For Quick Alerts
  ALLOW NOTIFICATIONS  
  For Daily Alerts

  ಬನಾರಸ್ ಥರದ ನಾಲ್ಕೈದು ಚಿತ್ರ ಬಂದ್ರೆ ಇಡೀ ದೇಶದ ಹಿಂದೂ - ಮುಸ್ಲಿಂ ಒಂದಾಗಿಬಿಡ್ತಾರೆ ಅಂದ್ರು: ಜಯತೀರ್ಥ

  |

  ಬೆಲ್ ಬಾಟಮ್ ಖ್ಯಾತಿಯ ಜಯತೀರ್ಥ ನಿರ್ದೇಶನದ ಹಾಗೂ ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರ ಕಳೆದ ವಾರವಷ್ಟೇ ತೆರೆಕಂಡು ಸದ್ಯ ಎರಡನೇ ವಾರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

  ಚಿತ್ರದ ಪ್ರಚಾರದಲ್ಲಿ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಜಯತೀರ್ಥ ನಿರತರಾಗಿದ್ದು, ನಮ್ಮ ಕನ್ನಡ ಫಿಲ್ಮಿಬೀಟ್ ಜತೆ ನಡೆದ ಸಂದರ್ಶನದಲ್ಲಿ ಭಾಗವಹಿಸಿದ ಚಿತ್ರದ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ. ಚಿತ್ರದ ಕುರಿತ ವಿಷಯಗಳನ್ನು ಹಂಚಿಕೊಂಡ ಜಯತೀರ್ಥ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂದು ತಿಳಿಸಿದರು ಹಾಗೂ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುದನ್ನು ಸಹ ಹಂಚಿಕೊಂಡರು.

  ಚಿತ್ರ ಬಿಡುಗಡೆಯಾದ ನಂತರ ರಾಜ್ಯದ ವಿವಿಧ ಊರುಗಳಿಗೆ ಭೇಟಿ ನೀಡಿದ್ದ ಜಯತೀರ್ಥ ಅವರು ಶಿರಾ ಪಟ್ಟಣದ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಾಗ ಚಿತ್ರ ವೀಕ್ಷಿಸಲು ಬಂದಿದ್ದ ರೈತರ ಗುಂಪು ನೀಡಿದ ವಿಮರ್ಶೆ ತನಗೆ ಅಚ್ಚುಮೆಚ್ಚು ಎಂದರು. ಚಿತ್ರ ತುಂಬಾ ಚೆನ್ನಾಗಿದೆ, ಹೊಸ ರೀತಿಯ ಪ್ರಯತ್ನ ಅದ್ಭುತವಾಗಿದೆ, ಹಿಂದೂ - ಮುಸ್ಲಿಂ ಒಟ್ಟಿಗೆ ಕುತ್ಕೊಂಡು ಚಿತ್ರ ನೋಡ್ತಾ ಇದ್ದಾರೆ, ಇಂಥ ನಾಲ್ಕೈದು ಚಿತ್ರಗಳು ಬಂದರೆ ಇಡೀ ದೇಶದ ಹಿಂದೂ - ಮುಸ್ಲಿಂ ಒಂದಾಗಿಬಿಡ್ತಾರೆ ಎಂದು ಆ ರೈತರು ಹೊಗಳಿದ್ದನ್ನು ಮರೆಯಲಾಗುವುದಿಲ್ಲ ಎಂದು ಜಯತೀರ್ಥ ಖುಷಿಯಿಂದ ಹೇಳಿಕೊಂಡರು.

  ನೂರು ರೂಪಾಯಿಯಲ್ಲಿ ಕಾಶಿ ದರ್ಶನ ಆಯ್ತು

  ನೂರು ರೂಪಾಯಿಯಲ್ಲಿ ಕಾಶಿ ದರ್ಶನ ಆಯ್ತು

  ಇನ್ನು ವೃದ್ಧೆಯೊಬ್ಬರು ಬನಾರಸ್ ವೀಕ್ಷಿಸಿದ ನಂತರ ಚಿತ್ರದ ಬಗ್ಗೆ ತಮ್ಮ ಬಳಿ ಹೇಳಿದ್ದನ್ನು ಹಂಚಿಕೊಂಡ ಜಯತೀರ್ಥ ಹೆಮ್ಮೆ ವ್ಯಕ್ತಪಡಿಸಿದರು. ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತನ್ನ ಬಳಿ ಬಂದ ಆ ವೃದ್ಧೆ ನೀನೇನಪ್ಪಾ ಚಿತ್ರ ಮಾಡಿದ್ದು, ನೂರು ರೂಪಾಯಿಯಲ್ಲಿ ನನಗೆ ಕಾಶಿ ದರ್ಶನ ಮಾಡಿಸಿಬಿಟ್ಟೆ ಬಿಡಪ್ಪಾ, ನಾನು ಬದುಕಿರುವವರೆಗೆ ಕಾಶಿಗೆ ಹೋಗೋಕೆ ಆಗ್ತಾ ಇತ್ತೋ ಇಲ್ವೋ ಗೊತ್ತಿಲ್ಲ ಆದರೆ ಈ ಚಿತ್ರದ ಮೂಲಕ ಕಾಶಿಯ ದರ್ಶನವಾಯಿತು ಎಂದು ಹೇಳಿದರು ಎಂದು ಜಯತೀರ್ಥ ಹೇಳಿಕೊಂಡರು.

  ಚಿತ್ರ ಮೆಚ್ಚಿಕೊಂಡ ಬಾಲಕ

  ಚಿತ್ರ ಮೆಚ್ಚಿಕೊಂಡ ಬಾಲಕ

  ಇನ್ನು ಚಿತ್ರದ ಬಗ್ಗೆ ಬಾಲ ಪ್ರೇಕ್ಷಕನಾಡಿದ್ದ ಮಾತುಗಳನ್ನೂ ಸಹ ನಿರ್ದೇಶಕ ಜಯತೀರ್ಥ ಇಲ್ಲಿ ತಿಳಿಸಿದರು. ತಲೆಗೆ ಬಣ್ಣ ಹಾಕೊಂಡಿದ್ದ ಈಗಿನ ಜನರೇಶನ್‌ನ ಸುಮಾರು ಹದಿನಾಲ್ಕು ವರ್ಷದ ಬಾಲಕ ಬಂದು 'ಬ್ರೋ, ಏನ್ ಬ್ರೋ ನೀವು ಹತ್ತು ವರ್ಷ ಮುಂದೆ ಯೋಚನೆ ಮಾಡಿಬಿಟ್ಟಿದ್ದೀರ ಅಂದ. 2032ರಲ್ಲಿ ಬರಬೇಕಿದ್ದ ಚಿತ್ರವನ್ನು 2022ರಲ್ಲೇ ಕೊಟ್ಟಿಬಿಟ್ಟಿದ್ದೀರ. ಆ ಥರ ಮುಂದಾಲೋಚನೆ ಇದೆ ನಿಮಗೆ, ಅದ್ಭುತವಾಗಿದೆ ಎಂದು ಹೇಳಿಕೊಂಡ' ಎಂದು ಜಯತೀರ್ಥ ತಿಳಿಸಿದರು.

  ಬನಾರಸ್ ಚಿಕ್ಕ ಸಿನಿಮಾ

  ಬನಾರಸ್ ಚಿಕ್ಕ ಸಿನಿಮಾ

  ಇನ್ನು ಬನಾರಸ್‌ನಲ್ಲಿ ಯಾವುದೇ ಸ್ಟಾರ್ ನಟರಿಲ್ಲ, ಕಂಬ್ಳಿಹುಳ ಹೇಗೋ ಬನಾರಸ್ ಕೂಡ ಹಾಗೆ ಒಂದು ಚಿಕ್ಕ, ಇಲ್ಲಿ ದೊಡ್ಡ ನಟನಲ್ಲ, ಇಲ್ಲಿರುವುದು ಝೈದ್ ಖಾನ್ ಎಂದು ಜಯತೀರ್ಥ ತಿಳಿಸಿದರು. ಚಿಕ್ಕ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬೇಕು ಎಂದೂ ಸಹ ಹೇಳಿದರು. ಇನ್ನು ಚಿತ್ರ ಇಲ್ಲಿಯವರೆಗೂ ಹಾಕಿದ್ದ ಬಂಡವಾಳದಲ್ಲಿ ಸುಮಾರು ಅರ್ಧದಷ್ಟನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ಓಟಿಟಿ ಹಾಗೂ ಟಿವಿ ಹಕ್ಕುಗಳ ಮೂಲಕ ಉಳಿದ ಹಣವನ್ನು ಗಳಿಸಬಹುದು ಎಂದು ಜಯತೀರ್ಥ ಹೇಳಿಕೆ ನೀಡಿದರು.

  ಬೆಲ್ ಬಾಟಮ್ 2 ಬಗ್ಗೆ ಜಯತೀರ್ಥ ಹೇಳಿದ್ದಿಷ್ಟು

  ಬೆಲ್ ಬಾಟಮ್ 2 ಬಗ್ಗೆ ಜಯತೀರ್ಥ ಹೇಳಿದ್ದಿಷ್ಟು

  ಇದೇ ಸಂದರ್ಶನದಲ್ಲಿ ಜಯತೀರ್ಥ ತಮ್ಮ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರ ಬೆಲ್ ಬಾಟಂನ ಸೀಕ್ವೆಲ್ ಬಗ್ಗೆ ಕೂಡ ಮಾತನಾಡಿದರು. ಇನ್ನು ಬೆಲ್ ಬಾಟಂ 2 ಚಿತ್ರದ ಮುಹೂರ್ತ ಕಾರ್ಯಕ್ರಮ ಎರಡು ವರ್ಷಗಳ ಹಿಂದೆಯೇ ನಡೆಯಿತು, ಅಪ್ಪು ಸರ್ ಕೂಡ ವಿಷ್ ಮಾಡಿದ್ರು, ಆದರೆ ನಂತರ ಕೊರೊನಾ ಬಂದ ಕಾರಣ ಚಿತ್ರದ ಚಿತ್ರೀಕರಣ ಆರಂಭವಾಗಲಿಲ್ಲ, ರಿಷಬ್ ಕಾಂತಾರದಲ್ಲಿ ನಿರತರಾದರು, ರಿಷಬ್ ಯಾವಾಗ ಡೇಟ್ ನೀಡುತ್ತಾರೋ ಅವಾಗ ಚಿತ್ರೀಕರಣ ಆರಂಭಗೊಳ್ಳುತ್ತದೆ ಹಾಗೂ ಈಗಿನ ರಿಷಬ್ ಇಮೇಜ್‌ಗೆ ತಕ್ಕಂತೆ ಮೇಕಿಂಗ್ ಮಾಡಲಾಗುವುದು ಎಂದು ಜಯತೀರ್ಥ ತಿಳಿಸಿದರು.

  English summary
  Both Hindu and Muslims are enjoying Banaras movie together; Jayatheertha shares viewer's comment
  Wednesday, November 16, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X