For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ' ಅಂದ್ರೆ ಏನು.? ಸೂರಿ ಬಾಯ್ಬಿಟ್ಟ ದೊಡ್ಡ ಸೀಕ್ರೆಟ್ ಇಲ್ಲಿದೆ.!

  By Harshitha
  |

  ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ವರ್ಷದ ಹಿಂದೆ 'ದೊಡ್ಮನೆ ಹುಡ್ಗ' ಸೆಟ್ಟೇರಿತ್ತು. ಅಲ್ಲಿಂದ ಇಲ್ಲಿಯವರೆಗೂ 'ದೊಡ್ಮನೆ ಹುಡ್ಗ' ಚಿತ್ರದ ಕುರಿತು ಅನೇಕ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಆದ್ರೆ, ನಿರ್ದೇಶಕ ಸೂರಿ ಈ ಸಿನಿಮಾಗೆ 'ದೊಡ್ಮನೆ ಹುಡ್ಗ' ಅಂತ ಟೈಟಲ್ ಯಾಕಿಟ್ರು ಎಂಬ ಸತ್ಯ ಯಾರಿಗಾದರೂ ಗೊತ್ತಾ.?

  ಡಾ.ರಾಜ್ 'ಅಭಿಮಾನಿಗಳೇ ದೇವರುಗಳು' ಅಂತ್ಹೇಳ್ತಿದ್ರು. ಅದನ್ನ ಸ್ವಲ್ಪ ರೀಮಿಕ್ಸ್ ಮಾಡಿ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ 'ಅಭಿಮಾನಿಗಳೇ ನಮ್ಮನೆ ದೇವ್ರು..' ಹಾಡು ಬರೆಸಿದ್ದಾರೆ ಸೂರಿ. ['ದೊಡ್ಮನೆ ಹುಡ್ಗ' ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?]

  ಹಾಗಾದ್ರೆ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಗೂ 'ದೊಡ್ಮನೆ ಹುಡ್ಗ' ಚಿತ್ರಕ್ಕೂ ಲಿಂಕ್ ಇದ್ಯಾ.? ಈ ಡೌಟ್ ನ ಕ್ಲಿಯರ್ ಮಾಡ್ಬೇಕು ಎಂಬ ಕಾರಣಕ್ಕೆ ದುನಿಯಾ ಸೂರಿ ಜೊತೆ ನಾವು ಸಣ್ಣ ಚಿಟ್-ಚಾಟ್ ಮಾಡಿದ್ವಿ.

  ಸಂದರ್ಶನ - ಹರ್ಷಿತಾ ರಾಕೇಶ್

  * 'ದೊಡ್ಮನೆ' ಅಂದ್ರೆ...

  * 'ದೊಡ್ಮನೆ' ಅಂದ್ರೆ...

  - ದೊಡ್ಮನೆ ಅಂದ್ರೆ ಒಂದು ಊರಿನ ದೊಡ್ಡ ಕುಟುಂಬ.

  * ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆ ಅಂದ್ರೆ 'ರಾಜ್ ಕುಟುಂಬ'. ಡಾ.ರಾಜ್ ಹೇಳ್ತಿದ್ದಂತಹ ಮಾತು 'ಅಭಿಮಾನಿಗಳೇ ದೇವರುಗಳು'. ಅವರಿಗೂ, ಚಿತ್ರಕ್ಕೂ ಏನಾದ್ರೂ ಲಿಂಕ್ ಇದ್ಯಾ.?

  * ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆ ಅಂದ್ರೆ 'ರಾಜ್ ಕುಟುಂಬ'. ಡಾ.ರಾಜ್ ಹೇಳ್ತಿದ್ದಂತಹ ಮಾತು 'ಅಭಿಮಾನಿಗಳೇ ದೇವರುಗಳು'. ಅವರಿಗೂ, ಚಿತ್ರಕ್ಕೂ ಏನಾದ್ರೂ ಲಿಂಕ್ ಇದ್ಯಾ.?

  - ಪುನೀತ್ ರಾಜ್ ಕುಮಾರ್ ಬಿಟ್ಟು ನನಗೆ ಬೇರೆ ಯಾರೂ 'ದೊಡ್ಮನೆ ಹುಡ್ಗ' ಅಂತ ಅನಿಸುವುದಿಲ್ಲ. 'ದೊಡ್ಮನೆ ಹುಡ್ಗ' ಅಂತ ಟೈಟಲ್ ಇಟ್ಟು ಬೇರೆ ಹೀರೋ ಆಕ್ಟ್ ಮಾಡಿದ್ರೆ, ಜನ ಕೇಳ್ತಾರೆ ''ಇದು ಹಾಗಲ್ಲವಲ್ಲ'' ಅಂತ. ಹೀಗಾಗಿ, ಟೈಟಲ್ ಇಟ್ಟು ನಟರನ್ನ ಚ್ಯೂಸ್ ಮಾಡಬೇಕಾಗಿರುವುದರಿಂದ ತುಂಬಾ ಯೋಚನೆ ಮಾಡಿರ್ತೀವಿ. ಟೈಟಲ್ ಇಟ್ಟೇ ಕಥೆ ಬರೆದದ್ದು. ಪಕ್ಕಾ ಕಮರ್ಶಿಯಲ್ ಸಿನಿಮಾ. ಇದು ಯಾವುದೇ ಕಾರಣಕ್ಕೂ ರಾಜ್ ಕುಮಾರ್ ರವರ ಕಥೆ ಅಲ್ಲ. ಒಂದು ಊರಲ್ಲಿ ಇರುವ ಒಂದು ದೊಡ್ಮನೆ ಕುಟುಂಬದ ಕಥೆ ಅಷ್ಟೆ.

  * ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಆಕ್ಷನ್ ಕಟ್ ಹೇಳಿದ ಅನುಭವ...

  * ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಆಕ್ಷನ್ ಕಟ್ ಹೇಳಿದ ಅನುಭವ...

  - ಅಂಬರೀಷ್ ಅಣ್ಣ ಸೆಟ್ ನಲ್ಲಿ ನಮ್ಮ ಜೊತೆ ಇದ್ದಾಗ ಆ ಅನುಭವವನ್ನ ನಾನು ಲೈಫ್ ನಲ್ಲಿ ಮರೆಯೋಲ್ಲ. ಅವರನ್ನ ಕಂಡ್ರೆ ತುಂಬಾ ಭಯ, ಅಷ್ಟೇ ಸಲುಗೆ. ಅವರನ್ನ ನೋಡಿದ್ರೆ, ಒಬ್ಬ ದೊಡ್ಡ ಪಿಟಿ ಮಾಸ್ಟರ್ ನೋಡಿದ ಅನುಭವ. ಒಂದಿನ ಅಂತೂ 22 ಶಾಟ್ ತೆಗೆದು ಬೈಸಿಕೊಂಡಿದ್ದೆ. 'ಬರ್ರೋ ನನ್ನ ಮಕ್ಳ ಇಲ್ಲಿ ಅಂತ ಕರೆದು ಬೈದಿದ್ರು'. ನನಗೆ ಸೌಭಾಗ್ಯ ಇದು ತುಂಬಾ ಸೀನಿಯರ್ಸ್ ಜೊತೆ ವರ್ಕ್ ಮಾಡುವುದು. ಅಂಬರೀಶ್ ಜೊತೆ ಎಷ್ಟು ಬೇಕಾದರೂ ಕೆಲಸ ಮಾಡಬಹುದು. ಅಷ್ಟು ಖುಷಿ ಆಗುತ್ತೆ. [ಡಾ.ರಾಜ್ ಮತ್ತು ಪುನೀತ್ ಬಗ್ಗೆ ಅಂಬರೀಶ್ ಮಾಡಿದ ಕಾಮೆಂಟ್ ಏನು?]

  * ನಟಿ ಸುಮಲತಾ 'ದೊಡ್ಮನೆ'ಯಲ್ಲಿ ಹೇಗಿರ್ತಿದ್ರು.?

  * ನಟಿ ಸುಮಲತಾ 'ದೊಡ್ಮನೆ'ಯಲ್ಲಿ ಹೇಗಿರ್ತಿದ್ರು.?

  - 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಪುನೀತ್ ತಾಯಿ ಪಾತ್ರಕ್ಕೆ ಸುಮಲತಾ ಮೇಡಂ ನವರನ್ನ ಆಯ್ಕೆ ಮಾಡಿಕೊಂಡೆ. ಅವರಿಗೆ ಫೋನ್ ನಲ್ಲಿ ನಾನು ಕೆಲವು ಸೀನ್ ಗಳನ್ನ ಮಾತ್ರ ಹೇಳಿದ್ದೆ. ದೊಡ್ಡವರ ಜೊತೆ ಕೆಲಸ ಮಾಡುವಾಗ ಅವರ ಅನುಭವಗಳು ನನಗೆ ತುಂಬಾ ಟಚ್ ಆಗುತ್ತಿತ್ತು. 'ದೊಡ್ಮನೆ ಹುಡ್ಗ' ಸಿನಿಮಾ ನನಗೆ ತುಂಬಾ ಹೊಸದು. ಫ್ಯಾಮಿಲಿ ಸಿನಿಮಾ ನಾನು ಇದುವರೆಗೂ ಮಾಡಿಲ್ಲ. ಇದರಲ್ಲಿ ಸುಮಲತಾ ಮೇಡಂ ಕೊಟ್ಟ ಕೆಲವು ಟಿಪ್ಸ್ ಮರೆಯುವುದಕ್ಕೆ ಆಗಲ್ಲ. [ಅಂದು ತಂದೆಗೆ ನಾಯಕಿ, ಇಂದು ಮಗನಿಗೆ ತಾಯಿ: ಸುಮಲತಾ ದಿಲ್ ಖುಷ್!]

  * 'ಅಭಿಮಾನಿಗಳೇ ನಮ್ಮನೆ ದೇವ್ರು..' ಹಾಡನ್ನ ಜನರ ಮಧ್ಯೆ ಶೂಟ್ ಮಾಡಿದ್ರಿ...

  * 'ಅಭಿಮಾನಿಗಳೇ ನಮ್ಮನೆ ದೇವ್ರು..' ಹಾಡನ್ನ ಜನರ ಮಧ್ಯೆ ಶೂಟ್ ಮಾಡಿದ್ರಿ...

  - 'ಅಭಿಮಾನಿಗಳೇ ನಮ್ಮನೆ ದೇವ್ರು...' ನನಗೆ ಬಹಳ ಹತ್ತಿರವಾದ ಸಾಂಗ್. ಅದರ ಶೂಟಿಂಗ್ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ವಿ. ಜನರ ಮಧ್ಯೆ ಶೂಟ್ ಮಾಡ್ಬೇಕಾದರೆ, ತುಂಬಾ ಜೋಷ್ ಕೊಡ್ತು. ಆ ಸಾಂಗ್ ಶೂಟ್ ಮಾಡಲು ಇಡೀ ಕರ್ನಾಟಕ ರಾಜ್ಯದಲ್ಲಿ ಪೊಲೀಸ್, ರಾಜಕಾರಣಿಗಳು ಹಾಗೂ ಆತ್ಮೀಯರು ತುಂಬಾ ಸಪೋರ್ಟ್ ಮಾಡಿದ್ರು. ಅವರಿಗೆಲ್ಲ ನಾನು ಈ ಮೂಲಕ ಥ್ಯಾಂಕ್ಸ್ ಹೇಳ್ತೀನಿ. ['ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಆಡಿದ ದೊಡ್ಡ ಮಾತು]

  * ಸಿಕ್ಸ್ ಪ್ಯಾಕ್ ಮಾಡಿದ್ದೀರಂತೆ...

  * ಸಿಕ್ಸ್ ಪ್ಯಾಕ್ ಮಾಡಿದ್ದೀರಂತೆ...

  - ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೇನೆ ಅಷ್ಟೇ. ತುಂಬಾ ಕುಡಿತಿದ್ದೆ. ಕುಡಿತ ಬಿಟ್ಟೆ. ಹೀಗೆ ಇರಬೇಕು ಅನಿಸ್ತು, ಇದ್ದೀನಿ. ಮುಂದೆ ಏನಾಗಿರುತ್ತೇನೋ, ಗೊತ್ತಿಲ್ಲ. ['ದೊಡ್ಮನೆ ಹುಡ್ಗಿ' ರಾಧಿಕಾ ಪಂಡಿತ್ ಜೊತೆ ಎಕ್ಸ್ ಕ್ಲೂಸಿವ್ ಚಿಟ್ ಚಾಟ್]

  * ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೀರಾ ಹೇಗೆ?

  * ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೀರಾ ಹೇಗೆ?

  - ಇಲ್ಲ, ಇನ್ನೊಂದು ಇಪ್ಪತ್ತು ವರ್ಷ ಬೇಕು ನನಗೆ. ನನ್ನ ಐಡಿಯಾಗಳನ್ನ ಬಿಟ್ಟು ಕ್ಯಾಮರಾ ಮುಂದೆ ಬರುವುದಕ್ಕೆ. ನನ್ನ ಆಯಸ್ಸು ಸಾಲುವುದಿಲ್ಲ, ಅಷ್ಟು ಐಡಿಯಾಗಳು ನನ್ನಲ್ಲಿ ಇದೆ. ಸಣ್ಣ ಆಗಿರುವ ಕಾರಣಕ್ಕೆ ಹೀರೋ ಆಗ್ತಾರೆ ಅನ್ನೋದು ಸುಳ್ಳು.

  * ಸೂರಿ ಬದಲಾಗಿದ್ದಾರಾ? 'ದುನಿಯಾ', 'ಕೆಂಡಸಂಪಿಗೆ', 'ಕಡ್ಡಿಪುಡಿ' ಚಿತ್ರಗಳನ್ನ ಮಾಡಿರುವ ಸೂರಿ ಈಗ 'ದೊಡ್ಮನೆ ಹುಡ್ಗ' ಅಂತಹ ಫ್ಯಾಮಿಲಿ ಸಬ್ಜೆಕ್ಟ್ ಗೆ ಕೈ ಹಾಕಿದ್ದೀರಾ?

  * ಸೂರಿ ಬದಲಾಗಿದ್ದಾರಾ? 'ದುನಿಯಾ', 'ಕೆಂಡಸಂಪಿಗೆ', 'ಕಡ್ಡಿಪುಡಿ' ಚಿತ್ರಗಳನ್ನ ಮಾಡಿರುವ ಸೂರಿ ಈಗ 'ದೊಡ್ಮನೆ ಹುಡ್ಗ' ಅಂತಹ ಫ್ಯಾಮಿಲಿ ಸಬ್ಜೆಕ್ಟ್ ಗೆ ಕೈ ಹಾಕಿದ್ದೀರಾ?

  - ಈಗ ನಾನೊಬ್ಬ ಕಾರ್ಪೆಂಟರ್ ಅಂದ್ರೆ ನನಗೆ ಬರುವ ಆರ್ಡರ್ ತಕ್ಕ ಹಾಗೆ ಕೆಲಸ ಮಾಡ್ಬೇಕು. 'ದೊಡ್ಮನೆ' ಅನ್ನೋದು ದೊಡ್ಡ ಮಂಚ. ಟೀಕ್ ವುಡ್ ನಲ್ಲಿ ಮಾಡಿಕೊಡಿ ಅಂದ್ರು ಮಾಡ್ತಿದ್ದೀನಿ.

  English summary
  Kannada Director Duniya Soori spoke about the specialities of Kannada Movie 'Doddmane Hudga' in an exclusive interview with Filmibeat Kannada. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X