For Quick Alerts
  ALLOW NOTIFICATIONS  
  For Daily Alerts

  'ನಮ್ ಲೈಫ್ ರೀ-ಸ್ಟಾರ್ಟ್ ಆಯ್ತು, 2021ರಲ್ಲಿ ಓಡ್ಬೇಕು ಅಷ್ಟೇ'- ಗುರುದತ್

  |

  'ಈ ವರ್ಷ ಯಾರ ಪ್ಲಾನ್ ವರ್ಕೌಟ್ ಆಗಿಲ್ಲ. ನಾವು ಅಂದುಕೊಂಡಂತ ವರ್ಷ ಇದಲ್ಲ. ನಮ್ಮ ಜನರೇಷನ್‌ನಲ್ಲಿ ಯಾರೂ ನೋಡಿರದ ವರ್ಷ ಇದು. 2020ರಲ್ಲಿ ವರ್ಕೌಟ್ ಆಗಿದ್ದು ಬರಿ ಪ್ರಕೃತಿ ಯೋಜನೆ'' ಎಂದು ಯುವ ನಿರ್ದೇಶಕ ಗುರುದತ್ ಗಾಣಿಗ ಕೊರೊನಾ ವರ್ಷದ ಅನುಭವವನ್ನು ಫಿಲ್ಮಿಬೀಟ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

  2018ರಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಿಸಿದ್ದ ಗುರುದತ್ ಗಾಣಿಗ ಸುಮಾರು ಎರಡು ವರ್ಷದ ನಂತರ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. 2020ರಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತಿದ್ದ ಡೈರೆಕ್ಟರ್‌ 2021ರಲ್ಲಿ ಓಡ್ಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾದ್ರೆ, 2020ರ ವರ್ಷ ಗುರುದತ್ ಗಾಣಿಗ ಅವರಿಗೆ ಹೇಗಿತ್ತು? ಕೊರೊನಾ ವರ್ಷ ಕಲಿಸಿದ ಪಾಠವೇನು? ಮುಂದಿನ ವರ್ಷಕ್ಕೆ ಯೋಜನೆಗಳೇನು ಎಂಬ ವಿಚಾರಗಳನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ....

  ಅಹಂ ನಿಂದ ಮೆರೆಯುತ್ತಿದ್ದ ಚಿತ್ರರಂಗದ ಕೆಲವರಿಗೆ ಪೆಟ್ಟು ಕೊಟ್ಟಿದೆ ಕೊರೊನಾ: ನಾಗತಿಹಳ್ಳಿ ಚಂದ್ರಶೇಖರಅಹಂ ನಿಂದ ಮೆರೆಯುತ್ತಿದ್ದ ಚಿತ್ರರಂಗದ ಕೆಲವರಿಗೆ ಪೆಟ್ಟು ಕೊಟ್ಟಿದೆ ಕೊರೊನಾ: ನಾಗತಿಹಳ್ಳಿ ಚಂದ್ರಶೇಖರ

  ಕೊರೊನಾದಿಂದ ಲೈಫ್ ಒಂಥರಾ ರೀ-ಸ್ಟಾರ್ಟ್ ಆಯ್ತು

  ಕೊರೊನಾದಿಂದ ಲೈಫ್ ಒಂಥರಾ ರೀ-ಸ್ಟಾರ್ಟ್ ಆಯ್ತು

  ''ಕೊರೊನಾದಿಂದ ನಮ್ ಲೈಫ್ ಒಂಥರಾ ರೀ-ಸ್ಟಾರ್ಟ್ ಆಯ್ತು. ತುಂಬಾ ವೇಗವಾಗಿ ಓಡ್ತಿದ್ವಿ. ಸ್ವಲ್ಪ ನಿಂತುಕೊಳ್ಳಿ, ಲೈಫ್ ಇದಲ್ಲ ಅಂತ ತೋರಿಸಿತು. ಕೆಲವೊಮ್ಮೆ ಪ್ರಕೃತಿಯೂ ಮಾತನಾಡುತ್ತೆ ಅಂತ ತಿಳಿಸಿಕೊಡ್ತು. ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಸ್ವಲ್ಪ ಮುಂದಾಲೋಚನೆ ಮಾಡ್ತಾರೆ. ವಾಸ್ತವದಲ್ಲಿದ್ದರೂ ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅಷ್ಟು ವೇಗವಾಗಿ ಹೋಗ್ತಿದ್ವಿ. ಆದ್ರೆ, ಇದ್ದಕ್ಕಿದ್ದಂತೆ ಕೊರೊನಾ, ಲಾಕ್‌ಡೌನ್, ಸೀಲ್‌ಡೌನ್ ಬಂದು ಇದೆಲ್ಲವನ್ನು ಬದಲಿಸಿದೆ, ಹೊಸ ವಿಧಾನ ಕಲಿಸಿಕೊಟ್ಟಿದೆ'' ಎಂದು ನಿರ್ದೇಶಕ ಗುರುದತ್ ಗಾಣಿಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

  ನಮ್ಮ ಜೀವನಕ್ಕೆ ಎಷ್ಟೋ ವಿಷಯಗಳು ಮತ್ತೆ ಬಂತು

  ನಮ್ಮ ಜೀವನಕ್ಕೆ ಎಷ್ಟೋ ವಿಷಯಗಳು ಮತ್ತೆ ಬಂತು

  ''ವೇಗವಾಗಿ ಹೋಗ್ತಿದ್ದ ನಮ್ಮ ಜೀವನದಲ್ಲಿ ಅದೇಷ್ಟೋ ಒಳ್ಳೆಯ ಕೆಲಸಗಳನ್ನು ಮರೆತಿದ್ವಿ. ಓದುವುದು, ಹಳೆಯ ಸಿನಿಮಾಗಳನ್ನು ನೋಡುವುದು, ಸಂಗೀತ ಕೇಳುವುದು, ಬರೆಯುವುದು, ಚೌಕಬಾರ, ಕೇರಂ ಇನ್ನು ಕೆಲವು ಆಟಗಳನ್ನು ಮರೆತು ಹೋಗಿದ್ವಿ. ಇದೆಲ್ಲವೂ ಮತ್ತೆ ಜೀವನದಲ್ಲಿ ಬಂತು. ಚಿಂತಿಸುವ, ಯೋಚಿಸುವ ಹಾಗೂ ತಿಳಿದುಕೊಳ್ಳುವ ವಿಧಾನದಲ್ಲಿ ನಾವ್ ಅಪ್‌ಗ್ರೇಡ್ ಆದ್ವಿ ಅನಿಸಿದೆ. ಒಟ್ಟಾರೆ ಇದೊಂದು ವಿಶೇಷ ಅನುಭವ'' - ಗುರುದತ್ ಗಾಣಿಗ

  'ಡಾಲಿ' ಜೊತೆಗಿನ ಸಿನಿಮಾ ನಿಂತು ಹೋಯಿತು

  'ಡಾಲಿ' ಜೊತೆಗಿನ ಸಿನಿಮಾ ನಿಂತು ಹೋಯಿತು

  ''ಕೊರೊನಾದಿಂದ ಈ ವರ್ಷ ಒಂದು ಸಿನಿಮಾ ನಿಂತು ಹೋಯ್ತು. ಧನಂಜಯ್ ಜೊತೆಯಲ್ಲಿ ಒಂದು ಪ್ರಾಜೆಕ್ಟ್ ಮಾಡಬೇಕಿತ್ತು. ಎಲ್ಲ ಸಿದ್ಧತೆ ಸಹ ಆಗಿತ್ತು. ಆದ್ರೆ, ಕೊರೊನಾದಿಂದ ಅಂದುಕೊಂಡಂತೆ ಶುರು ಮಾಡಲು ಆಗಿಲ್ಲ. ಅದೊಂದು ಬೇಸರ ಇದೆ'' - ಗುರುದತ್ ಗಾಣಿಗ

  'ಅಂಬಿ' ಚಿತ್ರದ ಆದ್ಮೇಲೆ ಲೇಟ್ ಆಯ್ತು ಅಲ್ವೇ?

  'ಅಂಬಿ' ಚಿತ್ರದ ಆದ್ಮೇಲೆ ಲೇಟ್ ಆಯ್ತು ಅಲ್ವೇ?

  ''ನಾವು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದೀವಾ, ಜೊತೆಗೆ ಎರಡೆರಡು ಸಿನಿಮಾ ಮಾಡ್ತೀವಾ, ಅಥವಾ ಸ್ವಲ್ಪ ಬ್ರೇಕ್ ತಗೊಂಡು ಮಾಡ್ತೀವಾ ಅನ್ನೋದಕ್ಕಿಂತ ಮಾಡ್ತಿರುವ ಸಿನಿಮಾ ಯಾವ ಥರ ಇದೆ, ಅದರಲ್ಲಿ ಯಾವ ಥರ ಕ್ವಾಲಿಟಿ ಇದೆ, ಆ ಕಥೆ ಯಾವ ಥರ ಇದೆ, ಆ ಸಿನಿಮಾ ಎಷ್ಟು ಜನರಿಗೆ ತಲುಪುತ್ತೆ ಎನ್ನುವುದು ಮುಖ್ಯ. ಕೊರೊನಾ ಬಂದಿರಲಿಲ್ಲ ಅಂದ್ರೆ ಬಹುಶಃ ಈ ಗ್ಯಾಪ್ ಆಗ್ತಿರಲಿಲ್ಲ. ಈಗ ಮತ್ತಷ್ಟು ಅನುಭವ ಪಡೆದುಕೊಂಡಿದ್ದೀನಿ. ಇದು ಒಳ್ಳೆಯದೇ'' - ಗುರುದತ್ ಗಾಣಿಗ

  ಪ್ರಜ್ವಲ್ ಜೊತೆಗಿನ ಚಿತ್ರ ಯಾವ ರೀತಿಯದ್ದು?

  ಪ್ರಜ್ವಲ್ ಜೊತೆಗಿನ ಚಿತ್ರ ಯಾವ ರೀತಿಯದ್ದು?

  ''ಈ ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ರೀತಿ ಸಿನಿಮಾಗಳನ್ನು ಜನರು ನೋಡ್ಬಿಟ್ಟಿದ್ದಾರೆ. ನಾವು ಮತ್ತೆ ಅದೇ ಕಮರ್ಷಿಯಲ್, ಹಳೆ ಕಥೆಗಳನ್ನು ಮಾಡೋಕೆ ಆಗಲ್ಲ. ಹಾಗಾಗಿ, ಹೊಸ ರೀತಿ ಸಿನಿಮಾ ಮಾಡ್ಬೇಕು, ಪ್ರಯೋಗಾತ್ಮಕ ಕಥೆ ಮಾಡ್ಬೇಕು ಅಂತ ನಿರ್ಧರಿಸಿದ್ವಿ. ಬೆಂಗಳೂರು ಫಿಲ್ಮ್ ಪ್ರೊಡಕ್ಷನ್‌ನ ಕುಮಾರ್ ಹಾಗೂ ನಾನು ಪ್ರಜ್ವಲ್ ದೇವರಾಜ್ ಬಳಿ ಹೋದಾಗ ಕಥೆ ಕೇಳಿ ಇಷ್ಟ ಪಟ್ಟರು. ಈ ರೀತಿ ಸಿನಿಮಾಗಳಿಗೆ ಎಲ್ಲರೂ ಒಪ್ಪಿಕೊಳ್ಳಲ್ಲ. ಪ್ರಜ್ವಲ್ ಅಂತಹ ನಟ ಅದನ್ನು ಮಾಡೋಕೆ ಮುಂದೆ ಬರ್ತಾರೆ. ಹಾಗಾಗಿ, ಈ ಕಾಂಬಿನೇಷನ್ ಒಂದಾಗಿದೆ'' - ಗುರುದತ್ ಗಾಣಿಗ

  2021ರಲ್ಲಿ ನಿಮ್ಮಿಂದ ಏನು ನಿರೀಕ್ಷಿಸಬಹುದು?

  2021ರಲ್ಲಿ ನಿಮ್ಮಿಂದ ಏನು ನಿರೀಕ್ಷಿಸಬಹುದು?

  ''ಈ ವರ್ಷದ ಅನುಭವ ಮುಂದಿನ ಹತ್ತು ವರ್ಷಕ್ಕೆ ಪಾಠ. ಈ ವರ್ಷ ಡಿಸೇಲ್ ತುಂಬಿಸಿಕೊಂಡು ಕೂತಿದ್ವಿ. ಈಗ ಎದ್ದು ಓಡಬೇಕು. 2021ರಲ್ಲಿ ಖಂಡಿತಾ ಪ್ರಜ್ವಲ್ ಸಿನಿಮಾ ಮುಗಿಸಿ ಮತ್ತೊಂದು ಪ್ರಾಜೆಕ್ಟ್ ಶುರು ಮಾಡ್ತೇನೆ. ಅದಕ್ಕಾಗಿ ಎಲ್ಲ ಸಿದ್ಧತೆ ಸಹ ಮಾಡಿಕೊಂಡಿದ್ದೇನೆ. 2020ರಲ್ಲಿ ಏನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ಸೇರಿಸಿ 2021ರಲ್ಲಿ ಮಾಡೋಣ ಅಂತ ಅಂದುಕೊಂಡಿದ್ದೇನೆ'' ಎಂದು ಗುರುದತ್ ಗಾಣಿಗ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

  English summary
  Here is the exclusive interview with director Gurudatha Ganiga regarding kannada movie industry in 2020 and more. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion