For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನ 'ಲಂಚ್ ಬಾಕ್ಸ್' ನಿರ್ದೇಶಕ ಹಾಲಿವುಡ್‌ ನಲ್ಲಿ ಆಕ್ಷನ್ ಕಟ್.!

  By ಸುನೀಲ್
  |

  "ಈ ಸಿನಿಮಾ ಎಂದಿಗೂ ಮುಗಿಯದ ಆಕರ್ಷಣೆ, ಸಿನಿಮಾ ಒಂದು ಮಾಯೆ, ಕೆಲವರಿಗೆ ನಟಿಸಬೇಕು ಎಂಬ ಆಸೆ ಹುಟ್ಟಿಸಿದರೆ, ಇನ್ನೂ ಕೆಲವರಿಗೆ ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಸುತ್ತದೆ" ಅಂತ ಹೇಳುತ್ತಲೇ, ಸಿನಿಮಾಸಕ್ತರ ಹಸಿವಿಗೆ 'ಲಂಚ್ ಬಾಕ್ಸ್' ಕೊಟ್ಟವರು ಡೈರೆಕ್ಟರ್ ರಿತೇಶ್. ಈಗ ಇದೇ ರಿತೇಶ್ ಬಾತ್ರಾ ಬಾಲಿವುಡ್‌ನಿಂದ ಹಾಲಿವುಡ್‌ ಅಂಗಳಕ್ಕೆ ಜಿಗಿದಿದ್ದಾರೆ.

  ಹೌದು, ಹಾಲಿವುಡ್‌ ಅಂಗಳದಲ್ಲಿ ರಿತೇಶ್ ಬಾತ್ರ 'ದಿ ಸೆನ್ಸ್ ಆಫ್‌ ಆನ್‌ ಎಂಡಿಂಗ್' ಎಂಬ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಮುಂದಿನ ವರ್ಷದ ಮಾರ್ಚ್‌ 10 ರಂದು ತೆರೆಗೆ ಬರಲಿದೆ.[ಲಂಚ್ ಬಾಕ್ಸ್: ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಗ್ಯಾರಂಟಿ]

  ಹಾಲಿವುಡ್‌ನಲ್ಲಿ ರಿತೇಶ್ ಬಾತ್ರಾ ನಿರ್ದೇಶನ ಮಾಡುತ್ತಿರುವ 'ದಿ ಸೆನ್ಸ್ ಆಫ್‌ ಆನ್‌ ಎಂಡಿಂಗ್' ಸಿನಿಮಾ ಮೂಲತಃ 'ಜೂಲಿಯನ್ ಬಾರ್ನೆಸ್' ರವರ 2011 ರ ಕಾದಂಬರಿ ಆಧಾರಿತ ಚಿತ್ರ. ತಮ್ಮ 'ದಿ ಸೆನ್ಸ್ ಆಫ್‌ ಆನ್‌ ಎಂಡಿಂಗ್' ಕಾದಂಬರಿಗೆ ಬಾರ್ನೆಸ್ ರವರು ಬಿಡುಗಡೆ ಆದ ವರ್ಷದಲ್ಲೇ 'ಮ್ಯಾನ್ ಬುಕರ್' ಪ್ರಶಸ್ತಿ ಪಡೆದಿದ್ದರು.

  ದೊಡ್ಡ ತಾರಾಬಳಗ

  ದೊಡ್ಡ ತಾರಾಬಳಗ

  'ದಿ ಸೆನ್ಸ್ ಆಫ್‌ ಆನ್‌ ಎಂಡಿಂಗ್' ಸಿನಿಮಾದಲ್ಲಿ ಷಾರ್ಲೆಟ್ ರಾಂಪ್ಲಿಂಗ್, ಜಿಮ್‌ ಬ್ರಾಡ್ಬೆಂಟ್, ಎಮಿಲಿ ಮಾರ್ಟಿಮರ್, ಹ್ಯಾರಿಯೆಟ್ ವಾಲ್ಟರ್, ಮಿಚೆಲ್ ಡಾಕ್ಕೆರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಚಿತ್ರಕಥೆ ಏನು.?

  ಚಿತ್ರಕಥೆ ಏನು.?

  ನಿವೃತ್ತ ಅಧಿಕಾರಿ ಟೋನಿ ವೆಬ್‌ಸ್ಟರ್ ಎಂಬಾತ ತನ್ನ ಯೂತ್ ಮೂಮೆಂಟ್ಸ್ ಮತ್ತು ಶಾಲೆಯಲ್ಲಿನ ಸ್ನೇಹಿತರ ಜೊತೆಗಿನ ಎಲ್ಲಾ ನೆನಪುಗಳನ್ನು ಸಲೀಸಾಗಿ ಪಾಸ್ಟ್‌ ಮತ್ತು ಪ್ರೆಸೆಂಟ್ ನಲ್ಲಿ ಕಟ್ಟಿಕೊಡುವುದೇ ಚಿತ್ರದ ಕಥಾ ಹಂದರ. ವೆಬ್‌ಸ್ಟರ್(ಜಿಮ್‌ ಬ್ರಾಡ್ಬೆಂಟ್) ಏಕಾಂತವಾಸಿಯಾಗಿದ್ದು, ವೆರೋನಿಕಾ(ಷಾರ್ಲೆಟ್ ರಾಂಪ್ಲಿಂಗ್)ರೊಂದಿಗಿನ ನೋವಿನ ಸಂಬಂಧವನ್ನು ಹೊಸ ಬೆಳಕಿನಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಚಿತ್ರದ ಕಥೆ.

  ಖ್ಯಾತಿ ಗಳಸಿದ್ದ 'ಲಂಚ್ ಬಾಕ್ಸ್'

  ಖ್ಯಾತಿ ಗಳಸಿದ್ದ 'ಲಂಚ್ ಬಾಕ್ಸ್'

  ಈ ಹಿಂದೆ ಬಾಲಿವುಡ್‌ ತಾರೆಗಳಾದ ನಿಮ್ರತ್ ಕೌರ್, ಇರ್ಫಾನ್ ಖಾನ್, ನವಜ್ಜುದ್ದೀನ್ ಸಿದ್ದಿಕಿ ರವರ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಬಾತ್ರ ರವರ 'ಲಂಚ್ ಬಾಕ್ಸ್' ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿತ್ತು. ಅಷ್ಟು ಮಾತ್ರವಲ್ಲದೇ 'ಲಂಚ್ ಬಾಕ್ಸ್', 'ಬ್ರಿಟಿಷ್ ಆಕಾಡೆಮಿ ಆಫ್‌ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್‌ಗೆ ನಾಮಿನೇಟ್ ಆಗಿ, 2013 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಾತ್ರ ಗ್ರ್ಯಾಂಡ್‌ ಗೋಲ್ಡೆನ್ ರೇಲ್ ಪ್ರಶಸ್ತಿ ಪಡೆದಿದ್ದರು.

  ಟ್ರೈಲರ್ ನೋಡಿ

  ಟ್ರೈಲರ್ ನೋಡಿ

  ನಿಕ್ ಪೇನ್‌ ಚಿತ್ರಕಥೆ ಬರೆದಿರುವ 'ದಿ ಸೆನ್ಸ್ ಆಫ್‌ ಆನ್‌ ಎಂಡಿಂಗ್' ಸಿನಿಮಾದ ಟ್ರೈಲರ್ ಇಲ್ಲಿದೆ ನೋಡಿ. ಲಿಂಕ್ ಕ್ಲಿಕ್ ಮಾಡಿ...

  English summary
  Based on Julian Barnes’ 2011 novel, Ritesh Batra’s Hollywood Flick 'The Sense of an Ending'trailer is out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X