»   » 'ಟಗರು' ಸಿನಿಮಾದ ಡಾನ್ 'ಅಂಕಲ್' ಯಾರು ಗೊತ್ತಾ?

'ಟಗರು' ಸಿನಿಮಾದ ಡಾನ್ 'ಅಂಕಲ್' ಯಾರು ಗೊತ್ತಾ?

Posted By:
Subscribe to Filmibeat Kannada
ಟಗರು ಸಿನಿಮಾದಲ್ಲಿ ಕಾಣಿಸಿಕೊಂಡ ಡಾನ್ ಅಂಕಲ್ ಯಾರು? ಇಲ್ಲಿದೆ ಅವರ ಪರಿಚಯ | Filmibeat Kannada

'ಟಗರು' ಸಿನಿಮಾದ ಪ್ರತಿ ಪಾತ್ರಗಳು ಸಹ ಸಿನಿಮಾ ನೋಡುಗರ ಮನಸಿನಲ್ಲಿ ಜಾಗ ಮಾಡಿಕೊಂಡಿದೆ. ಸಣ್ಣ ಸಣ್ಣ ಪಾತ್ರಗಳೆ ಆದರು ಜನ ಅದನ್ನು ಗುರುತಿಸುತ್ತಿದ್ದಾರೆ. ಸಿನಿಮಾದಲ್ಲಿ ಕೆಲವೇ ನಿಮಿಷಗಳು ಬರುವ ಪಾತ್ರಗಳು ಅದೇನೋ ಕಿಕ್ ನೀಡುತ್ತಿವೆ. ಅಂತಹ ಒಂದು ಪಾತ್ರ ಡಾನ್ ಅಂಕಲ್ ಪಾತ್ರ.

ಸಿನಿಮಾದ ವಿಲನ್ ಡಾಲಿಯ ಗ್ಯಾಂಗ್ ನ ಹೆಡ್ ಆಗಿರುವ ಅಂಕಲ್ ನಟನೆ ಎಲ್ಲರ ಗಮನ ಸೆಳೆಯುತ್ತದೆ. ಇತರ ಮಾಸ್ ಸಿನಿಮಾಗಳ ಡಾನ್ ಗಿಂತ ವಿಭಿನ್ನವಾಗಿರುವ ಈ ಪಾತ್ರದಲ್ಲಿ ಅದೇನೋ ಆಕರ್ಷಣೆ ಇದೆ. ಅಂದಹಾಗೆ, 'ಟಗರು' ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರಿಗೆ ಅಂಕಲ್ ಪಾತ್ರ ಮಾಡಿದ ಆ ಕಲಾವಿದ ಯಾರು ಎನ್ನುವ ಕುತೂಹಲ ಇದೆ.

ಅಂದಹಾಗೆ, ಸದ್ಯ 'ಟಗರು' ಸಿನಿಮಾದ ಅಂಕಲ್ ಪಾತ್ರವನ್ನು ಮಾಡಿರುವ ಈ ಕಲಾವಿದ ನಿಮ್ಮ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ತಮ್ಮ ಪರಿಚಯ, ಸಿನಿಮಾ ಅನುಭವದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಸಂದರ್ಶನ : ನವೀನ.ಎಂ.ಎಸ್ (ನವಿಕನಸು)

ಸಚ್ಚಿದಾನಂದ ಕಲಿಯುರ್ ಜಗನ್ನಾಥ್

'ಟಗರು' ಸಿನಿಮಾದ ಅಂಕಲ್ ಪಾತ್ರವನ್ನು ಮಾಡಿರುವವರು ಸಚ್ಚಿದಾನಂದ ಕಲಿಯುರ್ ಜಗನ್ನಾಥ್. ಮೂಲತಃ ಮೈಸೂರಿನವರಾದ ಇವರು ಸದ್ಯ ಎರಡು ವರ್ಷದಿಂದ ಕರ್ಕಾಳ ದಲ್ಲಿ ಇದ್ದಾರೆ. 25 ವರ್ಷದಿಂದ ಪೈಂಟರ್ ವೃತ್ತಿಯನ್ನು ಮಾಡುತ್ತಿದ್ದಾರೆ.

ಇದು ನನ್ನ ಮೊದಲ ಸಿನಿಮಾ

''ನಾನು ಬೆಸಿಕಲಿ ಪೈಂಟರ್. ಇದು ನನ್ನ ಮೊದಲ ಸಿನಿಮಾ. ನನ್ನನ್ನು ನೋಡಿ ಈ ಪಾತ್ರಕ್ಕೆ ಸೂಟ್ ಆಗುತ್ತೀಯ ಅಂತ ಕರೆದರು. ನನಗೆ ಸಹ ಬೇರೆ ರೀತಿಯ ಅನುಭವ ಬೇಕಿತ್ತು. ನನ್ನ ಪಾತ್ರವನ್ನು ತುಂಬ ಎಂಜಾಯ್ ಮಾಡಿದ್ದೇನೆ.'' ಎಂದು ಹೇಳಿದ ಸಚ್ಚಿದಾನಂದ ಅವರು ಸಿನಿಮಾದ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಿದರು.

ತಮಾಷೆಗೆ ಹೇಳಿದ ಮಾತು

''ಚಿತ್ರದ ಛಾಯಾಗ್ರಾಹಕ ಆಗಿರುವ ಮಹೇಂದ್ರ ಸಿಂಹ ನನ್ನ ಕ್ಲಾಸ್ ಮೆಂಟ್. ಒಮ್ಮೆ ಆತ ಬಂದು 'ಟಗರು' ಸಿನಿಮಾಗೆ ಕಲಸ ಮಾಡುತ್ತಿದ್ದೇನೆ ಎಂದ. ನಾನು ಸುಮ್ಮನೆ ತಮಾಷೆಗೆ ಹಾಗಾದರೆ ನನ್ನನ್ನು ನಿಮ್ಮ ಜೊತೆಗೆ ಸೇರಿಸಿಕೊ ಎಂದೆ. ತುಂಬ ದಿನ ಆದ ಮೇಲೆ ನಾನು ಆ ವಿಷಯ ಮರೆತೆ. ಆದರೆ ನನ್ನ ಫೋಟೋವನ್ನು ಮಹೇಂದ್ರ ಸಿಂಹ ಅವರು ಸೂರಿಗೆ ತೋರಿಸಿದರು. ಸೂರಿ ನನ್ನ ಫೋಟೋ ನೋಡಿ ಫುಲ್ ಸೀರಿಯಸ್ ಆದರು. ಅವರಿಗೆ ಸಹ ಆ ಪಾತ್ರ ಸೂಟ್ ಅನಿಸಿ ಆಯ್ಕೆ ಮಾಡಿಕೊಂಡರು.''

ಎಲ್ಲಿ ಹೋದರು ಅಂಕಲ್ ಅನ್ನುತ್ತಾರೆ

''ಬೆಸಿಕಲಿ ಎಲ್ಲ ಕ್ರೆಡಿಟ್ ನಿರ್ದೇಶಕ ಸೂರಿಗೆ ಹೋಗಬೇಕು. ಅವರು ಪ್ರತಿ ಪಾತ್ರವನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ. ನನ್ನದು ಸಣ್ಣ ಪಾತ್ರ ಆದರು ಜನ ಗುರುತಿಸುತ್ತಾರೆ. ಎಲ್ಲಿ ಹೋದರು ಅಂಕಲ್ ಅನ್ನುತ್ತಾರೆ. ಸೋ, ಖುಷಿಯಾಗುತ್ತದೆ.''

ತುಂಬ ಕೂಲ್ ಡಾನ್ ಅಂಕಲ್

''ನನ್ನದು ಡಾನ್ ಅಂಕಲ್ ಪಾತ್ರ ಆದರು ತುಂಬ ಕೂಲ್ ಪಾತ್ರ ಅದು. ಸೂರಿ ಅದೇ ರೀತಿ ಬೇಕು ಅಂತ ಹೇಳಿದ್ದರು. ನನ್ನ ಜೊತೆಗೆ ಇದ್ದ ಡಾಲಿ ಮತ್ತು ಚಿಟ್ಟೆ ಇಬ್ಬರು ಇಂದಿನ ಜನರೇಷನ್ ನವರು ಅವರು ತುಂಬ ಕೋಪ, ಸಿಟ್ಟಿನಲ್ಲಿ ಇರುತ್ತಾರೆ. ಅದಕ್ಕೆ ವಿರುದ್ಧವಾಗಿ ನನ್ನ ಪಾತ್ರ ತುಂಬ ಕೂಲ್ ಆಗಿ ಇರುತ್ತದೆ.''

ಮುಂದೆ ಸಿನಿಮಾ ಮಾಡುವ ಯೋಚನೆ ಮಾಡಿಲ್ಲ

''ಸಿನಿಮಾ ನೋಡಿದಾಗ ವಾವ್.. ಅನಿಸಿತು. ನಮ್ಮನ್ನು ನಾವು ದೊಡ್ಡ ಪರದೆ ಮೇಲೆ ನೋಡಿಕೊಳ್ಳುವುದು ಕ್ವೈಟ್ ಎಕ್ಸೈಟಿಂಗ್. ಸದ್ಯಕ್ಕೆ ಬೇರೆ ಯಾವ ಸಿನಿಮಾ ಆಫರ್ ಬಂದಿಲ್ಲ. ಮುಂದೆ ಸಿನಿಮಾ ಮಾಡುತ್ತೇನೆ ಎನ್ನುವುದು ಗೊತ್ತಿಲ್ಲ. ಇದೇ ರೀತಿಯ ಒಳ್ಳೆಯ ಟೀಂ ಸಿಕ್ಕರೆ ಸಿನಿಮಾ ಮಾಡುತ್ತೇನೆ.''

ಹೀ ಇಸ್ ವಂಡಲ್ ಫುಲ್ ಡೈರೆಕ್ಟರ್

''ಈ ಟೀಂ ತುಂಬ ಚೆನ್ನಾಗಿ ಇತ್ತು. ನನಗೆ ನಟನೆ ಮಾಡುತ್ತೀದ್ದೇನೆ ಎನ್ನುವ ಫೀಲ್ ಬರೆದು ರೀತಿ ಸೂರಿ ಆಕ್ಟಿಂಗ್ ಮಾಡಿಸಿದ್ರು. ಇಡೀ ಸಿನಿಮಾ ನಾನು ಆಕ್ಟಿಂಗ್ ಮಾಡುತ್ತಾ ಇದ್ದೇನೆ ಅನಿಸಲೇ ಇಲ್ಲ. ಹೀ ಇಸ್ ವಂಡಲ್ ಫುಲ್ ಡೈರೆಕ್ಟರ್. ಬಹಳ ಖುಷಿ ಆಯ್ತು.''

English summary
All about actor Sachidananda Kaliyur Jagannath. actor Sachidananda Kaliyur Jagannath played Don Uncle character in Kannada actor Shiva Rajkumar's 'Tagaru' movie. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada