twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಾಲಿವುಡ್ ಚಿತ್ರ ಯಾವುದು?

    |

    ಅವೆಂಜರ್ಸ್ ಎಂಡ್ ಗೇಮ್ ಸಿನಿಮಾ ಜಗತ್ತಿನಾದ್ಯಂತ ಅತಿ ದೊಡ್ಡ ಯಶಸ್ಸು ಕಂಡಿದ್ದು, ಗಳಿಕೆಯಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆಯಂತೆ. ಕಲೆಕ್ಷನ್ ನಲ್ಲಿ ಸಾರ್ವಕಾಲಿಕ ದಾಖಲೆ ಹೊಂದಿದ್ದ ಟೈಟಾನಿಕ್ ಚಿತ್ರವನ್ನ ಹಿಂದಿಕ್ಕಿ ಈಗ ಎರಡನೇ ಸ್ಥಾನದಲ್ಲಿದೆ.

    ಮೊದಲ ಸ್ಥಾನದಲ್ಲಿ 'ಅವತಾರ್' ಸಿನಿಮಾ ನಿಂತಿದೆ. ಅವೆಂಜರ್ಸ್ ಎಂಡ್ ಗೇಮ್ ಚಿತ್ರದ ಸದ್ಯದ ವೇಗ ನೋಡ್ತಿದ್ರೆ ಕೆಲವೇ ದಿನದಲ್ಲಿ ಅವತಾರ್ ದಾಖಲೆ ಕೂಡ ಬ್ರೇಕ್ ಆಗುವ ಎಲ್ಲ ಸಾಧ್ಯತೆ ಇದೆ.

    ಗಳಿಕೆಯಲ್ಲಿ 'ಟೈಟಾನಿಕ್' ಸಿನಿಮಾ ಹಿಂದಿಕ್ಕಿದ 'ಅವೆಂಜರ್:ಎಂಡ್ ಗೇಮ್' ಗಳಿಕೆಯಲ್ಲಿ 'ಟೈಟಾನಿಕ್' ಸಿನಿಮಾ ಹಿಂದಿಕ್ಕಿದ 'ಅವೆಂಜರ್:ಎಂಡ್ ಗೇಮ್'

    ಇನ್ನು ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ಕಲೆಕ್ಷನ್ ನೋಡುವುದಾದರೇ ಅಲ್ಲಿಯೂ ಅವೆಂಜರ್ಸ್ ಎಂಡ್ ಗೇಮ್ ಸಿನಿಮಾ ಗೆಲುವಿನ ಕೇಕೆಯಾಕುತ್ತಿದೆ. ಸುಮಾರು 375 ಕೋಟಿ ಗಳಿಕೆ ಕಾಣುವ ಮೂಲಕ ಭಾರತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹಾಗಿದ್ರೆ, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಹಾಲಿವುಡ್ ಸಿನಿಮಾಗಳು ಯಾವುದು? ಮುಂದೆ ಓದಿ......

    'ಅವೆಂಜರ್ಸ್ ಇನ್ಫಿನಿಟಿ ವಾರ್' ಹಿಂದಿಕ್ಕಿದ ಎಂಡ್ ಗೇಮ್

    'ಅವೆಂಜರ್ಸ್ ಇನ್ಫಿನಿಟಿ ವಾರ್' ಹಿಂದಿಕ್ಕಿದ ಎಂಡ್ ಗೇಮ್

    ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹಾಲಿವುಡ್ ಸಿನಿಮಾಗಳ ಪೈಕಿ, ಅವೆಂಜರ್ಸ್ ಇನ್ಫಿನಿಟಿ ವಾರ್ ಸಿನಿಮಾ ಮೊದಲ ಸ್ಥಾನದಲ್ಲಿತ್ತು. 294 ಕೋಟಿ ಈ ಚಿತ್ರದಲ್ಲಿ ಖಾತೆಯಲ್ಲಿತ್ತು. ಆದ್ರೀಗ, 375 ಕೋಟಿ ಗಳಿಸುವ ಮೂಲಕ ಅವೆಂಜರ್ಸ್ ಎಂಡ್ ಗೇಮ್ ಮೊದಲ ಸ್ಥಾನಕ್ಕೇರಿದೆ.

    'ಜಂಗಲ್ ಬುಕ್' ಕಲೆಕ್ಷನ್ ಎಷ್ಟು?

    'ಜಂಗಲ್ ಬುಕ್' ಕಲೆಕ್ಷನ್ ಎಷ್ಟು?

    ಇದಕ್ಕೂ ಮುಂಚೆ ಬಿಡುಗಡೆಯಾಗಿದ್ದ ಜಂಗಲ್ ಬುಕ್ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಧೂಳೆಬ್ಬಿಸಿದ್ದ ಜಂಗಲ್ ಬುಕ್ 258 ಕೋಟಿ ಬಾಚಿಕೊಂಡಿತ್ತು.

    ಭಾರತೀಯ ಚಿತ್ರಗಳ ದಾಖಲೆ ಪುಡಿ ಮಾಡಿದ 'ಅವೆಂಜರ್:ಎಂಡ್ ಗೇಮ್'ಭಾರತೀಯ ಚಿತ್ರಗಳ ದಾಖಲೆ ಪುಡಿ ಮಾಡಿದ 'ಅವೆಂಜರ್:ಎಂಡ್ ಗೇಮ್'

    'ಫಾಸ್ಟ್ ಅಂಡ್ ಫ್ಯೂರಿಯಸ್' ಖಾತೆಯಲ್ಲಿ ಎಷ್ಟು ಹಣವಿದೆ

    'ಫಾಸ್ಟ್ ಅಂಡ್ ಫ್ಯೂರಿಯಸ್' ಖಾತೆಯಲ್ಲಿ ಎಷ್ಟು ಹಣವಿದೆ

    2015ರಲ್ಲಿ ತೆರೆಕಂಡಿದ್ದ ಫಾಸ್ಟ್ ಅಂಡ್ ಫ್ಯೂರಿಯಸ್-7 ಸಿನಿಮಾ ಭಾರತದಲ್ಲಿ ದೊಡ್ಡ ಸದ್ದು ಮಾಡಿತ್ತು. 155 ಕೋಟಿ ಗಳಿಕೆ ಕಾಣುವ ಮೂಲಕ ಹಾಲಿವುಡ್ ಸಿನಿಮಾಗಳ ಪೈಕಿ ಮೂರನೇ ಸ್ಥಾನದಲ್ಲಿತ್ತು. ಆದ್ರೀಗ, ನಾಲ್ಕನೇ ಸ್ಥಾನಕ್ಕೆ ಜಾರಿದೆ.

    ಜುರಾಸಿಕ್ ವರ್ಲ್ಡ್ ಗಳಿಕೆ ಎಷ್ಟು?

    ಜುರಾಸಿಕ್ ವರ್ಲ್ಡ್ ಗಳಿಕೆ ಎಷ್ಟು?

    ಜುರಾಸಿಕ್ ವರ್ಲ್ಡ್ ಸರಣಿಯ ಎರಡು ಚಿತ್ರಗಳು ಟಾಪ್ ಹತ್ತರ ಪಟ್ಟಿಯಲ್ಲಿದೆ. 2015ರಲ್ಲಿ ಬಿಡುಗಡೆಯಾಗಿದ್ದ ಜುರಾಸಿಕ್ ವರ್ಲ್ಡ್ ಸಿನಿಮಾ 141 ಕೋಟಿ, 2018ರಲ್ಲಿ ತೆರೆಕಂಡಿದ್ದ ಜುರಾಸಿಕ್ ವರ್ಲ್ಡ್ ಫಾಲನ್ ಕಿಂಗ್ ಡಮ್ 129 ಕೋಟಿ ಗಳಿಕೆ ಕಂಡಿದೆ.

    ಟಾಪ್ ಹತ್ತರಲ್ಲಿ ಯಾವುದಿದೆ

    ಟಾಪ್ ಹತ್ತರಲ್ಲಿ ಯಾವುದಿದೆ

    ದಿ ಫೇಟ್ ಅಫ್ ದಿ ಫ್ಯೂರಿಯಸ್ ಸಿನಿಮಾ 127 ಕೋಟಿ, ಅವತಾರ್ ಸಿನಿಮಾ 113 ಕೋಟಿ, ಮಿಷನ್ ಇಂಪಾಸಿಬಲ್ 108 ಕೋಟಿ ಹಾಗೂ ಅವೆಂಜರ್ಸ್ ಎಜ್ ಆಫ್ ಅಲ್ಟ್ರನ್ 106 ಕೋಟಿ ಗಳಿಸುವ ಮೂಲಕ ಟಾಪ್ 10 ಬಳಗದಲ್ಲಿದೆ.

    English summary
    Avengers endgame becomes highest grossing hollywood movie in india all time. Avengers endgame has collected 375 crors in just two weeks.
    Tuesday, May 7, 2019, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X