Don't Miss!
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೋಲ್ಡನ್ ಗ್ಲೋಬ್‌ನಲ್ಲಿ RRR ಅನ್ನು ಸೋಲಿಸಿದ ಸಿನಿಮಾ ಯಾವುದು? ಸ್ಪರ್ಧೆಯಲ್ಲಿದ್ದ ಇತರೆ ಸಿನಿಮಾ ಯಾವುವು?
RRR ಸಿನಿಮಾಕ್ಕೆ ಈ ಬಾರಿ ಆಸ್ಕರ್ ಪಕ್ಕಾ ಎಂಬಿತ್ಯಾದಿ ಮಾತುಗಳು ಕಳೆದ ಕೆಲ ತಿಂಗಳಿನಿಂದ ಕೇಳಿ ಬರುತ್ತಿವೆ. ಕೆಲವು ಹಾಲಿವುಡ್‌ನ ಪ್ರಶಸ್ತಿಗಳು ಈಗಾಗಲೇ ಆಸ್ಕರ್‌ಗೆ ಧಕ್ಕಿದೆ ಸಹ.
ಆಸ್ಕರ್‌ನಷ್ಟೆ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಗ್ಲೋಬ್‌ನ ಎರಡು ವಿಭಾಗಗಳಲ್ಲಿ 'RRR' ನಾಮಿನೇಟ್ ಆಗಿತ್ತು. ಒಂದರಲ್ಲಿ ಪ್ರಶಸ್ತಿಯೂ ಗಳಿಸಿತು. ಆದರೆ ಪ್ರಮುಖ ಪ್ರಶಸ್ತಿಯಾದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಕಳೆದುಕೊಂಡಿತು.
ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ ವಿಭಾಗದಲ್ಲಿ RRR ಸ್ಪರ್ಧಿತ್ತು. ಆದರೆ ಈ ವಿಭಾಗದಲ್ಲಿ RRRಗೆ ಪ್ರಶಸ್ತಿ ಲಭಿಸಲಿಲ್ಲ. ಆದರೆ ಅತ್ಯುತ್ತಮ ಒರಿಜಿನಲ್ ಹಾಡು ವಿಭಾಗದಲ್ಲಿ RRR ನ 'ನಾಟು-ನಾಟು'' ಹಾಡು ಪ್ರಶಸ್ತಿ ಪಡೆದುಕೊಂಡಿತು.
ಆದರೆ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ RRR ಅನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದ ಸಿನಿಮಾ ಯಾವುದು? ಸ್ಪರ್ಧೆಯಲ್ಲಿದ್ದ ಇತರೆ ಸಿನಿಮಾಗಳು ಯಾವುವು? ಇಲ್ಲಿದೆ ನೋಡಿ ಪಟ್ಟಿ.
ಅತ್ಯುತ್ತಮ ಆಂಗ್ಲಭಾಷೇತರ ಸಿನಿಮಾ ಸ್ಪರ್ಧೆಯಲ್ಲಿ 'RRR' ಸಿನಿಮಾವನ್ನು ಹಿಂದಿಕ್ಕಿ ಗೆದ್ದಿದ್ದು 'ಅರ್ಜೆಂಟೀನಾ 1985' ಹೆಸರಿನ ಸಿನಿಮಾ. ಇದು ಅರ್ಜೆಂಟೀನಾದ ಸಿನಿಮಾ ಆಗಿದ್ದು, ಅಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಸಿನಿಮಾ ಇದಾಗಿದೆ. ಸಿನಿಮಾವನ್ನು ಸ್ಯಾಂಟಿಯಾಗೊ ಮಿಟ್ರೆ ನಿರ್ದೇಶನ ಮಾಡಿದ್ದಾರೆ.

RRR, ಅರ್ಜೆಂಟೀನಾ 1985 ಹೊರತಾಗಿ ಸ್ಪರ್ಧೆಯಲ್ಲಿ 'ಆಲ್ ಕ್ವೈಟ್ ಆನ್ ವೆಸ್ಟರ್ನ್ ಫ್ರಂಟ್' (ಜರ್ಮನಿ), 'ಕ್ಲೋಸ್' (ಬೆಲ್ಜಿಯಂ), 'ಡಿಸಿಶನ್ ಟು ಲೀವ್' (ದಕ್ಷಿಣ ಕೊರಿಯಾ) ಸಿನಿಮಾಗಳು ಇದ್ದವು. ಜರ್ಮನಿಯ 'ಆಲ್ ಕ್ವೈಟ್ ಆನ್ ವೆಸ್ಟರ್ನ್ ಫ್ರಂಟ್' ಸಿನಿಮಾ ಪ್ರಶಸ್ತಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿ 'ಅರ್ಜೆಂಟೀನಾ 1985' ಪ್ರಶಸ್ತಿ ಗೆದ್ದಿದೆ.
ಬಹುತೇಕ ಇದೇ ಸಿನಿಮಾಗಳು ಆಸ್ಕರ್‌ನಲ್ಲಿಯೂ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿರುವ ಗುಜರಾತಿ ಸಿನಿಮಾ 'ದಿ ಲಾಸ್ಟ್ ಶೋ' ಅಥವಾ 'ಚೆಲ್ಲೊ ಶೋ' ಜೊತೆಗೆ ಸ್ಪರ್ಧೆಗೆ ಇಳಿಯಲಿವೆ. RRR ಸಿನಿಮಾ ಸಹ ಈ ಸಿನಿಮಾಗಳ ಎದುರಿಸಬೇಕಾಗುತ್ತದೆ. ಅಲ್ಲಿ ಏನಾಗುತ್ತದೆಯೋ ಕಾದು ನೋಡಬೇಕಿದೆ.