»   » ಒಳ್ಳೆ ಹುಡುಗ ಪ್ರಥಮ್ ಮನಗೆದ್ದ ಆ ಚೆಲುವೆ ಯಾರು..?

ಒಳ್ಳೆ ಹುಡುಗ ಪ್ರಥಮ್ ಮನಗೆದ್ದ ಆ ಚೆಲುವೆ ಯಾರು..?

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada
ಒಳ್ಳೆ ಹುಡುಗ ಪ್ರಥಮ್ ಮನಗೆದ್ದ ಆ ಚೆಲುವೆ ಯಾರು..? | Filmibeat Kannada

ಪ್ರಥಮ್ ಇಷ್ಟು ದಿನ ತಮ್ಮ ಸಿನಿಮಾಗಳ ಮೂಲಕ ಮತ್ತು ವಿವಾದ ಮೂಲಕ ಸುದ್ದಿ ಮಾಡುತ್ತಿದ್ದರು. ಆದರೆ ಈಗ ಪ್ರಥಮ್ ಮದುವೆ ಸುದ್ದಿ ಎಲ್ಲ ಕಡೆ ಹರಿದಾಡಿದೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಪ್ರಥಮ್ ಮದುವೆ ಆಗುತ್ತಿರುವ ಸುದ್ದಿ ನಿಜವೇ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಒಂದು ಕಡೆ ಮದುವೆ ಸುದ್ದಿ ಆದರೆ, ಇನ್ನೊಂದು ಕಡೆ ಪ್ರಥಮ್ ಮನ ಗೆದ್ದ ಆ ಹುಡುಗಿ ಯಾರು ಎನ್ನುವ ಕೂತುಹಲ ಹುಟ್ಟಿಕೊಂಡಿದೆ. ಈ ಬಗ್ಗೆ ಸ್ವತಃ ಪ್ರಥಮ್ ಮತ್ತು ಅವರ ತಂದೆ ಮಲ್ಲಣ್ಣ 'ಓನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಹೆಚ್ಚಿನ ವಿಷಯ ಹೇಳದಿದ್ದರು ಪ್ರಥಮ್ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ನಮ್ಮ ಪ್ರೇಮಾಂಕುರವಾಗಿ 6 ತಿಂಗಳಾಗಿದೆ..' 'ನಮ್ಮದು ನಿಷ್ಕಲ್ಮಶ ಮನೋಭಾವದ ಪ್ರೇಮ..' ಎಂದು ಪ್ರಥಮ್ ನಗುತ್ತಾ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಆಕೆಯ ಹೆಸರು ಹೇಳಲಾರೆ

''ನಾನು ಆಕೆಯ ಹೆಸರು ಹೇಳಲಾರೆ... ಅವಳದ್ದು ಸಿನಿಮಾ ಫೀಲ್ಡ್ ಅಲ್ಲ. ಅವಳು ಇಂಜಿನಿಯರ್ ಪದವೀಧರೆ. ನಾವು ದಿನವೂ ಫೋನ್ ಮಾಡಿ ಮಾತನಾಡುತ್ತೇವೆ. ಅವಳು ನನ್ನ ಕಷ್ಟಕ್ಕೆ ದನಿಯಾಗಿದ್ದಾಳೆ. ಅವಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವಳು ಕೂಡ ನನ್ನನ್ನು ಇಷ್ಟಪಡುತ್ತಾಳೆ.'' ಎಂದು ಪ್ರಥಮ್ ತಮ್ಮ ಪ್ರೀತಿಯನ್ನು ವಿವರಿಸಿದರು.

ಅವಳು ಮೈಸೂರು ಹುಡುಗಿ

''ಅವಳು ಮಲ್ಲಿಗೆ ನಗರಿ ಮೈಸೂರು ಹುಡುಗಿ. ದಿನವೂ ನನ್ನ ನೋವು - ಕಷ್ಟವನ್ನು ಆಕೆಯ ಜೊತೆ ಶೇರ್ ಮಾಡುತ್ತೇನೆ. ಆದರೆ ಎಂದೂ ಕೂಡ ಪ್ರೀತಿಸುತ್ತೇನೆ ಎಂದು ನಾನಾಗಲೀ.. ಅವಳಾಗಲೀ.. ಹೇಳಿಕೊಂಡಿಲ್ಲ. ಅವಳದ್ದು ನನಗಿಂತ ಹೈಟ್ ಜಾಸ್ತಿ'' ಎಂದು ಉತ್ತರಿಸಿದರು ಪ್ರಥಮ್.

ಮದುವೆ ಕುರಿತು ಪ್ರಥಮ್ ತಂದೆ ಹೇಳಿದ್ದೇನು ?

ಪ್ರಥಮ್ ಮದುವೆ ಕುರಿತಾಗಿ 'ಒನ್ ಇಂಡಿಯಾ ಕನ್ನಡ' ಸಂದರ್ಶಕರು ಅವರ ತಂದೆ ಮಲ್ಲಣ್ಣರವರನ್ನು ಸಂಪರ್ಕಿಸಿದಾಗ ಅವರು ''ಪ್ರಥಮ್ ಮದುವೆ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಅವನು ಮೊದಲು ಅಂದುಕೊಂಡ ಸಾಧನೆ ಮಾಡಬೇಕು.'' ಎಂದು ಹೇಳಿದ್ದಾರೆ.

'ಮದುವೆ ಸುದ್ದಿ' ಬಗ್ಗೆ ಮಾತನಾಡಿದ 'ಬಿಗ್ ಬಾಸ್' ಪ್ರಥಮ್ !

ನಮಗೂ ಇಷ್ಟವಾಗಬೇಕು

''ಈಗಾಗಲೇ ಪ್ರಥಮ್ ಕೈಯಲ್ಲಿ ಅನೇಕ ಚಿತ್ರಗಳಿವೆ. ಅದಕ್ಕೆ ಅವನು ತಕ್ಕದಾದ ನ್ಯಾಯ ಒದಗಿಸಬೇಕು. ಅವನ ಗುರಿ ಮುಟ್ಟಬೇಕು ಆಮೇಲೆ ಮದುವೆ ಮಾಡುತ್ತೇವೆ ಹೊರತು ಸದ್ಯಕ್ಕಿಲ್ಲ. ಅವನು ಇಷ್ಟಪಡುವ ಹುಡುಗಿ ನಮಗೂ ಇಷ್ಟವಾಗಬೇಕು. ನಮ್ಮದು ತುಂಬು ಕುಟುಂಬ'' ಎಂದು ಮಗನ ಮದುವೆ ಸುದ್ದಿ ಬಗ್ಗೆ ಮಲ್ಲಣ್ಣ ಮಾತನಾಡಿದ್ದಾರೆ.

''ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ'' ಎಂದ ಪ್ರಥಮ್ !

ಪ್ರಥಮ್ ಸ್ಪಷ್ಟನೆ

''ಪ್ರೀತಿ ಇರುವುದು ನಿಜ. ಆಕೆ ಮೂಲತಃ ಇಂಜಿನಿಯರ್. ನಮ್ಮ ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಮದುವೆ ಈಗಲೇ ಆಗುತ್ತಿಲ್ಲ. ಎಂಗೇಜ್ ಮೆಂಟ್ ಕೂಡ ಹತ್ತಿರದಲ್ಲಿ ಇಲ್ಲ. ಈಗ ಧನುರ್ ಮಾಸ ಬರುತ್ತಿದೆ. ಅದರ ನಂತರ ಸಿನಿಮಾ ರಿಲೀಸ್ ಇದೆ. ಅದೇಲ್ಲ ಮುಗಿದ ಮೇಲೆ ಎಲ್ಲ ರಾಜಕಾರಣಿಗಳ ಸಮ್ಮುಕದಲ್ಲಿ ಮದುವೆ ಆಗುವ ಪ್ಲಾನ್ ಇದೆ.'' ಎಂದು ಮದುವೆ ಗಾಸಿಪ್ ಬಗ್ಗೆ ಪ್ರಥಮ್ ಸ್ಪಷ್ಟನೆ ನೀಡಿದ್ದಾರೆ.

English summary
'Big Boss Kannada 4' Winer Pratham spoke about his love story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada