For Quick Alerts
ALLOW NOTIFICATIONS  
For Daily Alerts

  ಕತೆ ಕೇಳುವಾಗಲೇ ಫ್ಯಾನ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದ ಡಾ.ಶಿವರಾಜ್ ಕುಮಾರ್.!

  By ಶಶಿಕರ ಪಾತೂರು
  |

  'ದಿ ವಿಲನ್' ಚಿತ್ರದ ಬಳಿಕ ಶಿವಣ್ಣ ಸಿನಿಮಾಗಳ ಆಯ್ಕೆಯಲ್ಲಿ ಇನ್ನಷ್ಟು ಚ್ಯೂಸಿಯಾಗಿದ್ಧಾರೆ. ಅದಕ್ಕೆ ಕಾರಣ ಮತ್ತೆ ಅಭಿಮಾನಿಗಳೇ ಹೌದು.!

  ''ಚಿತ್ರದ ಸೋಲು ಗೆಲುವಿಗಿಂತಲೂ ಅಭಿಮಾನಿಗಳು ಮುಖ್ಯ ಎನ್ನುವುದು ಅವರ ಅಭಿಪ್ರಾಯ. ನನಗೆ ಕತೆ ಹೊಂದಾಣಿಕೆಯಾಗಿಲ್ಲ ಎಂದ ಮಾತ್ರಕ್ಕೆ ದುಡ್ಡು ತೆಗೆದುಕೊಂಡು ಬೇಕಾಬಿಟ್ಟಿ ನಟಿಸುವ ಜಾಯಮಾನ ನನ್ನದಲ್ಲ. ಒಂದೋ ಕತೆ ನನಗೆ ಇಷ್ಟವಾಗಬೇಕು. ಅಥವಾ ಅಭಿಮಾನಿಗಳು ಇಷ್ಟಪಡುವಂತೆ ಚಿತ್ರ ಮಾಡುವ ನಂಬಿಕೆ ನಿರ್ದೇಶಕರಲ್ಲಿ ಇರಬೇಕು''

  ''ನಿರ್ದೇಶಕರ ಮೇಲೆ ಮಾತ್ರ ಭರವಸೆ ಇಟ್ಟು ನಟಿಸುವಾಗಲೂ ನಾನು ಕಾಟಾಚಾರಕ್ಕೆ ನಟಿಸಿ ಹೋಗಿಲ್ಲ. ನನ್ನ ಪಾತ್ರಕ್ಕೆ ಬೇಕಾದ ಏನು ಬೇಕೋ ಹಾಗೆ ಹಾರ್ಡ್ ವರ್ಕ್ ಮಾಡುತ್ತೇನೆ. ಅದರ ಮೇಲೆ ಸೋಲು ಗೆಲುವು ಎನ್ನುವುದು ಭಗವಂತನ ಇಚ್ಛೆ" ಎಂದಿದ್ದಾರೆ ಡಾ. ಶಿವರಾಜ್ ಕುಮಾರ್.

  ಸದ್ಯಕ್ಕೆ ಅವರು ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣ ಯಲಹಂಕ, ಗೌರಿಬಿದನೂರು ಮೊದಲಾದೆಡೆ ಮುಂದುವರಿದಿದೆ. ಶೂಟಿಂಗ್ ಬಿಡುವಿನ ವೇಳೆ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿಯೊಂದಿಗೆ ನಡೆಸಿದ ಪ್ರಶ್ನೋತ್ತರದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ಧಾರೆ. ಮುಂದೆ ಓದಿರಿ...

  ಪ್ರಶ್ನೆ: ನೀವು ಚಿತ್ರಗಳ ಆಯ್ಕೆಯಲ್ಲಿ ತುಂಬ ಚ್ಯೂಸಿಯಾಗುತ್ತಿದ್ದೀರಂತೆ. ಕಾರಣವೇನು?

  ಉತ್ತರ: ನನ್ನನ್ನು ಮೊದಲೇ ಚ್ಯೂಸಿ ಅಂತಾರೆ. ಆದರೆ ಈಗ ಇನ್ನಷ್ಟು ಚ್ಯೂಸಿಯಾಗಿದ್ದೇನೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾದ ನನ್ನ ಚಿತ್ರದ ಬಗ್ಗೆ ಅಭಿಮಾನಿಗಳಿಂದ ಬಂದಂಥ ಅಸಮಾಧಾನವೂ ಕಾರಣ ಇರಬಹುದು. ನಾವು ಏನಿದ್ದರೂ ಅಭಿಮಾನಿಗಳಿಗಾಗಿ ಸಿನಿಮಾ ಮಾಡುವವರು. ನಾನು ಇದುವರೆಗೂ ಆ ಚಿತ್ರವನ್ನು ನೋಡಿಲ್ಲ. ಆ ನಿರ್ದೇಶಕರು ನನ್ನ ಸಜೆಶನ್ ಕೇಳಲಿಲ್ಲ. ಆದರೆ ಈಗಲೂ ನಿರ್ದೇಶಕರದು ತಪ್ಪು ಎಂದು ನಾನು ಹೇಳುವ ಹಾಗಿಲ್ಲ. ಯಾಕೆಂದರೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಕಮರ್ಷಿಯಲ್ ಚಿತ್ರ ಎಂದ ಮೇಲೆ ಅದೇ ಪ್ರಮುಖ ಅಂಶ ಎನ್ನುವುದನ್ನು ಮರೆಯಲಾಗದು.

  ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ!

  ಪ್ರಶ್ನೆ: ಚಿತ್ರದ ನಿರ್ದೇಶಕರ ವಿಶನ್ ಒಳಗೆ ನಾಯಕ ಅಭಿಪ್ರಾಯ ಹೇಳುವುದು ಎಷ್ಟು ಸರಿ?

  ಉತ್ತರ: ಸಿನಿಮಾ ಬಗ್ಗೆ ಎಲ್ಲರಿಗೂ ಒಂದು ವಿಶನ್ ಇರುತ್ತದೆ. ಆದರೆ ನಿರ್ದೇಶಕರ ವಿಶನ್ ಮಾತ್ರ ಸಿನಿಮಾ ಆಗುತ್ತದೆ. ಅವರು ಚಿತ್ರ ಮಾಡುವ ಮುನ್ನ ತಮ್ಮ ವಿಶನ್ ಒಳಗೆ ನಾಯಕ ಕಂಫರ್ಟ್ ಆಗಿದ್ದಾನಾ ಅಥವಾ ಇಲ್ವಾ ಎನ್ನುವುದನ್ನು ಅರ್ಥ ಮಾಡಿಕೊಂಡಿರಬೇಕು. ಯಾಕೆಂದರೆ ನಾಯಕ ಆ ಕತೆಯೊಳಗೆ ಮನಸಾರೆ ಸೇರಿಕೊಂಡಾಗ ಮಾತ್ರ ಚಿತ್ರ ಚೆನ್ನಾಗಿ ಬರಲು ಸಾಧ್ಯ. ಹಾಗಂತ ನನ್ನ ಚಿತ್ರ ಮಾಡುವ ನಿರ್ದೇಶಕರೆಲ್ಲರೂ ಶಿವಣ್ಣನ ಅಭಿಪ್ರಾಯದಂತೆ ಚಿತ್ರ ಮಾಡಬೇಕು ಎಂಬ ಆಕಾಂಕ್ಷೆ ನನಗಿಲ್ಲ. ಆದರೆ ಕತೆ, ಚಿತ್ರಕತೆಗಳ ಕುರಿತಾದ ನನ್ನ ಸಂದೇಹಗಳಿಗೆ ಸರಿಯಾದ ಉತ್ತರ ನೀಡುವ ಸಾಮರ್ಥ್ಯ ಅವರಿಗಿರಬೇಕು. ಅದು ಬಿಟ್ಟು ನಾನು ಹೇಳಿದೆ ಎಂದು ನನ್ನ ಮೇಲೆ ಭಾರ ಹಾಕಿ, ಕತೆ ಬದಲಾಯಿಸೋದಲ್ಲ.

  ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ?

  ಪ್ರಶ್ನೆ: ನಿಮ್ಮ ಸಂದೇಹಗಳಿಗೆ ಉತ್ತರಿಸಲಾಗದೆ ನಿರ್ದೇಶಕರು ವಾಪಸ್ ಹೋದ ಉದಾಹರಣೆ ಇದೆಯಾ?

  ಉತ್ತರ: ಈ ಹಿಂದೆ ನನ್ನ ಜೊತೆ ಕೆಲಸ ಮಾಡಿ ಹಿಟ್ ನೀಡಿದಂಥ ನಿರ್ದೇಶಕರೊಬ್ಬರು ಆ ನಂತರ ಕೂಡ ಒಂದೆರಡು ಕತೆ ನನಗಾಗಿ ಮಾಡಿಕೊಂಡು ಬಂದರು. ಆದರೆ ನನಗೆ ಅದು ಸರಿ ಹೊಂದಲಿಲ್ಲ. ಪಾಪ, ಇದೀಗ ಒಂದು ವರ್ಷದಿಂದ ನಿಮಗಾಗಿಯೇ ಕತೆ ಮಾಡಿದ್ದೇನೆ ಎಂದು ಹೇಳ್ಕೊಂಡು ಬಂದ್ರು. ಅವರು ಹಿಟ್ ಕೊಟ್ಟಿದ್ದಾರೆ ಎಂದು ಒಪ್ಪುವುದು ಸುಲಭ. ಅಥವಾ ಹೀಗೆ ಚೇಂಜ್ ಮಾಡಿ ಎಂದು ಸಜೆಶನ್ ಹೇಳೋದು ಇನ್ನೂ ಸುಲಭ. ಆದರೆ ನನಗೆ ಅವರು ಹೇಳುವ ಕತೆಯೇ ಚೆನ್ನಾಗಿದೆ ಎನಿಸುತ್ತಿಲ್ಲ ಎಂದಾಗ ಬಲವಂತಕ್ಕೆ ಯಾಕೆ ಒಪ್ಕೊಳ್ಳಲಿ?

  ಶಿವಣ್ಣ-ಪಿ.ವಾಸು ಜೋಡಿಯ 'ಆನಂದ್' ಚಿತ್ರಕ್ಕೆ ಮುಹೂರ್ತ ನಿಗದಿ ಆಯ್ತು ಕಣ್ರೀ

  ಪ್ರಶ್ನೆ: ನಿಮ್ಮ ವೃತ್ತಿ ಬದುಕಿನಲ್ಲಿ ಸೋಲುಗಳು ಕಡಿಮೆ. ಮುಂದೆಯೂ ಹಾಗೆ ಇರಬೇಕು ಎಂಬ ಕಾರಣದಿಂದ ಈ ತೀರ್ಮಾನ ಕೈಗೊಂಡಿದ್ದೀರ?

  ಉತ್ತರ: ನಾನು ನನ್ನ ಸ್ವಾರ್ಥಕ್ಕಾಗಿ ಚ್ಯೂಸಿ ಅಂತ ಅಂದ್ಕೋಬೇಡಿ. ಯಾಕೆಂದರೆ ಚಿತ್ರ ಸೋಲುವುದರಿಂದ ನನಗೆ ಯಾವತ್ತೂ ಲಾಸ್ ಆಗಿಲ್ಲ. ಇನ್ನಷ್ಟು ಹೊಸ ಚಿತ್ರಗಳೂ ಸಿಗುತ್ತವೆ, ಸಂಭಾವನೆ ಕೂಡ ಕೈ ಸೇರುತ್ತವೆ. ಆದರೆ ಸೋಲಾಗಲೀ, ಗೆಲುವಾಗಲೀ ಅದು ಅಭಿಮಾನಿಗಳಿಗೆ, ನಿರ್ಮಾಪಕರಿಗೆ ಇಷ್ಟವಾಗದಂಥ ಚಿತ್ರ ಆಗಿರಬಾರದು. ಅಷ್ಟಕ್ಕೂ ತುಂಬ ಒತ್ತಾಯ ಮಾಡಿದರೆ ಖಂಡಿತಾ ನಾನು ಒಪ್ಪಿಕೊಳ್ಳುವೆ. ಆದರೆ ಒಂದು ಕಂಡೀಶನ್ ಇರುತ್ತದೆ! ಚಿತ್ರ ಸೋತರೆ ಅದರ ಜವಾಬ್ದಾರಿ ಹೊರೋದಿಕ್ಕೆ ಆ ನಿರ್ದೇಶಕರು ರೆಡಿನಾ ಕೇಳಿ ನೋಡಿ. ಯಾರೂ ಒಪ್ಪಿಕೊಳ್ಳಲ್ಲ. ಅಷ್ಟು ಕಾನ್ಫಿಡೆನ್ಸ್ ನಿರ್ದೇಶಕರಿಗೆ ಇರದಿದ್ದರೆ ಹೇಗೆ? ಯಾಕೆಂದರೆ ಅವರು ನಿರ್ಮಾಪಕರಿಗೆ ನನ್ನ ಕಾಲ್ ಶೀಟ್ ಮಾತ್ರ ತೋರಿಸಿ ಒಪ್ಪಿಸಿರುತ್ತಾರೆ. ನಿರ್ಮಾಪಕರಾದವರು ನಿರ್ದೇಶಕರ ಮೇಲೆ ನಂಬಿಕೆ ಇರಿಸಿ ಬಂದರೆ ಓ.ಕೆ. ಅದು ಬಿಟ್ಟು "ಶಿವಣ್ಣ ನೀವು ಹೇಗೆ ಹೇಳ್ತೀರಿ ಹಾಗೆ" ಎಂದು ಬಂದಾಗ, ನಾನು ಸುಮ್ಸುಮ್ನೆ ನನಗೇನೇ ನಂಬಿಕೆಯಿರದ ನಿರ್ದೇಶಕರ ಬಗ್ಗೆ ಭರವಸೆ ಕೊಡೋಕೆ ಸಾಧ್ಯವಿಲ್ಲ.

  'ದಿ ವಿಲನ್' ನೋಡಿ ಶಿವಣ್ಣ ಪುತ್ರಿ ಫುಲ್ ಖುಷಿಯಾಗಿದ್ದಾರಂತೆ.!

  ಪ್ರಶ್ನೆ: ಮುಖ್ಯವಾಗಿ ನಾಯಕ ಮತ್ತು ನಿರ್ಮಾಪಕರ ಜೊತೆಗೆ ನಿರ್ದೇಶಕರ ಸಂಬಂಧ ಚೆನ್ನಾಗಿದ್ದರೆ ಮಾತ್ರ ಒಳ್ಳೆಯ ಚಿತ್ರ ಬರಬಹುದು ಎನ್ನುತ್ತೀರಾ?

  ಉತ್ತರ: ಅದು ಸಹಜ ತಾನೇ? ಒಂದು ಟೀಮ್ ಎಂದ ಮೇಲೆ ಅದೆಲ್ಲ ಇರಲೇಬೇಕು. ಅದು ಬಿಟ್ಟು ಕೊನೇಲಿ ರಿಸಲ್ಟ್ ಫ್ಲಾಪ್ ಆದರೆ ಮಾತ್ರ ಹೀರೋ ಮೇಲೆ ಜವಾಬ್ದಾರಿ ಹಾಕೋ ಹಾಗೆ ಇರಬಾರದು. ಚಿತ್ರ ಶುರುವಾಗಬೇಕಾದರೆ ಕೋ ಆರ್ಡಿನೇಶನ್ ತುಂಬ ಮುಖ್ಯ. ಇದು ಡೈರೆಕ್ಟರ್ ಗೂ ಮುಖ್ಯ. ಏನೋ ಚಾನ್ಸ್ ಸಿಕ್ತು ಅಂತ ಯಾರಿಗೂ ಇಷ್ಟ ಆಗದ ಸಿನಿಮಾ ಮಾಡೋದಲ್ಲ. ಒಬ್ರು ಯಂಗ್ ಡೈರೆಕ್ಟರ್ ಇದ್ದರು. ಅವರ ಜೊತೆಗೆ ನಾನು ಒಂದು ಚಿತ್ರ ಮಾಡಬೇಕಿತ್ತು. ಆ ಕತೆಯೂ ನನಗೆ ಇಷ್ಟವಿತ್ತು. ಆದರೆ ನಿರ್ದೇಶಕರಿಗೇನೇ ಅದನ್ನು ಮುಂದುವರಿಸೋಕೆ ಕಾಲ ಕೂಡಿ ಬರಲಿಲ್ಲ. ಅದರ ಮೇಲೆ ನಾನು ಒತ್ತಡ ಹಾಕೋದು ನ್ಯಾಯ ಅಲ್ಲ. ಹಾಗಾಗಿ ಆ ಪ್ರಾಜೆಕ್ಟ್ ನಡೆಯಲಿಲ್ಲ. ಡೈರೆಕ್ಟರ್ ಹಾಗೆ, ಡೈರೆಕ್ಟರ್ ಥರಾನೇ ಇರಬೇಕು. ಅದೇ ರೀತಿ ನಿರ್ಮಾಪಕನಿಗೋ, ನಾಯಕನಿಗೋ ಅಸಮಾಧಾನ ಇದೆ ಎಂದು ಗೊತ್ತಾದ ಮೇಲೆ ನಿರ್ದೇಶಕನಿಗೂ ಕಂಫರ್ಟ್ ಆಗಿ ಡೈರೆಕ್ಷನ್ ಮಾಡೋಕೆ ಸಾಧ್ಯಾಗಲ್ಲ.

  ಪ್ರಶ್ನೆ: ಪಿ.ವಾಸು ಅವರೊಂದಿಗಿನ ನಿಮ್ಮ ಚಿತ್ರದ ವಿಶೇಷತೆಗಳೇನು?

  ಉತ್ತರ: ಈ ಚಿತ್ರದಲ್ಲಿ ಒಂದು ದೊಡ್ಡ ಕುಟುಂಬ ಇದೆ. ಅದರಲ್ಲಿ ಹದಿನೈದು ಇಪ್ಪತ್ತು ಮಂದಿ ಇರುತ್ತಾರೆ. ಅನಂತ್ ನಾಗ್ ಕುಟುಂಬದಲ್ಲಿ ಹಿರಿಯ. ಅವರಿಗೆ ಮೂರು ಮಂದಿ ಗಂಡು ಮಕ್ಕಳು. ಅವರ ಸ್ನೇಹಿತರ ಮಕ್ಕಳನ್ನೇ ಮೂರು ಜನಕ್ಕೂ ವಿವಾಹ ಮಾಡಿ ಸೊಸೆಯಂದಿರನ್ನಾಗಿಸಿರುತ್ತಾರೆ. ಎಲ್ಲರಿಗೂ ಮೊಮ್ಮಕ್ಕಳು ಇರುತ್ತಾರೆ. ಅವರೊಳಗೆ ನಾಯಕಿ ಯಾರು? ಅಲ್ಲಿಗೆ ಕಾಲಿಡುವ ನಾಯಕನಿಗೆ ಆ ತಾತನ ಜೊತೆಗೆ ಇರುವ ಸಂಬಂಧ ಏನು? ನಾಯಕನ ವರ್ತನೆಗಳು ತಾತನನ್ನು ಯಾಕೆ ಇಂಪ್ರೆಸ್ ಮಾಡುತ್ತವೆ? ನಾಯಕನಿಗೂ ಅನಂತನಾಗ್ ಅವರ ಪಾತ್ರಕ್ಕೂ ಇರುವ ಬಾಂಡಿಂಗ್ ತುಂಬ ಹತ್ತಿರವಾಗಿರುವಂಥದ್ದು. ಆ ಎರಡು ಪಾತ್ರಗಳ ನಡುವಿನ ಭಾವನಾತ್ಮಕ ಸಂಬಂಧ ತುಂಬ ಚೆನ್ನಾಗಿದೆ. ಹಾಗಂತ ಎಲ್ಲಿಯೂ ಮೆಲೋ ಡ್ರಾಮಾ ಇಲ್ಲ. ಆ ಕುಟುಂಬದೊಳಗೆ ನಾಯಕನ ಪಾತ್ರ ಹೇಗೆ ಎಂಟ್ರಿಯಾಗುತ್ತದೆ ಮತ್ತು ಹೇಗೆ ಮುಂದುವರಿಯುತ್ತದೆ ಎನ್ನುವುದು ಚಿತ್ರದ ಕುತೂಹಲದ ಅಂಶ.

  ಪ್ರಶ್ನೆ: ಸಿನಿಮಾದ ಮೂಲಕ ಹಂಚಲಾಗುವ ವಿಶೇಷ ಸಂದೇಶಗಳು ಏನಾದರೂ ಇವೆಯೇ?

  ಉತ್ತರ: ಈ ಚಿತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವಂಥ ಅಂಶಗಳಿದ್ದರೂ ಕೌಟುಂಬಿಕವಾಗಿ ಸೆಳೆಯುವಂಥ ಸಂಗತಿಗಳೇ ಹೆಚ್ಚು ಇವೆ. ಪ್ರತಿಯೊಂದು ಸಮಸ್ಯೆಗಳಿಗೆ ಕ್ಲಾರಿಟಿ ಹುಡುಕಿಕೊಳ್ಳುವುದು ಮುಖ್ಯ. ಅದಕ್ಕೆ ಉತ್ತರ ಹುಡುಕದೇ ಹೋದರೆ ಆ ಕೊರಗು ಮನದೊಳಗೇ ಉಳಿಯುತ್ತದೆ. ಮನುಷ್ಯನ ಮನಸ್ಸಿನೊಳಗೆ ಉಳಿದುಕೊಳ್ಳುವ ತಪ್ಪಿತಸ್ಥ ಭಾವದಿಂದ ಏನೇನು ನಡೆಯಬಹುದು ಎಂಬ ಬಗ್ಗೆ ಚಿತ್ರ ಹೇಳುತ್ತದೆ.

  English summary
  Kannada Actor Shiva Rajkumar reveals about his choosy nature in an exclusive interview with Filmibeat Kannada.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more