»   » ಚಿತ್ರ ಬಿಡುಗಡೆಗೆ ಮುನ್ನ ಪ್ರಜ್ವಲ್ ದೇವರಾಜ್ ಸಂದರ್ಶನ

ಚಿತ್ರ ಬಿಡುಗಡೆಗೆ ಮುನ್ನ ಪ್ರಜ್ವಲ್ ದೇವರಾಜ್ ಸಂದರ್ಶನ

Posted By:
Subscribe to Filmibeat Kannada

ಹೆಸರಾಂತ ನಟ ದೇವರಾಜ್ ಹೋಂ ಬ್ಯಾನರಿನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ 'ನೀನಾದೆ ನಾ'. ಪ್ರಜ್ವಲ್ ದೇವರಾಜ್, ಅಂಕಿತಾ ಮಹೇಶ್ವರಿ, ಪ್ರಿಯಾಂಕ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕರು ಕಂದಾಸ್.

ಶಶಾಂಕ್ ನಿರ್ದೇಶನದ ಸಿಕ್ಸರ್ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಪ್ರಜ್ವಲ್, ಇದುವರೆಗೆ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಂತ ಬ್ಯಾನರಿನ ಮಹತ್ವಾಕಾಂಕ್ಷೆಯ ನೀನಾದೆ ನಾ ಚಿತ್ರ ಬಿಡುಗಡೆಗೆ ಮುನ್ನ ಪ್ರಜ್ವಲ್ ದೇವರಾಜ್ ಜೊತೆಗಿನ 'ಫಿಲ್ಮೀ ಬೀಟ್' ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಹೋಂ ಬ್ಯಾನರಿನ ಮೊದಲ ಚಿತ್ರ. ತಂದೆ ದೇವರಾಜ್ ಜೊತೆಗಿನ ನಿಮ್ಮ ಅನುಭವ ಹೇಗಿತ್ತು?
ಪ್ರಜ್ವಲ್: ತಂದೆ ಜೊತೆ ಈ ಹಿಂದೆ ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆದರೆ ನನ್ನ ಚಿತ್ರದ ನಿರ್ಮಾಪಕರಾಗಿ ಅವರ ಜೊತೆ ಕೆಲಸ ಮಾಡುತ್ತಿರುವುದು ಇದೇ ಮೊದಲು. ಒಬ್ಬ ನಟನಾಗಿ ಚಿತ್ರದಲ್ಲಿ ತೊಡಗಿಸಿಕೋ ಎಂದಷ್ಟೇ ನನಗೆ ಅವರು ಸಲಹೆ ನೀಡಿದ್ದರು. ನಟನೆಯ ವಿಚಾರದಲ್ಲಿ ನನಗೆ ಗೊತ್ತಾಗದೇ ನಾನು ಮಾಡುತ್ತಿದ್ದ ಕೆಲವೊಂದು ತಪ್ಪನ್ನು ಚಿತ್ರೀಕರಣದ ಸಮಯದಲ್ಲಿ ತಿದ್ದಿದರು. ನಟನಾಗಿ ನನಗೆ ಇದೊಂದು ಉತ್ತಮ ಅನುಭವ.

ಪ್ರ: ಈ ಚಿತ್ರದಲ್ಲಿ ನಿಮ್ಮ ಪಾತ್ರ ಎಂತದ್ದು?
ಪ್ರಜ್ವಲ್: ನನ್ನದು ಸಹಾಯಕ ನಿರ್ದೇಶಕನ ಪಾತ್ರ. ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ಪರಿಚಯಿಸುವ ಪಾತ್ರ. ಹತ್ತನೇ ತರಗತಿಯಿಂದ ಸಹಾಯಕ ನಿರ್ದೇಶಕನವರೆಗೆ ಈ ಚಿತ್ರದಲ್ಲಿ ನನ್ನ ಪಾತ್ರವಿರುತ್ತದೆ.

ಪ್ರ: ಈ ಚಿತ್ರ ಕ್ಲಾಸಿಗೋ, ಮಾಸಿಗೋ, ಕುಟುಂಬ ಪ್ರಧಾನವೋ?
ಪ್ರಜ್ವಲ್: ಯಾವುದೇ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಕಥೆ, ಚಿತ್ರಕಥೆಯನ್ನು ಹಣೆಯಲಿಲ್ಲ. ಈ ಚಿತ್ರವನ್ನು ಎಲ್ಲಾ ವರ್ಗದವರ ಜೊತೆ ಕೂತು ನೋಡಬಹುದು. ಪ್ರಮುಖವಾಗಿ ಒಬ್ಬ ಹುಡುಗ ಪಡುವ ಕಷ್ಟವನ್ನು ಹೈಲೈಟ್ ಮಾಡಲಾಗಿದೆ.

An exclusive interview with Prajwal Devaraj before Neenade Naa movie release

ಪ್ರ: ಚಿತ್ರದ ಬಗ್ಗೆ ಇನ್ನೂ ಸ್ವಲ್ವ ವಿವರಿಸಿ
ಪ್ರಜ್ವಲ್: ಈಗಾಗಲೇ ಹೇಳಿದಂತೆ ಸಹಾಯಕ ನಿರ್ದೇಶಕನಾಗಿರುವ ಹುಡುಗನ ಕಥೆ, ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಮಾಡಲಾಗಿರುವ ಚಿತ್ರವಿದು. ಮಹಿಳಾ ಸಬಲೀಕರಣ ಮತ್ತು ಒಂಟಿ ಮಹಿಳೆ ಪಡುವ ವೇದನೆಯನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ.

ಪ್ರ: ಚಿತ್ರ ಬಿಡುಗಡೆಯಾದಾಗ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಾ?
ಪ್ರಜ್ವಲ್ : ಅಕ್ಟೋಬರ್ ಹದಿನೇಳರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಜನ ಒಪ್ಪಿಕೊಳ್ಳುತ್ತಾರೆ ಎನ್ನುವ ಅಚಲ ನಂಬಿಕೆಯಲ್ಲಿದ್ದೇವೆ. Let's see.

ಪ್ರ: ನಿಮ್ಮ ಮುಂದಿನ ಪ್ರಾಜೆಕ್ಟ್ ಏನು?
ಪ್ರಜ್ವಲ್: ನನ್ನ ಮುಂದಿನ ಚಿತ್ರ ಮೃಗಶಿರಾ. ಬುಡುಕಟ್ಟು ಜನಾಂಗದ ಜೊತೆಗೆ ಮತ್ತು ಕಾಡಿನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಅದಾದ ನಂತರ ಅರ್ಜುನ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದು ಕೊಲೆ ರಹಸ್ಯ ಭೇದಿಸುವ ಚಿತ್ರ, ಇದರಲ್ಲಿ ನನ್ನ ತಂದೆ ಕೂಡಾ ನಟಿಸುತಿದ್ದಾರೆ.

ಓಕೆ.. ಆಲ್ ದಿ ಬೆಸ್ಟ್ ಪ್ರಜ್ವಲ್..

English summary
An exclusive interview with Dynamic Prince Prajwal Devaraj before Neenade Naa movie release. The Neenade Naa movie releasing on October 17.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada