For Quick Alerts
  ALLOW NOTIFICATIONS  
  For Daily Alerts

  ಖಳನಟ ಗಣೇಶ್ ಕೇಸರ್ಕರ್ ಪರದೆ ಮೇಲೆ ಸದಾ ಪೊಲೀಸ್ ಆಫೀಸರ್..!

  |

  ಗಣೇಶ್ ರಾವ್ ಕೇಸರ್ಕರ್ ಎಂಬ ಹೆಸರು ನಿಮಗೆ ಪರಿಚಿತವಾಗಿ ಅನಿಸದಿದ್ದರೆ ವಿಶೇಷವೇನೂ ಇಲ್ಲ. ಆದರೆ ನೀವು ಕನ್ನಡ ಸಿನಿಮಾ ಪ್ರೇಕ್ಷಕರಾಗಿದ್ದರೆ ಇಲ್ಲಿನ ಫೊಟೋಗಳಲ್ಲಿರುವ ವ್ಯಕ್ತಿಯನ್ನು ಖಂಡಿತವಾಗಿ ನೋಡಿರುತ್ತೀರಿ. ಅದಕ್ಕೆ ಕಾರಣ, ಪ್ರತಿ ವರ್ಷ ಬಿಡುಗಡೆಯಾಗುವ ಹತ್ತರಷ್ಟು ಸಿನಿಮಾಗಳಲ್ಲಾದರೂ ಇವರು ಇದ್ದೇ ಇರುತ್ತಾರೆ.

  ಅಣ್ಣನಾಗಿ, ಅಳಿಯನಾಗಿ, ರಾಜಕಾರಣಿಯಾಗಿ ಕಾಣಿಸಿಲ್ಲವಾದರೆ ಕೊನೆಗೆ ಪೊಲೀಸ್ ಆಗಿಯಾದರೂ ನಿಮ್ಮೆದುರು ಬಂದೇ ಬರುತ್ತಾರೆ. ಯಾಕೆಂದರೆ ಅವರು ಇದುವರೆಗೆ ನಟಿಸಿರುವ ಇನ್ನೂರರಷ್ಟು ಚಿತ್ರಗಳಲ್ಲಿ ನೂರು ಸಿನಿಮಾಗಳಲ್ಲಿ ಪೊಲೀಸ್ ಆಗಿಯೇ ನಟಿಸಿದ್ದಾರೆ. ಮೊದಲ ನೋಟಕ್ಕೆ ಗಣೇಶ್ ನಿಜಕ್ಕೂ ಪೊಲೀಸ್ ಅಧಿಕಾರಿಯಂತೆ ಕಂಡರೆ ಅಚ್ಚರಿ ಪಡಬೇಕಿಲ್ಲ. ಇವರ ತಂದೆ ನಿಜಕ್ಕೂ ಮಿಲಿಟರಿ ಅಧಿಕಾರಿಯಾಗಿದ್ದವರು. ಆದರೆ ಪುತ್ರನಿಗೆ ಒಲಿದು ಬಂದಿದ್ದು ಸಿನಿಮಾ ಕ್ಷೇತ್ರ.

  ಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆ

  ಗಣೇಶ್ ರಾವ್ ಕೇಸರ್ಕರ್ ಆರಡಿ ಒಂದಿಂಚು ಎತ್ತರದ ಅಜಾನುಬಾಹು. ಅವರು ಚಿತ್ರರಂಗಕ್ಕೆ ಹೊಸಬರೇನೂ ಅಲ್ಲ. ಇನ್ನೂರರಷ್ಟು ಚಿತ್ರಗಳಲ್ಲಿ ಪಾತ್ರ ಮಾಡಿದರೂ ಇನ್ನೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳದಿರುವುದು ವಿಪರ್ಯಾಸಅದಕ್ಕಾಗಿ ಅವರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೇನುಎನ್ನುವುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

   ನಟನೆಯ ಮೇಲಿನ ಆಸಕ್ತಿ ಮೂಡಿದ್ದು ಹೇಗೆ?

  ನಟನೆಯ ಮೇಲಿನ ಆಸಕ್ತಿ ಮೂಡಿದ್ದು ಹೇಗೆ?

  ನನ್ನದು ಮೂಲತಃ ಕೊಳ್ಳೇಗಾಲ. ಸ್ಕೂಲ್ ಡೇ ಫಂಕ್ಷನ್ ಟೈಮಲ್ಲಿ ನನ್ನನ್ನು ಹುಡುಗಿ ಪಾತ್ರಕ್ಕೆ ಆಯ್ದುಕೊಂಡಿದ್ದರು. ಆದರೆ ಸಂಭಾಷಣೆಯ ರೀತಿನೋಡಿ ನಾಟಕದ ನಾಯಕನನ್ನೇ ಮಾಡಿ ಬಿಟ್ಟರು. ಇಂದಿಗೂ ಆ ನಾಟಕದ ಹೆಸರು ‘ಬೇಸ್ತು ಬಿದ್ದ ಬಾವ' ಎನ್ನುವುದು ಸರಿಯಾಗಿ ನೆನಪಿಸಿದೆ ನನಗೆ. ಪ್ರೌಢಶಾಲೆಯಲ್ಲೆಲ್ಲ ನಾಟಕ ನಟನೆ ಮುಂದುವರಿಯಿತು. ಎಸ್ ಎಸ್ ಎಲ್ ಸಿಯಲ್ಲಿದ್ದಾಗ ನಡೆದ ಅಂತರರಾರಾಜ್ಯ ನಾಟಕ ಸ್ಫರ್ಧೆಯಲ್ಲಿ ನಾನು ನಟಿಸಿದ್ದ ನಾಟಕಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಜೊತೆಗೆ ಐದುನೂರು ರುಪಾಯಿಗಳ ಬಹುಮಾನವೂ ಕೈ ಸೇರಿತ್ತು. ತಂದೆಗೆ ನಾನು ಡ್ರಾಮದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಅಷ್ಟು ಆಸಕ್ತಿಯೇನೂ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಬೆಂಗಳೂರಿಗೆ ಬಂದು ಡಿಪ್ಲೊಮ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ ಮಾಡಿದೆ.. ಆದರೆ ಬಣ್ಣದ ಲೋಕದ ಆಸಕ್ತಿ ಹೋಗಲೇ ಇಲ್ಲ.ಅವಕಾಶಕ್ಕಾಗಿ ಅಲೆಯುವ ಬದಲು ಸ್ವತಃ ಒಂದು ಟೂ ವ್ಹೀಲರ್ ವರ್ಕ್ ಶಾಪ್ ಮತ್ತು ಸರ್ವಿಸ್ ಸ್ಟೇಶನ್ ಸ್ಥಾಪಿಸಿದೆ. ಆಗ ಅಲ್ಲಿಗೆ ಬರುತ್ತಿದ್ದ ಚಿತ್ರೋದ್ಯಮದ ವ್ಯಕ್ತಿ ಗುರುರಾಜ್ ಮೂಲಕ ಕಿರುತೆರೆಯ ಸಂಪರ್ಕವಾಯಿತು.

  ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿ

   ಕಿರುತೆರೆಯೊಂದಿಗೆ ನಿಮ್ಮ ಸಂಬಂಧ ಬೆಳೆದ ಬಗೆ ಹೇಗೆ?

  ಕಿರುತೆರೆಯೊಂದಿಗೆ ನಿಮ್ಮ ಸಂಬಂಧ ಬೆಳೆದ ಬಗೆ ಹೇಗೆ?

  ಆ ಸಂದರ್ಭದಲ್ಲಿ ಗುರುರಾಜ್ ಅವರು ಡಿ ಡಿ 9 ಕ್ಕೆ ಒಂದು ಧಾರಾವಾಹಿ ಮಾಡುತ್ತಿದ್ದರು. ಆಗ ಎಲ್ಲ ಚಿಕ್ಕ ಧಾರಾವಾಹಿಗಳಿದ್ದವು. ಅವರ ನಿರ್ಮಾಣದ ‘ಮಂಜುಕರಗಿತು' ಎಂಬ ಧಾರಾವಾಹಿಗೆ ಶ್ರೀನಿವಾಸ ಕೌಶಿಕ್ ನಿರ್ದೇಶಕರು. ಹಾಗೆ ನಿರ್ಮಾಪಕರ ಮೂಲಕ ನನಗೆ ಒಂದು ಇನ್ಸ್ ಪೆಕ್ಟರ್ ಪಾತ್ರ ಲಭಿಸಿತು. ಅದು ಒಂದು ಒಳ್ಳೆಯ ಪಾತ್ರವೇ ಆಗಿತ್ತು. ಮತ್ತೆ ಅದೇ ನಿರ್ದೇಶಕರು ಇನ್ನೊಂದಷ್ಟು ಅವಕಾಶಗಳನ್ನು ನೀಡಿದರು. ಆ ಸಂದರ್ಭದಲ್ಲೇ ನಿರ್ದೇಶಕ ಬಿ.ಎಸ್. ರಂಗ ತಮ್ಮ ‘ಭಾಗ್ಯಚಕ್ರ' ಧಾರಾವಾಹಿಯಲ್ಲಿ ಅವಕಾಶ ನೀಡಿದರು. ಅದು ಕೂಡ ಪೊಲೀಸ್ ಅಧಿಕಾರಿಯ ಪಾತ್ರ. ನಿಂಬಾಳ್ಕರ್ ಎನ್ನುವ ಮ್ಯಾನೇಜರ್ ಕರೆಸಿದ್ದರು. ಅದು ಸಾವಿರ ಎಪಿಸೋಡ್ ಗಳಾಗಿ ಪ್ರಸಾರವಾಗಿತ್ತು. ಅನಂತರದಲ್ಲಿ ಮನ್ವಂತರ, ಗೋಧೂಳಿ, ಪುಣ್ಯಕೋಟಿ ಎಂದು ಇದುವರೆಗೆ ನಾಲ್ಕು ಸಾವಿರ ಎಪಿಸೋಡ್ ಗಳಲ್ಲಿ ಮಾಡಿದ್ದೇನೆ. ದಾಮಾಜಿಕ ಮಾತ್ರವಲ್ಲದೆ ಇತ್ತೀಚೆಗೆ ಪೌರಾಣಿಕ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದು `ರಾಮಾಯಣ'ದಲ್ಲಿ ವಿಭೀಷಣ, ‘ಮಹಾಭಾರತ'ದ ದೃತರಾಷ್ಟ್ರನಾಗಿದ್ದೇನೆ. ಇದೀಗ ‘ಮಾಯಾ' ಎಂಬ ಎರಡು ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.

   ಕಿರುತೆರೆಯಿಂದ ಸಿನಿಮಾರಂಗ ಪ್ರವೇಶಿಸಿದ ದಿನಗಳನ್ನು ಹೇಗೆ ನೆನಪಿಸಿಕೊಳ್ಳುವಿರಿ?

  ಕಿರುತೆರೆಯಿಂದ ಸಿನಿಮಾರಂಗ ಪ್ರವೇಶಿಸಿದ ದಿನಗಳನ್ನು ಹೇಗೆ ನೆನಪಿಸಿಕೊಳ್ಳುವಿರಿ?

  ಸಿನಿಮಾ ವಿಚಾರಕ್ಕೆ ಬಂದರೆ 2000ನೇ ವರ್ಷ ತೆರೆಕಂಡ ‘ಚಾಮುಂಡಿ' ನನ್ನ ಪ್ರಥಮ ಚಿತ್ರ. ಅದರಲ್ಲಿ ಚಿಕ್ಕದೊಂದು ಡಾಕ್ಟರ್ ಪಾತ್ರ ಮಾಡಿದ್ದೆ. ಬಳಿಕ ‘ಸಚ್ಚಿ' ಎಂಬ ಓಂ ಪ್ರಕಾಶ್ ರಾವ್ ನಾಯಕನಾದ ಚಿತ್ರದಲ್ಲಿ ನನಗೂ ಒಂದು ಲೀಡ್ ರೋಲ್ ಸಿಕ್ಕಿತ್ತು. ಪಿ.ಎನ್ ಸತ್ಯ ಅವರ ನಿರ್ದೇಶನದ ಡಾನ್, ಶಾಸ್ತ್ರಿ, ತಂಗಿಗಾಗಿ ಮೊದಲಾದ ಚಿತ್ರಗಳಲ್ಲಿ ನಟಿಸಿದೆ. ನಾಗೇಂದ್ರ ಮಾಗಡಿ ( ಪಾಂಡು) ನಿರ್ದೇಶನ, ಜಯಶ್ರೀದೇವಿ ಅವರ ನಿರ್ಮಾಣದ ರೇಣುಕಾ ದೇವಿ ಎಲ್ಲಮ್ಮ ಚಿತ್ರದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದೆ. ಶಿವಣ್ಣ ನಟಿಸಿದ ರಾಕ್ಷಸ, ನಂದ, ದರ್ಶನ್ ನಟಿಸಿರುವ ಸಾರಥಿ, ಸುದೀಪ್ ಅವರ ನಟನೆಯ ಪಾರ್ಥದಿಂದ ಹಿಡಿದು ಇತ್ತೀಚೆಗಿನ ವಿಲನ್ ತನಕ ಸುಮಾರು 195 ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ನಟಿಸಿದ 150 ನೇ ಚಿತ್ರದ ಹೆಸರು ‘ನಮ್ಮವರು.' ಕೌಟುಂಬಿಕ ಕತೆ ಹೊಂದಿದ್ದ ಆ ಚಿತ್ರದಲ್ಲಿ ನಾನು ನಾಯಕನಾಗಿ ಕಾಣಿಸಿಕೊಂಡಿದ್ದು ವಿಶೇಷ.

  'ರಹದಾರಿ'ಯಿಂದ ಮರಳಿ ರಾಜಮಾರ್ಗ ಪ್ರವೇಶಿಸುತ್ತಿದ್ಧಾರೆ ಶ್ವೇತಾ ಶ್ರೀವಾತ್ಸವ್'ರಹದಾರಿ'ಯಿಂದ ಮರಳಿ ರಾಜಮಾರ್ಗ ಪ್ರವೇಶಿಸುತ್ತಿದ್ಧಾರೆ ಶ್ವೇತಾ ಶ್ರೀವಾತ್ಸವ್

   ಇದುವರೆಗೆ ನೀವು ಯಾವೆಲ್ಲ ಸ್ಟಾರ್ ಚಿತ್ರಗಳಲ್ಲಿ ಪೋಷಕ ನಟರಾಗಿದ್ದೀರಿ?

  ಇದುವರೆಗೆ ನೀವು ಯಾವೆಲ್ಲ ಸ್ಟಾರ್ ಚಿತ್ರಗಳಲ್ಲಿ ಪೋಷಕ ನಟರಾಗಿದ್ದೀರಿ?

  ನಾನು ಸರಿ ಸುಮಾರು ಎರಡು ದಶಕಗಳಲ್ಲಿ ಬಂದು ಹೋದ ಎಲ್ಲ ಸ್ಟಾರ್ ಗಳ ಚಿತ್ರಗಳಲ್ಲಿಯೂ ನಟಿಸಿದ್ದೇನೆ. ಅಂಬರೀಷ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್,ರಮೇಶ್, ಜಗ್ಗೇಶ್ ಅವರಿಂದ ಹಿಡಿದು ಸುದೀಫ್, ದರ್ಶನ್, ಗಣೇಶ್, ಪುನೀತ್, ಶ್ರೀಮುರಳಿ, ಪ್ರಜ್ವಲ್ ಹೀಗೆ ಎರಡು ಜಮಾನದ ತಾರೆಗಳ ಜೊತೆಗೂ ನಟಿಸುವ ಅವಕಾಶ ನನಗೆ ದೊರಕಿದೆ. ಆದರೆ ಇವೆಲ್ಲದರ ನಡುವೆ ಚಿತ್ರರಂಗದ ಲೆಜೆಂಡ್ ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ದೊರಕದೇ ಹೋದ ಬಗೆ ಗಣೇಶ್ ನನಗೆ ನಿರಾಶೆಯಿದೆ. ಅದೇ ವೇಳೆ ರಾಜಣ್ಣ ನಿಧನವಾದ ಘಳಿಗೆಯಲ್ಲಿ ಸಂರಕ್ಷಕನಂತೆ ಸೇ ವೆ ಮಾಡಲು ಸಾಧ್ಯವಾಗಿರುವುದರ ಬಗ್ಗೆ ಅಭಿಮಾನವಿದೆ. ಅದು ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳ ನುಗ್ಗಾಟದ ನಡುವೆಯೂ ಕಾಪಾಡಿದ ಘಟನೆ. ಅದನ್ನು ಜೀವನ ಪೂರ್ತಿ ಮರೆಯಲಾರೆ.

   ಮುಂದೆ ತೆರೆಗೆ ಬರಲಿರುವ ನಿಮ್ಮ ಚಿತ್ರಗಳು ಯಾವುವು?

  ಮುಂದೆ ತೆರೆಗೆ ಬರಲಿರುವ ನಿಮ್ಮ ಚಿತ್ರಗಳು ಯಾವುವು?

  ಒಂದಷ್ಟು ಸಿನಿಮಾಗಳು ಸಾಲಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿರುವಂಥದ್ದು ರವಿಚಂದ್ರನ್ ಸರ್ ನಾಯಕರಾಗಿರುವ `ರವಿ ಬೋಪಣ್ಣ.' ಅದರಲ್ಲಿ ಕೂಡ ನನ್ನದು ಪೊಲೀಸ್ ಪಾತ್ರವೇ. ಇನ್ನು ಯೋಗಿಯ `ಕಿರಿಕ್ ಶಂಕ್ರ' ಚಿತ್ರದಲ್ಲಿ ಇಬ್ಬರು ನಾಯಕರಿದ್ದು ಎರಡನೇ ನಾಯಕನ ತಂದೆಯ ಪಾತ್ರ ಮಾಡುತ್ತಿದ್ದೇನೆ. ರಘೂ ಪಡಕೋಟೆ ನಾಯಕರಾಗಿರುವ `ಯಾರ್ ಮಗ' ಚಿತ್ರದಲ್ಲಿ ಕಡಕ್ ಪೊಲೀಸ್ ಆಗಿ ನಟಿಸುತ್ತಿದ್ದು, ಮೊದಲ ಬಾರಿಗೆ ಬಟ್ಟೆ ಬಿಚ್ಚಿ ಮೈಕಟ್ಟು ಪ್ರದರ್ಶನ ಮಾಡಲಿದ್ದೇನೆ. ಅದಕ್ಕೆಂದೇ ವಿಶೇಷ ತಯಾರಿ ನಡೆದಿದೆ. ಅದೇ ರೀತಿ ಪ್ರಭೀಕ್ ಮೊಗವೀರ ನಿರ್ದೇಶಿಸಿ ನಾಯಕರಾಗಿರುವ ಚಿತ್ರ ಗಡಿಯಾರದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಜತೆಗೆ ನಟಿಸುತ್ತಿದ್ದೇನೆ. ಹೊಸಬರ ಚಿತ್ರ ‘ವಿಳಾಸ'ದಲ್ಲಿ ನಾಯಕಿಯ ಶ್ರೀಮಂತ ತಂದೆಯಾಗಿ, `ವಾರ್ಡ್ ನಂಬರ್ 11'ರಲ್ಲಿ ನಿಷ್ಠಾವಂತ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇನ್ನೂ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಶೋಭರಾಜ್ ಅವರೊಂದಿಗೆ ರೆಟ್ರೋ ಲುಕ್ ನಲ್ಲಿ ನಟಿಸುತ್ತಿದ್ದೇನೆ.

  English summary
  Ganesh Rao Kesarkar Acted 200 Kannada Films as a character Artist. Here She talks about his film career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X