»   » 'ವಾಸ್ತು' ಬೆಡಗಿ ಐಶಾನಿ ಶೆಟ್ಟಿ ಜೊತೆ ಚಿಟ್ ಚಾಟ್

'ವಾಸ್ತು' ಬೆಡಗಿ ಐಶಾನಿ ಶೆಟ್ಟಿ ಜೊತೆ ಚಿಟ್ ಚಾಟ್

Posted By:
Subscribe to Filmibeat Kannada

ಕಳೆದ ಗುರುವಾರ ರಾಜ್ಯದಾದ್ಯಂತ ರಿಲೀಸ್ ಆಗಿರುವ ಸಿನಿಮಾ 'ವಾಸ್ತುಪ್ರಕಾರ'. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನ ಪಡೆದಿದ್ದರೂ, 'ವಾಸ್ತುಪ್ರಕಾರ' ಸಿನಿಮಾವನ್ನ ನೋಡೋಕೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳ್ತಿದ್ದಾರೆ.

ನವರಸ ನಾಯಕ ಜಗ್ಗೇಶ್-ರಕ್ಷಿತ್ ಶೆಟ್ಟಿ ಕಾಮಿಡಿ ಜುಗಲ್ಬಂದಿ, ಅನಂತ್ ನಾಗ್-ಸುಧಾರಾಣಿ ಕಿತ್ತಾಟದ ನಡುವೆ ಯುವ ನಟಿ ಐಶಾನಿ ಶೆಟ್ಟಿ ಪಡ್ಡೆಗಳ ಹೃದಯ ಕದ್ದಿದ್ದಾರೆ. ಸಹಜ ಅಭಿನಯ, ಮಾದಕ ಧ್ವನಿಯಿಂದ ಐಶಾನಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ.


ಈಗಾಗಲೇ 'ಜೋತಿ ಅಲಿಯಾಸ್ ಕೋತಿ ರಾಜ್' ಚಿತ್ರದಲ್ಲಿ ಅಭಿನಯಿಸಿರುವ ಐಶಾನಿ ಶೆಟ್ಟಿಗೆ 'ವಾಸ್ತು ಪ್ರಕಾರ' ಸಿನಿಮಾದಿಂದ ಬಿಗ್ ಬ್ರೇಕ್ ಸಿಗುವುದು ಖಚಿತ. 'ವಾಸ್ತುಪ್ರಕಾರ' ಸಿನಿಮಾದಿಂದ ಐಶಾನಿಗೆ ಸಿಕ್ಕ ಪ್ರತಿಕ್ರಿಯೆಯನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ.


An Interview with Kannada Actress Aishani Shetty

* 'ವಾಸ್ತುಪ್ರಕಾರ' ರಿಲೀಸ್ ಆಗಿದೆ. ನಿಮಗೆ ಸಿಗುತ್ತಿರುವ ಪ್ರತಿಕ್ರಿಯೆ?


- ತುಂಬಾ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಟೀನೇಜ್ ಹುಡುಗಿಯಾಗಿ ನಾನು ಮಾಡಿರುವ ಪಾತ್ರ ಬಹುತೇಕ ಎಲ್ಲರಿಗೂ ಇಷ್ಟವಾಗಿದೆ. ನನಗೆ ತುಂಬಾ ಖುಷಿಯಾಗಿದೆ. [ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]


* ನಿಮಗೆ ಸಿಕ್ಕಿರುವ ಬೆಸ್ಟ್ ಕಾಮೆಂಟ್ ನ ನಮ್ಮ ಓದುಗರ ಜೊತೆ ಹಂಚಿಕೊಳ್ಳಬಹುದಾ?


- ರಿಲೀಸ್ ಆದ್ಮೇಲೆ ಫೇಸ್ ಬುಕ್ ನಲ್ಲಿ ತುಂಬಾ ಮೆಸೇಜ್ ಗಳು ಬರುತ್ತಿವೆ. ಯಾರೋ ಒಬ್ಬರು ನನಗೆ ಕಳುಹಿಸಿದ ಮೆಸೇಜ್ ಪ್ರಕಾರ, ಅವರು 15 ವರ್ಷಗಳ ನಂತ್ರ 'ವಾಸ್ತುಪ್ರಕಾರ' ಮೂಲಕ ಕನ್ನಡ ಚಿತ್ರವೊಂದನ್ನ ನೋಡಿದ್ದಾರೆ. ಇರುವ ಹೀರೋಯಿನ್ ಗಳಲ್ಲೆಲ್ಲಾ ನನ್ನ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಅಂತ ಕಾಮೆಂಟ್ ಮಾಡಿದ್ರು. ಅದ್ರಲ್ಲೂ ವಾಯ್ಸ್ ತುಂಬಾ ಇಷ್ಟ ಆಗಿದೆ ಅವರಿಗೆ. ದಟ್ಸ್ ಒನ್ ಆಫ್ ದಿ ಬೆಸ್ಟ್ ಕಾಮೆಂಟ್ಸ್. ನನ್ನ ವಾಯ್ಸ್ ತುಂಬಾ ಸಾಫ್ಟ್, ಡಬ್ಬಿಂಗ್ ಹೇಗೆ ಮಾಡ್ತಾರೆ ಅಂತ ಹೇಳ್ತಿದ್ದರು. ಈಗ ಎಲ್ಲರೂ ನನ್ನ ವಾಯ್ಸ್ ಇಷ್ಟ ಪಡ್ತಿದ್ದಾರೆ.


An Interview with Kannada Actress Aishani Shetty

* ನಿಮ್ಮನ್ನ ನೀವು ಬಿಗ್ ಸ್ಕ್ರೀನ್ ನಲ್ಲಿ ನೋಡಿಕೊಂಡಾಗ ಆದ ಅನುಭವ?


- ಅದು ಒಂಥರಾ ಫೀಲಿಂಗ್. ಫ್ಯಾನ್ಸ್ ಜೊತೆ ಕೂತು ಸಿನಿಮಾ ನೋಡೋದು. ಅದನ್ನ ಎಕ್ಸ್ ಪ್ರೆಸ್ ಮಾಡುವುದು ಕಷ್ಟ.


* ನಿಮ್ಮ ಮುಂದಿನ ಪ್ರಾಜೆಕ್ಟ್?


- ಸತೀಶ್ ನೀನಾಸಂ ಜೊತೆ 'ರಾಕೆಟ್' ಸಿನಿಮಾ ಮಾಡುತ್ತಿದ್ದೇನೆ. ಅವಕಾಶಗಳು ಬರುತ್ತಿವೆ. ನೋಡ್ಬೇಕು.


* ಭಟ್ಟರ ಕ್ಯಾಂಪ್ ನಲ್ಲೇ ಮುಂದುವರಿಯುವ ಪ್ಲಾನ್ ಇದೆಯಾ?


- ಹ್ಹಾ....ಹ್ಹಾ.....ಅದನ್ನ ನೀವು ನನ್ನ ಕೇಳ್ಬಾರ್ದು. ನನಗೆ ಅದು ಗೊತ್ತಿಲ್ಲ. ಅವಕಾಶ ಸಿಕ್ಕರೆ ಮಾಡ್ತೀನಿ. ['ವಾಸ್ತುಪ್ರಕಾರ' ಪತ್ರಿಕೆಗಳ ವಿಮರ್ಶಾ ನೋಟ]


An Interview with Kannada Actress Aishani Shetty

* ಯಾವ ತರಹದ ಪಾತ್ರಗಳನ್ನ ಎಕ್ಸ್ ಪೆಕ್ಟ್ ಮಾಡ್ತಿದ್ದೀರಾ?


- ಟೀನೇಜ್ ಹುಡುಗಿಯ ಪಾತ್ರಕ್ಕಿಂತ ಸ್ವಲ್ಪ ಮೆಚ್ಯೂರ್ಡ್ ಹುಡುಗಿಯ ಪಾತ್ರ ಮಾಡುವ ಆಸೆ ಇದೆ.


ಸಂದರ್ಶನ : ಹರ್ಷಿತಾ ನಾಗರಾಜ್

English summary
Kannada Movie 'Vaastu Prakaara' has released all over Karnataka on April 2nd. With the film receiving mixed reviews, Filmibeat Kannada brings you an exclusive chit-chat with the heroine Aishani Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada