Related Articles
'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?
ಶ್ರದ್ಧಾ ಶ್ರೀನಾಥ್ ಪ್ರೀತಿಯ ಗುಟ್ಟು ಈಗ ರಟ್ಟು
ರಿಯಾಯಿತಿ ದರದಲ್ಲಿ ಟಗರು ಸಿನಿಮಾ ಪ್ರದರ್ಶನ
ಬಿಡುಗಡೆ ಆಯ್ತು ಶಿವಣ್ಣನ 'ರುಸ್ತುಂ' ಲುಕ್
ರವಿಚಂದ್ರನ್ ಅವರನ್ನ ಈ ರೀತಿ ಯಾರೂ ನೋಡಿರಲ್ಲ.! ಶಿವಣ್ಣನೂ ನೋಡಿಲ್ವಂತೆ
'ಟಗರು' ಸಿನಿಮಾ ನೋಡಿದ ಇಂಗ್ಲೆಂಡ್ ಕ್ರಿಕೆಟರ್ ಮಾಡಿದ್ದೇನು?
ಇಬ್ಬರು ಖಳನಾಯಕರನ್ನ ಪರಿಚಯಿಸಲು ಬಂದ್ರು ಹ್ಯಾಟ್ರಿಕ್ ಹೀರೋ
ಶಿವಣ್ಣನ ಶೋ ಗೆ ಬಂದ್ರು 'ರಾ' ಸ್ಟಾರ್ಸ್
ಸಿನಿಮಾರಂಗದ ಹುಡುಗರ ಕನಸು ನನಸು ಮಾಡಿದ 'ಕಿಚ್ಚ'
ಕೆಸಿಸಿ ಕಪ್ ಚಾಂಪಿಯನ್ಸ್ ಆದ ಶಿವಣ್ಣ ಮತ್ತು ತಂಡ
'ನಂ 1 ಯಾರಿ' ಶೋದಲ್ಲಿ 7 ಸಂಚಿಕೆ ಬಾಕಿ : ಮುಂದೆ ಯಾರ್ ಯಾರ್ ಬರ್ತಾರೆ ?
ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ'
ರಮೇಶ್ ಜೊತೆಗೆ 'ನಂ 1 ಯಾರಿ' ಶೋಗೆ ಬಂದವರು ಯಾರು?
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಈಗಾಗಲೇ ದೊಡ್ಡ ಜನಪ್ರಿಯತೆಗಳಿಸಿದೆ. ಈ ಕಾರ್ಯಕ್ರಮ ನೋಡುವುದಕ್ಕೆ ಬಹು ಮುಖ್ಯ ಕಾರಣ ಅಂದರೆ ಶಿವರಾಜ್ ಕುಮಾರ್. ಅದು ಬಿಟ್ಟರೆ ಕಾರ್ಯಕ್ರಮಕ್ಕೆ ಬರುವ ಸ್ಟಾರ್ ಅತಿಥಿಗಳು. ಆದರೆ ಇವೆರಡರ ನಂತರ ಕಾರ್ಯಕ್ರಮದಲ್ಲಿ ಮತ್ತೊಬ್ಬರು ವೀಕ್ಷಕರ ಗಮನ ಸೆಳೆದಿದ್ದಾರೆ. ಅವ್ರೇ ದೀಪಾ.
ದೀಪಾ 'ನಂ 1 ಯಾರಿ' ಮನೆ ಬೆಳಗುವ ದೀಪಾ. ಈ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಇರುವ ದೀಪಾ ಎಲ್ಲರಿಗೆ ಇಷ್ಟ ಆಗಿದ್ದಾರೆ. ಕಾರ್ಯಕ್ರಮಕ್ಕೆ ಬಂದಿರುವ ಬಹುತೇಕ ನಟರು ಇವರನ್ನು ರೇಗಿಸಿದ್ದಾರೆ, ತಮಾಷೆ, ಪ್ರಪೋಸ್ ಮಾಡಿದ್ದಾರೆ. ಇವುಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿಯೂ ದೀಪಾ ಬಗ್ಗೆ ಟ್ರೋಲ್ ಗಳು ಹೆಚ್ಚಾಗುತ್ತದೆ. ಅನೇಕರಿಗೆ ಅದೇ ಕಾರಣಕ್ಕೆ ಯಾರು ಈ 'ಯಾರಿ ಚಲುವೆ' ದೀಪಾ? ಎನ್ನುವ ಕುತೂಹಲ ಇದೆ. ಆದರೆ ಅದಕ್ಕೆಲ್ಲ ಇದೀಗ ಉತ್ತರ ಸಿಕ್ಕಿದೆ.
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆದ ರಮೇಶ್
ಸ್ವತಃ ದೀಪಾ ಈಗ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದ ಸಂದರ್ಶನದಲ್ಲಿ ತಮ್ಮ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಿನ್ನೆಲೆ, ಈ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದು, ಅವರ ಫ್ಯಾಮಿಲಿ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..
ಸಂದರ್ಶನ : ನವೀನ.ಎಂ.ಎಸ್(ನವಿಕನಸು)
ದೀಪಾ ರಿಯಲ್ ಹೆಸರು ದಶ್ಮಿ ಕಾರ್ಯಪ್ಪ
''ನನ್ನ ರಿಯಲ್ ಹೆಸರು ದಶ್ಮಿ ಕಾರ್ಯಪ್ಪ. ನಾನು ಹುಟ್ಟಿ ಬೆಳದದ್ದು ಬೆಂಗಳೂರಿನಲ್ಲಿಯೇ. ಆದರೆ ನಮ್ಮ ಊರು ಕೊಡಗು. ಬೆಸಿಕಲಿ ನಾನು ಮಾಡಲಿಂಗ್ ಮಾಡುತ್ತಿದ್ದೇನೆ. ಜಯನಗರದಲ್ಲಿರುವ ಎನ್.ಎಂ.ಕೆ.ಆರ್.ವಿ ಕಾಲೇಜ್ ನಲ್ಲಿ ಬಿ.ಕಾಂ ಫೈನಲ್ ಇಯರ್ ಓದುತ್ತಿದ್ದೇನೆ.''
ಡ್ಯಾನ್ಸರ್ ಮತ್ತು ವಾಲಿಬಾಲ್ ಪ್ಲೇಯರ್
'' ನಾನು ಕಳೆದ ಒಂದು ವರ್ಷದಿಂದ ಮಾಡಲಿಂಗ್ ನಲ್ಲಿ ಇದ್ದೇನೆ. ಕೆಲವು ಜಾಹಿರಾತು, ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಾನು ಒಬ್ಬ ಡ್ಯಾನ್ಸರ್ ಕೂಡ ಒಂದು. ಪಿ.ಯು.ಸಿ ವರೆಗೆ ವಾಲಿಬಾಲ್ ಪ್ಲೇಯರ್ ಆಗಿದೆ.''
'ನಂ 1 ಯಾರಿ' ಮನೆಯ ದೀಪ
''ನಮ್ದು ಒಂದು ಮಾಡಲಿಂಗ್ ಗ್ರೂಪ್ ಇದೆ. 'ನಂ 1 ಯಾರಿ ಶೋ'ದಲ್ಲಿ ಅವಕಾಶ ಇದೆ ಅಂತ ತಿಳಿದು ನನ್ನ Portfolio ಕಳಿಸಿದೆ. ಹಾಗೆಯೇ ಐ ಘಾಟ್ ಸೆಲೆಕ್ಟೆಟ್. ನಾನು ಕಾರ್ಯಕ್ರಮದ ಒಂದು ಭಾಗ ಆಗಿರುವ ಕಾರಣ ಶೋ ಶುರು ಆದಾಗ ನನಗೆ ಒಂದು ವಿಭಿನ್ನ ಹೆಸರು ಬೇಕು ಅಂತ ನಿರ್ಧಾರ ಮಾಡಿದರು. ಕೊನೆಗೆ 'ನಂ 1 ಯಾರಿ' ಮನೆಯ ದೀಪ ಅಂತ ಹೇಳಿ, ನನಗೆ 'ದೀಪಾ' ಎನ್ನುವ ಹೆಸರು ಇಟ್ಟರು. ಹೀಗೆ ಆ ಹೆಸರು ನನಗೆ ಬಂತು.''
ಕಮಿಟ್ ಆಗಿರುವ ಹುಡುಗಿಗೆ ಲವ್ ಪ್ರಪೋಸ್ ಮಾಡಿದರು ಚಿಕ್ಕಣ್ಣ
ತುಂಬ ಫನ್ ಇರುತ್ತದೆ
''ಈ ತುಂಬ ಚೆನ್ನಾಗಿದೆ ಶೋ. ಕ್ಯಾಮರಾ ಆನ್ ಇದ್ದಾಗಲೂ, ಆಫ್ ಇದ್ದಾಗಲೂ ನನ್ನನ್ನು ತುಂಬ ರೇಗಿಸುತ್ತಾರೆ. ಎಲ್ಲ ತುಂಬ ಮಜಾವಾಗಿದೆ. ಶಿವರಾಜ್ ಕುಮಾರ್ ಸರ್ ಜೊತೆಗೆ ಬೇರೆ ಸ್ಟಾರ್ ಗಳು ಕೂಡ ಬಂದಿರುತ್ತಾರೆ. ಬೆಳ್ಳಗೆಯಿಂದ ಕಾರ್ಯಕ್ರಮ ಶೂಟಿಂಗ್ ಮುಗಿಯುವ ವರೆಗೆ ತುಂಬ ಫನ್ ಇರುತ್ತದೆ. ಶೋ ನಲ್ಲಿ ಸ್ಟಾರ್ ಗಳ ಜೊತೆಗೆ ಮಾತನಾಡುವುದು, ಅವರು ನನಗೆ ಸುಮ್ಮನೆ ಪ್ರಪೋಸ್ ಮಾಡುವುದು ಎಲ್ಲ ಸಖತ್ ಖುಷಿ ಇರುತ್ತದೆ. ಅದನ್ನೆಲ್ಲ ನಾನು ಕ್ಯಾಶುವಲ್ ಆಗಿ ತೆಗೆದುಕೊಳ್ಳುತ್ತೇನೆ. ನನಗೆ ಏನಾದರೂ ಮುಜುಗರ ಆದರೆ ಶಿವರಾಜ್ ಕುಮಾರ್ ಸರ್ ಆರಾಮಾಗಿ ಇರು ಅಂತ ಹೇಳುತ್ತಾರೆ.''
ನಮ್ಮ ತಂದೆ ಕೆಲವು ತಿಂಗಳುಗಳ ಹಿಂದೆ ತೀರಿ ಹೋದರು
''ನಮ್ಮ ತಂದೆ ಕೆಲವು ತಿಂಗಳುಗಳ ಹಿಂದೆ ತೀರಿ ಹೋದರು. ನಾನು ಮೊದಲು ಮಾಡಲಿಂಗ್ ಮಾಡುತ್ತೇನೆ ಎಂದಾಗ ಅವರು ಬೇಡ ಅಂದಿದ್ದರು. ನಮ್ಮದು ಸಂಪ್ರದಾಯಕ ಕುಟುಂಬ ಆಗಿರುವುದರಿಂದ ಬೇಡ ಅಂತ ಭಯ ಪಡುತ್ತಿದ್ದರು. ನನಗೆ ಇದರ ಬಗ್ಗೆ ಪ್ಯಾಷನ್ ಇತ್ತು. ಸ್ಕೂಲ್, ಕಾಲೇಜ್ ಇರುವಾಗ ಟಾಮ್ ಬಾಯ್ ತರ ಇದ್ದೇ. ಡ್ಯಾನ್ಸ್ ಮತ್ತು ವಾಲಿಬಾಲ್ ಜಾಸ್ತಿ ಆಡುತ್ತಿದೆ. ಆಗ ನಮ್ಮ ತಂದೆ ಜಾಸ್ತಿ ವಾಲಿಬಾಲ್ ಆಡುವುದಕ್ಕೆ ಹೋಗಬೇಡ. ನೀನು ಕಪ್ಪಾದರೆ ನಿನಗೆ ಮದುವೆ ಹುಡುಗ ಸಿಗುವುದಿಲ್ಲ ಎಂದು ಹೇಳುತ್ತಿದ್ದರು. ಆಮೇಲೆ ನನ್ನ ಖುಷಿಗೆ ಸುಮ್ಮನಾದರು.''
ಸಿನಿಮಾ ಮಾಡುವ ಆಸಕ್ತಿ ಇಲ್ಲ
''ಸಿನಿಮಾ ಮಾಡುವ ಆಸಕ್ತಿ ನನಗೆ ಇಲ್ಲ. ಇದೇ ರೀತಿ ಮನರಂಜನೆ ನೀಡುವ ಶೋ ನನಗೆ ಇಷ್ಟ. ಈ ರೀತಿಯ ಕಾರ್ಯಕ್ರಮ ಮಾಡುತ್ತೇನೆ. ಅದು ಬಿಟ್ಟರೆ ಫ್ಯಾಷನ್ ಡಿಸೈನಿಂಗ್ ಮಾಡಲು ತುಂಬ ಇಷ್ಟ ಇದೆ. ಮಾಡಲಿಂಗ್, ಪೋಟೋಶೂಟ್, ಫ್ಯಾಷನ್ ಡಿಸೈನಿಂಗ್ ಈ ರೀತಿ ಮಾಡಲು ಬಯಸುತ್ತೇನೆ.''
ಇದ್ದಕ್ಕಿದ್ದ ಹಾಗೆ ಜನ ಗುರುತಿಸುತ್ತಿದ್ದಾರೆ
''ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಟ್ರೋಲ್ ಗಳು ಸಹ ಶುರು ಆಗಿದೆ. ಅದೆಲ್ಲ ನೋಡಿದಾಗ ತುಂಬ ಖುಷಿ ಆಗುತ್ತದೆ. ಇದ್ದಕ್ಕಿದ್ದ ಹಾಗೆ ನನಗೆ ಜನ ಗುರುತಿಸುತ್ತಿದ್ದಾರೆ. ಇದೆಲ್ಲ ನನಗೆ ತುಂಬ ಹೊಸದಾಗಿದೆ. ನಾನು ಫೇಸ್ ಬುಕ್, ಇನ್ಟಾಗ್ರಾಮ್ ಬಳಸುವಾಗ ಸಡನ್ ಆಗಿ ನನ್ನ ಪೋಸ್ಟ್ ಬಂದಾಗ ವಾವ್... ನೈಸ್ ಅನಿಸುತ್ತದೆ.''
ಸುದೀಪ್ ಸರ್ ಎಪಿಸೋಡ್ ನನಗೆ ಫೇವರೇಟ್
''ನನಗೆ ಕಾರ್ಯಕ್ರಮದ ಬೆಸ್ಟ್ ಎಪಿಸೋಡ್ ಎನಿಸಿದ್ದು ಸುದೀಪ್ ಸರ್ ಅವರದ್ದು. ಅದು ಈಗಾಗಲೇ ಶೂಟಿಂಗ್ ಆಗಿದೆ. ಆದರೆ ಇನ್ನೂ ಪ್ರಸಾರ ಆಗಿಲ್ಲ. ಸುದೀಪ್ ಸರ್ ಎಪಿಸೋಡ್ ನನಗೆ ಹಾಟ್ ಫೇವರೆಟ್. ಆ ಎಪಿಸೋಡ್ ಶೂಟಿಂಗ್ ನಡೆಯುವಾಗ ನಾನು ಕೂತ ಜಾಗದಲ್ಲೇ ಬಿದ್ದು ಬಿದ್ದು ನಗ್ತಿದೆ. ಆ ಎಪಿಸೋಡ್ ಕಾರ್ಯಕ್ರಮದ ಬೆಸ್ಟ್ ಎಪಿಸೋಡ್.''
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್
ಅಮ್ಮ ಓಕೆ ಅಂದರೆ ಮಾತ್ರ ಸಿನಿಮಾ
''ತುಂಬ ದೊಡ್ಡ ಸಿನಿಮಾ ಅವಕಾಶ ಬಂದರೂ ನಮ್ಮ ಅಮ್ಮ ಓಕೆ ಅಂದರೆ ಮಾತ್ರ ಸಿನಿಮಾ ಮಾಡುತ್ತೇನೆ. ಸೀರಿಯಲ್, ಸಿನಿಮಾ ಮಾಡಬೇಕು ಅಂದರೆ ಅಮ್ಮ ಮೊದಲು ಒಪ್ಪಬೇಕು. ನಾನು ಮಾಡಲಿಂಗ್ ಶುರು ಮಾಡಿದಾಗ ಅಮ್ಮ ಬೇಡ ಅಂದಿದ್ದರು. ಆದರೆ ಈಗ ಅಮ್ಮ ಪ್ರತಿ ವಾರ ಈ ಶೋ ನೋಡಿ ಖುಷಿ ಪಡುತ್ತಿದ್ದಾರೆ. ನಮ್ಮ ತಾಯಿ ಅಕೌಂಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಅಣ್ಣ ಇದ್ದಾನೆ. ಅವನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಅಂತ ಇದ್ದೆ
''ನಾನು ಯಾವುದನ್ನು ಪ್ಲಾನ್ ಮಾಡುವುದಿಲ್ಲ. ನಾನು ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಅಂತ ಇದ್ದೇ. ಆದರೆ ಮಾಡಲಿಂಗ್ ಮಾಡಿದೆ. ನಾರ್ಮಲ್ ಆಗಿರುವ ಫೋಟೋ ಶೂಟ್ ಮಾಡಿಸಿ ಫೇಸ್ ಬುಕ್ ನಲ್ಲಿ ಸುಮ್ಮನೆ ಹಾಕಿದ್ದೆ. ಆಗ ಕೆಲವರು ಯಾಕೆ ನೀವು ಮಾಡಲಿಂಗ್ ಟ್ರೈ ಮಾಡಬಾರದು ಅಂದರು. ಮೊದಲು ಅದರ ಬಗ್ಗೆ ಏನು ಗೊತ್ತಿರಲಿಲ್ಲ. ಕಾಲೇಜು ಕಾರ್ಯಕ್ರಮದಲ್ಲಿ ಮೊದಲು ಒಂದು ಶೋ ಮಾಡಿದೆ. ಹಾಗೆ ಮಾಡಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ. ಮುಂದೆ ಏನು ಅಂತ ಗೊತ್ತಿಲ್ಲ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.