»   » ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

Posted By:
Subscribe to Filmibeat Kannada

ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ಒಂದು ವಿಕೆಟ್ ಉರುಳಿದೆ. ಸೆಲೆಬ್ರಿಟಿ ಸ್ಪರ್ಧಿಯಾಗಿದ್ದ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

'ಬಿಗ್ ಬಾಸ್'ನಿಂದ ಹೊರಬಂದ ತಕ್ಷಣ ಕೃಷಿ ತಮ್ಮ ಹುಟ್ಟೂರಾದ ಕೊಡಗಿಗೆ ಹೋಗಿದ್ದಾರೆ. ಸ್ವಲ್ಪ ಹುಷಾರಿಲ್ಲದಿದ್ದರೂ ಕೂಡ 'ಬಿಗ್ ಬಾಸ್' ಪಯಣದ ತಮ್ಮ ಅನುಭವದ ಬಗ್ಗೆ ನಮ್ಮ ಜೊತೆ ಮಾತನಾಡಿದ್ದಾರೆ.

ಅಂದಹಾಗೆ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಟಿ ಕೃಷಿ ತಾಪಂಡ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

ಸಂದರ್ಶನ : ನವೀನ.ಎಂ.ಎಸ್

ನಿಮ್ಮ 'ಬಿಗ್ ಬಾಸ್' ಅನುಭವ ಹೇಗಿತ್ತು..?

- ''ನನಗೆ ಅಂತಹ ವ್ಯತ್ಯಾಸ ಏನು ಅನಿಸಲಿಲ್ಲ. ಯಾವಾಗಲೂ ನಾನು ಒಬ್ಬಳೇ ಹೆಚ್ಚು ಇರುತ್ತಿದೆ. ಆದರೆ ಅಲ್ಲಿ 17 ಜನರ ಜೊತೆ ಬೇರೆ ಬೇರೆ ಮನಃಸ್ಥಿತಿಯವರೊಂದಿಗೆ ಒಟ್ಟಿಗೆ ಇರುವುದು ನನಗೆ ಸ್ವಲ್ಪ ಕಷ್ಟ ಅಂತ ಅನಿಸಿತು. ಹೋಗ್ತಾ ಹೋಗ್ತಾ ನಾನು ಮನೆಗೆ ಹೊಂದಿಕೊಂಡೆ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

'ಬಿಗ್ ಬಾಸ್' ಮನೆಯಲ್ಲಿ ನೀವು ಕಲಿತಿರುವ ಪಾಠ

- ''ಹೊರಗೆ ತುಂಬ ಆರಾಮಾಗಿ ಇದ್ವಿ. ಏನಾದ್ರೂ ತಿನ್ನಬೇಕು ಅನಿಸಿದರೆ ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತಿದ್ವಿ ಆದರೆ 'ಬಿಗ್ ಬಾಸ್' ನಲ್ಲಿ ಹಾಗಲ್ಲ. ಹೊಸ ಜಾಗ.. ಮೊಬೈಲ್ ಇಲ್ಲ, ದುಡ್ಡು ಇಲ್ಲ, ನಾಲ್ಕು ಗೋಡೆ ಮಧ್ಯೆ ಇರಬೇಕು. ಈ ರೀತಿಯ ಸಣ್ಣ ಸಣ್ಣ ವಿಷಯವನ್ನು ಕಲಿತೆ. 'ಬಿಗ್ ಬಾಸ್' ನಿಂದ ಬಂದಾಗಿನಿಂದ ಫೋನ್ ಜಾಸ್ತಿ ನೋಡುತ್ತಿಲ್ಲ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ನೀವು ಔಟ್ ಆಗಿದ್ಯಾಕೆ ಎಂಬ ಉತ್ತರ ನಿಮಗೆ ಸಿಕ್ತಾ.?

- ''ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನನಗೆ ಆ ಪ್ರಶ್ನೆ ಇತ್ತು. ನಾನು ಸುದೀಪ್ ಸರ್ ಬಳಿಯೂ ಈ ಪ್ರಶ್ನೆ ಕೇಳಿದೆ. ಆಚೆ ಹೋಗಿ ಉತ್ತರ ಸಿಗುತ್ತದೆ ಅಂತ ಹೇಳಿದರು. ಆದರೆ ನನಗೆ ಈಗಲೂ ಅದಕ್ಕೆ ಉತ್ತರ ಸಿಕ್ಕಿಲ್ಲ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿ V/S ಕಾಮನ್ ಮ್ಯಾನ್ ಎನ್ನುವ ಭೇದ ಇದ್ಯಾ..?

- ''ಇಲ್ಲ.. ಅದನ್ನು ಸುದೀಪ್ ಸರ್ ಕೂಡ ಹೇಳಿದ್ದಾರೆ. 'ಬಿಗ್ ಬಾಸ್' ಮನೆಗೆ ಹೋದಾಗಲೇ ನಾವು ಸೆಲೆಬ್ರಿಟಿ ಅಥವಾ ಕಾಮನ್ ಮ್ಯಾನ್ ಎನ್ನುವುದನ್ನು ಮರೆತು ಬಿಡುತ್ತೇವೆ. ಅಲ್ಲಿ ಎಲ್ಲರೂ ಒಂದೇ. ನಾವು ಆ ರೀತಿ ಎಂದೂ ವರ್ತಿಸಿಲ್ಲ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ಹಾಲನ್ನು ಮುಚ್ಚಿಡುವ ಪ್ಲಾನ್ ಯಾರದ್ದು.? ದಯಾಳ್ ಮತ್ತು ಅನುಪಮಾ ನಿಮ್ಮ ಹೆಸರನ್ನೇ ಹೇಳಿದ್ರಲ್ಲಾ.!

- ''ಇದರಲ್ಲಿ ನಾನು, ಚಂದ್ರು ಸರ್, ದಯಾಳ್ ಸರ್, ಅನುಪಮ, ಆಶಿತಾ, ಜಗನ್... ಎಲ್ಲರೂ ಇದ್ದರು. ಹಾಲನ್ನು ಉಳಿಸುವುದಕ್ಕೋಸ್ಕರ ಹಾಲನ್ನು ತೆಗೆದು ಇಡೋಣ ಅಂತ ಅಂದುಕೊಂಡಿದ್ದೆವು. ನಮ್ಮ ಉದ್ದೇಶ ಸರಿ ಇತ್ತು. ಆದರೆ ಎಲ್ಲರೂ ಯಾಕೆ ತಮ್ಮ ಹೇಳಿಕೆಯಿಂದ ಹಿಂದೆ ಸರಿದರೋ ಗೊತ್ತಿಲ್ಲ. ಮುಖ್ಯವಾಗಿ ಚಂದ್ರು ಸರ್ ಯಾಕೆ ಈ ರೀತಿ ಮಾಡಿದರೋ ತಿಳಿಯಲಿಲ್ಲ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ನಿಮ್ಮ ಪ್ರಕಾರ ಯಾರು ಗೆಲ್ಲಬಹುದು.?

- ''ಗೆಲ್ಲಬೇಕು ಎನ್ನುವುದಕ್ಕಿಂತ ಫೈನಲ್ ನಲ್ಲಿ ಜೆಕೆ, ಅನುಪಮ ಮತ್ತು ಚಂದನ್ ಶೆಟ್ಟಿ ಮೂವರು ಹೋಗಬಹುದು'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ಮೊದಲ ವಾರ ಗ್ಯಾಸ್ ಕನೆಕ್ಷನ್ ಕಟ್ ಆದಾಗ ಎಲ್ಲರೂ ಸಮೀರಾಚಾರ್ಯ ಅವರ ಕೈರುಚಿ ನೋಡಿದ್ರಿ. ನೀವೂ ಕೂಡ ಅವರ ಕೈರುಚಿ ಚೆನ್ನಾಗಿದೆ ಅಂದ್ರಿ. ಆದ್ರೆ, ಸಮೀರಾಚಾರ್ಯ ಅಡುಗೆ ಮನೆ ವಹಿಸಿಕೊಂಡಾಗ ಅವರ ಅಡುಗೆ ಗಲೀಜು ಅಂತೆಲ್ಲ ಮಾತಾಡಿದ್ರಲ್ಲ.! ಇದು ಸರಿನಾ.?

- ''ಸಮೀರಾಚಾರ್ಯ ಅವರು ಮಾಡಿದ ಊಟ ರುಚಿ ಅನಿಸಿತ್ತು. ಆದರೆ, ಅವರು 15 ಜನಕ್ಕೆ ಅಡುಗೆ ಮಾಡಿ ಅಭ್ಯಾಸ ಇಲ್ಲ ಅನಿಸುತ್ತದೆ. ಅವರ ಕ್ವಾಲಿಟಿ ನಮಗೆ ಇಷ್ಟ ಆಗುತ್ತಿರಲಿಲ್ಲ. ಅದಕ್ಕೆ ಸ್ವಲ್ಪ ಭಿನ್ನಭಿಪ್ರಾಯ ಆಯ್ತು'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ಡಬಲ್ ಗೇಮ್ ಆಡ್ತಿರೋರು ಯಾರು.?

- ''ಅಲ್ಲಿ ಡಬಲ್ ಗೇಮ್ ಎನ್ನುವುದಕ್ಕಿಂತ ಎಲ್ಲರೂ ಸೇಫ್ ಆಗುವುದಕ್ಕೆ ನೋಡುತ್ತಿದ್ದಾರೆ ಅಷ್ಟೆ.'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.?

ಬಿಗ್ ಬಾಸ್ ಮನೆಯಲ್ಲಿ ಅಡುಗೆ ವಿಷಯಕ್ಕೆ ಜಾಸ್ತಿ ಗಲಾಟೆ ಯಾಕೆ.?

- ''ಹೌದು, ನಾಲ್ಕೈದು ಬಾರಿ ಜಗಳ ಆಗಿದ್ದೇ ಅಡುಗೆ ವಿಷಯಕ್ಕೆ. ಸಮೀರ್ ಆಚಾರ್ಯ ಅವರಿಗೆ ಬಂದು ಕಿಚನ್.. ನಮಗೆ ಒಂದು ಕಿಚನ್ ಇತ್ತು. ಇದೇ ಕಾರಣದಿಂದ ಆಗಾಗ ಅಡುಗೆ ವಿಷಯಕ್ಕೆ ಗಲಾಟೆ ಆಗುತ್ತಿತ್ತು. ಎರಡು ಅಡುಗೆ ಮನೆ ಬಂದಾಗ ಮನಸ್ತಾಪ ಬಂತು'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ನೀವು ಯಾರಿಗೆ ಮಿಸ್ ಮಾಡದೆ ವೋಟ್ ಮಾಡುತ್ತೀರಾ.?

-''ನಾನು ಯಾರು ಒಳ್ಳೆಯ ರೀತಿ ಆಟ ಆಡುತ್ತಿದ್ದಾರೆ ಅವರಿಗೆ ವೋಟ್ ಮಾಡುತ್ತೇನೆ. 'ಬಿಗ್ ಬಾಸ್' ಒಳಗೆ ಒಂದು ಕಡೆ ನಾನು ಇದ್ದಾಗ ಇನ್ನೊಂದು ಕಡೆ ಬೇರೆಯವರು ಏನು ಮಾತನಾಡುತ್ತಾರೆ ಅಂತ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ದಿನ 'ಬಿಗ್ ಬಾಸ್' ನೋಡುತ್ತಿದ್ದೇನೆ. ಯಾರು ಸರಿಯಾಗಿ ಆಡುತ್ತಾರೆ ಅವರಿಗೆ ವೋಟ್ ಮಾಡುತ್ತೇನೆ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

'ಬಿಗ್ ಬಾಸ್' ನಿವಾಸಕ್ಕೆ ಕಾಲಿಟ್ಟಿರುವ ಕೊಡಗಿನ ಕುವರಿ ಕೃಷಿ ತಾಪಂಡ ಬಗ್ಗೆ ಸಣ್ಣ ಪರಿಚಯ

ಮತ್ತೆ ಅವಕಾಶ ಸಿಕ್ಕರೆ 'ಬಿಗ್ ಬಾಸ್'ಗೆ ಹೋಗುತ್ತೀರಾ.?

- ''ಖಂಡಿತ.. ನಾನು ಔಟ್ ಆದಾಗ ಎಷ್ಟೋ ಜನ ನೀವು ಇನ್ನೂ ಇರಬೇಕಿತ್ತು ಅಂತ ಹೇಳಿದರು. ಎರಡನೇ ಅವಕಾಶ ಸಿಕ್ಕಿದರೆ ಖುಷಿಯಿಂದ ಹೋಗುತ್ತಾನೆ'' - ಕೃಷಿ ತಾಪಂಡ, ಬಿಗ್ ಬಾಸ್ ಸ್ಪರ್ಧಿ

English summary
Bigg Boss Kannada 5: Eliminated Contestant Krishi Thapanda Interview. 'ಬಿಗ್ ಬಾಸ್ 5'ನಿಂದ ಹೊರ ಬಂದ ನಿರ್ದೇಶಕ ಕೃಷಿ ತಾಪಂಡ ಅವರ ಸಂದರ್ಶನ ಇಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada