»   » ಚಿತ್ರರಂಗದ ಕರಾಳ ಮುಖ ಪರಿಚಯಿಸ್ತಾರಂತೆ ಪತ್ರಕರ್ತ ಗೌರೀಶ್ ಅಕ್ಕಿ!

ಚಿತ್ರರಂಗದ ಕರಾಳ ಮುಖ ಪರಿಚಯಿಸ್ತಾರಂತೆ ಪತ್ರಕರ್ತ ಗೌರೀಶ್ ಅಕ್ಕಿ!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈಟಿವಿ ನ್ಯೂಸ್, ಟಿವಿ 9 ಸುದ್ದಿ ವಾಹಿನಿ, ಸುವರ್ಣ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ, ಎಂಟರ್ ಟೇನ್ಮೆಂಟ್ ಬ್ಯೂರೋ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದ ಖ್ಯಾತ ಪತ್ರಕರ್ತ ಗೌರೀಶ್ ಅಕ್ಕಿ ರವರ ಅದೃಷ್ಟ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ.

  ಜರ್ನಲಿಸಂ ಓದದೆ ಇದ್ದರೂ ಪತ್ರಿಕೋದ್ಯಮದಲ್ಲಿ ಏಳಿಗೆ ಸಾಧಿಸಿದ ಗೌರೀಶ್ ಅಕ್ಕಿ ಈಗ ಚಿತ್ರ ನಿರ್ದೇಶಕನಾಗಿ ನಿಮ್ಮೆಲ್ಲರ ಶುಭ ಹಾರೈಕೆಯ ನಿರೀಕ್ಷೆಯಲ್ಲಿದ್ದಾರೆ.

  ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳಿ ನಿರ್ದೇಶಕನಾಗ್ಬೇಕು ಅಂತ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಗೌರೀಶ್ ಅಕ್ಕಿಗೆ ಚಿತ್ರರಂಗದ ಮತ್ತೊಂದು ಕರಾಳ ಮುಖ ಪರಿಚಯವಾಗಿದೆ. [ಸಿನಿಮಾ ಮೈ ಡಾರ್ಲಿಂಗ್ ಗೆ ಟ್ಯಾಲೆಂಟ್ ಹುಡುಕಾಟ]

  ಗಾಂಧಿನಗರಕ್ಕೆ ಕಾಲಿಟ್ಟ ಹೊಸಬರು ಪಡುವ ಕಷ್ಟ, ಅನುಭವಿಸುವ ನಷ್ಟ, ನೋವು-ವ್ಯಥೆಯನ್ನ ಪರಿಚಯಿಸುವ ನಿಟ್ಟಿನಲ್ಲಿ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರ ತಯಾರು ಮಾಡಿದ್ದಾರೆ ಗೌರೀಶ್ ಅಕ್ಕಿ. ['ಸಿನಿಮಾ ಮೈ ಡಾರ್ಲಿಂಗ್' ಎನ್ನುತ್ತಿದ್ದಾರೆ ನಿರೂಪಕ ಗೌರೀಶ್ ಅಕ್ಕಿ]

  ಗೌರೀಶ್ ಅಕ್ಕಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಚೊಚ್ಚಲ ಚಿತ್ರ 'ಸಿನಿಮಾ ಮೈ ಡಾರ್ಲಿಂಗ್' ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇದರ ಪ್ರಯುಕ್ತ 'ಫಿಲ್ಮಿಬೀಟ್ ಕನ್ನಡ' ನಿರ್ದೇಶಕ ಗೌರೀಶ್ ಅಕ್ಕಿ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

  * ಪತ್ರಕರ್ತರಾಗಿದ್ದವರು ನೀವು. ಪತ್ರಿಕೋದ್ಯಮ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬರಲು ಬಲವಾದ ಕಾರಣ?

  - ನನ್ನ ಜೀವನದ ಉದ್ದೇಶ ಪತ್ರಕರ್ತನಾಗ್ಬೇಕು ಅಂತಿರ್ಲಿಲ್ಲ. ಇಂಗ್ಲೀಷ್ ಲೆಕ್ಚರರ್ ಆಗಿದ್ದೆ. ನಾನು ನಿರ್ದೇಶಕ ಆಗ್ಬೇಕು ಅನ್ನೋ ಗುರಿ ಮುಂಚೆಯಿಂದ್ಲೂ ಇತ್ತು. ಅದಕ್ಕಾಗಿ ನಾನು ಬೆಂಗಳೂರಿಗೆ ಬಂದಿದ್ದು. ಇಲ್ಲಿ ಬ್ಯಾಕ್ ಗ್ರೌಂಡ್ ಇಲ್ಲದೆ ಕೆಲಸ ಮಾಡ್ವೇಕು ಅಂದ್ರೆ ತುಂಬಾ ಕಷ್ಟ. ನನಗೆ ಈಟಿವಿಯಲ್ಲಿ ಕೆಲಸ ಆಯ್ತು. ನನಗೆ ಸ್ಕ್ರೀನ್, ಕ್ಯಾಮರಾ ಅಂದ್ರೆ ಮುಂಚೆಯಿಂದ್ಲೂ ಅಟ್ರ್ಯಾಕ್ಷನ್. ದೊಡ್ಡ ಸ್ಕ್ರೀನ್ ಸಿಗ್ಲಿಲ್ಲ, ಹೀಗಾಗಿ ಚಿಕ್ಕ ಸ್ಕ್ರೀನ್ ಗೆ ಹೋದೆ ಅಷ್ಟೆ. ನನಗೆ ಕೆಲಸ ಇಷ್ಟ ಆಯ್ತು. ಆದರೂ ನಿರ್ದೇಶಕ ಆಗ್ಬೇಕು ಅಂತ ಮನಸ್ಸಲ್ಲಿ ಇದ್ದಿದ್ರಿಂದ ಈಗ ಸರಿಯಾದ ಸಮಯ ಅಂತ 'ಸಿನಿಮಾ ಮೈ ಡಾರ್ಲಿಂಗ್' ಶುರು ಮಾಡಿದೆ.

  * ಎಂಟರ್ ಟೇನ್ಮೆಂಟ್ ಬ್ಯೂರೋ ಹೆಡ್ ಆಗಿದ್ದವರು ನೀವು. ಸ್ಯಾಂಡಲ್ ವುಡ್ ಒಳ ವಿಷಯಗಳನ್ನ ಚೆನ್ನಾಗಿ ಅರಿತಿದ್ರಿ. ಹೊಸಬರಿಗೆ ಗಾಂಧಿನಗರದಲ್ಲಿ ಸಿನಿಮಾ ಕಷ್ಟ ಅನ್ನೋದು ನಿಮಗೆ ಗೊತ್ತು. ಹೀಗಿದ್ದೂ ಸಿನಿಮಾ ಮಾಡುವುದು ರಿಸ್ಕ್ ಅಂತ ನಿಮಗೆ ಅನಿಸ್ಲಿಲ್ವಾ?

  - ಖಂಡಿತ ರಿಸ್ಕ್ ಹೌದು. ನನ್ನ ಲೈಫ್ ನಲ್ಲಿ ನಾನು ರಿಸ್ಕ್ ತೆಗೆದುಕೊಂಡಿರುವುದೇ ಹೆಚ್ಚು. ಎಂ.ಎ ಮಾಡಿ ಇಂಗ್ಲೀಷ್ ಲೆಕ್ಚರರ್ ಆಗಿದ್ದೆ. ನನ್ನದು NET ಎಕ್ಸಾಂ ಪಾಸ್ ಆಗಿತ್ತು. ಕೆ.ಎ.ಎಸ್ ಪಾಸ್ ಆಗಿ ಇಂಟರ್ವ್ಯೂ ಕೊಟ್ಟಿದ್ದೆ. ಅದನ್ನೆಲ್ಲಾ ಬಿಟ್ಟು ನಾನು ಈಟಿವಿಗೆ ಹೋದೆ. ತುಂಬಾ ಕಡಿಮೆ ಸಂಬಳಕ್ಕೆ. ಅದು ಜರ್ನಲಿಸಂ ಮಾಡದೆ. ರಿಸ್ಕ್ ಇಲ್ಲದೆ ಲೈಫ್ ಇಂಟ್ರೆಸ್ಟಿಂಗ್ ಆಗಿರಲ್ಲ ಅನ್ಸತ್ತೆ ನನಗೆ. ರಿಸ್ಕ್ ತಗೊಂಡು ನನಗೆ ಇಷ್ಟವಾಗಿರುವುದನ್ನ ಮಾಡೋಣ ಅಂತ ಅಷ್ಟೆ.

  * ಪತ್ರಕರ್ತರಾಗಿದ್ದಾಗ ಸ್ಯಾಂಡಲ್ ವುಡ್, ಪತ್ರಿಕೋದ್ಯಮದಿಂದ ಹೊರ ಬಂದಮೇಲೆ ಸ್ಯಾಂಡಲ್ ವುಡ್ ಹೇಗೆ ಕಾಣುತ್ತೆ? ವ್ಯತ್ಯಾಸ ಇದ್ಯಾ?

  - ಮೀಡಿಯಾದಲ್ಲಿ ಇದ್ದಾಗ ಅದು ಬೇರೆನೇ. ನೀವು ಸ್ಯಾಂಡಲ್ ವುಡ್ ನ ನೋಡುವ ರೀತಿ, ಸ್ಯಾಂಡಲ್ ವುಡ್ ನಿಮ್ಮನ್ನ ನೋಡುವ ರೀತಿ ಬೇರೆನೇ ಆಗಿರುತ್ತೆ. ಪತ್ರಕರ್ತರನ್ನ ನೋಡುವ ರೀತಿಯೇ ಬೇರೆ. ನಿರ್ದೇಶಕನನ್ನ ನೋಡುವ ರೀತಿಯೇ ಬೇರೆ. ಪತ್ರಕರ್ತನಾಗಿ ನಾನು ಏನೇ ಹೆಸರು ಗಳಿಸಿದ್ದರೂ, ನಿರ್ದೇಶಕನಾಗಿ ನಾನು ಹೊಸಬ. ಆದರೂ, ನನಗೆ ಸ್ಯಾಂಡಲ್ ವುಡ್ ನಿಂದ ತುಂಬಾ ಸಪೋರ್ಟ್ ಸಿಕ್ಕಿದೆ. ಕೆಲವು ನಟರು ಕಡಿಮೆ ಸಂಭಾವನೆ ತೆಗೆದುಕೊಂಡರು, ಇನ್ನೂ ಕೆಲವರು ಫ್ರೀ ಆಗಿ ಆಕ್ಟ್ ಮಾಡಿದರು. ಹೀಗಾಗಿ Sandalwood is kind to me.

  * ನೀವು ಸಿನಿಮಾ ಮಾಡಲು ನಿರ್ಧರಿಸಿದಾಗ ಸಿನಿಮಾದವರ, ನಿಮ್ಮ ಮನೆಯವರ ಪ್ರತಿಕ್ರಿಯೆ ಹೇಗಿತ್ತು?

  - ಖಂಡಿತ ಯಾರಿಗೂ ಇಷ್ಟ ಇರ್ಲಿಲ್ಲ. ನನ್ನ ಮನೆಯವರಿಗೆ, ಫ್ರೆಂಡ್ಸ್ ಗೆ ಯಾರಿಗೂ ನಾನು ಕೆಲಸ ಬಿಟ್ಟು ಸಿನಿಮಾ ಮಾಡುವುದು ಇಷ್ಟ ಇರ್ಲಿಲ್ಲ. ನಾನು ನನ್ನ ಮನೆಯವರನ್ನ ಕನ್ವಿನ್ಸ್ ಮಾಡಬೇಕಾಗಿತ್ತು. ಮಾಡಿದೆ ಅಷ್ಟೆ.

  * ಸಿನಿಮಾ ಮಾಡಲು ನಿರ್ಧರಿಸಿದ ಮೇಲೆ ನೀವು ಎದುರಿಸಿದ ಸವಾಲುಗಳು?

  - ಶೂಟಿಂಗ್ ಮಾಡುವಾಗ ಪ್ರತಿದಿನ ಸವಾಲೇ. Time is Money ಅಂತಾರೆ. ಕೆಲವೊಂದು ಲೋಕೇಷನ್ ಗಳಿಗೆ ಶೂಟಿಂಗ್ ಪರ್ಮಿಷನ್ ಸಿಕ್ಕಿರ್ಲಿಲ್ಲ. ಹೀಗೆ ಸಣ್ಣ-ಪುಟ್ಟ ಸಮಸ್ಯೆ ಆಗಿತ್ತು. ಎಲ್ಲವನ್ನೂ ಎದುರಿಸಿ ಇಲ್ಲಿಯವರೆಗೂ ಬಂದಿದ್ದೇವೆ.

  * 'ಸಿನಿಮಾ ಮೈ ಡಾರ್ಲಿಂಗ್' ಇದು ನಿಮ್ಮ ಜೀವನಕ್ಕೆ ಸಂಬಂಧಿಸಿದ್ಯಾ?

  - ಸಿನಿಮಾ ಅನ್ನೋದು ನನಗೆ ಇಷ್ಟ. ನನ್ನ ಡಾರ್ಲಿಂಗ್ ಕೂಡ ಹೌದು ಸಿನಿಮಾ ಅಂದ್ರೆ. 'ಸಿನಿಮಾ ಮೈ ಡಾರ್ಲಿಂಗ್' ಕಥೆ ಹೊಳೆದದ್ದೇ ನನ್ನ ಸಿನಿಮಾ ಜೀವನದಲ್ಲಿ. ನಾನು ಸಿನಿಮಾ ಡೈರೆಕ್ಟರ್ ಆಗ್ಬೇಕು ಅಂದುಕೊಂಡು ಏನೇನು ಪರದಾಟ ನಡೆಯುತ್ತಿತ್ತು ಆಗ ತುಂಬಾ ಬೇಜಾರಾಗಿದ್ದ ಸಮಯದಲ್ಲಿ ಹೊಳೆದ ಕಥೆ 'ಸಿನಿಮಾ ಮೈ ಡಾರ್ಲಿಂಗ್'. ಹಾಗೇ, ಒಂದು ಕನೆಕ್ಷನ್ ಇದೆ ಈ ಸಿನಿಮಾಗೂ ನನ್ನ ಜೀವನಕ್ಕೂ.

  * ಚಿತ್ರದಲ್ಲಿ ನೀವೂ ನಟಿಸಿದ್ದೀರಾ?

  - ನಾನು ನಟಿಸಿಲ್ಲ. ನಾನು ನಾನಾಗಿ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದೀನಿ. ಒಂದು ನಿಮಿಷದ ಸೀನ್ ನಲ್ಲಿ ಇದ್ದೀನಿ. ಇದು ಹೊಸಬರ ಸಿನಿಮಾ ಆಗಿರುವುದರಿಂದ ಎಲ್ಲರಿಗೂ ಹೆಚ್ಚು ಅವಕಾಶ ಕೊಟ್ಟಿದ್ದೇನೆ.

  * ಮುಂದೆ...ಸಿನಿಮಾದಲ್ಲೇ ಮುಂದುವರೆಯುತ್ತೀರಾ?

  - ಹೌದು. ಕನ್ನಡದ ಪ್ರಖ್ಯಾತ ಕವಿಯೊಬ್ಬರ ಜೀವನಚರಿತ್ರೆಯನ್ನ ಸಿನಿಮಾ ಮಾಡಬೇಕು ಅಂತಿದ್ದೀನಿ. ಅದಿನ್ನೂ ಫೈನಲ್ ಆಗಿಲ್ಲ. ಮತ್ತೊಂದು ಕಮರ್ಶಿಯಲ್ ಲವ್ ಸ್ಟೋರಿ ಸಿನಿಮಾ. ಎರಡರಲ್ಲಿ ಮೊದಲು ಯಾವುದು ಟೇಕ್ ಆಫ್ ಆಗುತ್ತೆ ಗೊತ್ತಿಲ್ಲ.

  * 'ಸಿನಿಮಾ ಮೈ ಡಾರ್ಲಿಂಗ್' ಮೇಲೆ ನಿಮ್ಮ ನಿರೀಕ್ಷೆ. ನಮ್ಮ ಓದುಗರಿಗೆ ಏನು ಹೇಳಲು ಬಯಸುತ್ತೀರಾ?

  - ನನಗೆ ನಿನ್ನೆ ಮೊನ್ನೆಯಿಂದ 103 ಡಿಗ್ರಿ ಜ್ವರ. ಟೆನ್ಷನ್ ಇದೆ. ಜನ ಹೇಗೆ ಸ್ವೀಕರಿಸುತ್ತಾರೆ ಅಂತ. ಒಳ್ಳೆ ಸಿನಿಮಾ ಮಾಡಿದ್ದೀನಿ ಅಂತ ನಂಬಿಕೆ ಇದೆ. ಬಣ್ಣದಲೋಕದ ಇನ್ನೊಂದು ಮಗ್ಗಲು, ಅಲ್ಲಿನ ನೋವು, ವ್ಯಥೆಯನ್ನ ತುಂಬಾ ಎಂಟರ್ ಟೇನಿಂಗ್ ಆಗಿ ಹೇಳುವ ಪ್ರಯತ್ನವನ್ನ 'ಸಿನಿಮಾ ಮೈ ಡಾರ್ಲಿಂಗ್' ನಲ್ಲಿ ಮಾಡಿದ್ದೇನೆ. ಎಲ್ಲಾ ಓದುಗರೂ ಹರಸಲಿ.

  English summary
  Journalist turned Director Gowrish Akki shares his experience during the making of his debut movie 'Cinema My Darling' to Filmibeat Kannada.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more