Just In
Don't Miss!
- News
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂದರ್ಶನ: ಹಂಸಲೇಖ ಪುತ್ರಿ ನಂದಿನಿ ಹಂಸಲೇಖ ಜೊತೆ ಮಾತು-ಕತೆ
ಹಂಸಲೇಖ ಎನ್ನುವ ಹೆಸರು ಕೇಳದ ಕನ್ನಡಿಗರೇ ಇಲ್ಲ ಎನ್ನಬಹುದು. ಕನ್ನಡ ಸಿನಿಮಾರಂಗದ ಸಂಗೀತ ಕ್ಷೇತ್ರದ ಜತೆಗೆ ನಾಡು, ನುಡಿಯ ವಿಚಾರದಲ್ಲಿ ತಮ್ಮ ಸಾಹಿತ್ಯದ ಮೂಲಕವೂ ಜತೆ ನೀಡಿದ ಗಣ್ಯರು. ಅವರು ಮಾತ್ರವಲ್ಲ, ಅವರ ಪತ್ನಿ ಲತಾ ಹಂಸಲೇಖ, ಮಕ್ಕಳಾದ ಅಲಂಕಾರ್, ತೇಜಸ್ವಿನಿ ಮತ್ತು ನಂದಿನಿ ಎಲ್ಲರೂ ಸಿನಿಮಾದ ವಿವಿಧ ವಿಭಾಗಗಳ ಮೂಲಕ ಗುರುತಿಸಿಕೊಂಡವರು. ಇದೀಗ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆ ಸೇರಿಕೊಂಡಿರುವಾಗ ಈ ಕುಟುಂಬ ಮಾತ್ರ ಸಕ್ರಿಯವಾಗಿದೆ. ಹಂಸಲೇಖಾರ ಕಿರಿಯ ಪುತ್ರಿ ನಂದಿನಿ ಕಾಣಿಸಿಕೊಂಡಿರುವ ಎರಡನೇ ಆಲ್ಬಮ್ ಹಾಡು ಇದು. ಸಂಗೀತ ನಿರ್ದೇಶಕ ತಂದೆ, ಗಾಯಕಿ ತಾಯಿ, ಅನಿಮೇಶನ್ ಮಾಡುವ ಅಕ್ಕ, ನಿರ್ಮಾಪಕನಾಗಿ ಅಣ್ಣನಿರುವಾಗ ಆಲ್ಬಮ್ ಹಾಡಿಗೊಂದು ಗ್ಲಾಮರಸ್ ಮುಖವಾಗಿ ನಂದಿನಿ ಇದ್ದಾರೆ.
ಹಾಗಂತ ನಂದಿನಿ ಗ್ಲಾಮರ್‌ಗಷ್ಟೇ ಸೀಮಿತ ಎಂದರೆ ತಪ್ಪಾದೀತು. ನಟಿ, ಗಾಯಕಿ, ಗಗನ ಸಖಿ ಮತ್ತು ಡಿಸೈನರ್ ಹೀಗೆ ವೈವಿಧ್ಯಮಯ ಪ್ರತಿಭೆ ಹೊಂದಿರುವವರು. ಕಳೆದ ಪ್ರೇಮಿಗಳ ದಿನಾಚರಣೆಯಂದು ಪುಕ್ಲ..ಪುಕ್ಲ\' ಎನ್ನುವ ವಿಭಿನ್ನ ಗೀತೆಯ ಮೂಲಕ ಸುದ್ದಿಯಾಗಿದ್ದ ನಂದಿನಿಯವರು ಇದೀಗ ತಮ್ಮ ತಂದೆಯದೇ ನಿರ್ದೇಶನದ ಕೊರೊನಾ ವೈರಸ್ ಕುರಿತಾದ ಜಾಗೃತಿ ಗೀತೆಯ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಮೊದಲು ಫೇಸ್ಬುಕ್ ಮೂಲಕ ಲೈವ್ ಆಗಿ ಪರ್ಫಾರ್ಮ್ ಮಾಡಿದ ನಂದಿನಿ ಇದೋಗ ಆಲ್ಬಮ್ ಗೀತೆಯ ಮೂಲಕ ತಾಯಿಯೊಂದಿಗೆ ಅಭಿನಯಿಸಿ ಗಮನ ಸೆಳೆದಿದ್ದಾರೆ. ಒಟ್ಟು ವಿಚಾರಗಳ ಬಗ್ಗೆ ಅವರೊಂದಿಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

ಇತ್ತೀಚೆಗೆ ಆಲ್ಬಮ್ ಹಾಡುಗಳ ಮೂಲಕ ಹೆಚ್ಚು ಸುದ್ದಿ ಮಾಡುತ್ತಿದ್ದೀರಿ?
ನಿಜವಾಗಿಯೂ ನಟನೆ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ತೀರ್ಮಾನಿಸಿದ್ದೆ. ನನ್ನ ತಂದೆಯೂ ಕೂಡ ಅದನ್ನೇ ಬಯಸುತ್ತಿದ್ದರು. ಹಾಗಾಗಿಯೇ ಮೊದಲ ಆಲ್ಬಂ ಹಾಡು `ಪುಕ್ಲ..ಪುಕ್ಲ' ಹಾಡಿ ನಟಿಸಿದೆ. ತಂದೆಯವರು `ಹೊಸ ರೀತಿಯ ಪ್ರೇಮಗೀತೆ ಮಾಡೋಣ' ಎಂದಿದ್ದರು. ಹಾಗೆ ಪುಕ್ಲ ಹಾಡು ರೆಡಿಯಾಯಿತು. ಅವರದೇ ಸಂಗೀತವಿತ್ತು. ಆದರೆ ಹಾಡನ್ನು ಬರೆದಿದ್ದು ಸೆಂದಿಲ್ ಎನ್ನುವವರು. ಇದು ಹೊಸ ಜಮಾನದ ಹುಡುಗಿಯೊಬ್ಬಳು ಹುಡುಗನನ್ನು ಗೋಳಾಡಿಸಿಕೊಂಡು ಪ್ರೀತಿ ಹೇಳಿಕೊಳ್ಳುವ ಹಾಗಿತ್ತು. ಅದು ಸಾಕಷ್ಟು ಜನಪ್ರಿಯತೆ ಪಡೆಯಿತು. ನಿಯಾಸ್ ಅದರ ನೃತ್ಯ ನಿರ್ದೇಶಿಸಿದ್ದರು. ಆನಂತರದ್ದು ಅನಿರೀಕ್ಷಿತವಾಗಿ ತಯಾರು ಮಾಡಿರುವಂಥದ್ದು. ಕೊರೊನಾದ ಕಾರಣ ಸಾಂದರ್ಭಿಕವಾಗಿ ಹುಟ್ಟಿರುವಂಥದ್ದು. ಮಕ್ಕಳ ದೃಷ್ಟಿಯಿಂದ ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಒಂದು ಹಾಡು ಮಾಡಿ ಹಾಡೋಣ ಎಂದು ಐಡಿಯಾ ಮಾಡಿಕೊಂಡೆವು. ನಾನು, ಅಮ್ಮ, ತಂದೆಯವರು ಮೂರು ಜನ ಸೇರಿ ಪ್ಲ್ಯಾನ್ ಮಾಡಿ ಮೊದಲು `ಬಾಯ್ ಬಾಯ್ ಕೊರೋನ' ಎಂದು ಹಾಡಿ ಫೇಸ್ಬುಕ್ ಲೈವ್ ಹೋದೆವು. ಆಮೇಲೆ ಈಗ ಅದೇ ಹಾಡನ್ನು ಮನೆಯಲ್ಲೇ ಶೂಟ್ ಮಾಡಿ ಲೆಟ್ಸ್ ಬೂಸ್ಟ್ ಕಿಡ್ಸ್ ಎನ್ನುವ ಕಾನ್ಸೆಪ್ಟ್ ನಲ್ಲಿ ಆಲ್ಬಮ್ ಹಾಡಾಗಿ ಸಿದ್ದಪಡಿಸಿದ್ದೇವೆ. ಸಂಗೀತದಲ್ಲಿ ಪಳನಿ, ಆರವ್ ರಿಷಿಕ್ ಸಹಕಾರವಿದೆ. ಶ್ಯಾಮ್ ಸೆಲ್ವಿನ್ ಛಾಯಾಗ್ರಹಣ ಮಾಡಿದ್ದಾರೆ.

ವೃತ್ತಿಪರವಾಗಿ ನಟನೆಯಲ್ಲೇ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದೀರ?
ನಟನೆ ನನಗೆ ಹೊಸತೇನೂ ಅಲ್ಲ. ಆದರೆ ಸದ್ಯಕ್ಕೆ ಬೇಡ ಎಂದು ತೀರ್ಮಾನಿಸಿದ್ದೆ. ಸಣ್ಣವಳಾಗಿದ್ದಾಗ ತಂದೆಯವರ `ಪ್ರೀತಿಗಾಗಿ' ಧಾರಾವಾಹಿಯಲ್ಲಿ ಮಾಡಿದ್ದೆ. ಅದರೊಳಗೆ ನಾಯಕಿಯ ಚಿಕ್ಕ ವಯಸ್ಸಿನ ಪಾತ್ರವನ್ನು ನಾನೇ ನಿಭಾಯಿಸಿದ್ದೆ. ಅಂಬಿಕಾ ಮತ್ತು ಶರತ್ ಬಾಬು ಅವರ ಮಗಳಾಗಿ ನಟಿಸಿದ್ದೆ. ಚಿಕ್ಕೋಳಾಗಿದ್ದಾಗಲೇ ಸ್ಟೇಜ್ ಕಾರ್ಯಕ್ರಮದಲ್ಲೆಲ್ಲ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಹಾಗಾಗಿ ಕ್ಯಾಮೆರಾ ಎದುರಿಸುವುದು ನನಗೆ ವಿಶೇಷವಾಗಿ ಅನಿಸುವುದಿಲ್ಲ. ಇದರ ಜತೆಯಲ್ಲೇ ಹಾಡು, ಸಂಗೀತ ನನ್ನೊಡನೆಯೇ ಇತ್ತು. ಈ ಲೋಕವನ್ನು ಬಿಟ್ಟು ಹೊಸದೇನಾದರೂ ಮಾಡಬೇಕು ಎನ್ನುವುದು ನನ್ನ ಆಕಾಂಕ್ಷೆಯಾಗಿತ್ತು. ನನಗೆ ಪ್ರಯಾಣ ಎಂದರೆ ತುಂಬ ಅಚ್ಚುಮೆಚ್ಚು. ಹಾಗಾಗಿ ಒಂದೇ ಸ್ಥಳದಲ್ಲಿ ನಿಲುಗಡೆಯಾಗದೆ ಸಂಚರಿಸುತ್ತಿರುವ ಮೂಲಕ ಹೊಸತನ್ನು ಅರಿಯುವ ಅವಕಾಶ ಪಡೆಯುತ್ತಿದ್ದೇನೆ.

ನಿಮ್ಮ ಶಿಕ್ಷಣ, ವೃತ್ತಿ ಬಗ್ಗೆ ಸ್ವಲ್ಪ ಹೇಳಿ?
ಹಾಗಾಗಿಯೇ ಸೈಕಾಲಜಿ ಓದಿದ್ದರೂ ಬಳಿಕ ಏವಿಯೇಶನ್ ಮತ್ತು ಹಾಸ್ಪಿಟಾಲಿಟಿಯಲ್ಲಿ ಪೋಸ್ಟ್ ಗ್ರಾಜ್ಯುಯೇಶನ್ ಮಾಡಿದ್ದೇನೆ! ಆನಂತರ ಒಂದಷ್ಟು ಕಾಲ ಹಾಸ್ಪಿಟಾಲಿಟಿಯಲ್ಲಿ ಕೆಲಸ ಮಾಡಿ ಬಳಿಕ ಜೆಟ್ ಏರ್ ವೇಸ್ ನಲ್ಲಿ ಗಗನ ಸಖಿಯೂ ಆಗಿದ್ದೆ! ಐಬಿಎಮ್ ನ ತಾಂತ್ರಿಕ ವಿಭಾಗದಲ್ಲಿಯೂ ಕೆಲಸ ಮಾಡಿದ ನಾನು ಈಗ HSBC ಎನ್ನುವ ಬ್ಯಾಂಕ್ ನಲ್ಲಿ ವೃತ್ತಿಯಲ್ಲಿದ್ದೀನಿ. ಅದು ನ್ಯಾಶನಲ್ ಲೆವೆಲ್ಲಲ್ಲಿ ಶ್ರೇಷ್ಠ ಬ್ಯಾಂಕ್. ನನಗೆ ಅದರಲ್ಲಿ ನಾನು ರೊಬೋಟ್ ಡಿಸೈನರ್ ಕೆಲಸ. ಈ ದಿಢೀರ್ ಲಾಕ್ಡೌನ್ ನನ್ನೊಳಗಿನ ಕಲಾವಿದೆಗೆ ಹೆಚ್ಚಿನ ಅವಕಾಶ ನೀಡಿದೆ ಎನ್ನಬಹುದು.