twitter
    For Quick Alerts
    ALLOW NOTIFICATIONS  
    For Daily Alerts

    'ಪ್ರೀತಿಯಲ್ಲಿ ಸಹಜ' ನಿರ್ದೇಶಕ ರತ್ನಜ ಜೊತೆ ಚಿಟ್-ಚಾಟ್

    By Harshitha
    |

    'ನೆನಪಿರಲಿ' ಅಂತಹ ಮ್ಯೂಸಿಕಲ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ರತ್ನಜ ಐದು ವರ್ಷಗಳ ಲಾಂಗ್ ಗ್ಯಾಪ್ ನಂತರ ಮತ್ತೊಂದು ಮನ ಮಿಡಿಯುವ ಪ್ರೇಮ ಕಥೆಯೊಂದಿಗೆ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ.

    ಹೊಸ ಪ್ರತಿಭೆಗಳನ್ನಿಟ್ಟುಕೊಂಡು ರತ್ನಜ ಆಕ್ಷನ್ ಕಟ್ ಹೇಳಿರುವ 'ಪ್ರೀತಿಯಲ್ಲಿ ಸಹಜ' ಚಿತ್ರ ಇದೇ ಶುಕ್ರವಾರ (ಫೆಬ್ರವರಿ 12) ಬಿಡುಗಡೆ ಆಗಲಿದೆ. ಪ್ರಚಾರ ನಿಮಿತ್ತ 'ಪ್ರೀತಿಯಲ್ಲಿ ಸಹಜ' ಚಿತ್ರತಂಡ ಒನ್ ಇಂಡಿಯಾ ಕಛೇರಿಗೆ ಆಗಮಿಸಿತ್ತು.

    ನಿರ್ದೇಶಕ ರತ್ನಜ ಜೊತೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿದ ಚಿಟ್-ಚಾಟ್ ಇಲ್ಲಿದೆ. ಓದಿ.....

    interview-with-preethiyalli-sahaja-director-ratnaja

    * ತಾವು ಡೈರೆಕ್ಟರ್ ಕ್ಯಾಪ್ ತೊಟ್ಟು ವರ್ಷಗಳೇ ಉರುಳಿವೆ. ಇಷ್ಟು ಲಾಂಗ್ ಗ್ಯಾಪ್ ಗೆ ಕಾರಣ....
    - ನನ್ನ ಎಲ್ಲಾ ಸಿನಿಮಾಗಳಿಗೂ ಗ್ಯಾಪ್ ಇದೆ. ಈ ಚಿತ್ರಕ್ಕೆ ಸ್ವಲ್ಪ ಜಾಸ್ತಿ ಆಯ್ತು. ಯಾಕಂದ್ರೆ, 'ಪ್ರೇಮಿಸಂ' ನಂತರ ನಾನು ಊರಿಗೆ ಹೋಗಿ, ವ್ಯವಸಾಯದ ಕಡೆ ಮುಖ ಮಾಡಿದೆ. ನಾನು ಮೂಲತಃ ಅಗ್ರಿಕಲ್ಚರಲ್ ಫ್ಯಾಮಿಲಿಯಿಂದ ಬಂದಿರುವುದರಿಂದ, ಡೈರಿ ಫಾರ್ಮಿಂಗ್ ಮಾಡ್ತಿದ್ದೆ. ಈಗ ಮತ್ತೆ 'ಪ್ರೀತಿಯಲ್ಲಿ ಸಹಜ' ಮೂಲಕ ವಾಪಸ್ ಬಂದಿದ್ದೀನಿ. ['ನೆನಪಿರಲಿ' ರತ್ನಜ ಅವರ ಹೊಸ ಚಿತ್ರ 'ಪ್ರೀತಿಯಲ್ಲಿ ಸಹಜ']

    * ಡೈರಿ ಫಾರ್ಮಿಂಗ್ ಮಧ್ಯೆ 'ಪ್ರೀತಿಯಲ್ಲಿ ಸಹಜ' ಆಗಿದ್ದು ಹೇಗೆ?
    - ನಾನು ಮೂಲತಃ ರೈಟರ್. ಬರವಣಿಗೆ ನನಗೆ ನಿರಂತರ. ಕಥೆಗಳ ಮಂಥನ ನಡೆಯುತ್ತಲೇ ಇರುತ್ತೆ. ಈ ಸಬ್ಜೆಕ್ಟ್ ಶುರುವಾಗಿದ್ದು 'ಮಳೆ ಬರುವ ಮುನ್ನ' ಅಂತ ಶೀರ್ಷಿಕೆಯಲ್ಲಿ. ಮಳೆ ಬರುವ ಮುಂಚೆ ಯಾವ ತರಹ ವಾತಾವರಣ ಇರುತ್ತೋ, ಅದೇ ತರಹದ ಸಬ್ಜೆಕ್ಟ್ ಇದು. 'ಮಳೆ' ಅಂತಹ ಸಿನಿಮಾಗಳು ಜಾಸ್ತಿ ಆಗಿದ್ರಿಂದ 'ಪ್ರೀತಿಯಲ್ಲಿ ಸಹಜ' ಅಂತ ಆಯ್ತು.

    interview-with-preethiyalli-sahaja-director-ratnaja

    * ಜಗಳ, ಮನಸ್ತಾಪ....'ಪ್ರೀತಿಯಲ್ಲಿ ಸಹಜ'. ಆದ್ರೆ, ನೀವು ಹೇಳುವುದಕ್ಕೆ ಹೊರಟಿರುವುದು...
    - ಪ್ರೀತಿಯಲ್ಲಿ ಎಲ್ಲಾ ಸರ್ವೇ ಸಾಮಾನ್ಯ. ವೈಯುಕ್ತಿಕ ಬದುಕಿನಲ್ಲಿ ನಡೆಯುವ ಘಟನೆಗಳು ಪ್ರೀತಿಯಲ್ಲಿ ಸಹಜವಾಗಿ ನಡೆದು ಹೋಗುತ್ತೆ. ಸಣ್ಣ ಪುಟ್ಟ ವಿಷಯಕ್ಕೆ ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು. ಹೀಗೆ ಪ್ರತಿಯೊಂದು ಪ್ರೀತಿಯಲ್ಲಿ ನಡೆಯುವ ಸಹಜವಾದ ಘಟನೆಗಳಲ್ಲಿ, ಪ್ರೀತಿಯಲ್ಲಿ ಒಳಪಟ್ಟಿರುವ ವ್ಯಕ್ತಿಗಳು ಹೇಗೆ ಸ್ಪಂದಿಸುತ್ತಾರೆ ಅನ್ನುವುದರ ಮೇಲೆ ಪ್ರೀತಿ ರೂಪ ಪಡೆದುಕೊಳ್ಳುತ್ತದೆ. ಹಾಗೆ, ಮೂರು ಕಾಲದಲ್ಲಿ ಮೂರು ಪ್ರೀತಿಯನ್ನ ಇಟ್ಕೊಂಡು ಕಥೆ ಮಾಡಿದ್ದೇನೆ. ದೇವರಾಜ್ ಮತ್ತು ಸುಹಾಸಿನಿ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ಅವರ ಯಂಗರ್ ಡೇಸ್ ಪ್ರೀತಿಯಿಂದ ಸಿನಿಮಾ ಶುರುವಾಗುತ್ತದೆ. ಅವರ ಇಬ್ಬರು ಮಕ್ಕಳು, ಅವರ ಪ್ರೀತಿ, ಅವರು ನೀಡಿರುವ ಪ್ರತಿಕ್ರಿಯೆ ಈ ಸಿನಿಮಾ.

    * ಕಥೆಯನ್ನ ಹಾಡಿನ ಮೂಲಕ ಹೇಳುವ ನಿರ್ದೇಶಕರು ನೀವು. 'ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ಹೇಗೆ?
    - ರವಿರಾಜ್ ಅಂತ ಸಂಗೀತ ನಿರ್ದೇಶಕ. ಹಂಸಲೇಖ ಜೊತೆ 20 ವರ್ಷಗಳಿಂದ ಅಸೋಸಿಯೇಟ್ ಆಗಿದ್ದವರು. ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನನ್ನ ಸ್ಟೈಲ್ ನಲ್ಲಿ ಕಥೆಗೆ ಪೂರಕವಾಗಿ ಹಾಡುಗಳು ಇವೆ. ಪ್ರೀತಿಯನ್ನ ಅಗಾಧತೆ ತೋರಿಸುವುದಕ್ಕಾಗಿ ಒಂದು ಹಾಡು ಕಥೆಯಿಂದ ಆಚೆ ಇದ್ದ ಹಾಗಿದೆ. ಮಿಕ್ಕ ಐದು ಹಾಡುಗಳು ಕಥೆಗೆ ಪೂರಕವಾಗಿದೆ. ಸಾಂಗ್ ಬಿಟ್ಸ್ ಕೂಡ ಇದೆ. ಇದು ಮ್ಯೂಸಿಕಲ್ ಲವ್ ಸ್ಟೋರಿ ಅಂತ ಹೇಳ್ಬಹುದು.

    interview-with-preethiyalli-sahaja-director-ratnaja

    * 'ಶಿವಲಿಂಗ' ಸಿನಿಮಾ ಕೂಡ ಫೆಬ್ರವರಿ 12 ರಂದು ರಿಲೀಸ್ ಆಗುತ್ತಿದೆ. ಕಾಂಪಿಟೇಷನ್, ಥಿಯೇಟರ್ ಸಮಸ್ಯೆ ಬಗ್ಗೆ ಹೇಳುವುದಾದರೆ...
    - 'ಪ್ರೀತಿಯಲ್ಲಿ ಸಹಜ' ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗ್ಬೇಕಿತ್ತು. ಆದ್ರೆ ನಮಗೊಂದು ಟ್ಯಾಗ್ ಲೈನ್ ಬೇಕಿತ್ತು. ಫೆಬ್ರವರಿ 14, ವಾಲೆಂಟೈನ್ಸ್ ಡೇ. ಈ ಚಿತ್ರವನ್ನ ನಾವು ವಾಲೆಂಟೈನ್ಸ್ ಡೇ ಸ್ಪೆಷಲ್ ಆಗಿ ರಿಲೀಸ್ ಮಾಡ್ತಿದ್ದೇವೆ. 'ಆಚರಿಸಲು ಪ್ರೇಮಿಗಳ ದಿನವನ್ನು ತರುತ್ತಿದ್ದೇವೆ ಪ್ರೇಮ ದೃಶ್ಯ ಕಾವ್ಯವನ್ನು' ಅಂತ ಟ್ಯಾಗ್ ಲೈನ್ ಇಟ್ಟು 'ಪ್ರೀತಿಯಲ್ಲಿ ಸಹಜ' ಫೆಬ್ರವರಿ 12 ರಿಲೀಸ್ ಮಾಡ್ತಿದ್ದೇವೆ. ಗಾಂಧಿನಗರದಲ್ಲಿ ಇತ್ತೀಚೆಗೆ ಒಂದೇ ಸಿನಿಮಾ ರಿಲೀಸ್ ಆಗುವುದು ಕಷ್ಟ. ಏನೂ ಮಾಡೋಕ್ಕಾಗಲ್ಲ. ತೊಂದರೆ ಇಲ್ಲ.

    * ಪ್ರೇಮಿಗಳ ದಿನ ಪ್ರೇಮಿಗಳಿಗಾಗಿ 'ಪ್ರೀತಿಯಲ್ಲಿ ಸಹಜ'...
    - ಪ್ರೇಮಿಗಳು ಮಾತ್ರ ಅಲ್ಲ. ಪ್ರೀತಿಸುವ ಮನಸ್ಸುಳ್ಳ ಎಲ್ಲರಿಗೂ ಸಲ್ಲುವ ಸಿನಿಮಾ 'ಪ್ರೀತಿಯಲ್ಲಿ ಸಹಜ'.

    * ನಮ್ಮ ಓದುಗರಿಗೆ ನೀವು ಹೇಳುವುದು....
    - ಅಚ್ಚ ಕನ್ನಡಿಗನ ಸ್ವಚ್ಛ ಸ್ವಮೇಕ್ ಸಿನಿಮಾ 'ಪ್ರೀತಿಯಲ್ಲಿ ಸಹಜ'. ಬಂದು ನೋಡಿ. ಪ್ರೋತ್ಸಾಹಿಸಿ.

    English summary
    Kannada Director Ratnaja shares about the making of Kannada Movie 'Preethiyalli Sahaja' in his interview with Filmibeat Kannada. 'Preethiyalli Sahaja' is releasing on February 12th.
    Sunday, February 7, 2016, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X