For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ : ಹಿಟ್ ಕೆಲವು, ಫ್ಲಾಪ್ ಕೆಲವು, ಆದರೆ, ಕಲಿತಿದ್ದು ಹಲವು

  |

  ಹುಟ್ಟುಹಬ್ಬ ಆಚರಣೆ, ಹೆಂಡತಿಯ ಉಡುಗೊರೆ, ಆರು ವರ್ಷದ ಸಿನಿ ಪ್ರಯಾಣ, 'ನಟ ಸಾರ್ವಭೌಮ' ಚಿತ್ರದ ಕೆಲಸಗಳು, 'ಕೆಜಿಎಫ್' ಕ್ರೇಜ್ ಹೀಗೆ ನಿರ್ದೇಶಕ ಪವನ್ ಒಡೆಯರ್ ಅನೇಕ ವಿಷಯಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

  ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ಒಬ್ಬ ಪ್ಯಾಶನೇಟ್ ಫಿಲ್ಮ್ ಮೇಕರ್ ಪವನ್ ಒಡೆಯರ್ ಇಂದು ತಮ್ಮ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಈ ಬಾರಿಯ ವಿಶೇಷ ಅಂದರೆ, ಮದುವೆಯ ಬಳಿಕ ಇದು ಅವರ ಮೊದಲ ಹುಟ್ಟುಹಬ್ಬವಾಗಿದೆ.

  ಪವನ್ ಒಡೆಯರ್ ನಿರ್ದೇಶಕರಾಗಿದ್ದರ ಹಿಂದಿನ ಒಂದು ಕುತೂಹಲಕಾರಿ ಕಥೆ

  ಬರ್ತ್ ಡೇ ಬ್ಯುಸಿಯಲ್ಲಿಯೂ ನಮ್ಮ ಜೊತೆಗೆ ಮಾತನಾಡಿದ ಅವರು, ನಗುತ್ತಾ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದರು. ಎಂದಿನಂತೆ, ಆತ್ಮೀಯ ಧ್ವನಿಯಲ್ಲಿ ಮಾತನಾಡಿದರು.

  ಅಂದಹಾಗೆ, ನಿರ್ದೇಶಕ ಪವನ್ ಒಡೆಯರ್ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಶನ ಮುಂದಿದೆ ಓದಿ...

  ಹೇಗಿದೆ ಮದುವೆ ನಂತರದ ಮೊದಲ ಹುಟ್ಟುಹಬ್ಬ?

  ಹೇಗಿದೆ ಮದುವೆ ನಂತರದ ಮೊದಲ ಹುಟ್ಟುಹಬ್ಬ?

  ''ಬರ್ತ್ ಡೇ ಆಚರಿಸಿಕೊಳ್ಳುವ ಅಭ್ಯಾಸ ನನಗೆ ಇರಲಿಲ್ಲ. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ಇದು ಶುರುವಾಯ್ತು. ಈ ವರ್ಷ ಕೂಡ ಸುಮ್ಮನೆ ಮಲಗಿದೆ. ನನ್ನ ಹೆಂಡತಿ ಎಬ್ಬಿಸಿದಳು, ನೋಡಿದರೆ ದೊಡ್ಡದಾಗಿ ಎಲ್ಲ ರೆಡಿ ಮಾಡಿದ್ದರು. ಹೆಂಡತಿ, ಅವರ ಅಮ್ಮ, ನಮ್ಮ ತಂದೆ, ತಮ್ಮ ಎಲ್ಲ ಇದ್ದರು. ಈ ಬಾರಿಯ ಆಚರಣೆ ತುಂಬ ವಿಶೇಷವಾಗಿತ್ತು.''

  ಹಾಗಾದ್ರೆ, ಹೆಂಡತಿಯಿಂದ ಏನು ಗಿಫ್ಟ್ ಸಿಕ್ತು?

  ಹಾಗಾದ್ರೆ, ಹೆಂಡತಿಯಿಂದ ಏನು ಗಿಫ್ಟ್ ಸಿಕ್ತು?

  (ನಗುತ್ತಾ) ''ನನ್ನ ಹೆಂಡತಿಯೇ ನನಗೆ ದೊಡ್ಡ ಗಿಫ್ಟ್. ನನ್ನ ಹುಟ್ಟುಹಬ್ಬದ ದಿನ ಇಷ್ಟು ಜನ ನನಗೆ ವಿಶ್ ಮಾಡುತ್ತಾರೆ, ಪ್ರೀತಿ ಮಾಡುತ್ತಾರೆ ಅಂತ ಲೈಫ್ ನಲ್ಲಿಯೇ ಅಂದುಕೊಂಡಿರಲಿಲ್ಲ. ಎಲ್ಲ ಚಾಮುಂಡೇಶ್ವರಿ ಆಶೀರ್ವಾದ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನನ್ನ ಬರ್ತ್ ಡೇ ದಿನ ಕೇಳಿಕೊಳ್ಳುತ್ತೇನೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್

  ಆರು ವರ್ಷ, ಆರು ಸಿನಿಮಾಗಳು. ಹೇಗಿದೆ ನಿಮ್ಮ ಪಯಣ?

  ಆರು ವರ್ಷ, ಆರು ಸಿನಿಮಾಗಳು. ಹೇಗಿದೆ ನಿಮ್ಮ ಪಯಣ?

  ''ಆರು ವರ್ಷಗಳಲ್ಲಿ ಕೆಲವು ಹಿಟ್, ಕೆಲವು ಫ್ಲಾಪ್ ನೀಡಿದ್ದೇನೆ. ಆದರೆ, ನಾನು ಎಲ್ಲಿಯೂ ಸೋತೆ ಎಂದು ಹೇಳುವುದಿಲ್ಲ. ಕಾರಣ, ಎಲ್ಲದರಿಂದ ನಾನು ಕಲಿತಿದ್ದೇನೆ. ಎರಡು ಸಿನಿಮಾ ರಾಂಗ್ ರಿಲೀಸ್ ಆಯ್ತು. ಒಂದಲ್ಲ ಒಂದು ವಿಷಯದಲ್ಲಿ ನಾನು ಗೆಲ್ಲುತ್ತಾನೆ ಇದ್ದೇನೆ. ಈಗ 'ನಟ ಸಾರ್ವಭೌಮ' ಸಿನಿಮಾ ನಡೆಯುತ್ತಿದೆ. ನಾವು, ಅಪ್ಪು ಸರ್, ರಾಕ್ ಲೈನ್ ಸರ್ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು.

  'ನಟ ಸಾರ್ವಭೌಮ' ಬಗ್ಗೆ ಎಲ್ಲಿಯೂ ರಿವೀಲ್ ಆಗದ ಒಂದು ವಿಷಯ ಹೇಳಬಹುದೇ?

  'ನಟ ಸಾರ್ವಭೌಮ' ಬಗ್ಗೆ ಎಲ್ಲಿಯೂ ರಿವೀಲ್ ಆಗದ ಒಂದು ವಿಷಯ ಹೇಳಬಹುದೇ?

  ''ಯಾರಿಗೂ ತಿಳಿದಿರುವ ವಿಷಯ ಅಂದರೆ, ಅಪ್ಪ ಸರ್ ಅವರ ನಟನೆ ಈ ಸಿನಿಮಾದಲ್ಲಿ ಬೇರೆ ರೀತಿಯೇ ಇರುತ್ತದೆ. ಅಪ್ಪು ಸರ್ ತುಂಬ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದ ಟೈಟಲ್ ಗೆ ತಕ್ಕ ಹಾಗೆ ತುಂಬ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಅವರ ಪಾತ್ರಕ್ಕೆ ತುಂಬ ಏರಿಳಿತ ಇದೆ. ಈ ಮೂಲಕ ಇಡೀ ನನ್ನ ತಂಡಕ್ಕೆ ಧನ್ಯವಾದ ಹೇಳಿತ್ತೇನೆ.''

  ಮತ್ತೆ ಹೀರೋ ಆಗ್ತಿರಾ?

  ಮತ್ತೆ ಹೀರೋ ಆಗ್ತಿರಾ?

  ''ಆ ಆಲೋಚನೆ ಸದ್ಯಕ್ಕೆ ಇಲ್ಲ. ನಾನು ಒಬ್ಬ ರೈಟರ್ ಅಂಡ್ ಡೈರೆಕ್ಟರ್ ಹಾಗಿಯೇ ಉಳಿಯುತ್ತೇನೆ. ಒಂದು ಪ್ರಯತ್ನ ಆಯ್ತು. ಆ ಪ್ರಯತ್ನದ ಬಗ್ಗೆ ಬೇಸರ ಇಲ್ಲ. ಪ್ರಯತ್ನ ಮಾಡದೆ ಬೇಸರ ಪಡುವುದಕ್ಕಿಂತ, ಮಾಡಿದೆವು ಎನ್ನುವ ಸಮಾಧಾನ ಇದೆ. ಒಳ್ಳೆ ಒಳ್ಳೆಯ ಕಥೆ ಮಾಡುವುದಷ್ಟೇ ಈಗ ನನ್ನ ಉದ್ದೇಶ.

  ನಿಮ್ಮ ಸಿನಿಮಾ ಮಾತ್ರವಲ್ಲದೆ, ಬೇರೆಯವರಿಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರೋತ್ಸಾಹ ನೀಡುತ್ತೀರಿ ಅದರ ಬಗ್ಗೆ ಹೇಳಿ?

  ನಿಮ್ಮ ಸಿನಿಮಾ ಮಾತ್ರವಲ್ಲದೆ, ಬೇರೆಯವರಿಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರೋತ್ಸಾಹ ನೀಡುತ್ತೀರಿ ಅದರ ಬಗ್ಗೆ ಹೇಳಿ?

  ''ಹೌದು, ಆದರೆ, ಇದರ ಬಗ್ಗೆ ಕೆಲವರಿಗೆ ಬೇಸರ ಸಹ ಆಗಬಹುದು. ಕೆಲವು ಫ್ಯಾನ್ಸ್ ಗಳು ಕೆಲವು ಬಾರಿ ಬೇರೆ ಸಿನಿಮಾದ ಬಗ್ಗೆ ಯಾಕೆ ಪೋಸ್ಟ್ ಹಾಕುತ್ತೀರಿ ಅಂತ ಹೇಳಬಹುದು. ಆದರೆ, ನಮ್ಮ ಸಿನಿಮಾಗಳಿಗೆ ನಾವೇ ಸಪೋರ್ಟ್ ಮಾಡದೆ ಇದ್ದರೆ ಹೇಗೆ. ಚಿತ್ರರಂಗದಲ್ಲಿ ಒಗ್ಗಟ್ಟು ಇರಬೇಕು. ಹೊಸಬರ ಸಿನಿಮಾಗೆ ಸಹ ಸೋಷಿಯಲ್ ಮೀಡಿಯಾದಲ್ಲಿ ಸಪೋರ್ಟ್ ಮಾಡುತ್ತಿರುತ್ತಾನೆ. ನಮ್ಮ ಇಂಡಿಸ್ಟ್ರಿಯ ಚಿತ್ರಗಳಿಗೆ ಸಪೋರ್ಟ್ ಮಾಡುವುದು ನಮ್ಮ ಜವಾಬ್ದಾರಿ.''

  'ಕೆಜಿಎಫ್' ಬಗ್ಗೆ ನಿಮ್ಮ ಮಾತು ?

  'ಕೆಜಿಎಫ್' ಬಗ್ಗೆ ನಿಮ್ಮ ಮಾತು ?

  ''ಅದು ತುಂಬ ದೊಡ್ಡ ಸಿನಿಮಾ. ಇಡೀ ಚಿತ್ರರಂಗ ಹೆಮ್ಮೆ ಪಡುವ ಸಿನಿಮಾ. ಆ ಚಿತ್ರದ ಬಗ್ಗೆ ಮಾತನಾಡಲು ನಾನು ಸಣ್ಣವನು. ನಮ್ಮ ಸ್ನೇಹಿತರು ಯಶ್ ಗೆ ಒಳ್ಳೆದಾಗಲಿ. ನಿರ್ಮಾಪಕ ವಿಜಯ್ ಕಿರಂಗದೂರ್ ಅವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಶಾಂತ್ ನೀಲ್ ಒಬ್ಬ ಡಿಫರೆಂಟ್ ಫಿಲ್ಮ್ ಮೇಕರ್.''

  'ನಟ ಸಾರ್ವಭೌಮ' ಚಿತ್ರವನ್ನ ಯಾವಾಗ ತೋರಿಸುತ್ತೀರಿ ?

  'ನಟ ಸಾರ್ವಭೌಮ' ಚಿತ್ರವನ್ನ ಯಾವಾಗ ತೋರಿಸುತ್ತೀರಿ ?

  ''ಈಗ ಟೀಸರ್ ಲಾಕ್ ಆಗಿದೆ. ಫಸ್ಟ್ ಹಾಫ್ ಸಿನಿಮಾ ಮುಗಿದಿದೆ. ಸೆಕೆಂಡ್ ಹಾಫ್ ಬ್ಯಾಗೌಂಡ್ ಸ್ಕ್ರೋರ್ ಹಾಗೂ ಗ್ರಾಫಿಕ್ಸ್ ನಡೆಯುತ್ತದೆ. ಡಿ ಇಮಾನ್ ಬಹಳ ಒಳ್ಳೆಯ ಸಂಗೀತ ನೀಡಿದ್ದಾರೆ. ಜನವರಿಗೆ ಸಿನಿಮಾ ಬರುತ್ತಿದೆ.''

  English summary
  Birthday special : Kannada director Pavan Wadeyar interview

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X