»   » 'ಧೈರ್ಯಂ' ಚಿತ್ರದ ನಿರ್ದೇಶಕ ಶಿವ ತೇಜಸ್ ಸಂದರ್ಶನ

'ಧೈರ್ಯಂ' ಚಿತ್ರದ ನಿರ್ದೇಶಕ ಶಿವ ತೇಜಸ್ ಸಂದರ್ಶನ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಹಾಡುಗಳ ಮೂಲಕ ಸದ್ದು ಮಾಡಿದ್ದ 'ಧೈರ್ಯಂ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಮಳೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶಿವ ತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆ.

ಅಜಯ್ ರಾವ್ 'ಧೈರ್ಯಂ' ಚಿತ್ರವನ್ನ ಮೆಚ್ಚಿದ ಶಿವಣ್ಣ

ಒಬ್ಬ ಮಿಡಲ್ ಕ್ಲಾಸ್ ಹುಡುಗ ಏನಾದರು ಸಾಧಿಸುವುದಕ್ಕೆ ಹೊರಟಾಗ ಅವನಿಗೆ ಆಗುವ ತೊಂದರೆಗಳ ಮೇಲೆ ಸಿನಿಮಾದ ಕಥೆ ಸಾಗಿದೆ. ಜೊತೆಗೆ ಎಲ್ಲರ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಇದೇ ವಾರ ಬಿಡುಗಡೆಯಾಗುತ್ತಿರುವ 'ಧೈರ್ಯಂ' ಚಿತ್ರದ ನಿರ್ದೇಶಕ ಶಿವತೇಜಸ್ ಅವರ ವಿಶೇಷ ಸಂದರ್ಶನ ಮುಂದಿದೆ ಓದಿ..

ಸಂದರ್ಶನ : ನವೀನ.ಎಂ.ಎಸ್

'ಧೈರ್ಯಂ' ಟೈಟಲ್ ಕೇಳಿದರೆ ಆಕ್ಷನ್ ಸಿನಿಮಾ ಅನಿಸುತ್ತೆ, ಇದು ಪಕ್ಕಾ ಆಕ್ಷನ್ ಸಿನಿಮಾನಾ..?

''ಕಂಪ್ಲೀಟ್ ಆಕ್ಷನ್ ಸಿನಿಮಾ ಅಲ್ಲ.. ಇದು ಮೈಂಡ್ ಗೇಮ್ ರೀತಿ, ಜುಗಲ್ ಬಂದಿ ಅಂತ ಹೇಳ್ತಾರಲ್ಲ ಹಾಗೆ. ಕ್ಲಾಸ್ ಜೊತೆಗೆ ಮಾಸ್ ಎರಡು ಇದೆ. 'ಧೈರ್ಯಂ' ಎಂಬ ಟೈಟಲ್ ನಲ್ಲಿ ಒಂದು ಫೋರ್ಸ್ ಇರುವುದರಿಂದ ಎಲ್ಲರಿಗೂ ಇದು ಆಕ್ಷನ್ ಸಿನಿಮಾ ಅನಿಸುತ್ತೆ'' - ಶಿವತೇಜಸ್, ನಿರ್ದೇಶಕ

'ಧೈರ್ಯಂ' ಚಿತ್ರಕ್ಕೆ ಅಜಯ್ ರಾವ್ ಅವರನ್ನೇ ನಾಯಕರಾಗಿ ಆಯ್ಕೆ ಮಾಡಿದ್ದು ಯಾಕೆ..?

''ಅಜಯ್ ಅವರನ್ನು ಎಲ್ಲರೂ 'ಕೃಷ್ಣನ ಲವ್ ಸ್ಟೋರಿ' ರೀತಿಯ ರೆಗ್ಯೂಲರ್ ಪಾತ್ರದಲ್ಲಿ ನೋಡಿದ್ದರು. ಇಲ್ಲಿ ಅದನ್ನು ಬಿಟ್ಟು ಬೇರೆ ತರ ಮಾಡೋಣ ಅಂತ ಪ್ರಯತ್ನ ಮಾಡಿದ್ದೇವೆ. ಆ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಚೆಂಜ್ ಆಗುತ್ತದೆ. ಆಗ ಸ್ಟೈಲಿಶ್ ಆಗಿ ಇರಲಿ ಅಂತ ಮಾಸ್ ಲುಕ್ ಮಾಡಿದ್ದೇವೆ'' - ಶಿವತೇಜಸ್, ನಿರ್ದೇಶಕ

'ಧೈರ್ಯಂ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

'ಮಳೆ' ಸಿನಿಮಾದಲ್ಲಿ ಲವ್ ಸ್ಟೋರಿ ಹೇಳಿದ್ರಿ.. ಇಲ್ಲಿ ಯಾವ ರೀತಿ ಕಥೆ ಇದೆ..?

'ಮಳೆ' ಸಿನಿಮಾದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಮಾಡಿದ್ದೆ. ಇಲ್ಲಿ ಕ್ಯೂಟ್ ಲೈಫ್ ಸ್ಟೋರಿ ಮಾಡಿದ್ದೇನೆ. ಮಿಡಲ್ ಕ್ಲಾಸ್ ಫ್ಯಾಮಿಲಿ ದಿನ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ. ಏನಾದರು ಸಾಧನೆ ಮಾಡಬೇಕು ಎಂದುಕೊಂಡರೆ ನಮ್ಮ ಬಳಿ ದುಡ್ಡು, ಪವರ್ ಯಾವುದು ಇರುವುದಿಲ್ಲ. ಆದರೆ 'ಧೈರ್ಯಂ ಸರ್ವತ್ರ ಸಾಧನಂ' ಎನ್ನುವ ಹಾಗೆ ಧೈರ್ಯ ಇದ್ದರೇ ಪ್ರಪಂಚನೇ ಗೆಲ್ಲಬಹುದು.. ಎವರಸ್ಟ್ ಎರಬಹುದು.. ಎನ್ನುವುದು ಚಿತ್ರದ ಕಥೆ.

ಸಿನಿಮಾದ ರಿಲೀಸ್ ಪ್ಲಾನ್ ಹೇಗಿದೆ..?

''ಇದೇ ಶುಕ್ರವಾರ 'ಧೈರ್ಯಂ' ಚಿತ್ರ 150 ಚಿತ್ರಮಂದಿರದಲ್ಲಿ ರಿಲೀಸ್ ಆಗ್ತಿದೆ. ಎಲ್ಲ ಕಡೆ ಸಾಂಗ್, ಟ್ರೇಲರ್ ಹಿಟ್ ಆಗಿದೆ. ಜನಕ್ಕೆ ನಿರೀಕ್ಷೆ ಇದೆ. ಅವರ ನಿರೀಕ್ಷೆಯನ್ನು ರಿಚ್ ಮಾಡುತ್ತೇನೆ'' - ಶಿವತೇಜಸ್, ನಿರ್ದೇಶಕ

'ಪಿ ಕೆ' ಅವತಾರದಲ್ಲಿ ಎಂಟ್ರಿ ಕೊಟ್ಟ ಸಾಧು ಮಹಾರಾಜ್

ಈ ವಾರ ಏಳು ಕನ್ನಡ ಸಿನಿಮಾಗಳು ರಿಲೀಸ್ ಆಗ್ತಿದೆ. ಕಾಂಪಿಟೇಶನ್ ಜಾಸ್ತಿ ಇದೇ ಅನಿಸುತ್ತಾ..?

''ಕಾಂಪಿಟೇಷನ್ ಎನ್ನುವುದಕ್ಕಿಂತ ಕನ್ನಡ ಚಿತ್ರರಂಗ ಈಗ ಬೆಳೆಯುತ್ತಿದೆ. ಪ್ರತಿ ವಾರ ಸಿನಿಮಾಗಳು ರಿಲೀಸ್ ಆಗ್ತಾನೆ ಇರುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ ಅಂತ ನಾನು ಬಯಸುತ್ತೇನೆ. ಎಲ್ಲರ ಸಿನಿಮಾಗಳು ಗೆಲ್ಲಲಿ.. ನಮ್ಮ ಸಿನಿಮಾ ಕೂಡ ಗೆಲ್ಲಲಿ'' - ಶಿವತೇಜಸ್, ನಿರ್ದೇಶಕ

ನಿಮ್ಮ ಚಿತ್ರತಂಡದ ಬಗ್ಗೆ ಹೇಳಿ..?

''ನನ್ನ ಇಡೀ ಟೀಂ ತುಂಬ ಒಳ್ಳೆ ಟೀಂ. ಅಜಯ್ ರಾವ್, ರವಿಶಂಕರ್, ಹೀರೋಯಿನ್ ಅಧಿತಿ, ಟೆಕ್ನಿಕಲ್ ಟೀಂ, ಲೈಟ್ ಮ್ಯಾನ್ ನಿಂದ ಹಿಡಿದು ಡೈರೆಕ್ಷನ್ ಟೀಂ ಇಡೀ ಚಿತ್ರತಂಡ ನನಗೆ ಸಾಥ್ ಕೊಟ್ಟಿದ್ದಾರೆ. ಒಳ್ಳೆ ಟೀಂ ಇದ್ದರೆ ಒಳ್ಳೆಯ ಸಿನಿಮಾ ಮಾಡಬಹುದು ಎನ್ನುವುದಕ್ಕೆ 'ಧೈರ್ಯಂ' ಸಿನಿಮಾ ಸಾಕ್ಷಿ'' - ಶಿವತೇಜಸ್, ನಿರ್ದೇಶಕ

ಥ್ರಿಲ್ ನೀಡುವ ಅಜೇಯ್ ರಾವ್ ಅಭಿನಯದ 'ಧೈರ್ಯಂ' ಟ್ರೈಲರ್, ನೀವೂ ನೋಡಿ..

English summary
Kannada Movie 'Dhairyam' Director Shiva Tejas Interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada