For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ಲಾಕ್ ಡೌನ್ ನಲ್ಲಿ 'ಕನ್ನಡತಿ' ರಂಜನಿ ಈಗ ಏನ್ಮಾಡ್ತಿದ್ದಾರೆ?

  |

  ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾ ವೈರಸ್ ಆತಂಕಕ್ಕೆ ಸಂಪೂರ್ಣ ಭಾರತ ಸ್ತಬ್ದವಾಗಿದೆ. ಕೊರೊನಾ ವೈರಸ್ ಮಟ್ಟ ಹಾಕಲೇಬೇಕೆಂಬ ಕಾರಣಕ್ಕೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಗೆ ಪ್ರಧಾನಿಗಳು ಕರೆ ನೀಡಿದ್ದು, ಇದರಿಂದ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ.

  Putta Gowri Maduve fame Ranjani Raghavan enter telugu cinema industry | FILMIBEAT KANNADA

  ಉದ್ಯೋಗ ಅರಸಿ ಸಿಟಿಗೆ ಬಂದಿದ್ದ ಅನೇಕರು ಮರಳಿ ತಮ್ಮ-ತಮ್ಮ ಊರು ಸೇರಿದ್ದಾರೆ. ಚಿತ್ರೀಕರಣ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಯಾವುದೆ ಚಟುವಟಿಕೆಗಳು ನಡೆಯುತ್ತಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಈ ಸಮಯದಲ್ಲಿ ಸಿನಿಮಾ ಮತ್ತು ಧಾರಾವಾಹಿ ಕಲಾವಿದರು ಏನು ಮಾಡುತ್ತಿದ್ದಾರೆ, ಯಾವ ರೀತಿ ಸಮಯ ಕಳೆಯುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

  ಇನ್ನೆಷ್ಟು ದಿನ ಪ್ರಸಾರವಾಗುತ್ತವೆ ಟಿವಿ ಧಾರವಾಹಿಗಳು?ಇನ್ನೆಷ್ಟು ದಿನ ಪ್ರಸಾರವಾಗುತ್ತವೆ ಟಿವಿ ಧಾರವಾಹಿಗಳು?

  ಈ ಸಮಯದಲ್ಲಿ ಸದಾ ಶೂಟಿಂಗ್ ಅಂತ ಬ್ಯುಸಿ ಇರುತ್ತಿದ್ದ ಕಲಾವಿದರ ದಿನಚರಿ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲದಿಂದ 'ಫಿಲ್ಮಿ ಬೀಟ್ ಕನ್ನಡ' ತಂಡ 'ಕನ್ನಡತಿ' ಧಾರಾವಾಹಿ ನಟಿ ರಂಜನಿ ಅವರನ್ನು ಸಂಪರ್ಕ ಮಾಡಿ ಮಾತನಾಡಿಸಿಸುವ ಪ್ರಯತ್ನ ಮಾಡಿದೆ. ಮುಂದೆ ಓದಿ...

  ''ನಾನೀಗ ಸದ್ಯ ಕಾರು ತೊಳೆಯುತ್ತಿದ್ದೇನೆ ಹೇಳಿ...''

  ''ನಾನೀಗ ಸದ್ಯ ಕಾರು ತೊಳೆಯುತ್ತಿದ್ದೇನೆ ಹೇಳಿ...''

  ರಂಜಿನಿ ಅವರಿಗೆ ಫೋನ್ ಮಾಡಿ ಫಿಲ್ಮಿ ಬೀಟ್ ಕನ್ನಡದಿಂದ ಮಾತನಾಡುತ್ತಿರುವುದು ಎಂದು ಮಾತು ಪ್ರಾರಂಭಿಸುತ್ತಿದ್ದಂತೆ "ನಾನು ಈಗ ಕಾರು ತೊಳೆಯುತ್ತಿದ್ದೇನೆ ಹೇಳಿ" ಎಂದು ರಂಜನಿ ಆಕಡೆಯಿಂದ ಮಾತು ಪ್ರಾರಂಭಿಸಿದರು. ಲಾಕ್ ಡೌನ್ ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ರಂಜನಿ "ನಾನು ಆರಾಮಾಗಿ ಮನೆಯಲ್ಲಿ ಇದ್ದೀನಿ. ಕುಟುಂಬದ ಜೊತೆ ಇರಲು ಉತ್ತಮ ಟೈಂ ಇದು. ಚಿತ್ರೀಕರಣ ಇಲ್ಲದಿರುವ ಕಾರಣ ಮನೆಯಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಎಂದು ಹೊಸ ದಿನಚರಿ ರಚಿಸಿಕೊಂಡಿದ್ದೇನೆ" ಎಂದರು

  ಸ್ಕ್ರಿಪ್ಟ್ ಕೆಲಸದಲ್ಲಿ ರಂಜನಿ ಬ್ಯುಸಿ

  ಸ್ಕ್ರಿಪ್ಟ್ ಕೆಲಸದಲ್ಲಿ ರಂಜನಿ ಬ್ಯುಸಿ

  ರಂಜನಿ ಸದ್ಯ ಮನೆಯಲ್ಲಿ ಇರುವ ಕಾರಣ ಮನೆಯ ಒಂದಿಷ್ಟು ಕೆಲಸಗಳ ಜೊತೆಗೆ ಚಿತ್ರಕತೆ ಬರೆಯುತ್ತಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ರಂಜನಿ ಅದ್ಭುತ ನಟಿ ಮಾತ್ರವಲ್ಲ. ನಿರ್ದೇಶಕಿ ಮತ್ತು ಬರಹಗಾರ್ತಿ ಕೂಡ. ಈಗಾಗಲೆ "ಇಷ್ಟ ದೇವತೆ" ಎನ್ನುವ ಧಾರಾವಾಹಿ ನಿರ್ದೇಶನ ಮಾಡಿದ್ದರು. ಬರವಣಿಗೆ ಎಂದರೆ ತುಂಬ ಇಷ್ಟ ಎನ್ನುವ ರಂಜನಿ ಸದ್ಯ ಮನೆಯಲ್ಲಿ ಮತ್ತೊಂದು ಧಾರಾವಾಹಿಗೆ ಕಥೆ ಬರೆಯುತ್ತಿದ್ದಾರಂತೆ.

  "ಮೊದಲ ಬಾರಿಗೆ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡೆ.."

  ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಿದ್ದ ರಂಜನಿ ಮನೆಯವರ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ಮನೆಯಲ್ಲಿ ಇರುವುದರಿಂದ ಮೊದಲ ಬಾರಿಗೆ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡಿಕೊಂಡಿದ್ದಾರಂತೆ. ''ಮನೆಯಲ್ಲಿಯೆ ಕೇಕ್ ತಯಾರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದು ಸಂತಸ ತಂದಿದೆ" ಎಂದು ನಕ್ಕರು ರಂಜನಿ.

  "ಸ್ವಲ್ಪ ಸಮಯ ವರ್ಕೌಟ್ ಮಾಡುತ್ತೇನೆ"

  "ಈಗ ಜಿಮ್ ಗೆ ಹೋಗಲು ಸಧ್ಯವಾಗದ ಕಾರಣ ಮನೆಯಲ್ಲಿ ವರ್ಕೌಟ್ ಮಾಡುತ್ತೇನೆ. ಹೆಚ್ಚು ವರ್ಕೌಟ್ ಮಾಡಲು ಸಾಧ್ಯವಾಗಲ್ಲ. ಜಿಮ್ ನಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವರ್ಕೌಟ್ ಮಾಡುತ್ತಿದ್ದೆ. ಆದರೀಗ ಮನೆಯಲ್ಲಿ ಅರ್ಧ ಗಂಟೆ ಮಾಡುವುದು ಹೆಚ್ಚು. ಸ್ವಲ್ಪ ವರ್ಕೌಟ್ ಮಾಡುತ್ತೇನೆ. ಆದರೆ ಕುಟುಂಬದ ಜೊತೆ ತುಂಬ ಸಂತೋಷವಾಗಿ ಕಾಲಕಳೆಯುತ್ತಿದ್ದೇನೆ" ಎಂದರು.

  "ಹೊಸ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ"

  ರಂಜನಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸದ್ಯ ರಂಜನಿ ಅಭಿನಯದ 'ಟಕ್ಕರ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನಲೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಜೊತೆಗೆ ಹೊಸ ಸಿನಿಮಾದ ಶೂಟಿಂಗ್ ಪ್ರಾರಂಭವಾಗಬೇಕಿತ್ತು, ದಿಗಂತ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಿಟ್ಟೂರಿನಲ್ಲಿ ಸಿನಿಮಾ ಶೂಟಿಂಗ್ ಈಗಾಗಲೆ ಪ್ರಾರಂಭವಾಗಬೇಕಿತ್ತು. ಆದರೀಗ ಮುಂದಕ್ಕೆ ಹೋಗಿದೆ. ಆದರೂ ಪರವಾಗಿಲ್ಲ ಜೀವಕ್ಕಿಂತ ಇದೆಲ್ಲ ದೊಡ್ಡದಲ್ಲ" ಎಂದು ಜವಾಬ್ದಾರಿ ಮೆರೆದರು ರಂಜನಿ.

  ಬೀದಿನಾಯಿಗಳ ಹಸಿವು ನೀಗಿಸುತ್ತಿರುವ ಕನ್ನಡತಿ

  ಬೀದಿನಾಯಿಗಳ ಹಸಿವು ನೀಗಿಸುತ್ತಿರುವ ಕನ್ನಡತಿ

  ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಬೀದಿ ನಾಯಿಗಳು ಊಟ ಇಲ್ಲದೆ ಪರದಾಡುತ್ತಿವೆ. ಹೋಟೆಲ್, ಜನರನ್ನೆ ನಂಬಿಕೊಂಡು ಬದುಕುತ್ತಿದ್ದ ನಾಯಿಗಳು ಅನ್ನ ನೀರು ಇಲ್ಲದೆ ಪರದಾಡುತ್ತಿವೆ. ಇಂತಹ ನಾಯಿಗಳ ಹಸಿವನ್ನು ನೀಗಿಸುತ್ತಿದ್ದಾರೆ ರಂಜನಿ. ನನಗೆ ಎಲ್ಲಾ ಕಡೆ ಹೋಗಿ ಸಹಾಯ ಮಾಡುವಷ್ಟು ಸಂಪರ್ಕವಿಲ್ಲ. ಆದರೆ ನಮ್ಮ ಬೀದಿಯಲ್ಲಿ ಇರುವ ನಾಯಿಗಳಿಗೆ ಸಾಧ್ಯವಾದಷ್ಟು ಆಹಾರ ವ್ಯವಸ್ಥೆ ಮಾಡುತಿದ್ದೇನೆ" ಎಂದರು.

  English summary
  Kannada famous serial Actress Rajani Speak about lockdown. Actress Ranjani Raghavan interview about Lock Down.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X