»   » 'ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ'

'ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ'

Posted By:
Subscribe to Filmibeat Kannada

''I have many problems in My Life. But My lips don't know that. They always Smile'' - ಹೀಗಂತ ಹೇಳಿದವರು ಬೇರಾರೂ ಅಲ್ಲ. ಜಗತ್ತು ಕಂಡ ಅಪ್ರತಿಮ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್.!

ಒಡಲಿನಲ್ಲಿ ನೋವು, ಸಂಕಟ ತುಂಬಿಕೊಂಡಿದ್ದರೂ... ಎಲ್ಲರನ್ನೂ ಚಾರ್ಲಿ ಚಾಪ್ಲಿನ್ ಹೇಗೆ ನಗೆಗಡಲಿನಲ್ಲಿ ತೇಲಿಸುತ್ತಿದ್ದರೋ, ಹಾಗೇ ಚಿಕ್ಕವಯಸ್ಸಿನಿಂದಲೂ ಅಪ್ಪ-ಅಮ್ಮನ ಪ್ರೀತಿ ಕಾಣದೆ.. ಮನೆ ಬಿಟ್ಟು.. ಕೂಲಿ ಕೆಲಸ ಮಾಡಿ.. ಇಂದು 'ಕಾಮಿಡಿ ಕಿಲಾಡಿ' ಆಗಿ ಕರುನಾಡ ಜನತೆಯ ಮನಗೆದ್ದಿರುವವರು ಲೋಕೇಶ್ ಕುಮಾರ್.

ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಗರ್ಭಿಣಿ ಹೆಂಗಸಾಗಿ, ಬಾಡಿಗಾರ್ಡ್ ಆಗಿ, 'ಡಿ.ಕೆ' ಪ್ರೇಮ್ ಆಗಿ ನಿಮ್ಮನ್ನೆಲ್ಲ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿರುವ ಲೋಕೇಶ್ ರವರ ಬಾಲ್ಯದ ಜೀವನ ನೀವಂದುಕೊಂಡಷ್ಟು ಖುಷಿ ಖುಷಿ ಆಗಿರಲಿಲ್ಲ.

ಕಷ್ಟದಿಂದ ಬೆಳೆದು ಇಂದು ಕೋಟ್ಯಾಂತರ ಜನರ ಪ್ರೀತಿ ಗಳಿಸಿರುವ 'ಕಾಮಿಡಿ ಕಿಲಾಡಿ' ಲೋಕೇಶ್ ರವರೊಂದಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿರಿ...
ಸಂದರ್ಶನ - ಹರ್ಷಿತಾ ರಾಕೇಶ್

ನಮ್ಮ ಓದುಗರಿಗೆ ನಿಮ್ಮ ಪರಿಚಯ..

- ನಮ್ಮ ಊರು ತುಮಕೂರಿನ ಶಿವಗಂಗೆ. ಚಿಕ್ಕವಯಸ್ಸಿನಲ್ಲಿ ಊರು ಬಿಟ್ಟು ಬೆಂಗಳೂರಿಗೆ ಬಂದು ಬಿಟ್ಟೆ. ಡಾನ್ ಬಾಸ್ಕೋ ಎಂಬ ಸಂಸ್ಥೆಯಲ್ಲಿ ಬೆಳೆದವನು ನಾನು. [ಸಂಪ್ರದಾಯವನ್ನ ಧಿಕ್ಕರಿಸಿ ಬಂದ ಕಿಲಾಡಿ 'ಸಂಜು ಬಸಯ್ಯ'ನ ಬದುಕೇ ರೋಚಕ!]

ನಿಮ್ಮ ವಿದ್ಯಾಭ್ಯಾಸ..

- ಬಾಲಕರ ಬಾಲ ಮಂದಿರದಲ್ಲಿ 1st, 2nd ಮತ್ತು 3rd ಸ್ಟ್ಯಾಂಡರ್ಡ್ ಓದಿದ್ದು ನಾನು. ಅದಾದ್ಮೇಲೆ ನಮ್ಮ ಮನೆಯವರು ನನ್ನನ್ನ ಹುಡುಕ್ಕೊಂಡು ಬಂದಿದ್ದಾರೆ. ನನ್ನ ಹುಡುಕಿ ವಾಪಸ್ ಊರಿಗೆ ಕರ್ಕೊಂಡು ಹೋದರು. ಮನೆಗೆ ಹೋದರೆ... ವಾಪಸ್ ಅದೇ ಗೋಳು.! ಊಟ ಬೇರೆ... ತಟ್ಟೆ ಬೇರೆ...! ಈ ತರಹ ಪರಿಸ್ಥಿತಿ ಇತ್ತು ನನಗೆ. ಯಾಕಂದ್ರೆ, ನನ್ನ ತಂದೆಗೆ ಮೂರು ಜನ ಹೆಂಡತಿಯರು.! ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳು. ಎರಡನೇ ಹೆಂಡತಿ ನನ್ನಮ್ಮ. ಅವರು ಹೆಸರು ಲಕ್ಷ್ಮಮ್ಮ ಅಂತ. ಅವರು ಸ್ವಲ್ಪ ಮೆಂಟಲಿ ಚಾಲೆಂಜ್ಡ್. ಮೂರನೇ ಹೆಂಡತಿಗೆ ಇಬ್ಬರು ಮಕ್ಕಳು. ನನಗೆ ಆ ವಾತಾವರಣ ಇಷ್ಟ ಆಗಲಿಲ್ಲ. ದನ ಮೇಯಿಸಬೇಕಿತ್ತು. ಓದುವುದಕ್ಕೆ ಬಿಡುತ್ತಿರಲಿಲ್ಲ. ನನಗೆ ಓದುವುದು ಇಷ್ಟ ಇತ್ತು. ಮೂರನೇ ಹೆಂಡತಿ ಮಕ್ಕಳನ್ನು ಅಂಗನವಾಡಿಗೆ ಕರ್ಕೊಂಡು ಹೋಗ್ತಿದ್ರು. ನಾನು ಹೋಗ್ತೀನಿ ಅಂದ್ರೆ, ನನ್ನನ್ನ ಬಿಡ್ತಿರ್ಲಿಲ್ಲ. ಹೀಗಾಗಿ ನಾನು ಬಸ್ ಹತ್ತುಬಿಟ್ಟು ಬೆಂಗಳೂರು... ಮೆಜೆಸ್ಟಿಕ್ ಗೆ ಬಂದುಬಿಟ್ಟೆ. [ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ]

ಬೆಂಗಳೂರಿಗೆ ಬಂದ್ಮೇಲೆ ನಿಮ್ಮ ಜೀವನ..

- ಬೆಂಗಳೂರಿಗೆ ಬಂದ್ಮೇಲೆ ತರಕಾರಿ ಮಾರ್ಕೊಂಡು, ಚಪ್ಪಲಿ ಹೊಲೆದುಕೊಂಡು, ಕೂಲಿ ಕೆಲಸ ಮಾಡಿಕೊಂಡು ಇದ್ದೆ. ಆ ಪರಿಸ್ಥಿತಿಯಲ್ಲಿ ನನಗೆ ಯಾರ ಪ್ರೀತಿಯೂ ಸಿಕ್ಕಿರಲಿಲ್ಲ. ಈಗ ನನಗೆ ಅತ್ತೆ-ಮಾವ ನನ್ನ ಅಪ್ಪ-ಅಮ್ಮನ ಪ್ರೀತಿ ಕೊಡುತ್ತಾರೆ. ಎಷ್ಟೇ ಕಷ್ಟ ಇದ್ದರೂ, ನನ್ನ ಮಗು ಮುಖ ನೋಡಿದರೆ ತುಂಬಾ ಖುಷಿ ಆಗುತ್ತೆ. ಜೊತೆಗೆ ನನ್ನ ಹೆಂಡತಿ ಕೂಡ ತುಂಬಾ ಸಪೋರ್ಟ್ ಮಾಡಿದ್ದಾರೆ.

ನಿಮ್ಮದು ಲವ್ ಮ್ಯಾರೇಜ್.?

- ಹೌದು, ನನ್ನ ಪತ್ನಿ ಹೆಸರು ಪ್ರತಿಭಾ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಫಾದರ್ ಮತ್ತು ಸಿಸ್ಟರ್ (ಡಾನ್ ಬಾಸ್ಕೋ ಸಂಸ್ಥೆಯಲ್ಲಿ ನನ್ನನ್ನ ಸಾಕಿದವರು) ಧರ್ಮಸ್ಥಳಕ್ಕೆ ಬಂದು ನಮ್ಮ ಮದುವೆಯನ್ನು ಮಾಡಿಸಿದರು. ತುಂಬಾ ಖುಷಿ ಏನಂದ್ರೆ, ಫಾದರ್ ಮತ್ತು ಸಿಸ್ಟರ್ ಧರ್ಮಸ್ಥಳಕ್ಕೆ ಬಂದು ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಮದುವೆ ಮಾಡಿಸಿಕೊಟ್ಟರು.

ನಿಮ್ಮ ಲವ್ ಸ್ಟೋರಿ ಶುರು ಆಗಿದ್ದು ಹೇಗೆ.?

- ನನ್ನ ಪತ್ನಿ ಬಿ.ಕಾಂ ಮಾಡಿದ್ದಾರೆ. ಅವರು ಡಿಸೈನರ್, ಡ್ಯಾನ್ಸರ್ ಮತ್ತು ಆರ್ಟಿಸ್ಟ್ ಕೂಡ. ಇಂಟರ್-ಕಾಲೇಜ್ ಕಾಂಪಿಟೇಷನ್ ಗೆ ಹೋದಾಗ ಪರಿಚಯ ಆಯ್ತು. ಇಷ್ಟ ಆಯ್ತು. ಒಪ್ಪಿಗೆ ಆಯ್ತು. ಮದುವೆ ಆಗುವ ಮೊದಲು ನನ್ನ ಜೀವನದ ಕಥೆಯನ್ನ ಅವರಿಗೆ ಹೇಳಿದ್ದೆ. ಅವರು ಒಪ್ಪಿಕೊಂಡು ನನ್ನನ್ನ ಮದುವೆ ಆದರು. ನಮಗೆ ಚಿರಾಗ್ ಎಂಬ ಎರಡು ವರ್ಷದ ಮಗನಿದ್ದಾನೆ.

ನಿಮ್ಮ ಫ್ಯಾಮಿಲಿಯ ಸಪೋರ್ಟ್ ಈಗ ಹೇಗಿದೆ.?

- ನಮ್ಮ ಅತ್ತೆ-ಮಾವ ಸೂಪರ್. ಯಾಕಂದ್ರೆ, ನನಗೆ ಫ್ಯಾಮಿಲಿ ಇಲ್ಲ. ಅವರು ಸಿಕ್ಕಿರುವುದು ನನಗೆ ಬಹಳ ಖುಷಿ. ಅವರಿಬ್ಬರಿಗೂ ತುಂಬಾ ತಾಳ್ಮೆ. ನಮ್ಮ ಮಾವ - ಶಿವಕುಮಾರ್... ಅತ್ತೆ - ರತ್ನಮ್ಮ. ಅವರಿಗೆ ಮಗ ಕೂಡ ಇದ್ದಾನೆ. ದರ್ಶನ್ ಅಂತ. ಅವರು ಇಂಜಿನಿಯರ್. ಎಲ್ಲರೂ ಬೆಂಗಳೂರಿನವರು. ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ.

ನೀವು ಪೇಂಟಿಂಗ್ ಕೂಡ ಮಾಡ್ತೀರಂತೆ.!

- ಹೌದು... ನಾನು ಬೆಳೆದದ್ದು ಡಾನ್ ಬಾಸ್ಕೋ ಸಂಸ್ಥೆಯಲ್ಲಿ. ಅಲ್ಲಿ ವಿದೇಶಿಯರು ಬರುತ್ತಾರೆ. ಅವರೆಲ್ಲ ಏನೇನು ಕಲಿತಿದ್ದಾರೋ, ಅದನ್ನೆಲ್ಲ ನಮಗೆ ಹೇಳಿಕೊಡುತ್ತಿರುತ್ತಾರೆ. ಸುಮಾರು 25 ವರ್ಷದಿಂದ ನಾನು ಅಲ್ಲಿ ಬೆಳೆದಿರುವುದರಿಂದ, ಅಲ್ಲಿ ಬರುವವರೆಲ್ಲಾ ಒಂದೊಂದು ವರ್ಷ ಇರುತ್ತಾರೆ. ಆ ಒಂದು ವರ್ಷದಲ್ಲಿ ಅವರಿಗೆ ಇರುವ ಪ್ರತಿಭೆಯನ್ನ ನಮಗೆ ಹೇಳಿಕೊಡುತ್ತಾರೆ. ಹಾಗೆ ಕಲಿತು ಇವತ್ತು ಒಂದು ಪ್ಯಾಕೇಜ್ ಆಗಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದಿದ್ದೇನೆ.

ಇತರೆ ಹವ್ಯಾಸಗಳು...

- ನಾನು ವಿವೇಕಾನಂದ ಲಾ ಕಾಲೇಜ್ ನಲ್ಲಿ 'ಲಾ' ಓದಿದ್ದೇನೆ. ಜೊತೆಗೆ ನೃತ್ಯ ಸಂಯೋಜನೆ, ಮಿಮಿಕ್ರಿ, ಪೇಂಟಿಂಗ್, ಡ್ರಾಮಾ ಮಾಡುತ್ತೇನೆ. ಕಲೆಗೆ ಸಂಬಂಧಪಟ್ಟಿದ್ದು ಏನೇನು ಇದ್ಯೋ... ಎಲ್ಲವನ್ನೂ ಮಾಡುತ್ತೇನೆ.

ಹಾಗಾದ್ರೆ ನಿಮ್ಮ ವೃತ್ತಿ..

- ಸುಮಾರು ಎನ್.ಜಿ.ಓ ಸಂಸ್ಥೆಗಳ ಸ್ಟಾಫ್ ಗೆ ನಾನು ಟ್ರೇನ್ ಮಾಡುತ್ತೇನೆ. ಏಳು ವರ್ಷಗಳಿಂದ 'ಡ್ರೀಮ್ ಎ ಡ್ರೀಮ್' ಸಂಸ್ಥೆಯಲ್ಲಿ ನಾನು ಟ್ರೇನರ್ ಅಗಿ ವರ್ಕ್ ಮಾಡುತ್ತೇನೆ. ಭಾರತದಾದ್ಯಂತ ಟೀಚರ್ಸ್ ಗೆ ಟ್ರೇನರ್ ಆಗಿ ಕೆಲಸ ಮಾಡುತ್ತೇನೆ. ಇದು ಈಗ ನನ್ನ ವೃತ್ತಿ.

'ಡಾನ್ ಬಾಸ್ಕೋ' ಸಂಸ್ಥೆಯ ಮಕ್ಕಳಿಗೆ ನೀವು ರೋಲ್ ಮಾಡೆಲ್ ಆಗಿದ್ದೀರಾ. ಇದಕ್ಕೆ ನಿಮ್ಮ ಫೀಲಿಂಗ್....

- ನಮ್ಮ 'ಡಾನ್ ಬಾಸ್ಕೋ' ಸಂಸ್ಥೆ ಮನೆ ಬಿಟ್ಟು ಬಂದ ಮಕ್ಕಳಿಗೆ ಇರುವುದು. ಇಂದು ಆ ಸಂಸ್ಥೆಯ ಮಕ್ಕಳಿಗೆ ನಾನು ರೋಲ್ ಮಾಡೆಲ್ ಆಗಿದ್ದೇನೆ. ಕಷ್ಟದಿಂದ ಬೆಳೆದು ನನ್ನನ್ನ ಇಂದು ಜನ ಪ್ರೀತಿಸುತ್ತಾರೆ. ಅದೇ ಖುಷಿ ನನಗೆ. ಇದಕ್ಕಿಂತ ದೊಡ್ಡ ಸಾಧನೆ ಇನ್ಯಾವುದಿದೆ.

English summary
Here is an Exclusive Interview of Lokesh Kumar, Grand Finale Contestant of Zee Kannada Channel's popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada