For Quick Alerts
  ALLOW NOTIFICATIONS  
  For Daily Alerts

  ಮೇನಕೆಯಂತೆ ಮನಸೆಳೆವ ಪೋಷಕ ನಟಿ ಮೋನಿಕಾ

  |

  ಹೆಸರು ಮೋನಿಕಾ ಕೆ.ವಿ ಅಂದ್ರಾದೆ. ಮೂಲತಃ ಉಡುಪಿ ಜಿಲ್ಲೆ, ಕಾರ್ಕಳದ ಬೆಳ್ಮಣ್ಣು ನಿವಾಸಿ. ಮೊದಲ ನೋಟದಲ್ಲೇ ಆಕರ್ಷಿಸುವಂಥ ಚೆಲುವು. ಕಾಲೇಜ್ ದಿನಗಳಿಂದಲೇ ಅಭಿನಯದಲ್ಲಿ ಒಲವು. ಸ್ಥಳೀಯ ನಾಟಕಗಳಲ್ಲಿಯೂ ನಟಿಯಾಗಿ ಗುರುತಿಸಿಕೊಂಡಾಕೆಗೆ ದೊಡ್ಡ ಅವಕಾಶ ದೊರಕಿದ್ದು ಮಂಗಳೂರಿನಿಂದ. ಅದಕ್ಕೆ ಕಾರಣವಾಗಿದ್ದು, ಕರಾವಳಿಯ ಖ್ಯಾತ ರಂಗನಟ, ನಿರ್ದೇಶಕ, ತುಳು ಕನ್ನಡ ಸಿನಿಮಾಗಳಲ್ಲಿಯೂ ಹೆಸರಾಗಿರುವ ದೇವದಾಸ್ ಕಾಪಿಕಾಡ್.

  ಅವರು ತಮ್ಮ ಬಲೇ ಚಾ ಪರ್ಕ' ನಾಟಕ ತಂಡದಲ್ಲಿ ಮೋನಿಕಾರನ್ನು ನಾಯಕಿಯಾಗಿ ಪರಿಚಯಿಸಿದರು. ಹಾಗೆ ತುಳು ರಂಗಭೂಮಿಯಲ್ಲಿ ಜನಪ್ರಿಯ ತಾರೆಯಾದ ಮೋನಿಕಾ ಬಳಿಕ ತುಳು ಸಿನಿಮಾಗಳಲ್ಲಿಯೂ ಅಭಿನಯಿಸಿದರು. ಪ್ರಸ್ತುತ ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಮೋನಿಕಾ ಇದುವರೆಗೆ ಒಟ್ಟು ಸುಮಾರು 50ರಷ್ಟು ಸಿನಿಮಾ ಮತ್ತು 10ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  ಸದ್ಯದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಪಡೆದ ಖುಷಿಯಲ್ಲಿರುವ ಮೋನಿಕಾ ಅವರೊಂದಿಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

  ತುಳುರಂಗಭೂಮಿಗೆ ನಿಮ್ಮ ಪ್ರವೇಶವಾಗಿದ್ದು ಹೇಗೆ?

  ತುಳುರಂಗಭೂಮಿಗೆ ನಿಮ್ಮ ಪ್ರವೇಶವಾಗಿದ್ದು ಹೇಗೆ?

  ನಾನು ನಮ್ಮ ಊರಲ್ಲಿ ನಾಟಕದಲ್ಲಿ ನಟಿಸುತ್ತಿದ್ದ ಕಾರಣ, ಒಂದಷ್ಟು ರಂಗಭೂಮಿ ಕಲಾವಿದರ ಪರಿಚಯಿತ್ತು. ಹಾಗೆ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದಲ್ಲಿ ಕೊರಿಯಾಗ್ರಫರ್ ಆಗಿದ್ದವರಿಗೆ ನನ್ನ ಪರಿಚಯವಿತ್ತು. ಅವರೇ ನನಗೆ ಕಾಪಿಕಾಡ್ ಅವರಲ್ಲಿ ಹೋಗಿ ಅವಕಾಶ ಕೇಳುವಂತೆ ಹೇಳಿದ್ದರು. ನನಗೆ ಅಲ್ಲಿ ನಾಯಕಿಯಾಗಿಯೇ ಅವಕಾಶ ದೊರಕಿತು.

  ಒಟ್ಟು ತುಳು ರಂಗಭೂಮಿಯಲ್ಲಿ ಎಷ್ಟು ವರ್ಷಗಳ ಅನುಭವ ಪಡೆದುಕೊಂಡಿರಿ?

  ಒಟ್ಟು ತುಳು ರಂಗಭೂಮಿಯಲ್ಲಿ ಎಷ್ಟು ವರ್ಷಗಳ ಅನುಭವ ಪಡೆದುಕೊಂಡಿರಿ?

  ಸುಮಾರು ಏಳು ವರ್ಷಗಳ ಕಾಲ ರಂಗಭೂಮಿ ನಟಿಯಾಗಿಯೇ ಇದ್ದೆ. ದೇವದಾಸ್ ಕಾಪಿಕಾಡ್ ಅವರ ತಣಡದಲ್ಲಿ ಮೊದಲ ನಾಟಕ `ಕೆಬಿ ಪಿತ್ತಳೆ'. ಅದರ ಬಳಿಕ `ಈರ್ ಉಂಡರ'? `ಬದ್ಕ್ ದ್ ಒರಿಂಡ', `ಬದ್ಕುನ ಸಾದಿ', `ಪೋಡ್ಯೊಡ್ಚಿ ಯಾನುಲ್ಲೆ' ಮೊದಲಾದ ನಾಟಕಗಳಲ್ಲಿ ನಟಿಸಿದೆ. ಅವುಗಳಲ್ಲಿ `ಬದ್ಕ್ ದ್ ಒರಿಂಡ' ನಾಟಕವನ್ನು ಕನ್ನಡದಲ್ಲಿ `ಬದುಕಿ ಉಳಿದ್ರೆ' ಎಂದು ಬದಲಾಯಿಸಿ ಮಾಡಿ ಕುಂದಾಪುರದಲ್ಲಿ ಪ್ರದರ್ಶಿಸಿದಾಗಲೂ ನಾನೇ ನಾಯಕಿಯಾಗಿದ್ದೆ. ಏಳು ವರ್ಷಗಳಲ್ಲಿ ಮಂಗಳೂರು, ಮುಂಬೈ, ದುಬೈ ಸೇರಿದಂತೆ ವಿವಿಧ ನಾಟಕಗಳ ಮೂಲಕ ವಿವಿಧ ವೇದಿಕೆಗಳಲ್ಲಿ ಒಟ್ಟು ನಾಲ್ಕು ಸಾವಿರದಷ್ಟು ಪ್ರದರ್ಶನ ನೀಡಿದ್ದೇನೆ.

  ನಟನಾ ಬದುಕಿನಲ್ಲಿ ಮರೆಯಲಾಗದ ಘಟನೆಗಳು ನಡೆದಿದೆಯೇ?

  ನಟನಾ ಬದುಕಿನಲ್ಲಿ ಮರೆಯಲಾಗದ ಘಟನೆಗಳು ನಡೆದಿದೆಯೇ?

  ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ `ಬದ್ಕ್ ದ ಒರಿಂಡ' ನಾಟಕ ಪ್ರದರ್ಶನದ ಕ್ಲೈಮ್ಯಾಕ್ಸ್ ದೃಶ್ಯ, ನನಗೆ ಪ್ರತಿಬಾರಿಯೂ ವಿಶೇಷ ಅನುಭವ ನೀಡುತ್ತಿತ್ತು. ಯಾಕೆಂದರೆ ರಂಗಭೂಮಿಯಲ್ಲಿನ ಭಾವನಾತ್ಮಕ ದೃಶ್ಯ ಬಂದರೆ ಮಹಿಳಾ ಪ್ರೇಕ್ಷಕರು ಕಣ್ಣೀರಾಗುವುದು ಹೊಸದೇನಲ್ಲ. ಆದರೆ ಎಷ್ಟೋ ಗಂಡಸರು ಕೂಡ ಕಣ್ಣೀರು ಒರೆಸಿಕೊಂಡು ನಾಟಕ ನೋಡುವಂತೆ ಮಾಡುವ ಪಾತ್ರದಲ್ಲಿ ಅಭಿನಯ ನೀಡುವ ಅವಕಾಶ ಸಿಕ್ಕಿದ್ದು ಅಭೂತಪೂರ್ ಅನುಭವವಾಗಿತ್ತು. ಅದೇ ರೀತಿ ಯಾರೋ ಮಾಡಿದ ತಪ್ಪಿಗೆ ಆಪಾದನೆ ಎದುರಿಸುವಂತಾದ ನನಗೆ ಗುರುಗಳ ತಂಡವನ್ನು ತೊರೆಯುವ ಪರಿಸ್ಥಿತಿ ಬಂದಿದ್ದು ಕೂಡ ಮರೆಯಲಾಗದ ಘಟನೆಯೇ. ಆದರೆ ತಂಡ ಬಿಡುವುದಾಗಿ ಹೇಳುವಾಗ `ನಿನ್ನ ತಪ್ಪಿಲ್ಲ ಇಲ್ಲೇ ಇರು' ಎನ್ನುವ ಸಮಾಧಾನದ ಮಾತು ಗುರು(ದೇವದಾಸ್ ಕಾಪಿಕಾಡ್) ಹೇಳಲಿಲ್ಲವಲ್ಲ ಎನ್ನುವುದು ಕೂಡ ಕಾಡುತ್ತಿರುತ್ತದೆ.

  ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪ್ರವೇಶಿಸಿದಾಗ ಸಿಕ್ಕ ಅನುಭವ ಹೇಗಿತ್ತು?

  ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪ್ರವೇಶಿಸಿದಾಗ ಸಿಕ್ಕ ಅನುಭವ ಹೇಗಿತ್ತು?

  ಮೊದಲ ತುಳು ಸಿನಿಮಾ ಕೂಡ ದೇವದಾಸ್ ಕಾಪಿಕಾಡ್ ಅವರದೇ ನಿರ್ದೇಶನದ `ತೆಲಿಕೆದ ಬೊಳ್ಳಿ' ಎನ್ನುವ ಸಿನಿಮಾ ಆಗಿತ್ತು. ತುಳು ಚಿತ್ರಗಳಲ್ಲಿ ನಟಿಸುತ್ತಿದ್ದ ನನಗೆ ಮೊದಲ ಕನ್ನಡ ಚಿತ್ರದಲ್ಲಿ ಅವಕಾಶ ದೊರಕಿದ್ದು ಬಹುತೇಕ ಕರಾವಳಿಯಲ್ಲೇ ಚಿತ್ರೀಕರಣಗೊಂಡ ರಕ್ಷಿತ್ ಶೆಟ್ಟಿಯವರ `ರಿಕ್ಕಿ' ಸಿನಿಮಾದ ಮೂಲಕ. ಬಳಿಕ ಸುನೀಲ್ ಕುಮಾರ್ ದೇಸಾಯಿಯವರ `ಉದ್ಘರ್ಷ', ಕೋಡ್ಲು ರಾಮಕೃಷ್ಣ ಸರ್ ಅವರ `ಮಾರ್ಚ್ 22' ಸೇರಿದಂತೆ ಕನ್ನಡದಲ್ಲಿ 25ರಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾಟಕದಲ್ಲಿರುವಾಗ ದೇವದಾಸ್ ಸರ್ ನನಗೆ ವೈವಿಧ್ಯಮಯ ಪಾತ್ರಗಳನ್ನು ನೀಡುತ್ತಿದ್ದರು. ಆದರೆ ತುಳು ಚಿತ್ರರಂಗದಲ್ಲಿ ನನಗೆ ಎಲ್ಲ ನಿರ್ದೇಶಕರುಗಳು ಒಂದೇ ರೀತಿಯ ಪಾತ್ರ ನೀಡಲಾರಂಭಿಸಿದರು! ಅಲ್ಲಿ ಕಾಮಿಡಿ ಸಿನಿಮಾಗಳದ್ದೇ ಟ್ರೆಂಡ್ ಇರುವ ಕಾರಣ ಪೋಷಕ ಪಾತ್ರಗಳಲ್ಲಿ ವೈವಿಧ್ಯತೆ ಬಯಸುವಂತಿಲ್ಲ. ಜತೆಗೆ ಸಿನಿಮಾಗಳ ಇಮೇಜನ್ನೇ ನಿಜ ಬದುಕಿನಲ್ಲಿಯೂ ಆಪಾದಿಸುವವರಿಗೂ ಕೊರತೆ ಇಲ್ಲ. ಆದರೆ ಕನ್ನಡ ಸಿನಿಮಾಗಳಲ್ಲಿ ನನಗೆ ವೈವಿಧ್ಯಮಯ ಪಾತ್ರಗಳು ಸಿಗುತ್ತಿವೆ.

  ಚಿತ್ರರಂಗದಲ್ಲಿ ನಿಮ್ಮ ಕನಸುಗಳೇನು?

  ಚಿತ್ರರಂಗದಲ್ಲಿ ನಿಮ್ಮ ಕನಸುಗಳೇನು?

  ಇನ್ನು ಹೆಸರಿಡದ ಚಿತ್ರದಲ್ಲಿ ಎಂ.ಕೆ ಮಠ ಸರ್ ಜತೆಗೆ ಕಾಂಬಿನೇಶನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾದಲ್ಲಿ ಒಳ್ಳೆಯ ಕಲಾವಿದೆಯಾಗಬೇಕು ಎನ್ನುವ ಆಸೆ ಮೊದಲಿನಿಂದಲೂ ಇದೆ. ಪ್ರಸ್ತುತ ನಾಯಕಿಯಾಗುವ ಸಮಯ ದಾಟಿದೆ. ಆದರೆ ಪೋಷಕ ನಟಿಯಾದರೂ ಉಮಾಶ್ರೀ ಮೇಡಂ ಅವರಂತೆ ನಟನೆಯಿಂದ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿದೆ. ಹಾಗಾಗಿಯೇ ಪ್ರಸ್ತುತ ಬೆಂಗಳೂರಲ್ಲಿಯೇ ವಾಸವಾಗಿದ್ದುಕೊಂಡು ಕನ್ನಡ ಸಿನಿಮಾ ನಟನೆಯತ್ತ ಗಮನ ಕೇಂದ್ರೀಕರಿಸಿದ್ದೇನೆ. ನನ್ನ ತಂಗಿ ಕೂಡ ಬೆಂಗಳೂರಿನಲ್ಲೇ ಸ್ಪೋರ್ಟ್ಸ್ ಟೀಚರಾಗಿ ವೃತ್ತಿಯಲ್ಲಿದ್ದಾಳೆ. ಆಕೆ ಉತ್ತಮ ಕೊರಿಯೋಗ್ರಾಫರ್ ಕೂಡ ಹೌದು. ಆದರೆ ನಾಲ್ಕು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಏಟಾಗಿರುವ ನನ್ನ ತಮ್ಮ ವಿಲ್ಸನ್ ಇಂದಿಗೂ ಬೆಡ್ ರೆಸ್ಟ್ ನಲ್ಲಿರುವುದು ಬದುಕಿನ ಜವಾಬ್ದಾರಿಯನ್ನು ಹೆಚ್ಚಿಸಿದೆ.

  English summary
  Monica Andrade Famous in Tulu film Industry as Theatre Artist. Now She is supporting Actress in Kannada Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X