»   » ಸಂದರ್ಶನ : 'ಡಿಕೆ' ಗುಟ್ಟು ಬಿಟ್ಟುಕೊಟ್ಟ ಪ್ರೇಮ್

ಸಂದರ್ಶನ : 'ಡಿಕೆ' ಗುಟ್ಟು ಬಿಟ್ಟುಕೊಟ್ಟ ಪ್ರೇಮ್

Posted By:
Subscribe to Filmibeat Kannada

ಕಳೆದ ಕೆಲ ತಿಂಗಳಿನಿಂದ ಇಡೀ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡಿದ್ದ 'ಡಿ.ಕೆ' ಸಿನಿಮಾ ನಾಳೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಕೆ.ಜಿ.ರೋಡ್ ನ ಪ್ರಮುಖ ಚಿತ್ರಮಂದಿರ ಮೇನಕ ಸೇರಿದಂತೆ 200 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ಡಿ.ಕೆ' ತೆರೆಗೆ ಅಪ್ಪಳಿಸುತ್ತಿದ್ದಾನೆ.

'ಡಿ.ಕೆ' ದರ್ಬಾರ್ ನೊಂದಿಗೆ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಕೂಡ 'ಸೇಸಮ್ಮ'ಳಾಗಿ ಕುಣಿದು ಕುಪ್ಪಳಸಿರುವುದು ಚಿತ್ರದ ಬಹುದೊಡ್ಡ ಹೈಲೈಟ್. ಹಲವಾರು ಕುತೂಹಲಕ್ಕೆ ಕಾರಣವಾಗಿರುವ 'ಡಿ.ಕೆ' ಚಿತ್ರದ ಬಗ್ಗೆ 'ಫಿಲ್ಮಿಬೀಟ್' ಜೊತೆ 'ಜೋಗಿ' ಪ್ರೇಮ್ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ.


DK Release : Jogi Prem Interview

* 'ಡಿ.ಕೆ' ಅಂದ್ರೇನು..'ಡಿ.ಕೆ' ಯಾರು?


- 'ಡಿ.ಕೆ' ಅಂದ್ರೆ ದಿಲ್ ಖುಷ್. ಚಿತ್ರದ ಟೈಟಲ್ ಯಾರನ್ನೂ ಉದ್ದೇಶಿಸಿಲ್ಲ. ಚಿತ್ರದಲ್ಲಿ ನನ್ನ ಹೆಸರು 'ಡಿ.ಕೆ'. ಯಾವುದೇ ಟೆನ್ಷನ್, ಸೆಂಟಿಮೆಂಟ್ ಇಲ್ಲದೇ ಬಿಂದಾಸ್ ಆಗಿರುವ ಯುವಕ 'ಡಿ.ಕೆ'. ['ಡಿ.ಕೆ' ಫಸ್ಟ್ ಡೇ, ಫಸ್ಟ್ ಶೋ ನೋಡ್ತಾರಂತೆ ಡಿಕೆಶಿ!]


* ಆದರೂ, 'ಡಿ.ಕೆ'ನೇ ಯಾಕೆ?


- 'ಡಿ.ಕೆ' ಅನ್ನುವ ಟೈಟಲ್ ಸಖತ್ ಪವರ್ ಫುಲ್ ಆಗಿದೆ. ನಮ್ಮ ಕಥೆಗೆ ಇದು ಸೂಕ್ತ. ಹಾಗೆ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, ಚಿತ್ರದಲ್ಲಿ ನನ್ನ ಸ್ಟೈಲಿಂಗ್ ಸಚಿವ ಡಿ.ಕೆ.ಶಿವಕುಮಾರ್ ರಿಂದ ಸ್ಪೂರ್ತಿ ಪಡೆದದ್ದು. ಆದರೆ, ಅವರ ರಾಜಕೀಯ ಜೀವನಕ್ಕೂ ಸಿನಿಮಾಗೂ ಸಂಬಂಧ ಇಲ್ಲ. ['ಡಿಕೆ' ಹೆಗಲ ಮೇಲೆ ಕೈಹಾಕಿದರು ಡಿಕೆ ಶಿವಕುಮಾರ್]


DK Release : Jogi Prem Interview

* ನಿಮ್ಮ ನಾಯಕಿ ಚೈತ್ರಾ ಬಗ್ಗೆ...


- ನನ್ನ ವೃತ್ತಿ ಜೀವನದ ಬೆಸ್ಟ್ ಹೀರೋಯಿನ್ ಚೈತ್ರಾ. ಅವರ ಪಾತ್ರ ನಟಿಯರಾದ ಮಂಜುಳಾ, ಮಾಲಾಶ್ರೀ, ರಕ್ಷಿತಾ ರವರನ್ನ ನೆನಪಿಸುತ್ತೆ. ತುಂಬಾ ಸೊಕ್ಕು-ಗರ್ವದಿಂದ ಅಭಿನಯಿಸಿದ್ದಾರೆ. ಅವರದ್ದು ಪವರ್ ಫುಲ್ ರೋಲ್ ಇದೆ ಚಿತ್ರದಲ್ಲಿ.


* 'ಸನ್ನಿ ಲಿಯೋನ್' ಜೊತೆ ಹೆಜ್ಜೆ ಹಾಕಿದ ಅನುಭವ...


- ಸನ್ನಿ ಲಿಯೋನ್ ವೃತ್ತಿ ಪರತೆ ಬಗ್ಗೆ ಹೇಳಲೇಬೇಕು. ತುಂಬಾ ಪಂಕ್ಚುಯೆಲ್ ಅವರು. ಸೆಟ್ ಗೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಹೇಳಿಕೊಟ್ಟಿದ್ದನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. 'ಸೇಸಮ್ಮ' ಹಾಡು ಸೂಪರ್ ಹಿಟ್ ಆಗಿರುವುದಕ್ಕೆ ಅವರಿಗೂ ತುಂಬಾ ಖುಷಿ ಇದೆ. [ಪ್ರೇಮ್ 'ಡಿಕೆ' ಆಡಿಯೋಗಳಿಗೆ ಡಿಮಾಂಡಪ್ಪೋ ಡಿಮಾಂಡು]


DK Release : Jogi Prem Interview

* ಬಿಪಾಶಾ ಬಸು ರಿಜೆಕ್ಟ್ ಮಾಡಿದ್ದಕ್ಕೆ ಕಾರಣ....


- ನನ್ನ ಸಿನಿಮಾ ಅಂದ್ರೆ, ಜನರಲ್ಲಿ ನಿರೀಕ್ಷೆ ಹೆಚ್ಚಿರುತ್ತೆ. 'ಜೋಗಿ' ಚಿತ್ರದಲ್ಲಿ ಯಾನಾ ಗುಪ್ತ, 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಮಲ್ಲಿಕಾ ಶೆರಾವತ್, 'ಪ್ರೇಮ್ ಅಡ್ಡಾ' ಚಿತ್ರದಲ್ಲಿ ಸ್ಕಾರ್ಲೆಟ್ ವಿಲ್ಸನ್...ಹೀಗೆ ದೊಡ್ಡ ದೊಡ್ಡ ನಟಿಯರೇ ನಮ್ಮ ಸಿನಿಮಾದ ಹಾಡುಗಳಲ್ಲಿ ಕುಣಿದಿದ್ದರು. ಹೀಗಾಗಿ, 'ಡಿ.ಕೆ' ಸಿನಿಮಾದಲ್ಲಿ ಬಿಪಾಶಾ ಬಸು ಇದ್ದರೆ ಚೆನ್ನ ಅಂದುಕೊಂಡ್ವಿ. ಆದ್ರೆ, ಅವರ ಡೇಟ್ಸ್ ನಮಗೆ ಹೊಂದಾಣಿಕೆ ಆಗ್ಲಿಲ್ಲ. ಹೀಗಾಗಿ ಸನ್ನಿ ಲಿಯೋನ್ ಫೈನಲ್ ಮಾಡಿದ್ವಿ. ['ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ]


* ನಾಳೆ ನಿಮ್ಮ 'ಡಿ.ಕೆ' ಸಿನಿಮಾ ರಿಲೀಸ್ ಆಗುತ್ತಿದೆ. ಜನ ಯಾಕೆ 'ಡಿ.ಕೆ' ನೋಡಬೇಕು?


- ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್. ಎಲ್ಲಾ ಕಮರ್ಶಿಯಲ್ ಅಂಶಗಳಿರುವ ಪೈಸಾ ವಸೂಲ್ ಸಿನಿಮಾ. ಯುವಕರಿಗೆ ಉತ್ತಮ ಸಂದೇಶ ಕೂಡ ಚಿತ್ರದಲ್ಲಿದೆ. ನನ್ನ ಕೆರಿಯರ್ ನಲ್ಲೇ ಇದು ಬಿಗ್ ಹಿಟ್ ಆಗುವುದು ಖಂಡಿತ. ಎಲ್ಲರಿಗೂ ಚಿತ್ರ ಇಷ್ಟವಾಗುತ್ತೆ.

English summary
Sandalwood's most expected movie DK is releasing tomorrow (Feb 12th). Read the exclusive interview of Jogi Prem here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada