For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕುವರ 'ಓಂ' ಬಾಲನಟನಾಗಿ ಭರ್ಜರಿ ಫೇಮ್

  |

  ಪುಟ್ಟ ಮಗುವಾಗಿದ್ದಾಗಲೇ ಮುದ್ದಾಗಿ ಕಾಣಿಸುತ್ತಿದ್ದ ಓಂ, ಆಗಲೇ ಒಂದೆರಡು ಪ್ರಿಂಟ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ. ಆದರೆ ಅಧಿಕೃತವಾಗಿ ಮಾಸ್ಟರ್ ಓಂ ಎಲ್ಲರ ಗಮನ ಸೆಳೆದಿದ್ದು ಐದು ವರ್ಷದ ಬಾಲಕನಾಗಿದ್ದಾಗ. ಅಂತರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಒಂದರ ಜಾಹೀರಾತಿನ ಮೂಲಕ. ಮುಂದೆ ಫ್ಯಾಷನ್ ಶೋ ಗಳ ಶೋ ಸ್ಟಾಪರ್ ಆಗಿಯೂ ಹೆಜ್ಜೆ ಇಟ್ಟ ಓಂ ಗೆ ಸಿನಿಮಾದಲ್ಲಿ ಮೊದಲ ಅವಕಾಶ ಮಾಡಿಕೊಟ್ಟಿದ್ದು ಖ್ಯಾತ ಸಾಹಿತಿ ಕವಿರಾಜ್.

  ಅವರು ತಮ್ಮ ಪ್ರಥಮ ನಿರ್ದೇಶನದ ಚಿತ್ರವಾದ 'ಮದುವೆಯ ಮಮತೆಯ ಕರೆಯೋಲೆ' ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಓಂ ಇದೀಗ ಮತ್ತೆ ಕವಿರಾಜ್ ಅವರದೇ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

  ಫ್ಯಾಷನ್ ಲೋಕದಲ್ಲಿ ಸೌತ್ ಇಂಡಿಯನ್ ಸೂಪರ್ ಕಿಡ್ ಎನ್ನುವ ಬಿರುದು ಪಡೆದಿರುವ ಓಂ ಮುಂದಿನ ವರ್ಷ ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ಪಡೆದುಕೊಂಡಿದ್ದಾನೆ. ಮಕ್ಕಳ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ಪ್ರತಿಭಾವಂತ ಹುಡುಗ ಮಾಸ್ಟರ್ ಓಂ ಜೊತೆ ಫಿಲ್ಮಿಬೀಟ್ ನಡೆಸಿರುವ ಮಾತುಕತೆ ಇದು.

   ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪಾತ್ರ ಮಾಡಿದ ಅನುಭವ ಹೇಗಿತ್ತು ?

  ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪಾತ್ರ ಮಾಡಿದ ಅನುಭವ ಹೇಗಿತ್ತು ?

  ತುಂಬ ಚೆನ್ನಾಗಿತ್ತು. ಮೊದಲ ಬಾರಿಗೆ ಅಳುವ ದೃಶ್ಯದಲ್ಲಿ ಅಭಿನಯಿಸಬೇಕಿತ್ತು. ಅತ್ತು ಅಭಿನಯಿಸಿದ ದೃಶ್ಯಕ್ಕೆ ಕಟ್ ಹೇಳಿದ ಮೇಲೆ ನಿರ್ದೇಶಕರು ಸೇರಿದಂತೆ ಸೆಟ್ ನಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ಆನಂದ ನೀಡಿತ್ತು. ನಾನು ಚಿತ್ರದಲ್ಲಿ ನಾನು ಜಗ್ಗೇಶ್ ಸರ್ ಅವರ ಮಗನಾಗಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ಅವರ ಜತೆಗೆ ಅಭಿನಯಿಸಬೇಕಾದರೆ ದೊಡ್ಡ ಸ್ಟಾರ್ ಜತೆಗೆ ನಟಿಸುತ್ತಿದ್ದೇನೆ ಎನ್ನುವುದನ್ನೇ ಮರೆತಿದ್ದೆ. ಯಾಕೆಂದರೆ ಮನೆ ಮಂದಿ ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಾರೆಯೋ ಹಾಗೆ ಆತ್ಮೀಯವಾಗಿಯೇ ನನ್ನ ಜತೆಗಿದ್ದರು. ಚಿತ್ರದಲ್ಲಿ ಅವರು ಮೇಷ್ಟ್ರಾಗಿ ನಟಿಸಿರುವ ಕಾರಣ, ನಾನು ಮಾತ್ರವಲ್ಲದೆ ಸಾಕಷ್ಟು ಮಕ್ಕಳು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು ಖುಷಿಯ ಸಂಗತಿಯಾಗಿತ್ತು.

   ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಾಗ ಶಾಲಾ ತರಗತಿಗಳನ್ನು ಹೇಗೆ ನಿಭಾಯಿಸುವುದು ಹೇಗೆ?

  ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಾಗ ಶಾಲಾ ತರಗತಿಗಳನ್ನು ಹೇಗೆ ನಿಭಾಯಿಸುವುದು ಹೇಗೆ?

  ನಾನು ಈಗ ಆಚಾರ್ಯ ಪಾಠಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ. ಶಾಲಾ ದಿನಗಳಲ್ಲಿ ತಪ್ಪದೇ ಓದುತ್ತೇನೆ. ಸಾಮಾನ್ಯವಾಗಿ ರಜಾ ದಿನಗಳಲ್ಲಿ ಮಾತ್ರ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತೇನೆ. ಎಲ್ಲವನ್ನು ನಮ್ಮಅಮ್ಮ ಮ್ಯಾನೇಜ್ ಮಾಡುತ್ತಾರೆ. ವೀಕೆಂಡ್ ಹಾಗೂ ರಜ ನೋಡಿಕೊಂಡು ಡಿಸೈಡ್ ಮಾಡುತ್ತಾರೆ. ಯಾವುದನ್ನೂ ಮಿಕ್ಸ್ ಮಾಡುವುದಿಲ್ಲ.

   ನಟನೆಯ ಜೊತೆ ಬೇರೇನು ಹವ್ಯಾಸಗಳಿವೆ?

  ನಟನೆಯ ಜೊತೆ ಬೇರೇನು ಹವ್ಯಾಸಗಳಿವೆ?

  ಚಿತ್ರ ಬರೆಯುವುದು, ನೃತ್ಯ ಮಾಡುವುದು, ಗಾರ್ಡನಿಂಗ್, ಫೊಟೋ ಕ್ಲಿಕ್ಕಿಸುವುದು ಇವುಗಳೆಲ್ಲ ನನಗೆ ಆಸಕ್ತಿಯಿದೆ. ಹಾಗೆ ನಮ್ಮಮ್ಮ ಹಾಗೂ ನಾನು ಇಬ್ಬರೂ ಪ್ರವಾಸವನ್ನು ಇಷ್ಟ ಪಡುತ್ತೇವೆ. ಈಗಾಗಲೇ ಬ್ರಿಟನ್, ಮಾರಿಷಿಯಸ್, ದುಬೈ ಸೇರಿದಂತೆ ಆರೇಳು ದೇಶ ಸುತ್ತಿದ್ದೇನೆ. ಎಲ್ಲವೂ ಇಷ್ಟವಾಗಿದೆ. ರಜಾ ದಿನಗಳಲ್ಲಿ ಚಿಕ್ಕಮಗಳೂರಿನ ಅಜ್ಜಿ ಮನೆಗೆ ಹೋಗುತ್ತೇನೆ. ಸೈಕ್ಲಿಂಗ್ ಮಾಡುತ್ತೇನೆ. ಡ್ಯಾನ್ಸ್ ಕಲಿಯುತ್ತೇನೆ.

   ಸಿನಿಮಾದಲ್ಲಿ ನಿನಗೆ ಇಷ್ಟವಾಗುವ ಸಂಗತಿಗಳೇನು?

  ಸಿನಿಮಾದಲ್ಲಿ ನಿನಗೆ ಇಷ್ಟವಾಗುವ ಸಂಗತಿಗಳೇನು?

  ಸಿನಿಮಾ ನೋಡುವುದು ನನಗೆ ಇಷ್ಟ. ಯಶ್ ಮತ್ತು ಆಲಿಯಾ ಭಟ್ ನನ್ನ ಮೆಚ್ಚಿನ ಕಲಾವಿದರು. ಜ್ಯುರಸಿಕ್ ವಲ್ಡ್, ಜಂಗಲ್ ಬುಕ್, ಮಾಸ್ಟರ್ ಪೀಸ್, ಚೆನ್ನೈ ಎಕ್ಸ್ಪ್ರೆಸ್, ದಿ ಲಯನ್ ಮೊದಲಾದ ಸಿನಿಮಾಗಳನ್ನು ತುಂಬ ಇಷ್ಟ ಪಟ್ಟಿದ್ದೇನೆ. ನಟನಾಗಿ ಇದುವರೆಗೆ ಸುಮಾರು ಹತ್ತರಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಾಫಿ ಎನ್ನುವ ತಮಿಳು ಸಿನಿಮಾದಲ್ಲಿಯೂ ನಟಿಸಿದ್ದೇನೆ. ಆ ಚಿತ್ರದ ಪಾತ್ರದ ಮೂಲಕ ನನ್ನನ್ನು ಗುರುತಿಸಿದಾಗ ಖುಷಿಯಾಗುತ್ತದೆ.

   ಮುಂದಿನ ಕನಸೇನು?

  ಮುಂದಿನ ಕನಸೇನು?

  ನನ್ನ ಅಪ್ಪ ಅಮ್ಮಂಗೆ ನಾನು ಒಬ್ಬನೇ ಮಗ. ಸಾರಥಿ ಸತೀಶ್ ನನ್ನ ತಂದೆಯ ಹೆಸರು. ಅಮ್ಮ ಶೀಲಾಸಿ. ಶೆಟ್ಟಿ ಪತ್ರಕರ್ತೆ. ಸದ್ಯಕ್ಕೆ ಅವರು ನನ್ನ ಎಲ್ಲ ಆಸಕ್ತಿಗಳಿಗೆ ಪ್ರೋತ್ಸಾಹವಾಗಿದ್ದಾರೆ. ಸದ್ಯಕ್ಕೆ ಚೆನ್ನಾಗಿ ಓದಬೇಕೆಂದು ಮಾತ್ರ ಅಮ್ಮ ಹೇಳುತ್ತಾರೆ. ಈಗ ನಾನು 'ಇನ್ಟೆಂಟ್ ಕರ್ಮ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ದೊಡ್ಡವನಾದ ಮೇಲೆ ಸೈಂಟಿಸ್ಟ್, ಆಸ್ಟ್ರೋನಾಟ್ ಆಗಬೇಕೆಂದು ನನಗೂ ಆಸೆ ಇದೆ. ಜತೆಗೆ `ಫ್ಯಾಷನ್ ಇಂಡಸ್ಟ್ರಿಯಲ್ಲಿದ್ದುಕೊಂಡು ಸಿನಿಮಾದಲ್ಲಿ ಗುರುತಿಸಿಕೊಳ್ಳುವವರು ಕನ್ನಡದಲ್ಲಿ ಅಪರೂಪ. ಹಾಗಾಗಿ ಚೆನ್ನಾಗಿ ಗಮನವಿಟ್ಟು ಮುಂದುವರಿದರೆ ಉತ್ತಮ ಭವಿಷ್ಯವಿದೆ' ಎಂದು ಜಗ್ಗೇಶ್ ಸರ್ ಹೇಳಿದ್ದಾರೆ. ಹಾಗಾಗಿ ಸಿನಿಮಾ ನಟನೆಯನ್ನು ಹವ್ಯಾಸವಾಗಿ ಮುಂದುವರಿಸುತ್ತೇನೆ.

  English summary
  Child Artist Om Acted with Jaggesh As his son in Kalidasa kannada Mestru Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X