Don't Miss!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: "ಮತ್ತೊಮ್ಮೆ ಗಟ್ಟಿಯಾಗಿ ಹೇಳ್ತೀನಿ, 2 ಹಾಡುಗಳು ಬೇರೆ ಬೇರೆ..ದೇವರ ಆಶೀರ್ವಾದದಿಂದ ತಡೆಯಾಜ್ಞೆ ತೆರವು": ಅಜನೀಶ್
'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡಿನ ಕೃತಿಚೌರ್ಯ ವಿವಾದದ ಹೋರಾಟದಲ್ಲಿ ಹೊಂಬಾಳೆ ಸಂಸ್ಥೆಗೆ ಜಯ ಸಿಕ್ಕಿದೆ. ಹಾಡಿನ ಬಳಕೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಕೋರ್ಟ್ 3 ದಿನಗಳ ಹಿಂದೆ ತೆರವುಗೊಳಿಸಿತ್ತು. ಈ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪ್ರತಿಕ್ರಿಯಿಸಿದ್ದಾರೆ.
ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡ ಈ ಹಿನ್ನೆಲೆಯಲ್ಲಿ 'ವರಾಹ ರೂಪಂ' ಮತ್ತೆ ಥಿಯೇಟರ್, ಯೂಟ್ಯೂಬ್ ಹಾಗೂ ಓಟಿಟಿಯಲ್ಲಿ ಮತ್ತೆ ಮರುಸೇರ್ಪಡೆಗೊಂಡಿದೆ. 'ಕಾಂತಾರ' ಚಿತ್ರದ 'ವರಾಹ ರೂಪಂ' ಸಾಂಗ್ ಹಿಟ್ ಆಗಿತ್ತು. ಚಿತ್ರದ ಸಕ್ಸಸ್‌ಗೆ ದೊಡ್ಡ ಕ್ರೆಡಿಟ್ ನೀಡಿತ್ತು. ಆದರೆ ಕೇರಳದ ಸಂಗೀತ ಬ್ಯಾಂಡ್ 'ಥೈಕ್ಕುಡಂ ಬ್ರಿಡ್ಜ್' ಹಾಡಿನ ಬಗ್ಗೆ ಕೃತಿಚೌರ್ಯದ ಆರೋಪ ಮಾಡಿ ಕೇಸ್ ದಾಖಲಿಸಿತ್ತು. ತಾವು ಮಾಡಿದ 'ನವರಸಂ' ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಳಿಕ್ಕೋಡ್ ಪ್ರಧಾನ ಜಿಲ್ಲಾ ನ್ಯಾಯಾಲಯ ಕಾಂತಾರ ನಿರ್ಮಾಪಕರಿಗೆ ವರಾಹರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
'ಕಾಂತಾರ'
ಹಿಂದಿ
ಓಟಿಟಿ
ರಿಲೀಸ್
ಡೇಟ್ಸ್
ಫಿಕ್ಸ್:
ನೆಟ್‌ಫ್ಲಿಕ್ಸ್
ಮೂಲಕ
ಜಗತ್ತಿನ
ಮೂಲೆ
ಮೂಲೆಗೆ
ಶಿವನ
ಕಥೆ
'ಥೈಕ್ಕುಡಂ ಬ್ರಿಡ್ಜ್' ಆರೋಪವನ್ನು ಹೊಂಬಾಳೆ ಸಂಸ್ಥೆ ತಳ್ಳಿ ಹಾಕಿತ್ತು. ಎರಡೂ ಹಾಡುಗಳು ಕೇಳಲು ಒಂದೇ ರೀತಿ ಇರಬಹುದು. ಆದರೆ ನಾವು ಟ್ಯೂನ್ ಕದ್ದಿಲ್ಲ ಎಂದಿದ್ದರು. ಇದನ್ನೇ ಕೋರ್ಟ್ ಮುಂದೆ ಇಟ್ಟಿದ್ದರು. ಕೆಲ ದಿನಗಳ ಹಿಂದೆ ಪ್ರಕರಣದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಕೊಂಚ ಹಿನ್ನಡೆ ಆಗಿತ್ತು. ಇದರಿಂದ ಮೊದಲು ಮಾಡಿದ್ದ 'ವರಾಹ ರೂಪಂ' ಹಾಡನ್ನು ಕೈಬಿಟ್ಟು, ಹೊಸ ಟ್ಯೂನ್‌ನಲ್ಲಿ ಮತ್ತೊಂದು ಹಾಡು ಮಾಡಿ ಸೇರಿಸಲಾಗಿತ್ತು. ಇದೀಗ ಹೋರಾಟದಲ್ಲಿ ಸಂಪೂರ್ಣವಾಗಿ ಚಿತ್ರತಂಡಕ್ಕೆ ಗೆಲುವು ಸಿಕ್ಕಿದೆ. ಈ ಬಗ್ಗೆ ಅಜನೀಶ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

ನಾನು ಕೃತಿ ಚೌರ್ಯ ಮಾಡಿರಲಿಲ್ಲ
'ವರಾಹ ರೂಪಂ' ಹಾಡನ್ನು 'ನವರಸಂ' ಹಾಡಿನ ಜೊತೆ ಹೋಲಿಸಿ ಕೆಲವರು ಮಾತನಾಡುತ್ತಿದ್ದಂತೆ ಫಿಲ್ಮಿಬೀಟ್ ಅಜನೀಶ್ ಲೋಕನಾಥ್ ಅವರನ್ನು ಸಂಪರ್ಕಿಸಿತ್ತು. ಆಗ ಅಜನೀಶ್ ಹೇಳಿದ್ದು ಒಂದೇ ಮಾತು. ನಾವು ಟ್ಯೂನ್ ಕದ್ದಿಲ್ಲ. ಇದನ್ನು ಸಾಬೀತು ಮಾಡಲು ಸಿದ್ದ ಎಂದಿದ್ದರು. ಹೋರಾಟದಲ್ಲಿ ಗೆಲುವು ಸಿಕ್ಕ ಮೇಲೆ ಮತ್ತೆ ಈ ಬಗ್ಗೆ ಅಜನೀಶ್ ಮಾತನಾಡಿದ್ದಾರೆ. "ನಾನು ಕೃತಿ ಚೌರ್ಯ ಮಾಡಿರಲಿಲ್ಲ. ಕೆಲವರಿಗೆ ಎರಡು ಹಾಡುಗಳನ್ನು ಕೇಳಿದಾಗ ಒಂದೇ ಎನಿಸಿರಬಹುದು. ಆದರೆ ಒಂದೇ ಅಲ್ಲ. ಎರಡೂ ಕೂಡ ಎರಡು ಬೇರೆ ಬೇರೆ ಹಾಡುಗಳು. ಅದಕ್ಕಿಂತ ಹೆಚ್ಚಾಗಿ ಹೇಳಲು ಬೇರೇನು ಇಲ್ಲ" ಎಂದಿದ್ದಾರೆ.

ಯಾಕೆ ಹೀಗೆಲ್ಲಾ ಆಯಿತು ಗೊತ್ತಾಗುತ್ತಿಲ್ಲ
"ಕೋರ್ಟ್‌ನಿಂದ ತಡೆಯಾಜ್ಞೆ ತೆರವಾಗಿದೆ. ಎರಡೂ ಹಾಡುಗಳು ಪಬ್ಲಿಕ್ ಫ್ಲಾಟ್‌ಫಾರ್ಮ್‌ನಲ್ಲಿ ಇದೆ. ಎರಡೂ ಹಾಡುಗಳು ಒಂದೇನಾ? ಬೇರೆನಾ? ಎನ್ನುವುದು ತಿಳಿಯಲು ಸಂಗೀತದ ಸೂಕ್ಷ್ಮ ಅರಿತವರಿಗೆ ಮಾತ್ರ ಸಾಧ್ಯ. ಹಾಡಿಗೆ ಸಂಗೀತ ಸಂಯೋಜನೆ ಬಹಳ ಮುಖ್ಯ. ಒಂದು ಹಾಡನ್ನು ಗುರ್ತಿಸುವುದೇ ಟ್ಯೂನ್‌ನಿಂದ. 'ವರಾಹ ರೂಪಂ' ಟ್ಯೂನ್ ಇರಬಹುದು. ನಾದಸ್ವರದ ಬಿಟ್ ಇರಬಹುದು. ಎಲ್ಲವೂ ಬೇರೆ ಬೇರೆ. ಇದು ಈ ಮಟ್ಟಿಗೆ ಹೋಗಬಾರದಿತ್ತು. ಹೋಗಿದೆ. ಯಾಕೆ ಹೀಗೆಲ್ಲಾ ಆಯಿತು ಎನ್ನುವುದರ ಸುಳಿವು ನನಗೆ ಸಿಗುತ್ತಿಲ್ಲ. ಮತ್ತೊಮ್ಮೆ ಗಟ್ಟಿಯಾಗಿ ಹೇಳುತ್ತೇನೆ, ಎರಡೂ ಹಾಡುಗಳು ಬೇರೆ ಬೇರೆ." ಎಂದು ಅಜನೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ಮನಸಾಕ್ಷಿ ಒಪ್ಪುತ್ತಿರಲಿಲ್ಲ
"ಆರೋಪ ಮಾಡಿದ್ದು ಅವರು. ಅದೇನು ಅವರು ಸಾಬೀತು ಮಾಡಬೇಕು. ನಾನು ಯಾವ ಹಾಡನ್ನು ಕಾಪಿ ಮಾಡಿಲ್ಲ. ನಮ್ಮ ಪಾಡಿಗೆ ನಾವು ಇದ್ದೆವು. ಕೇಸ್ ಹಾಕಿದ್ರು. ಹೋರಾಟ ಮಾಡಿದ್ದೆವು. ನನ್ನ ಮನಸಾಕ್ಷಿ ಒಪ್ಪುತ್ತಿರಲಿಲ್ಲ. ನನ್ನನ್ನು ಯಾರಾದರೂ ಕೇಳಿದ್ರೆ, ಸಾಬೀತು ಮಾಡಲು ಸಿದ್ಧ. ನನಗೆ ಗೊತ್ತಿರುವ ಸಂಗೀತದಲ್ಲಿ ನಾನು ಮಾಡಿದ್ದೇನೆ. ಇದು ನನ್ನ ಕಂಪೋಸೇಷನ್. 2 ತಿಂಗಳ ಕಾಲ ಈ ಹಾಡಿಗಾಗಿ ಕೆಲಸ ಮಾಡಿದ್ದೇನೆ. ಅಂದರೆ ಇಡೀ ಪ್ರೋಸೆಸ್ ಅಷ್ಟು ಸಮಯ ತೆಗೆದುಕೊಂಡಿತ್ತು."

ತಡೆಯಾಜ್ಞೆ ತೆರವಾಗಿದ್ದು ದೇವರ ಆಶೀರ್ವಾದ
"ನಾನು ಬಹಳ ಶ್ರದ್ಧೆ, ಭಕ್ತಿಯಿಂದ ಈ ಹಾಡನ್ನು ಮಾಡಿದ್ದೆ. ನನ್ನ ಜೀವನದಲ್ಲಿ ಪ್ರತಿಯೊಂದನ್ನು ಆ ದೇವರ ಅನುಗ್ರಹ, ಆಶೀರ್ವಾದ ಎಂದು ನಂಬಿದ್ದೇನೆ. ಕೇಸ್ ಆಗಿದ್ದನ್ನು ಅದೇ ರೀತಿ ಯೋಚನೆ ಮಾಡ್ತೀನಿ. ನಾವು ಗೆದ್ದಿದ್ದನ್ನು ಕೂಡ ಆ ದೇವರ ಆಶೀರ್ವಾದ ಎಂದು ನಂಬಿದ್ದೇನೆ. ಏನೋ ಒಂದು ಆಗಬೇಕಿತ್ತು. ಅದು ಆಗಿದೆ. ಬಂದಿದ್ದನ್ನು ಎದುರಿಸಿಕೊಂಡು ಮುಂದೆ ಹೋಗಬೇಕು. 'ಕಾಂತಾರ' ಈ ಮಟ್ಟಿಗೆ ಸಕ್ಸಸ್ ಕಂಡಿದ್ದು ದೇವರ ಆಶೀರ್ವಾದದಿಂದ" ಎಂದು ಅಜನೀಶ್ ಹೇಳಿದ್ದಾರೆ.