twitter
    For Quick Alerts
    ALLOW NOTIFICATIONS  
    For Daily Alerts

    ಬೀಟ್ ಬಾಕ್ಸಿಂಗ್ ಕನಸ ಬೆನ್ನುಹತ್ತಿ ಸಾಗುತ್ತಿರುವ ಬೆಂಗಳೂರು ಯುವಕ

    |

    'ಬೀಟ್‌ ಬಾಕ್ಸಿಂಗ್' ಕೆಲ ವರ್ಷಗಳಿಂದ ಹೆಚ್ಚು ಚಾಲ್ತಿಗೆ ಬರುತ್ತಿರುವ ಪದ. ಹಿಪ್‌ಹಾಪ್, ರ್ಯಾಪ್, ರೀಮಿಕ್ಸ್, ಕವರ್ ಸಾಂಗ್, ಬೀ ಬಾಯ್ ಜೊತೆಗೆ ಬೀಟ್ ಬಾಕ್ಸಿಂಗ್ ಸಹ ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸುತ್ತಿದೆ.

    ಒಬ್ಬನೇ ವ್ಯಕ್ತಿ ವಿವಿಧ ವಾದ್ಯಗಳ ಶಬ್ದವನ್ನು ಅನುಕರಣೆ ಮಾಡಿ ಸಂಗೀತವನ್ನು ಹೊಮ್ಮಿಸುವುದನ್ನು 'ಬೀಟ್ ಬಾಕ್ಸಿಂಗ್' ಎನ್ನಲಾಗುತ್ತದೆ. ಭಾರತದಲ್ಲಿ ಅನೇಕ ಬೀಟ್‌ ಬಾಕ್ಸರ್‌ಗಳಿದ್ದಾರೆ. ಬೆಂಗಳೂರಿನಲ್ಲಿಯೂ ಹಲವು ಬೀಟ್‌ ಬಾಕ್ಸರ್‌ಗಳಿದ್ದಾರೆ. ಅವರಲ್ಲಿ ಒಬ್ಬರು ಹರಿ ಹರನ್ ಅಲಿಯಾಸ್ ಹ್ಯಾರಿ ಡಿ ಕ್ರೂಜ್.

    ಬೀಟ್‌ ಬಾಕ್ಸಿಂಗ್‌ನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಗುರಿ ಹೊಂದಿ ಮುಂದೆ ಸಾಗುತ್ತಿರುವ ಹರಿ ಹರನ್ ಈಗಾಗಲೆ ಬೀಟ್‌ ಬಾಕ್ಸಿಂಗ್‌ ಸಮುದಾಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಇಷ್ಟಕ್ಕೆ ಅವರು ತೃಪ್ತರಾಗಿಲ್ಲ. ಇನ್ನೂ ಸಾಧಿಸುವ ಹಂಬಲದಿಂದ ಮುಂದೆ ಸಾಗುತ್ತಿದ್ದಾರೆ. ಈ ಪಯಣದ ಬಗ್ಗೆ 'ಫಿಲ್ಮೀಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ.

    ನಮ್ಮ ಮನೆಯಲ್ಲಿ ನನಗೆ ಪ್ರೋತ್ಸಾಹ ಸಿಗಲಿಲ್ಲ: ಹರಿಹರನ್

    ನಮ್ಮ ಮನೆಯಲ್ಲಿ ನನಗೆ ಪ್ರೋತ್ಸಾಹ ಸಿಗಲಿಲ್ಲ: ಹರಿಹರನ್

    'ಬೀಟ್ ಬಾಕ್ಸಿಂಗ್‌' ಎಂಬುದನ್ನು ಕಲೆ ಎಂದು ಒಪ್ಪಿಕೊಳ್ಳಲು ಹಲವರು ತಯಾರಿಲ್ಲ. ಸ್ವತಃ ನನ್ನ ಮನೆಯಲ್ಲಿಯೆ ನನಗೆ ಪ್ರೋತ್ಸಾಹ ಸಿಗಲಿಲ್ಲ. ಆದರೆ ನಾನು 'ಬೀಟ್ ಬಾಕ್ಸಿಂಗ್‌'ಗೆ ಆಕರ್ಷಿತನಾಗಿಬಿಟ್ಟಿದ್ದೆ. ಮನೆಯವರ ನಿರಾಕರಣೆಯ ನಡುವೆಯೂ ಕಲಿತೆ, ಹಲವೆಡೆಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟೆ, ಕೊಡುತ್ತಿದ್ದೇನೆ' ಎಂದರು ಹರಿ ಹರನ್.

    ಯೂಟ್ಯೂಬ್‌ ನೋಡಿ ಕಲಿಯಲು ಆರಂಭಿಸಿದ ಹರಿಹರನ್

    ಯೂಟ್ಯೂಬ್‌ ನೋಡಿ ಕಲಿಯಲು ಆರಂಭಿಸಿದ ಹರಿಹರನ್

    ನಾನು ಪಿಯುಸಿಯಲ್ಲಿದ್ದಾಗ ಮೊದಲ ಬಾರಿಗೆ ಬೀಟ್‌ ಬಾಕ್ಸಿಂಗ್‌ಗೆ ಪರಿಚಯಿಸಲ್ಪಟ್ಟೆ. ನನ್ನ ಕಾಲೇಜಿನ ಸೀನಿಯರ್ ಒಬ್ಬರು ನನಗೆ ಯೂಟ್ಯೂಬ್‌ನಲ್ಲಿ ಬೀಟ್ ಬಾಕ್ಸಿಂಗ್ ವಿಡಿಯೋ ತೋರಿಸಿದರು. ಆ ನಂತರ ನಾನು ಅದರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದೆ. ಯೂಟ್ಯೂಬ್‌ನಲ್ಲಿಯೇ ತರಬೇತಿ ವಿಡಿಯೋಗಳನ್ನು ನೋಡಿ ಬೀಟ್‌ ಬಾಕ್ಸಿಂಗ್‌ನ ಬೇಸಿಕ್ಸ್ ಕಲಿತುಕೊಂಡು. ಸಹಪಾಠಿಗಳ ಎದುರು ಪ್ರದರ್ಶಿಸಿದೆ. ಅದು ಅವರಿಗೆ ಬಹಳ ಇಷ್ಟವಾಯಿತು. ನನಗೆ ಅದುವೇ ಪ್ರೇರಣೆ ಒದಗಿಸಿತು ಹಾಗಾಗಿ ಬೀಟ್ ಬಾಕ್ಸಿಂಗ್ ಅನ್ನು ಹೆಚ್ಚು-ಹೆಚ್ಚು ಕಲಿಯಲು ತೊಡಗಿದೆ. ಕಲಾವಿದನಿಗೆ ಸಿಗುವ ಪ್ರೋತ್ಸಾಹವೇ ಅವನಿಗೆ ದೊಡ್ಡ ಪ್ರೇರಣೆ ಎಂದು ಆರಂಭದ ದಿನಗಳನ್ನು ನೆನದರು ಈ ಬೀಟ್ ಬಾಕ್ಸರ್.

    'ವಿವಿಧ ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡಲು ಆರಂಭಿದೆ'

    'ವಿವಿಧ ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡಲು ಆರಂಭಿದೆ'

    ಪದವಿ ಕಲಿಯುವ ವೇಳೆಯಲ್ಲಿ ನನ್ನ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡಲು ಆರಂಭಿಸಿದೆ. ಕಾರ್ಯಕ್ರಮ ನೀಡುತ್ತ-ನೀಡುತ್ತ ನನ್ನ ಬೀಟ್ ಬಾಕ್ಸಿಂಗ್ ಅನ್ನು ತಿದ್ದಿಕೊಳ್ಳಲು, ಇನ್ನಷ್ಟು ಉತ್ತಮವಾಗಿ ಬೀಟ್ ಬಾಕ್ಸಿಂಗ್ ಮಾಡುವ ಪ್ರಯತ್ನ ಮಾಡಿದೆ ಸಫಲನೂ ಆದೆ. ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ನಾನು ಕಾರ್ಯಕ್ರಮ ನೀಡಿದ್ದೇನೆ. ಈಗಂತೂ ಅವರೇ ಕರೆ ಮಾಡಿ ಕಾಲೇಜಿನಲ್ಲಿ ಬೀಟ್ ಬಾಕ್ಸಿಂಗ್ ಮಾಡಲು ಕರೆಯುತ್ತಾರೆ ಎಂದು ಸಂತಸದಿಂದ ನುಡಿದರು ಹರಿಹರನ್.

    ಭಿನ್ನವಾಗಿರಲು ಸದಾ ಪ್ರಯತ್ನ ಮಾಡುತ್ತೇನೆ: ಹರಿಹರನ್

    ಭಿನ್ನವಾಗಿರಲು ಸದಾ ಪ್ರಯತ್ನ ಮಾಡುತ್ತೇನೆ: ಹರಿಹರನ್

    ಬೆಂಗಳೂರು ಒಂದರಲ್ಲಿಯೇ ಸಾಕಷ್ಟು ಮಂದಿ ಬೀಟ್ ಬಾಕ್ಸರ್‌ಗಳು ಇದ್ದಾರೆ. ಭಾರತಕ್ಕೆ ಹೋಲಿಸಿದರೆ ಹರಿಹರನ್ ನಗಣ್ಯ ಆದರೆ ಇತರರಿಗಿಂತಲೂ ಭಿನ್ನವಾಗಿರಲು ಸದಾ ಯತ್ನಿಸುವ ಹರಿಹರನ್, ತಮ್ಮ ಬೀಟ್‌ ಬಾಕ್ಸಿಂಗ್‌ನಲ್ಲಿ ಭಿನ್ನತೆ ತರಲು ಯೋಚಿಸಿ 'ಕಜೂ' ವಾದ್ಯ ಬಳಸಿ ಬೀಟ್ ಬಾಕ್ಸಿಂಗ್ ಮಾಡುವುದು ಆರಂಭಿಸಿದರು. ಆ ನಂತರ ಸ್ಯಾಕ್ಸೊಫೋನ್ ಮಾದರಿಯ ಧ್ವನಿಯನ್ನೂ ಹೊರಡಿಸಿ ಬೀಟ್ ಬಾಕ್ಸಿಂಗ್ ಆರಂಭಿಸಿದರು. ಇವರ ಈ ಪ್ರಯತ್ನವನ್ನು 'ದಿ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ಗುರುತಿಸಿ ಮನ್ನಣೆ ನೀಡಿದೆ.

    ಬೀಟ್ ಬಾಕ್ಸಿಂಗ್ ಅನ್ನು ಕಲಿಸಲು ಆರಂಭಿಸಿದ್ದೇನೆ: ಹರಿಹರನ್

    ಬೀಟ್ ಬಾಕ್ಸಿಂಗ್ ಅನ್ನು ಕಲಿಸಲು ಆರಂಭಿಸಿದ್ದೇನೆ: ಹರಿಹರನ್

    ಬೆಂಗಳೂರಿನಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿರುವ ಹರಿಹರನ್ ಕೇರಳ ಸೇರಿದಂತೆ ಹಲವು ಅಂತರರಾಜ್ಯ ವೇದಿಕೆಗಳಲ್ಲಿ ಬೀಟ್ ಬಾಕ್ಸಿಂಗ್ ಮಾಡಿದ್ದಾರೆ. ಕೆಲವು ಮನ್ನಣೆಗಳೂ ಇವರಿಗೆ ದೊರೆತಿವೆ. ಇದೀಗ ಹೊಸಬರಿಗೆ ಬೀಟ್ ಬಾಕ್ಸಿಂಗ್ ಕಲಿಸುವ ಯತ್ನವನ್ನೂ ಮಾಡುತ್ತಿದ್ದಾರೆ. 'ನಾನು ಕಲಿಯಲು ಆರಂಭಿಸಿದಾಗ ಯಾರೂ ಕಲಿಸಲು ಇರಲಿಲ್ಲ. ಸ್ವಯಂ ಕಲಿಕೆಯಿಂದ ನಾನು ಕಲಿತಿದ್ದೇನೆ. ಆದರೆ ಈಗ ಬರುತ್ತಿರುವ ಯುವಕರಿಗೆ ಕಲಿಯಲು ಕಷ್ಟವಾಗದಂತೆ ನಾನೇ ಕಲಿಸಲು ಮುಂದಾಗಿದ್ದೇನೆ' ಎಂದಿದ್ದಾರೆ ಹರಿಹರನ್.

    ಬೀಟ್ ಬಾಕ್ಸಿಂಗ್‌ಗೂ ಮಿಮಿಕ್ರಿಗೂ ಏನು ವ್ಯತ್ಯಾಸ?

    ಬೀಟ್ ಬಾಕ್ಸಿಂಗ್‌ಗೂ ಮಿಮಿಕ್ರಿಗೂ ಏನು ವ್ಯತ್ಯಾಸ?

    ಬೀಟ್ ಬಾಕ್ಸಿಂಗ್‌ ಗೂ ಮಿಮಿಕ್ರಿಗೂ ಏನು ವ್ಯತ್ಯಾಸ? ಎರಡೂ ಸಹ ಶಬ್ದದ ಅನುಕರಣೆ ಅಲ್ಲವೆ? ಎಂಬ ಪ್ರಶ್ನೆಗೆ ವಿವರ ಉತ್ತರ ನೀಡಿದ ಹರಿಹರನ್, 'ಬೀಟ್ ಬಾಕ್ಸಿಂಗ್ ವಾದ್ಯಗಳ ಶಬ್ದದ ಅನುಕರಣೆ ಹೌದು ಆದರೆ ಅದು ಲಯಬದ್ಧ ಅನುಕರಣೆ. ವಾದ್ಯಗಳ ಶಬ್ದವನ್ನು ಅನುಕರಣೆಯನ್ನು ಒಂದು ಲಯದಲಲ್ಲಿ ಮಾಡಿ ಸಂಗೀತ ಹೊಮ್ಮುವಂತೆ ಮಾಡುವುದು ಬೀಟ್ ಬಾಕ್ಸಿಂಗ್. ಮಿಮಿಕ್ರಿ ಎಂಬುದು ಧ್ವನಿಯ ಯಥಾವತ್ತು ಅನುಕರಣೆ ಅಷ್ಟೆ ಎಂದರು.

    ಮುಂದೆ ಸಾಕಷ್ಟು ಯೋಜನೆಗಳನ್ನು ಹೊಂದಿರುವ ಹರಿಹರನ್

    ಮುಂದೆ ಸಾಕಷ್ಟು ಯೋಜನೆಗಳನ್ನು ಹೊಂದಿರುವ ಹರಿಹರನ್

    '' ಹಲವಾರು ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಮುಂದೆ ಕೆಲವು ಮುಖ್ಯ ಗಾಯಕರೊಟ್ಟಿಗೆ ಕೊಲ್ಯಾಬರೇಟ್ ಆಗುವ ಯೋಜನೆ ಇದೆ. ಈಗಾಗಲೇ ಕೆಲವು ಗಾಯಕರೊಟ್ಟಿಗೆ ಕೊಲ್ಯಾಬೊರೇಟ್ ಆಗಿದ್ದೇನೆ. ಏನೇ ಆದರೂ ಕಲಾವಿದವಾಗಿ 'ಸರ್ವೈವ್' ಆಗುವುದು ಸುಲಭವಲ್ಲ. ನಮ್ಮಂಥಹಾ ಅಪರೂಪದ ಸಂಗೀತ ಮಾಧ್ಯಮ ಆರಿಸಿಕೊಂಡವರಿಗಂತೂ ಇನ್ನೂ ಕಷ್ಟ. ಉಚಿತವಾಗಿ ಕಾರ್ಯಕ್ರಮ ಮಾಡುವಂತೆ ಕರೆಯುತ್ತಾರೆ. ಕೇವಲ ಪ್ರಯಾಣ ಭತ್ಯೆ ಕೊಡುತ್ತೇವೆ ಎನ್ನುತ್ತಾರೆ. ಆದರೂ ನಾನು ಬಿಡದೆ ಕಾರ್ಯಕ್ರಮ ಮಾಡುತ್ತೇನೆ. ಬೀಟ್ ಬಾಕ್ಸಿಂಗ್ ಅನ್ನು ಇನ್ನಷ್ಟು ಜನಪ್ರಿಯ ಮಾಡಬೇಕೆಂಬ ಆಸೆ ನನಗೆ ಇದೆ' ಎಂದು ಬೇಸರ ಹಾಗೂ ಉತ್ಸಾಹ ಎರಡೂ ಬೆರೆತ ಧ್ವನಿಯಲ್ಲಿ ಹೇಳಿದರು ಹರಿಹರನ್.

    English summary
    Bengaluru's beatboxer Hari Haran alias Hari D'croze's interview.
    Monday, April 5, 2021, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X