For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ದೇವಿಯ ದರ್ಶನಕ್ಕೆ ಹೊರಟ ನವರಸ ನಾಯಕ

  By Pavithra
  |
  ನವರಸ ನಾಯಕ ಈ ವರ್ಷ ಹುಟ್ಟುಹಬ್ಬಕ್ಕೆ ಏನ್ ಮಾಡ್ತಿದ್ದಾರೆ ? | FIlmibeat Kannada

  ಕನ್ನಡ ಸಿನಿಮಾರಂಗದ ನವರಸ ನಾಯಕನಿಗೆ ಮಾರ್ಚ 17 ರಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷವೂ ಜಗ್ಗೇಶ್ ತಮ್ಮ ಹುಟ್ಟುಹಬ್ಬದಂದು ವಿದೇಶ ಪ್ರಯಾಣ ಮಾಡುವುದು ಅಥವಾ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಮೂರು ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ಪ್ರೇಕ್ಷಕರನ್ನ ಸಿನಿಮಾಗಳ ಮೂಲಕ ಹಾಗೂ ಅಭಿನಯದ ಮೂಲಕ ರಂಜಿಸುತ್ತಾ ಬಂದಿದ್ದಾರೆ.

  55 ನೇ ವರ್ಷದ ಹುಟ್ಟುಹಬ್ವನ್ನ ಆಚರಣೆ ಮಾಡಿಕೊಳ್ಳುತ್ತಿರುವ ಜಗ್ಗೇಶ್ ಈ ವರ್ಷ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ನಿರ್ಧರಿಸಿದ್ದಾರೆ. ರಾಜಕೀಯ, ಸಿನಿಮಾ ಹಾಗೂ ಫ್ಯಾಮಿಲಿ ಎಲ್ಲಾ ಕಡೆಯಲ್ಲೂ ಸಮಾನ ಸ್ಥಾನ, ಸಮಾನ ಸಮಯ ನೀಡುತ್ತಿರು ಜಗ್ಗೇಶ್ ಹುಟ್ಟುಹಬ್ಬಕ್ಕೆ ದೇವಿಯ ದರ್ಶನ ಪಡೆಯಲು ಪ್ರಯಾಣ ಬೆಳೆಸಿದ್ದಾರೆ.

  55 ರ ಹರೆಯದಲ್ಲಿ ಜಗ್ಗೇಶ್ ವಿಭಿನ್ನ ಚಿತ್ರಗಳತ್ತ ಮುಖ ಮಾಡಿದ್ದು ಏಕೆ? ಸುದೀಪ್ ಜೊತೆಯಲ್ಲಿ ಮಾತ್ರವಲ್ಲದೆ ಅಪ್ಪು ಹಾಗೂ ಶಿವಣ್ಣನ ಜೊತೆಯೂ ನವರಸ ನಾಯಕ ಅಭಿನಯ ಮಾಡುತ್ತಾರಾ? ತಮ್ಮ ಹುಟ್ಟುಹಬ್ಬದ ದಿನವೇ ಬರ್ತಡೇ ಆಚರಣೆ ಮಾಡಿಕೊಳ್ಳುತ್ತಿರುವ ಪವರ್ ಸ್ಟಾರ್ ಬಗ್ಗೆ ಜಗ್ಗೇಶ್ ಹೇಳಿದ್ದೇನು? ಈ ಎಲ್ಲಾ ವಿಚಾರಗಳನ್ನ ಸಂದರ್ಶನದ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ

  ಪ್ರತಿ ಹುಟ್ಟುಹಬ್ಬ ಬಂದಾಗ ವಯಸ್ಸಾಯ್ತು ಅನ್ನಿಸುತ್ತಾ?

  ಪ್ರತಿ ಹುಟ್ಟುಹಬ್ಬ ಬಂದಾಗ ವಯಸ್ಸಾಯ್ತು ಅನ್ನಿಸುತ್ತಾ?

  ಖಂಡಿತಾ ಇಲ್ಲಾ. ನಾನು ವಯಸ್ಸಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಎಲ್ಲರಲ್ಲಿ ಚೆನ್ನಾಗಿ ನಗುನಗುತ್ತಾ ಖುಷಿಯಿಂದ ಜೀವನ ಮಾಡಬೇಕು ಎನ್ನುವುದ ನನ್ನ ಆಶಯ. ಯಾವಾಗಲೂ ಪಾಸಿಟಿವ್ ಆಗಿ ಆಲೋಚನೆ ಮಾಡುವುದು, ಅಂತಹ ವ್ಯಕ್ತಿಗಳನ್ನ ಜೊತೆಯಲ್ಲಿ ಇರಿಸಿಕೊಳ್ಳುವುದೇ ನನ್ನ ಹವ್ಯಾಸ ಹಾಗಾಗಿ ಎಂದಿಗೂ ವಯಸ್ಸಾಯ್ತು ಎನ್ನಿಸುವುದೇ ಇಲ್ಲ.

  ಪತ್ನಿ ಪರಿಮಳ ಅವರಿಂದ ಸಿಕ್ಕ ಉಡುಗೊರೆ?

  ಪತ್ನಿ ಪರಿಮಳ ಅವರಿಂದ ಸಿಕ್ಕ ಉಡುಗೊರೆ?

  ಈ ಬಾರಿ ನನ್ನ ಕಾರ್ ಪಾರ್ಕಿಂಗ್ ಹಾಗೂ ನನ್ನ ಆಫೀಸ್ ಇರುವ ಜಾಗವನ್ನ ಪರಿಮಳ ಸುಂದರವಾಗಿ ಡಿಸೈನ್ ಮಾಡಿಕೊಟ್ಟಿದ್ದಾಳೆ. ಇಂಟಿರಿಯಲ್ ಹಾಗೂ ಲೈಟಿಂಗ್ ಸೆಟ್ಟಿಂಗ್ ಮಾಡಿದ್ದಾಳೆ. ಸ್ನೇಹಿತರು ಬಂದಾಗ, ಸಿನಿಮಾ ಕಥೆ ಹೇಳಲು ಬಂದಾಗ ಒಳ್ಳೆಯ ವಾತಾವರಣ ಇರಬೇಕು ಎನ್ನುವ ಉದ್ದೇಶದಿಂದ. ಅದೇ ಈ ವರ್ಷದ ಅಪರೂಪದ ಉಡುಗೊರೆ.

  ಈ ವರ್ಷದ ಹುಟ್ಟುಹಬ್ಬ ಆಚರಣೆ ಎಲ್ಲಿ

  ಈ ವರ್ಷದ ಹುಟ್ಟುಹಬ್ಬ ಆಚರಣೆ ಎಲ್ಲಿ

  ಮೂಕಾಂಬಿಕಾ ದೇವಿಯ ದರ್ಶನಕ್ಕೆ ನಾನು ಹಾಗೂ ಪರಿಮಳ ಹೊರಟಿದ್ದೇವೆ. ಗುರು ಮತ್ತು ಯತಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ಇಬ್ಬರು ಹೋಮದಲ್ಲಿ ಭಾಗಿ ಆಗಬೇಕಾಗಿ ಹೊರಟಿದ್ದೇವೆ.

  ವಿಭಿನ್ನ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದೀರಾ?

  ವಿಭಿನ್ನ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದೀರಾ?

  8 ಎಂ ಎಂ ನನ್ನ ವೃತ್ತಿ ಜೀವನದಲ್ಲೇ ಅತ್ಯುತ್ತಮವಾದ ಸಿನಿಮಾ ಆಗಲಿದೆ. ಈ ಸಿನಿಮಾದಲ್ಲಿ ಅಭಿನಯಿಸಿ ತುಂಬಾ ಖುಷಿ ಇದೆ. ಎನ್ ಕೌಂಟರ್ ಸ್ಪೆಷಲಿಸ್ಟ್ ಪಾತ್ರದ ಕತೆಯೊಂದನ್ನ ಒಪ್ಪಿಕೊಂಡಿದ್ದೇನೆ ಅದೂ ತುಂಬಾ ಕುತೂಹಲಕಾರಿ ಅಂಶವಿರುವ ಚಿತ್ರ. ಅದರ ಜೊತೆಯಲ್ಲಿ ಡಿವೋರ್ಸ್ ಬಗ್ಗೆ ಉತ್ತಮ ಸಂದೇಶ ಸಾರುವ ಚಿತ್ರದ ಕತೆ ಕೇಳಿ ಒಪ್ಪಿಗೆ ನೀಡಿದ್ದೇನೆ. ಪಿ ವಾಸು ಅವರ ಚಿತ್ರದಲ್ಲಿ ಅಭಿನಯಿಸುವನ್ನಿದ್ದೇನೆ. ಗಣೇಶ್ ಕಾಂಬಿನೇಶನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಸಾಕಷ್ಟು ಚಿತ್ರಗಳು ತೆರೆಗೆ ಬರಲಿದೆ.

  ರಾಜಕೀಯ ಸಿನಿಮಾ ಮಧ್ಯೆ ಅಭಿಮಾನಿಗಳಿಗೂ ಸಮಯ ಹೇಗೆ ಸಾಧ್ಯ?

  ರಾಜಕೀಯ ಸಿನಿಮಾ ಮಧ್ಯೆ ಅಭಿಮಾನಿಗಳಿಗೂ ಸಮಯ ಹೇಗೆ ಸಾಧ್ಯ?

  ಟ್ವಿಟ್ಟರ್ ಮಾಧ್ಯಮದಿಂದ ತುಂಬಾ ಸಹಾಯ ಆಗುತ್ತಿದೆ. ನನ್ನ ಭಾವನೆಯನ್ನ ಸುಲಭವಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದೆನೆ. ಟ್ವಿಟ್ಟರ್ ಬಳಕೆಗೆ ಕಾರಣ ಯೋಗಿ ಗೌಡ ಎಂಬ ಸ್ನೇಹಿತ. ಖುಷಿ ಆಗುತ್ತೆ ಯುವಶಕ್ತಿಯನ್ನ ಸುಲಭವಾಗಿ ಸಂಪರ್ಕಿಸುವ ಅವಕಾಶ ಸಿಗುತ್ತಿದೆ.

  ಪ್ರೇಕ್ಷಕರು ಬಯಸುವ ಮುನ್ನವೇ ವಿಭಿನ್ನ ಚಿತ್ರಗಳ ಆಯ್ಕೆ ಮಾಡಿದ್ರಾ ಜಗ್ಗೇಶ್?

  ಪ್ರೇಕ್ಷಕರು ಬಯಸುವ ಮುನ್ನವೇ ವಿಭಿನ್ನ ಚಿತ್ರಗಳ ಆಯ್ಕೆ ಮಾಡಿದ್ರಾ ಜಗ್ಗೇಶ್?

  ಆ ತರ ಅಲ್ಲ ಅನ್ಸುತ್ತೆ. ವಯಸ್ಸು, ತಾಳ್ಮೆ ಹಾಗೂ ಅನುಭವ ಎಲ್ಲವನ್ನು ಅದೇ ಮಾಡಿಸುತ್ತೆ. ಅರ್ಧ ನನ್ನ ನಿರ್ಧಾರ ಆಗಿದ್ದರೆ ಇನ್ನು ಮಿಕ್ಕಿದ್ದು ವಯಸ್ಸು ಆಯ್ಕೆ ಮಾಡುತ್ತಿದೆ ಎನ್ನುವುದು ನನ್ನ ಅಭಿಪ್ರಾಯ.

  ಸುದೀಪ್ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತೀರಾ?

  ಸುದೀಪ್ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತೀರಾ?

  ಸುದೀಪ್ ನನ್ನ ಒಳ್ಳೆ ಸಹೋದರ ಆತ ಅಪಮಾನದಿಂದ ಸನ್ಮಾನ ಪಡೆದವರು. ಆತನ ಏಳು ಬೀಳುಗಳನ್ನ ನಾನು ನೋಡಿದ್ದೇನೆ. ಒಳ್ಳೆ ಸ್ನೇಹಿತ ಅನ್ನುವುದಕ್ಕಿಂತ ಸಹೋದರ ಅವರನ ಜೊತೆ ಮಾತ್ರವಲ್ಲದೆ ಒಳ್ಳೆ ಕಥೆ ಸಿಕ್ಕರೆ ಪುನೀತ್, ಶಿವರಾಜ್ ಕುಮಾರ್ ಜೊತೆಯಲ್ಲೂ ಅಭಿನಯಿಸುವ ಆಲೋಚನೆ ಇದೆ.

  ಜಗ್ಗೇಶ್ ರಾಜಕೀಯ, ಸಿನಿಮಾಗೆ ಮಾತ್ರ ಮೀಸಲಾ?

  ಜಗ್ಗೇಶ್ ರಾಜಕೀಯ, ಸಿನಿಮಾಗೆ ಮಾತ್ರ ಮೀಸಲಾ?

  ಖಂಡಿತಾ ಇಲ್ಲ. ಜೀವನದಲ್ಲಿ ಪ್ರತಿ ಕ್ಷಣ ಏನನ್ನಾದರೂ ಕಲಿಯಲೇ ಬೇಕು. ಕಲಿಯುತ್ತಲೇ ಇದ್ದೇನೆ. ವೆಸ್ಟರ್ನ್ ಸಂಗೀತ ತರಗತಿ ಹಾಗೂ ಹಿಂದೂಸ್ಥಾನಿ ಸಂಗೀತ ತರಗತಿಗೆ ಸೇರಿಕೊಂಡಿದ್ದೇನೆ, ಜ್ಯೋತಿಷ್ಯದಲ್ಲಿ ಪರಿಣತಿ ಹೊಂದಬೇಕು ಎನ್ನುವ ಆಸೆಯಿದೆ. ಪ್ರತಿ ರಾತ್ರಿ ಒಂದು ಗಂಟೆ ಪುಸ್ತಕ ಓದಿ ಮಲಗುತ್ತೇನೆ. ಹೀಗೆ ಪ್ರತಿ ನಿತ್ಯ ಹೊಸತನ್ನು ಕಲಿಯುತ್ತಲೇ ಇದ್ದೇನೆ.

  English summary
  Here is an exclusive interview with kannada actor Jaggesh, Jaggesh celebrating his 55th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X