»   » ನಟಿ ಶ್ವೇತಾ ಪಂಡಿತ್ ಜೊತೆ 'ಬರ್ತಡೆ' ಸ್ಪೆಷಲ್ ಚಿಟ್ ಚಾಟ್

ನಟಿ ಶ್ವೇತಾ ಪಂಡಿತ್ ಜೊತೆ 'ಬರ್ತಡೆ' ಸ್ಪೆಷಲ್ ಚಿಟ್ ಚಾಟ್

Posted By:
Subscribe to Filmibeat Kannada

'ಪರಮಾತ್ಮ' ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಶ್ವೇತಾ ಪಂಡಿತ್ ಈಗ ಸ್ಯಾಂಡಲ್ ವುಡ್ ನಲ್ಲಿ ಅಂಬೆಗಾಲಿಡುತ್ತಿರುವ ನಟಿ. 'ದ್ಯಾವ್ರೇ', 'ಕೇಸ್ ನಂ 18/9' ಚಿತ್ರಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನ ಮೆರೆದಿದ್ದ ಶ್ವೇತಾ ಇತ್ತೀಚೆಗಷ್ಟೆ ರಿಲೀಸ್ ಆದ 'ಎರಡೊಂದ್ಲಾ ಮೂರು' ಚಿತ್ರದ ಪ್ರಮುಖ ಪಾತ್ರಧಾರಿ.

ದೊಡ್ಡ ನಟಿಯಾಗ್ಬೇಕು ಅಂತ ಚಿಕ್ಕವಯಸ್ಸಿಂದ ಕನಸು ಕಾಣುತ್ತಿದ್ದ ಈ ಚೆಲುವೆ, ಇದೀಗ ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಸೌಂಡ್ ಮಾಡುತ್ತಿದ್ದಾರೆ. ಇಂತಿಪ್ಪ ಶ್ವೇತಾ ಪಂಡಿತ್ ಗೆ ಇಂದು ಜನ್ಮದಿನ. ಹುಟ್ಟುಹಬ್ಬದ ಸಡಗರದಲ್ಲಿರುವ ಶ್ವೇತಾ ಪಂಡಿತ್ ಜೊತೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚಿಟ್ ಚಾಟ್ ಇಲ್ಲಿದೆ.

Birthday Special; Actress Shweta Pandit Interview

ಹ್ಯಾಪಿ ಬರ್ತಡೆ ಶ್ವೇತಾ ಪಂಡಿತ್....
ಥ್ಯಾಂಕ್ ಯು ಸೋ ಮಚ್

ಹೇಗೆ ನಡೆಯುತ್ತಿದೆ ಬರ್ತಡೆ ಸೆಲೆಬ್ರೇಷನ್?
ಹ್ಹಾ...ಹ್ಹಾ...ಚೆನ್ನಾಗಿ ನಡೆಯುತ್ತಿದೆ. ಈ ದಿನವನ್ನ ನಾನು ನನ್ನ ಫ್ರೆಂಡ್ಸ್ ಜೊತೆ ಕಳೆಯೋಕೆ ಇಷ್ಟ ಪಡುತ್ತೇನೆ. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ನನ್ನ ಫ್ರೆಂಡ್ಸ್ ಎಲ್ಲಾ ಮನೆಗೆ ಬಂದು, ದೆವ್ವಗಳ ತರಹ ನನ್ನನ್ನ ಹೆದರಿಸಿ, ರೋಡ್ ನಲ್ಲಿ ಕೇಕ್ ಕಟ್ ಮಾಡಿಸಿದರು. ನಂತ್ರ ಎಲ್ಲರೂ ಹೋಗಿ ಐಸ್ ಕ್ರೀಮ್ ತಿಂದ್ವಿ. ಈಗ ಹೊರಗೆ ಹೋಗುತ್ತಿದ್ದೇವೆ. [ಅನಂತ್ ಜೊತೆ 'ಬಿಗ್ ಬಾಸ್' ಶ್ವೇತಾ ಕುಚ್ ಕುಚ್]

Birthday Special; Actress Shweta Pandit Interview

ಇಂದಿನ ಸ್ಪೆಷಲ್ ಪ್ಲಾನ್?
ಇವತ್ತು ನನ್ನ ಕಾಲೇಜ್ ಫ್ರೆಂಡ್ಸ್ ಮೀಟ್ ಮಾಡೋದು. ನನ್ನ ಗೆಳತಿಯೊಬ್ಬಳು ನನ್ನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದಾಳೆ. ಅಲ್ಲಿಗೆ ಹೋಗಿ ದೇವರ ಆಶೀರ್ವಾದ ಪಡೆದು, ಫ್ರೆಂಡ್ಸ್ ಜೊತೆ ಇಡೀ ದಿನ ಕಳೆಯುತ್ತೇನೆ.

ಶ್ವೇತಾ ಪಂಡಿತ್ ಗೆ ಗಿಫ್ಟ್ ಅಂದ್ರೆ ತುಂಬಾ ಇಷ್ಟ ಅಂತೆ?
ಹೌದು...ಹ್ಹಾ...ಹ್ಹಾ...ಹ್ಹಾ...ಪರ್ಸಲೈಸ್ಡ್ ಗಿಫ್ಟ್ಸ್ ಅಂದ್ರೆ ತುಂಬಾ ಇಷ್ಟ. ನನ್ನ ಇಷ್ಟಗಳನ್ನ ಅರಿತು ಕೊಡುವ ಗಿಫ್ಟ್ಸ್ ಅಂದ್ರೆ ನಂಗೆ ತುಂಬಾ ಇಷ್ಟ. [ಶ್ವೇತಾ ಪಂಡಿತ್ ಗೆ ವೈಟರ್ ನಿಂದ ಸಕತ್ ಕಾಟ]

Birthday Special; Actress Shweta Pandit Interview

ಇವತ್ತು ನಿಮಗೆ ಸಿಕ್ಕ ಸ್ಪೆಷಲ್ ಉಡುಗೊರೆ?
ಸಲ್ವಾರ್ ಸಿಕ್ತು. ಅದರ ಮೇಲೆ ಬರೆದಿರುವ ಲೈನ್ಸ್ ತುಂಬಾ ಚೆನ್ನಾಗಿದೆ. ನಾನು ಇಷ್ಟ ಪಡುವ ಕಲರ್, ನಾನು ಹಾಕುವ ಡ್ರೆಸ್ ಬಗ್ಗೆ ತುಂಬಾ ನಾಟಿಯಾಗಿ ಬರೆದಿರುವ ಸಾಲುಗಳು ಅವು. ನನ್ನ ಕ್ಲೋಸ್ ಫ್ರೆಂಡ್ ಪ್ರೆಸೆಂಟ್ ಮಾಡಿದ್ದು. ನಿನ್ನೆ ಮಧ್ಯರಾತ್ರಿ 2 ಗಂಟೆಗೆ. [ನಟಿ ಶ್ವೇತಾ ಪಂಡಿತ್ 'ಕೇಸ್'ಗೆ ಮರುಜೀವ]

ಬರ್ತಡೆ ರೆಸೆಲ್ಯೂಷನ್ ಏನಾದ್ರೂ ಮಾಡಿದ್ದೀರಾ?
ಇಲ್ಲಾ, ನಂಗೆ ಸ್ಪೆಷಲ್ ಡೇ, ಸ್ಪೆಷಲ್ ರೆಸೆಲ್ಯೂಷನ್ ಬಗ್ಗೆ ನಂಬಿಕೆ ಇಲ್ಲ. [ಬಿಗ್ ಬಾಸ್, ಸುದೀಪ್ ಬಗ್ಗೆ ಶ್ವೇತಾ ಹೇಳಿದ್ದೇನು?]

Birthday Special; Actress Shweta Pandit Interview

ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳೋದಾದರೆ?
ಸದ್ಯದಲ್ಲೇ ಅನೌನ್ಸ್ ಆಗಲಿದೆ. ಈಗಲೇ ಹೇಳುವುದು ಕಷ್ಟ.

English summary
Kannada Actress Shweta Pandit of 'Case no 18/9' and 'Eradondla Mooru' fame is celebrating her birthday today. On this occasion, here is an exclusive Chit Chat with the Actress. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada