»   » ''ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ'' ಎಂದ ಪ್ರಥಮ್ !

''ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ'' ಎಂದ ಪ್ರಥಮ್ !

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada

'ಬಿಗ್ ಬಾಸ್ ಕನ್ನಡ ಸೀಸನ್ 4' ಗೆದ್ದ ಮೇಲೆ ಪ್ರಥಮ್ ಸ್ಟಾರ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಮೇಲೆ ಒಂದರ ನಂತರ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದ ಪ್ರಥಮ್ ಈಗ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ.

ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ವತಃ ಪ್ರಥಮ್ ಮಾತನಾಡಿದ್ದಾರೆ. ''ನಾನು ಎಲ್ಲರಂತೆ ಸಾಮಾನ್ಯ ಪ್ರಜೆ. ಆದರೆ ಅಸಮಾನ್ಯನಾಗಿ ಕೆಲಸ ಮಾಡಬೇಕೆಂಬುದು ನನ್ನ ಹಂಬಲ. ಅದಕ್ಕಾಗಿ ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ.'' ಎಂದು ಪ್ರಥಮ್ 'ಒನ್ ಇಂಡಿಯಾ ಕನ್ನಡ'ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಚಿತ್ರರಂಗದ ಅನೇಕ ನಟ ನಟಿಯರು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿಯಲ್ಲಿ ಇದ್ದಾರೆ. ಅದರ ಜೊತೆಗೆ ಇದೀಗ ಪ್ರಥಮ್ ಕೂಡ ರಾಜಕೀಯಕ್ಕೆ ಬರುವ ಮನಸು ಮಾಡಿದ್ದಾರೆ. ಅಂದಹಾಗೆ, ತಮ್ಮ ರಾಜಕೀಯ ಎಂಟ್ರಿ ಕುರಿತಾಗಿ 'ಒನ್ ಇಂಡಿಯಾ ಕನ್ನಡ'ಗೆ ಪ್ರಥಮ್ ನೀಡಿರುವ ಸಂದರ್ಶನದ ಮುಂದಿದೆ ಓದಿ...

ಪ್ರಥಮ್ ನಿಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿ ಇದೆಯೇ ?

''ಖಂಡಿತಾ ಇದೆ. ನಾನು ಎಲ್ಲರಂತೆ ಸಾಮಾನ್ಯ ಪ್ರಜೆ. ಆದರೆ ಅಸಮಾನ್ಯನಾಗಿ ಕೆಲಸ ಮಾಡಬೇಕೆಂಬುದು ನನ್ನ ಹಂಬಲ. ಅದಕ್ಕಾಗಿ ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ.'' - ಪ್ರಥಮ್, ಬಿಗ್ ಬಾಸ್ 4 ವಿಜೇತ

ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದೀರಾ ಪ್ರಥಮ್?

''ನಾನು ದೇವೇಗೌಡರ ಜೊತೆ, ಕುಮಾರಣ್ಣನ ಜೊತೆ ಕೆಲಸ ಮಾಡುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ನಾನು ಎಲ್ಲಿಯೂ ಕೂಡ ಇದೇ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಲಾರೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಮಾತ್ರ ನಿಜ. ಅದಕ್ಕಾಗಿ ಸಜ್ಜಾಗುತ್ತಿದ್ದೇನೆ. ತಯಾರಿ ಕೂಡ ನಡೆಸುತ್ತಿದ್ದೇನೆ.'' - ಪ್ರಥಮ್, ಬಿಗ್ ಬಾಸ್ 4 ವಿಜೇತ

'ಮದುವೆ ಸುದ್ದಿ' ಬಗ್ಗೆ ಮಾತನಾಡಿದ 'ಬಿಗ್ ಬಾಸ್' ಪ್ರಥಮ್ !

ನೀವೊಬ್ಬ ಸೆಲಿಬ್ರಿಟಿ ಆಗಿದ್ದೀರಾ ಅಂತ ಚುನಾವಣೆಗೆ ಸ್ಫರ್ಧಿಸುತ್ತೀದ್ದೀರಾ ?

''ಇಲ್ಲ. ನಾನು ಎಂದಿಗೂ ಆ ಭಾವನೆ ಹೊಂದಿದವನಲ್ಲ. ನಾನು ಸಾಮಾನ್ಯರೊಂದಿಗೆ ಸಾಮಾನ್ಯವಾಗಿಯೇ ಇದ್ದೇನೆ. ನಾನು ಈಗಲೂ ಕನ್ನಡಪರ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಜೀವನದ ಕೊನೆ ಉಸಿರಿನವರೆಗೂ ಅದನ್ನು ಮಾಡುತ್ತಿರುತ್ತೇನೆ. ಕಾವೇರಿ ಹೋರಾಟದ ವಿಚಾರವಾಗಿಯೂ ನನ್ನ ಕೈಲಾದ ಸೇವೆ ಮಾಡಿದ್ದೇನೆ. ನಾನು ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ನನಗಾಗಿ ನಾನು ವಿನಿಯೋಗಿಸಿಲ್ಲ. ನನ್ನ ಬಳಿ 5 ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿದೆ. ಇನ್ನು 6 ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಹಾಗಿದ್ದರೂ ಸಾಮಾನ್ಯನಂತೆಯೇ ಜನರೊಡನೆ ಬೆರೆಯುತ್ತೇನೆ ಕೂಡ. ನನಗೆ ಅವಕಾಶ ಮಾಡಿಕೊಟ್ಟವರೇ ನಮ್ಮ ಕನ್ನಡಿಗರು. ಅವರ ಸೇವೆಗೆ ನನ್ನ ರಾಜಕೀಯ ಪ್ರವೇಶ ಅಷ್ಟೇ.'' ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಿಜ.'' - ಪ್ರಥಮ್, ಬಿಗ್ ಬಾಸ್ 4 ವಿಜೇತ

ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್

ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಲಾರ್ಡ್ ಪ್ರಥಮ್?

''ಚುನಾವಣೆಗೆ ಸ್ಪರ್ಧಿಸಲು 3 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಒಂದು ನನ್ನ ಸ್ವಕ್ಷೇತ್ರ ಚಾಮರಾಜನಗರ. ಮತ್ತೊಂದು ಚಾಮರಾಜಪೇಟೆ. ಇನ್ನೊಂದು ಕ್ಷೇತ್ರ ಹುಡುಕಾಟ ನಡೆಸುತ್ತಿದ್ದೇನೆ. ಎದುರಾಳಿಯ ಎದುರಿಗೆ ನಿಂತರೂ ಗೆಲುವು ನನ್ನದಾಗಬೇಕು ಅಂತಹ ಸ್ಟ್ರಾಂಗ್ ಕ್ಯಾಂಡಿಡೇಟ್ ನಾನಾಗಬೇಕು. ಅಂತಹ ಕ್ಷೇತ್ರದ ಆಯ್ಕೆಗಾಗಿ ಹುಡುಕಾಟ ನಡೆಸಿದ್ದೇನೆ.'' - ಪ್ರಥಮ್, ಬಿಗ್ ಬಾಸ್ 4 ವಿಜೇತ

English summary
BiggBoss star celebrity Olle Hudga Pratham confirms that he is contesting elections. but he refuses to say from witch party he is going to contest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada