»   » ಮಜಾ ಟಾಕೀಸ್ ನಲ್ಲಿ ಅಸಾಧ್ಯವಾದುದ್ದನ್ನ ಸಾಧ್ಯ ಮಾಡಿದ ಸೃಜಾ

ಮಜಾ ಟಾಕೀಸ್ ನಲ್ಲಿ ಅಸಾಧ್ಯವಾದುದ್ದನ್ನ ಸಾಧ್ಯ ಮಾಡಿದ ಸೃಜಾ

Posted By:
Subscribe to Filmibeat Kannada
Srujan lokesh interview part 2 | Filmibeat Kannada

ವಾರಾಂತ್ಯದಲ್ಲಿ ಮನೆಯಿಂದ ಹೊರಗಡೆ ಹೋಗದ ಜನರಿಗೆ ಟಿವಿ ಮುಂದೆ ಕೂತರೆ ಸಾಕು ಮನಸ್ಸು ಪೂರ್ತಿ ಮನೋರಂಜನೆ ಸಿಕ್ತು ಎನ್ನುವಂತ ಫೀಲ್ ಕೊಡುವ ಕಾರ್ಯಕ್ರಮ ಮಜಾ ಟಾಕೀಸ್. ಸೀಸನ್ 1 ಮುಗಿಸಿ ಸೀಸನ್ ಎರಡನ್ನು ಆರಂಭ ಮಾಡಿರುವ ಮಜಾ ಟಾಕೀಸ್ ನ ಪ್ರತಿ ಸಂಚಿಕೆಯಲ್ಲೂ ಸಾಕಷ್ಟು ಕಷ್ಟವಿರುತ್ತೆ.

ಇಡೀ ತಂಡ ಹಗಲು-ಇರುಳು ಕಷ್ಟ ಪಟ್ಟು ಕೆಲಸ ಮಾಡುತ್ತೆ. ಪೇಪರ್ ನಿಂದ ಆರಂಭ ಆಗುವ ಮಜಾ ಟಾಕೀಸ್ ಸ್ಕ್ರೀನ್ ಮೇಲೆ ಬರುವಷ್ಟರಲ್ಲಿ ಎಷ್ಟೆಲ್ಲಾ ಬದಲಾವಣೆಗಳು ಆಗುತ್ತೆ. ತೆರೆ ಹಿಂದೆ ಹೇಗೆಲ್ಲಾ ಕೆಲಸ ಆಗುತ್ತೆ? ಎನ್ನುವುದರ ಬಗ್ಗೆ ಫಿಲ್ಮೀ ಬೀಟ್ ಜೊತೆ ಸಂಪೂರ್ಣವಾಗಿ ವಿವರಿಸಿದ್ದಾರೆ ಮಜಾ ಟಾಕೀಸ್ ಕ್ಯಾಪ್ಟನ್ ಸೃಜಾ.

ಸೃಜನ್ ಮಾಡ್ತಿರೋ ಒಳ್ಳೆ ಕೆಲಸ ನಿಮ್ಗೂ ಗೊತ್ತಿರಲಿ

ಈ ಎಲ್ಲಾ ವಿಚಾರಗಳ ಜೊತೆಗೆ ಎಲ್ಲರೂ ಅಸಾಧ್ಯ ಎನ್ನುತ್ತಿದ್ದ ಕೆಲಸವನ್ನ ಸಾಧ್ಯ ಮಾಡಿ ತೋರಿಸುತ್ತಿದ್ದಾರೆ ಸೃಜನ್ ಮತ್ತು ಟೀಂ. ಒಂದು ಬಾರಿ ನಗಿಸಿ ಸ್ವಲ್ಪ ರೆಸ್ಟ್ ಮಾಡಿದ್ದ ತಂದ ಮತ್ತೆ ಒಂದಾಗಲು ಕಾರಣವೇನು? ಸೃಜನ್ ಬದಲಾಯಿಸಿಕೊಂಡಿರುವ ಹೇರ್ ಸ್ಟೈಲ್ ಬಗ್ಗೆ ಏನು ಹೇಳುತ್ತಾರೆ? ಈ ಎಲ್ಲಾ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದೆ ಓದಿ

ಸೀಸನ್ ೨ ಸ್ಟಾರ್ಟ್ ಆಗಿದೆ, ರೆಸ್ಪಾನ್ಸ್ ಹೇಗಿದೆ?

ರೆಸ್ಪಾನ್ಸ್ ತುಂಬಾ ಚೆನ್ನಾಗಿದೆ. ನಾವು ಎಂದಿಗೂ ಅಂದುಕೊಳ್ಳದ ಮಟ್ಟಿಗೆ ಪ್ರತಿಕ್ರಿಯೆ ಸಿಗುತ್ತಿರುವುದು ಖುಷಿ ತಂದಿದೆ. ಮುಖ್ಯವಾಗಿ ಚೇಂಜ್ ಓವರ್ ಕೊಡಬೇಕು ಎಂದುಕೊಂಡಿದ್ವಿ ಅದರಂತೆ ಆರಂಭದಲ್ಲೇ ಮುದ್ದೇಶನ ಮದುವೆ ಮಾಡಿ ಆರಂಭ ಮಾಡುದ್ವಿ. ಜನರ ರೆಸ್ಪಾನ್ಸ್ ಪಾಸಿಟಿವ್ ಆಗಿದೆ.

ಸೃಜಾ ಲುಕ್ ಕೂಡ ಬದಲಾಗಿದೆ? ಏನಾದ್ರೂ ಸ್ಪೆಷಲ್ ಇದ್ಯಾ ?

ನಿಜಾ ಅಂದ್ರೆ ಎರಡು ಮೂರು ದಿನ ಕೆಲಸ ಇಲ್ಲದೆ ಕೂದಲು ಬೆಳೆಸಿದ್ದೆ. ಕಟ್ಟಿಂಗ್ ಹೋದಾಗ, ಚೇಂಜ್ ಮಾಡೋಣ ಅಂತ ಮಾತಾಡುದ್ರು, ಓಕೆ ಅಂದ್ರೆ ಚೇಂಜ್ ಆಯ್ತು ಚೆನ್ನಾಗಿದೆ ಅಲ್ವಾ.

ಪ್ರತಿವಾರ ಹೊಸ ಹೊಸ ಸ್ಟೋರಿ ತರಬೇಕು, ಕಷ್ಟ ಆಗುತ್ತಾ?

ಮೋಸ್ಟ್ ಡಿಫಿಕಲ್ಟ್ ಪಾರ್ಟ್ ಅಂದ್ರೆ ನಗಿಸುವುದು. ಪ್ರತಿವಾರ ಹೊಸತನವನ್ನ ಹುಟ್ಟುಹಾಕುವುದು. ಅಸಾಧ್ಯವಾದ ಚಾಲೆಂಜ್ ಇದು ಅಂದರೆ ತಪ್ಪಿಲ್ಲ. ಆದ್ರೆ ದೇವರ ದಯೆಯಿಂದ ಸಾಧ್ಯ ಆಗುತ್ತಿದೆ.

ಎಲ್ಲರ ಸ್ಟೈಲ್ ಬದಲಾಗಿದೆ. ಕಾಸ್ಟ್ಯೂಮ್ಸ್ ಎಲ್ಲಾ ಹೇಗೆ ಅರೆಂಜ್ ಮಾಡ್ಕೋತ್ತೀರಾ?

ಎಲ್ಲರಿಗೂ ಕಾಸ್ಟ್ಯೂಮ್ಸ್ ಬಗ್ಗೆ ಗಮನ ಇರುತ್ತೆ. ನಾವೇನಾದ್ರು ಮತ್ತೆ ಕಾಸ್ಟ್ಯೂಮ್ಸ್ ರಿಪೀಟ್ ಹಾಕಿದ್ರೆ ಶೋ ಕೂಡ ಮರುಪ್ರಸಾರ ಅಂದುಕೊಳ್ತಾರೆ. ಹಾಗಾಗಿ ಪ್ರತಿ ಸಲ ಹೊಸದನ್ನೇ ಟ್ರೈ ಮಾಡಬೇಕು

ನಿಮ್ಮ ಪ್ಲಸ್ ಪಾಯಿಂಟ್ ಏನು ?

ನನ್ನ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ನಮ್ಮ ತಂಡ ಅವರಿಗೆ ಭಾಷೆಯ ಸಮಸ್ಯೆ ಇಲ್ಲ. ಅಪರ್ಣಾ, ಶ್ವೇತಾ ನಗಿಸುತ್ತಾರೆ ಅನ್ನುವುದೇ ವಿಶೇಷ. ಕುರಿ ಪ್ರತಾಪ್, ಮಂಡ್ಯ ರಮೇಶ್ ಹೀಗೆ ಎಲ್ಲರೂ ಅಷ್ಟೇ ಒಂದು ಕುಟುಂಬದ ತರ ಕೆಲಸ ಮಾಡ್ತಾರೆ. ಹೊಸದಾಗಿ ಸಾಕಷ್ಟು ಜನರು ಬಂದಿದ್ದಾರೆ. ಎಲ್ಲರೂ ಅವರದ್ದೇ ಆದ ಪ್ರತಿಭೆ ಹೊಂದಿದ್ದಾರೆ ಆದರೆ ಅದನ್ನ ಬೇರೆಯದ್ದೇ ಸ್ಟೈಲ್ ನಲ್ಲಿ ಪ್ರಸೆಂಟ್ ಮಾಡುವುದು ಮಜಾ ಟಾಕೀಸ್ ಸ್ಪೆಷಲ್ .

English summary
Kannada Maja Talkies fame Talking Star Srujan Lokesh interview about Maja Talkies season 2

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X