಭರ್ಜರಿ ಮದುವೆ ಸಮಾರಂಭ ಹಾಲಿವುಡ್ ನ ವೈಭವೋಪೇತ ವಿವಾಹ ಮಹೋತ್ಸವಗಳಲ್ಲಿ ಒಂದೆನಿಸಿತು. ಇಟಲಿಯ ಫೋರೆನ್ಸ್ ನಲ್ಲಿ ಮುದ್ದಾದ ಮಗಳು ನಾರ್ಥ್ ವೆಸ್ಟ್ ಎದುರಿಗೆ ಇಬ್ಬರು ಸತಿ ಪತಿಗಳಾದರು.

ಜೆನ್ನಿ ಮೆಕ್ ಕಾರ್ಥಿ ಹಾಗೂ ಡೊನ್ನಿ ವಾಹ್ಲ್ ಬರ್ಗ್
  

ಜೆನ್ನಿ ಮೆಕ್ ಕಾರ್ಥಿ ಹಾಗೂ ಡೊನ್ನಿ ವಾಹ್ಲ್ ಬರ್ಗ್

Mr & Mrs Wahlberg, checking in from heaven. Thank you for all of your well wishes. #happy. ಎಂದು ಸಂದೇಶ ಹೊರಡಿಸುವ ಮೂಲಕ ವಿವಾಹದ ಬಗ್ಗೆ ಟ್ವೀಟ್ ಮಾಡಿದರು. ಇಲಿನಾಯ್ ನಲ್ಲಿ ಆಗಸ್ಟ್ 31ರಂದು ಕುಟುಂಬ ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆಯಾದರು.

ಆಡಂ ಲೆವಿನ್ ಹಾಗೂ ಬೆಹಾಟಿ ಪ್ರಿನ್ಸ್ಲೂ
  

ಆಡಂ ಲೆವಿನ್ ಹಾಗೂ ಬೆಹಾಟಿ ಪ್ರಿನ್ಸ್ಲೂ

ಮೆಕ್ಸಿಕೋದ ಕ್ಯಾಬೊ ಸಾನ್ ಲೂಕಾಸ್ ನಲ್ಲಿ ಜುಲೈ 19ರಂದು ಸುರಸುಂದರ ಗಾಯಕ ಆಡಂ ಹಾಗೂ ವಿಕ್ಟೋರಿಯಾ ಸೀಕ್ರೇಟ್ ಮಾಡೆಲ್ ಬೆಹಾಟಿ ಸತಿ ಪತಿಗಳಾದರು.

ನಯಾ ರಿವೇರಾ ಹಾಗೂ ರಿಯಾನ್ ಡೊರ್ಸೆ
  

ನಯಾ ರಿವೇರಾ ಹಾಗೂ ರಿಯಾನ್ ಡೊರ್ಸೆ

ಬಿಗ್ ಸೀನ್ ಜೊತೆ ಸಾಂಗತ್ಯ ಮುರಿದುಕೊಂಡ ಮೂರು ತಿಂಗಳ ಬಳಿಕ ಹೊಸ ಗೆಳೆಯ ನಯಾ ರಿವೇರಾ ಅವರನ್ನು ಗುಪ್ತವಾಗಿ ಕಾಬೋ ಸಾನ್ ಲೂಕಾಸ್, ಮೆಕ್ಸಿಕೋದಲ್ಲಿ ಜುಲೈ 19ರಂದು ವರಸಿದರು. ಆಡಂ ಲೆವಿನ್ ಹಾಗೂ ಬೆಹಾಟಿ ಪ್ರಿನ್ಸ್ಲೂ ಮದುವೆಯಾದ ತಾಣದಲ್ಲೇ ಇವರು ಸತಿ ಪತಿಗಳಾದರು.

ಜೆಸ್ಸಿಕಾ ಸಿಂಪ್ಸನ್ ಹಾಗೂ ಎರಿಕ್ ಜಾನ್ಸನ್
  

ಜೆಸ್ಸಿಕಾ ಸಿಂಪ್ಸನ್ ಹಾಗೂ ಎರಿಕ್ ಜಾನ್ಸನ್

ಜೆಸ್ಸಿಕಾ ಸಿಂಪ್ಸನ್ ತಮ್ಮ ಮಕ್ಕಳ ತಂದೆ ಎರಿಕ್ ಜಾನ್ಸನ್ ರನ್ನು ಜುಲೈ 5ರಂದು ಸ್ಯಾನ್ ಸಿಡ್ರೋ ರಾಂಚ್, ಸಾಂಟಾ ಬರ್ಬರಾ, ಕ್ಯಾಲಿಫ್ ನಲ್ಲಿ ಮದುವೆಯಾದರು.

ಗಿನಿಫರ್ ಗುಡ್ ವಿನ್ ಹಾಗೂ ಜೋಶ್ ಡಲ್ಲಾಸ್
  

ಗಿನಿಫರ್ ಗುಡ್ ವಿನ್ ಹಾಗೂ ಜೋಶ್ ಡಲ್ಲಾಸ್

ಓನ್ಸ್ ಅಪಾನ್ ಎ ಟೈಮ್ ಚಿತ್ರ ಜೋಡಿ ಸ್ನೋ ವೇಟ್ ಹಾಗೂ ಪ್ರಿನ್ಸ್ ಚಾರ್ಮಿಂಗ್ ಪಾತ್ರದಿಂದ ಹೊರ ಬಂದು ಏ.12ರಂದು ವಿವಾಹವಾದರು.

ಆಶ್ಲೆ ಟಿಸ್ಡಾಲೆ ಹಾಗೂ ಕ್ರಿಸ್ಟೋಫರ್ ಫ್ರೆಂಚ್
  

ಆಶ್ಲೆ ಟಿಸ್ಡಾಲೆ ಹಾಗೂ ಕ್ರಿಸ್ಟೋಫರ್ ಫ್ರೆಂಚ್

ಸೆ.8ರಂದು ಆಶ್ಲೆ ಟಿಸ್ಡಾಲೆ ಹಾಗೂ ಕ್ರಿಸ್ಟೋಫರ್ ಫ್ರೆಂಚ್ ಮದುವೆಯಾಗಿ ಚಿತ್ರ ತೆಗೆಸಿಕೊಂಡು "Best day of my life!" ಎಂದು ಚಿತ್ರವನ್ನು ಟ್ವೀಟ್ ಮಾಡಿದ್ದರು.

ಸ್ನೂಕಿ ಹಾಗೂ ಜಿಯೋನಿ ಲಾವೆಲ್ಲೆ
  

ಸ್ನೂಕಿ ಹಾಗೂ ಜಿಯೋನಿ ಲಾವೆಲ್ಲೆ

ಸ್ನೂಕಿ(ನಿಕೋಲ್ ಪೊಲಿಜ್ಜಿ) ಹಾಗೂ ಲಾವೆಲ್ಲೆ ಅವರು ನ್ಯೂ ಜೆರ್ಸಿಯಲ್ಲಿ ಲೋಮಾ ಚರ್ಚ್ ನಲ್ಲಿ 500ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಗ್ರೇಟ್ ಗಸ್ಟ್ ಬೈ ಥೀಮ್ ನಲ್ಲಿ ಮದುವೆಯಾದರು.

English summary
The year has been mixed bag when it comes to celebrity weddings. While stars like Kim Kardashian tied the knot openly, we saw some hush hush weddings as well. For example, long time partners, Brad Pitt and Angelina Jolie finally said "I Do"
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada